ಬ್ಯಾಂಕುಗಳಿಗೆ ಇನ್ನು ವಾರದಲ್ಲಿ ಎರಡು ದಿನ ರಜೆ Two Bank Holidays in a Week

NEWS
20 October 2024

ಬ್ಯಾಂಕುಗಳಿಗೆ ಇನ್ನು ವಾರದಲ್ಲಿ ಎರಡು ದಿನ ರಜೆ Two Bank Holidays in a Week
WhatsApp Group Join Now
Telegram Group Join Now

Two Bank Holidays in a Week : ಈಗಾಗಲೇ ಬ್ಯಾಂಕುಗಳಿಗೆ ತಿಂಗಳಲ್ಲಿ ಎರಡನೇ ಶನಿವಾರ, ನಾಲ್ಕನೇ ಶನಿವಾರ ಹಾಗೂ ಭಾನುವಾರಗಳಂದು ರಜೆ (Bank Holidays) ಇದೆ. ಇದೀಗ ಒಟ್ಟಾರೆ ಮಾಮೂಲಿ ರಜಾ ದಿನಗಳನ್ನು ಹೊರತುಪಡಿಸಿದೆ ಪ್ರತೀ ವಾರವೂ ಎರಡು ದಿನ ರಜೆ ಘೋಷಣೆಗೆ ಸಿದ್ಧತೆ ನಡೆದಿದೆ.


ಹಾಗೇನಾದರೂ ರಜೆ ಜಾರಿಯಾದರೆ ಬಹುರಾಷ್ಟ್ರೀಯ ಕಂಪನಿಗಳಲ್ಲಿ ಇರುವಂತೆ, ಬ್ಯಾಂಕುಗಳಲ್ಲೂ ಉದ್ಯೋಗಿಗಳು (Bank employees) ವಾರದಲ್ಲಿ ಐದು ದಿನ ಕೆಲಸ ಹಾಗೂ ಎರಡು ದಿನ ರಜೆ ಎಂಬ ನಿಯಮ ಜಾರಿಗೆ ಬರಲಿದೆ.


ಈ ಕುರಿತು ಇಂಡಿಯನ್ ಬ್ಯಾಂಕ್ಸ್ ಅಸೋಸಿಯೇಷನ್ (Indian Banks Association -IBA) ಹಾಗೂ ಬ್ಯಾಂಕ್ ಉದ್ಯೋಗಿಗಳ ಒಕ್ಕೂಟದ (Bank Employees Federation of India - BEFI) ನಡುವಿನ ಒಡಂಬಡಿಕೆಗೆ ಸಹಿ ಹಾಕಲಾಗಿದ್ದು, ಕೇಂದ್ರ ಸರಕಾರ ಅನುಮೋದನೆ ನೀಡಿದರೆ ನಿಯಮ ಜಾರಿಗೆ ಬರಲಿದೆ. ಈ ಸಂಬ೦ಧ ಆರ್‌ಬಿಐಗೆ ಪ್ರಸ್ತಾಪವನ್ನೂ ಸಲ್ಲಿಸಲಾಗಿದೆ.


ಸರ್ಕಾರಿ ಕೋಟಾ ಬಿ.ಇಡಿ ಕೋರ್ಸ್ ವ್ಯಾಸಂಗಕ್ಕೆ ಅರ್ಜಿ ಆಹ್ವಾನ Karnataka B.Ed Course Online Application


ಹೆಚ್ಚಲಿದೆ ಕೆಲಸದ ಅವಧಿ


ಸರಕಾರವು ಎರಡು ದಿನ ರಜೆಗೆ ಅನುಮತಿ ನೀಡಿದರೆ, ಬ್ಯಾಂಕ್‌ಗಳ ಕೆಲಸದ ಸಮಯವೂ ಕೂಡ ಬದಲಾಗಲಿದೆ. ವಾರದಲ್ಲಿ ಎರಡು ಹಿನ್ನಲೆಯಲ್ಲಿ ಬ್ಯಾಂಕ್ ನೌಕರರು ದಿನಕ್ಕೆ 40 ನಿಮಿಷ ಹೆಚ್ಚುವರಿಯಾಗಿ ಕಾರ್ಯ ನಿರ್ವಹಿಸಬೇಕಾಗುತ್ತದೆ.


ಬೆಳಗ್ಗೆ 9.45ಕ್ಕೆ ಬ್ಯಾಂಕ್ ನೌಕರರ ಕೆಲಸ ಆರಂಭವಾಗಲಿದ್ದು, ಸಂಜೆ 5.30ರ ವರೆಗೆ ಬ್ಯಾಂಕ್ ಕೆಲಸ ಮುಂದುವರೆಯುತ್ತದೆ. ಸರಕಾರಿ ಸ್ವಾಮ್ಯದ ಹಾಗೂ ಖಾಸಗಿ ಬ್ಯಾಂಕ್‌ಗಳಿಗೂ ರಜೆಯ ನಿಯಮಗಳು ಅನ್ವಯವಾಗಲಿವೆ. ವರ್ಷಾಂತ್ಯಕ್ಕೆ ಕೇಂದ್ರ ಸರಕಾರವು ಅನುಮೋದನೆ ನೀಡುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

Most Popular

Related Posts