ರೈತರು ಮನೆಯಲ್ಲಿಯೇ ಯೂರಿಯಾ ಗೊಬ್ಬರ ತಯಾರಿಸುವ ವಿಧಾನ Method of Urea Preparation from Cattle Urine

AGRICULTURE
02 July 2024

ರೈತರು ಮನೆಯಲ್ಲಿಯೇ ಯೂರಿಯಾ ಗೊಬ್ಬರ ತಯಾರಿಸುವ ವಿಧಾನ Method of Urea Preparation from Cattle Urine
WhatsApp Group Join Now
Telegram Group Join Now

Method of Urea Preparation from Cattle Urine : ರೈತರು ಜಾನುವಾರುಗಳ ಗಂಜಲ ಉಪಯೋಗಿಸಿ ಮನೆಯಲ್ಲಿಯೇ ಕಡಿಮೆ ಖರ್ಚಿನ, ನಿಸರ್ಗಸ್ನೇಹಿ, ಸಾವಯವ ಯೂರಿಯಾ ತಯಾರಿಸಿಕೊಳ್ಳುವುದು ಹೇಗೆ? ಇಲ್ಲಿದೆ ಮಾಹಿತಿ... 


ಪ್ರಪಂಚದಲ್ಲಿ ಯೂರಿಯಾವನ್ನು ಶೇ.90ರಷ್ಟು ಸಾರಜನಕ ಬಿಡುಗಡೆ ಮಾಡುವ ಗೊಬ್ಬರದಂತೆ ಉಪಯೋಗಿಸಲು ಬಳಸಲಾಗುತ್ತದೆ. ಸದರಿ ಯೂರಿಯಾ ನೀರಿನ ನೆರವಿನಿಂದ ಮಣ್ಣಿನಲ್ಲಿ ಅಮೋನಿಯ ಮತ್ತು ಇಂಗಾಲದ ಡೈ ಆಕ್ಸೈಡ್ ಅನ್ನು ವಿಭಜಿಸುತ್ತದೆ. ಅಮೋನಿಯವು ಮಣ್ಣಿನಲ್ಲಿ ಬ್ಯಾಕ್ಟೀರಿಯಾಗಳಿಂದ ನೈಟ್ರೀಕ್ ಆಮ್ಲಗಳಿಗಾಗಿ ಆಕ್ಸಿಡೀಕರಿಸಲ್ಪಡುತ್ತದೆ. ಇದನ್ನು ಸಸ್ಯಗಳು ಹೀರಿಕೊಳ್ಳುತ್ತವೆ. ಹೀಗಾಗಿ ಕೃಷಿಯಲ್ಲಿ ಯೂರಿಯಾ ಗೊಬ್ಬರಕ್ಕೆ ಭಾರೀ ಬೇಡಿಕೆ ಇದೆ. ಉತ್ಪಾದನೆಯ ವ್ಯತ್ಯಾಸ, ಕೃತಕ ಅಭಾವ ಸೃಷ್ಠಿಯಿಂದ ರೈತರು ಯೂರಿಯಾಕ್ಕಾಗಿ ಪರದಾಡುವ ಪರಿಸ್ಥಿತಿ ಇದೆ.


ರೈತರು ಮನೆಯಲ್ಲಿಯೇ ಸ್ವತಃ ತಾವೇ ಕಡಿಮೆ ಖರ್ಚಿನಲ್ಲಿ ಸಾವಯವ ಯೂರಿಯಾ ತಯಾರಿಸುವುದು ಇದಕ್ಕೆ ಉತ್ತಮ ಪರಿಹಾರವಾಗಿದೆ. ಹೌದು, ಜಾನುವಾರುಗಳ ಗಂಜಲ ಉಪಯೋಗಿಸಿ ರೈತರು ಮನೆಯಲ್ಲಿಯೇ ಕಡಿಮೆ ಖರ್ಚಿನ, ನಿಸರ್ಗಸ್ನೇಹಿ ಯೂರಿಯಾ ತಯಾರಿಸಿಕೊಳ್ಳಬಹುದು. ಜಾನುವಾರು ಗಂಜಲದಲ್ಲಿ ಶೇ.0.3ರಿಂದ 0.4ರಷ್ಟು ಸಾರಜನಕ, ಶೇ.0.15ರಿಂದ 0.20ರಷ್ಟು ರಂಜಕ, ಶೇ.0.13ರಿಂದ 0.17ರಷ್ಟು ಪೊಟ್ಯಾಶ್ ಇರುತ್ತದೆ.


ನಿತ್ಯ ಸಿಗುವ ಜಾನುವಾರುಗಳ ಗಂಜಲನ್ನು ಹುಡಿ ರೂಪಕ್ಕೆ ಪರಿವರ್ತಿಸುವ ಪ್ರಕ್ರಿಯೇ ಸಾವಯವ ಯೂರಿಯಾ. ಇದನ್ನು ಸಂಗ್ರಹಿಸಿಟ್ಟು ಅಗತ್ಯವಾದಾಗ ಬೆಳೆಗಳಿಗೆ ನೀಡಬಹುದು. ರಾಸಾಯನಿಕ ಯೂರಿಯಾ ಗೊಬ್ಬರಕ್ಕಿಂತ ಸುಮಾರು ಎರಡು ಪಟ್ಟು ಹೆಚ್ಚು ಸಾವಯವ ಯೂರಿಯಾ ಬಳಸಿದರೆ ಪರಿಣಾಮಕಾರಿಯಾಗಿರುತ್ತದೆ.


ಇದನ್ನೂ ಓದಿ: ರೈತರು ಸರಕಾರದ ವಿವಿಧ ಯೋಜನೆಗಳ ಪ್ರಯೋಜನ ಪಡೆಯಲು ಎಫ್‌ಐಡಿ ನೋಂದಣಿ ಕಡ್ಡಾಯ... 


ಇದರಿಂದ ಪ್ರಯೋಜನಗಳೇನು?

ಸಾವಯವ ಯೂರಿಯಾ ಮಣ್ಣಿನ ಫಲವತ್ತತೆ ವೃದ್ಧಿಗೆ ಸಹಕಾರಿಯಾಗಿದೆ. ಇದರ ಬಳಕೆಯಿಂದ ಮಣ್ಣಿನಲ್ಲಿ ಸಾವಯವ ಇಂಗಾಲ ಹೆಚ್ಚುತ್ತದೆ. ಇದರಿಂದ ಬೆಳೆಗಳು ಸೊಂಪಾಗಿ, ಕಡು ಹಸಿರು ಬಣ್ಣದಲ್ಲಿ ಬೆಳೆಯುತ್ತದೆ. ಈ ವಿಧಾನದಲ್ಲಿ ಆರೋಗ್ಯಕರ ಬೆಳೆ ಮತ್ತು ಆಹಾರ ಬೆಳೆಯಲು ಸಾಧ್ಯವಾಗುತ್ತದೆ. 


ಸಾವಯವ ಯೂರಿಯಾ ಬಳಕೆಯಿಂದ ಬೆಳೆಗಳಿಗೆ ರೋಗ ಬಾಧೆ ಪ್ರಮಾಣವನ್ನು ಕಡಿಮೆ ಮಾಡಬಹುದು. ಈ ಗೊಬ್ಬರ ತಯಾರಿಕೆ ವೆಚ್ಚವೂ ಬಹಳ ಕಡಿಮೆ. ಬಹುಮುಖ್ಯವಾಗಿ ರೈತರು ರಾಸಾಯನಿಕ ಗೊಬ್ಬರ ಬಳಕೆಯಿಂದ ವಿಮುಕ್ತರಾಗಬಹುದು.


ಇದನ್ನೂ ಓದಿ: ನಾಟಿ ದನಗಳ ಸಗಣಿ ಸಂಪತ್ತು : ಹಾಲಿಗಿಂತ ಸಗಣಿಗೇ ಹೆಚ್ಚು ಬೆಲೆ 


ಯೂರಿಯಾ ತಯಾರಿಕೆ ಹೇಗೆ?

ಮೂರು ಅಡಿ ಅಗಲ ಒಂದು ಅಡಿ ಎತ್ತರದ ಸಿಮೆಂಟ್ ತೊಟ್ಟಿಯಲ್ಲಿ ನೀವೇ ಯೂರಿಯಾ ತಯಾರಿಸಬಹುದು. ಯೂರಿಯಾ ತಯಾರಿಸಲು ಮೊದಲು ತೊಟ್ಟಿಯಲ್ಲಿ ಸುಮಾರು 50 ಲೀಟರ್‌ನಷ್ಟು ಗಂಜಲ ಹಾಕಿ, 2 ರಿಂದ 3  ದಿನಗಳಲ್ಲಿ ನೊರೆ ಬರುತ್ತದೆ. ನೊರೆ ಬಂದ ಬಳಿಕ 29 ಕೆ.ಜಿಯಷ್ಟು ಮರಳು ಹಾಕಿ. 7 ದಿನ ಹಾಗೇ ಬಿಟ್ಟು ಪುನಃ 10 ಲೀಟರ್ ಗಂಜಲ ಸೇರಿಸಬೇಕು.  ಒಂದೆರಡು ದಿನಗಳಲ್ಲಿ ಕೇಕ್ ರೀತಿ ಆಗುತ್ತದೆ.


ಇದನ್ನು ಪುಡಿ ಮಾಡಿ ಉಪಯೋಗಿಸಬಹುದು. ಮೇಲೆ ಹೇಳಿದ ತೊಟ್ಟಿಯಲ್ಲಿ ಇಪ್ಪತ್ತು ಕೆ.ಜಿಯಷ್ಟು ಯೂರಿಯಾವನ್ನು ತಯಾರಿಸಬಹುದು. ಒಂದು ಎಕರೆಗೆ 20 ರಿಂದ 30 ಕೆ.ಜಿ ಯೂರಿಯಾ ಸಾಕಾದೀತು. ನಿಮ್ಮ  ಯೂರಿಯಾ ಘಟಕಕ್ಕೆ ಬಿಸಿಲು, ಮಳೆನೀರು ಬೀಳದಂತೆ ನೋಡಿಕೊಳ್ಳುವುದು ಅಗತ್ಯ. ಹೀಗೆ ನೀವೇ ತಯಾರಿಸಿದ ಯೂರಿಯಾ ಬಳಸಿ; ಕೃಷಿಯ ಖರ್ಚು ಕಡಿಮೆ, ಅಧಿಕ ಆದಾಯಕ್ಕೆ ಮುನ್ನುಡಿ ಬರೆಯಿರಿ...


ಇದನ್ನೂ ಓದಿ:  17,727 ಕೇಂದ್ರ ಸರ್ಕಾರಿ ಹುದ್ದೆಗಳ ಬೃಹತ್ ನೇಮಕಾತಿಗೆ ಅರ್ಜಿ ಆಹ್ವಾನ | ಪದವೀಧರರಿಗೆ ಭರ್ಜರಿ ಅವಕಾಶ


Most Popular

Related Posts