ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಪಡೆಯಲು ನಿಮ್ಮ ಮೊಬೈಲ್‌ನಲ್ಲಿಯೇ ಅರ್ಜಿ ಸಲ್ಲಿಸಿ... Caste and Income Certificate Apply Online

GOVT SCHEME
25 June 2024

ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಪಡೆಯಲು ನಿಮ್ಮ ಮೊಬೈಲ್‌ನಲ್ಲಿಯೇ ಅರ್ಜಿ ಸಲ್ಲಿಸಿ... Caste and Income Certificate Apply Online
WhatsApp Group Join Now
Telegram Group Join Now

Caste and Income Certificate Apply Online : ಇಂದಿನ ಆಧುನಿಕ ಜಗತ್ತಿನಲ್ಲಿ ತಂತ್ರಜ್ಞಾನ (Technology) ಹೆಚ್ಚಾದಂತೆ ಸರ್ಕಾರವು ತನ್ನ ಸೇವೆಗಳನ್ನು ಸಾರ್ವಜನಿಕರಿಗೆ ಸುಲಭವಾಗಿ, ಸರಳವಾಗಿ ಮತ್ತು ನಿಗದಿತ ಸಮಯದಲ್ಲಿ ಕಲ್ಪಿಸಿಕೊಡಲು ಹಲವು ವ್ಯವಸ್ಥೆಗಳನ್ನು ಜಾರಿಗೆ ತಂದಿದೆ. ಇಂದು ಸ್ಥಳೀಯ ಗ್ರಾಮ ಪಂಚಾಯತಿ ಯೋಜನೆಗಳಿಂದ ಹಿಡಿದು ಕೇಂದ್ರ ಸರಕಾರದ ಯೋಜನೆಗಳ ತನಕ ಬಹುತೇಕ ಸರಕಾರಿ ಯೋಜನೆಗಳು ಆನ್‌ಲೈನ್‌ಮಯ ಆಗಿವೆ.


ಈ ಯಾದಿಯಲ್ಲಿ ಜಾತಿ ಮತ್ತು ಆದಾಯ ಪ್ರಮಾಣ ಪತ್ರವನ್ನು (Caste and income certificate) ಆನ್‌ಲೈನ್‌ನಲ್ಲಿ ಅತೀ ಸುಲಭವಾಗಿ ಪಡೆದುಕೊಳ್ಳಬಹುದಾಗಿದೆ. ನಿಮ್ಮ ಮೊಬೈಲ್’ನಲ್ಲಿಯೇ ಅತ್ಯಂತ ಸುಲಭವಾಗಿ ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಪಡೆಯಲು ಅರ್ಜಿ ಸಲ್ಲಿಸಬಹುದಾಗಿದ್ದು, ಇದರ ಸಂಪೂರ್ಣ ಮಾಹಿತಿ ಈ ಲೇಖನದಲ್ಲಿದೆ...


ಅತೀ ಕಡಿಮೆ ಅರ್ಜಿ ಶುಲ್ಕ 

ಕೇವಲ 25 ರೂಪಾಯಿ ಅರ್ಜಿ ಶುಲ್ಕವನ್ನು ಪಾವತಿಸಿ ಜಾತಿ ಮತ್ತು ಆದಾಯ ಪ್ರಮಾಣ ಪತ್ರ (Caste and income certificate) ಪಡೆಯಲು ಆನ್‌ಲೈನ್ ಮುಖಾಂತರ ಅರ್ಜಿ ಸಲ್ಲಿಸಬಹುದಾಗಿದೆ. ಯಾವುದೇ ಮಧ್ಯವರ್ತಿಗಳ ಗೊಡವೆ ಇಲ್ಲದೇ ಜಾತಿ ಮತ್ತು ಆದಾಯ ಪ್ರಮಾಣ ಪತ್ರಕ್ಕಾಗಿ ನಿಗದಿಪಡಿಸಿರುವ ಅರ್ಜಿ ಶುಲ್ಕವನ್ನು ಡೆಬಿಟ್ ಕಾರ್ಡ್ ಅಥವಾ ನೆಟ್ ಬ್ಯಾಂಕಿ೦ಗ್ ಮೂಲಕ ಹಣ ಪಾವತಿಸಲು ಅವಕಾಶವಿದೆ.


ಅರ್ಜಿ ಸಲ್ಲಿಸಲು ಬೇಕಾಗುವ ದಾಖಲಾತಿಗಳು

  • * ಆಧಾರ್ ಕಾರ್ಡಿಗೆ ಲಿಂಕ್ ಇರುವ ಮೊಬೈಲ್ ನಂಬರ್
  • * ಅರ್ಜಿದಾರನ ಆಧಾರ್ ಕಾರ್ಡ್
  • * ರೇಷನ್ ಕಾರ್ಡ್ ದಾಖಲೆಗಳು


ಮೊಬೈಲ್’ನಲ್ಲಿಯೆ ಅರ್ಜಿ ಸಲ್ಲಿಸುವ ವಿಧಾನ

ಕರ್ನಾಟಕ ಸರಕಾರದ ನಾಡಕಚೇರಿ ಜಾಲತಾಣದ ಮೂಲಕ ಮೊಬೈಲ್’ನಲ್ಲಿಯೇ ಸುಲಭವಾಗಿ ಆನ್‌ಲೈನ್ ಅರ್ಜಿ ಸಲ್ಲಿಸಿ ಜಾತಿ ಮತ್ತು ಆದಯ ಪ್ರಮಾಣ ಪತ್ರವನ್ನು ಪಡೆಯಬಹುದಾಗಿದೆ. ಆನ್‌ಲೈನ್ ಲಿಂಕ್ ಈ ಲೇಖನದ ಕೊನೆಯಲ್ಲಿದೆ. ಅದನ್ನು ಕ್ಲಿಕ್ ಮಾಡುವ ಮೂಲಕ ಈ ಕೆಳಗಿನ ಹಂತಗಳನ್ನು ಅನುಸರಿಸಿ...


ಹಂತ 1 : ಲಿಂಕ್ ಮೇಲೆ ಕ್ಲಿಕ್ ಮಾಡಿದ ನಂತರ ತೆಗೆದುಕೊಂಡಿರುವ ಪುಟದಲ್ಲಿ ಮೊದಲಿಗೆ ನಿಮ್ಮ ಮೊಬೈಲ್ ಎಂಟರ್ ಮಾಡಿ, ಅದಕ್ಕೆ ಬರುವ ಒಟಿಪಿ ಮೂಲಕ ನಾಡಕಚೇರಿ ಜಾಲತಾಣ ಪ್ರವೇಶಿಸಿ.


ಹಂತ 2 : ನಿಮ್ಮ ಮೊಬೈಲ್ ನಂಬರಿಗೆ ಬರುವಂತಹ ಆರು ಸಂಖ್ಯೆಯ ಓಟಿಪಿಯನ್ನು ಎಂಟರ್ ಮಾಡಿ ಲಾಗಿನ್ ಆಗಿ.


ಹಂತ 3 : ಲಾಗಿನ್ ಆದ ನಂತರ ಅಲ್ಲಿ ನಿಮಗೆ ಹಲವಾರು ಆಯ್ಕೆಗಳು ಕಾಣಿಸುತ್ತವೆ. ಮೇಲ್ಭಾಗದಲ್ಲಿ ಕಾಣಿಸುವ New request ಎಂಬ ಆಯ್ಕೆಯನ್ನು ಆಯ್ದುಕೊಂಡು ಮುಂದುವರೆಯಿರಿ.


ಹಂತ 4 : ನೀವು ಅರ್ಜಿ ಸಲ್ಲಿಸಬೇಕಾಗಿರುವ ಹಲವಾರು ಸೇವೆಗಳ ಆಯ್ಕೆಗಳು ಅಲ್ಲಿ ಕಾಣಿಸುತ್ತವೆ. ನೀವು ಜಾತಿ ಮತ್ತು ಆದಾಯ ಪ್ರಮಾಣ ಪತ್ರದ ಆಯ್ಕೆ ಮೇಲೆ ಕ್ಲಿಕ್ ಮಾಡಿ. ಅಲ್ಲಿ ನಿಮ್ಮ ರೇಷನ್ ಕಾರ್ಡ್ ನಂಬರ್ ಮತ್ತು ಇತರೆ ಮಾಹಿತಿ ಭರ್ತಿ ಮಾಡಿ.


ಹಂತ 5 : ನಿಮ್ಮ ಪಡಿತರ ಚೀಟಿಯಲ್ಲಿರುವ ಕುಟುಂಬದ ಸದಸ್ಯರನ್ನು ಅಲ್ಲಿ ಆಯ್ಕೆ ಮಾಡಿ ಸಂಪೂರ್ಣ ಮಾಹಿತಿಯನ್ನು ಭರ್ತಿ ಮಾಡಿ.


ಹಂತ 6 : ಅಲ್ಲಿ ಕೇಳಲಾಗುವ ಎಲ್ಲಾ ಮಾಹಿತಿಯನ್ನು ಸರಿಯಾಗಿ ಭರ್ತಿ ಮಾಡಿದ ನಂತರ Pay service fee ಮೇಲೆ ಕ್ಲಿಕ್ ಮಾಡಿ, ನಿಗದಿಪಡಿಸಲಾಗಿರುವ ಅರ್ಜಿ ಶುಲ್ಕವನ್ನು ಆನ್‌ಲೈನ್ ಮಾರ್ಗಗಳಾದ ಡೆಬಿಟ್ ಕಾರ್ಡ್ ಅಥವಾ ನೆಟ್ ಬ್ಯಾಂಕಿ೦ಗ್ ಮುಖಾಂತರ ಪಾವತಿಸಿ.


ಹಂತ 7 : ಈ ಶುಲ್ಕವನ್ನು ಪಾವತಿಸಿದ ನಂತರ ಸಂಬ೦ಧಿಸಿದ ಅಧಿಕಾರಿಗಳು ನಿಮ್ಮ ಅರ್ಜಿಯನ್ನು ಪರಿಶೀಲಿಸಿ ಅನುಮೊದಿಸುತ್ತಾರೆ. ನಂತರದಲ್ಲಿ ನೀವು ಪುನಃ ಅದೇ ಜಾಲತಾಣಕ್ಕೆ ಭೇಟಿ ನೀಡಿ ಜಾತಿ ಮತ್ತು ಆದಾಯ ಪ್ರಮಾಣ ಪತ್ರವನ್ನು ಡೌನ್ಲೋಡ್ ಮಾಡಿಕೊಂಡು ಪ್ರಿಂಟ್ ತಗಿಸಿಕೊಳ್ಳಬಹುದಾಗಿದೆ.


ಸ್ವತಃ ನಿಮಗೇ ಮೊಬೈಲ್‌ನಲ್ಲಿ ಅರ್ಜಿ ಸಲ್ಲಿಸಲು ಸಾಧ್ಯವಾಗದಿದ್ದರೆ, ನಿಮ್ಮ ಹತ್ತಿರದ ಗ್ರಾಮ ಒನ್, ಕರ್ನಾಟಕ ಒನ್, ಬೆಂಗಳೂರು ಒನ್ ಸೇರಿದಂತೆ ಸೈಬರ್ ಸೆಂಟರ್’ಗೆ ಭೇಟಿ ನೀಡಿ ಅರ್ಜಿ ಸಲ್ಲಿಕೆ ಮಾಡಬಹುದಾಗಿದೆ.


ಅರ್ಜಿ ಸಲ್ಲಿಸುವ ಡೈರೆಕ್ಟ್ ಲಿಂಕ್ : ಇಲ್ಲಿ ಒತ್ತಿ 

Most Popular

Related Posts