ಸ್ವಂತ ಮನೆ ಕಟ್ಟಿಕೊಳ್ಳಲು ಕೇಂದ್ರ ಸರಕಾರದಿಂದ ಆರ್ಥಿಕ ನೆರವು | ಅರ್ಜಿ ಸಲ್ಲಿಸುವ ಮಾಹಿತಿ ತಿಳಿಯಿರಿ Pradhanmantri Aawas Yojana Home
GOVT SCHEME
30 June 2024
Pradhanmantri Aawas Yojana Home: ದೇಶದ ಬಡಜನರ ಸ್ವಂತ ಮನೆ ಕಟ್ಟಿಸಿಕೊಳ್ಳುವ ಕನಸನ್ನು ನನಸಾಗಿಸಲು ಜಾರಿಗೆ ತಂದಿರುವ೦ತಹ ಕೇಂದ್ರ ಸರ್ಕಾರಿ ಯೋಜನೆ ‘ಪ್ರಧಾನ ಮಂತ್ರಿ ಆವಾಸ್ ಯೋಜನೆ’ ಅಡಿಯಲ್ಲಿ ಫಲಾನುಭವಿಗಳಿಂದ ಅರ್ಜಿ ಆಹ್ವಾನಿಸಲಾಗಿದ್ದು ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ...
ಭಾರತದಲ್ಲಿ ಆರ್ಥಿಕವಾಗಿ ಹಿಂದುಳಿದ, ಮಧ್ಯಮ ವರ್ಗದ ಹಾಗೂ ಬಡಜನರ ಸ್ವಂತ ಮನೆ ಕಟ್ಟಿಕೊಳ್ಳುವ ಕನಸನ್ನು ಈಡೇರಿಸಲು ಪ್ರಧಾನ ಮಂತ್ರಿ ಆವಾಸ್ ಯೋಜನೆಯನ್ನು (Pradhan Mantri Awas Yojana-PMAY) 2015ರಲ್ಲಿ ಜಾರಿಗೆ ತರಲಾಯಿತು.
ಕೇಂದ್ರ ಸರ್ಕಾರವು ದೇಶಾದ್ಯಂತ ಎರಡು ದಶ ಲಕ್ಷಕ್ಕೂ ಹೆಚ್ಚಿನ ಸಕಲ ಮೂಲಭೂತ ಸೌಕರ್ಯಗಳನ್ನು ಹೊಂದಿರುವ೦ತಹ ಮನೆಗಳನ್ನು ನಿರ್ಮಿಸುವ ಗುರಿಯನ್ನು ಹೊಂದಿದ್ದು ಈ ಯೋಜನೆಗೆ ಅರ್ಜಿ ಸಲ್ಲಿಸಬೇಕಾಗುವ ಅರ್ಹತೆಗಳು ಹಾಗೂ ಅರ್ಜಿ ಸಲ್ಲಿಸುವ ಮಾಹಿತಿಯನ್ನು ಈ ಲೇಖನದಲ್ಲಿ ನೀಡಲಾಗಿದೆ.
ನರೇಂದ್ರ ಮೋದಿಯವರು 3ನೇ ಬಾರಿ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಿದ ನಂತರ ನೂತನ ಕೇಂದ್ರ ಸರಕಾರದ ಮೊದಲ ಸಚಿವ ಸಂಪುಟ ಸಭೆಯಲ್ಲಿ ‘ಪ್ರಧಾನಮಂತ್ರಿ ಆವಾಸ್ ಯೋಜನೆ’ ಅಡಿಯಲ್ಲಿ ಬರೋಬ್ಬರಿ 3 ಕೋಟಿ ಮನೆಗಳ ನಿರ್ಮಾಣಕ್ಕೆ ಅಧಿಕೃತ ಅನುಮೋದನೆ ನೀಡಲಾಗಿದೆ. ದೇಶದ ಮೂರು ಕೋಟಿ ವಸತಿರಹಿತ ಕುಟುಂಬಗಳಿಗೆ ನಿಗದಿತ ಕಾಲಮಿತಿಯೊಳಗೆ ಮನೆ ವಿತರಿಸಲು ಕೇಂದ್ರ ಸಂಪುಟ ಸಭೆ ತೀರ್ಮಾನಿಸಿದೆ.
ಇದನ್ನೂ ಓದಿ: ನಾಟಿ ದನಗಳ ಸಗಣಿ ಸಂಪತ್ತು : ಹಾಲಿಗಿಂತ ಸಗಣಿಗೇ ಹೆಚ್ಚು ಬೆಲೆ
ಆವಾಸ್ ಯೋಜನೆಯ ವಿಧಗಳು
ಪ್ರಧಾನ ಮಂತ್ರಿ ಆವಾಸ್ ಯೋಜನೆಯನ್ನು ಪ್ರದೇಶದ ಅನುಗುಣವಾಗಿ ಎರಡು ವಿಭಾಗಗಳಾಗಿ ವಿಂಗಡಿಸಲಾಗಿದ್ದು ಈ ಕೆಳಗಿನಂತಿದೆ.
1. ಪಿಎಂ ಆವಾಸ್ ಯೋಜನೆ ಗ್ರಾಮೀಣ
2. ಪಿಎಂ ಆವಾಸ್ ಯೋಜನೆ ನಗರ
ಪ್ರಧಾನಮಂತ್ರಿಯ ಆವಾಸ್ ಯೋಜನೆಗೆ ಯಾರು ಅರ್ಜಿ ಸಲ್ಲಿಸಬಹುದು?
ಕೇಂದ್ರ ಸರ್ಕಾರದ ಈ ಯೋಜನೆಗೆ ಸಂತ ಮನೆ ಇಲ್ಲದಿರುವಂತಹ ಭಾರತೀಯ ಪ್ರಜೆಯು ಅರ್ಜಿ ಸಲ್ಲಿಸಬಹುದು. ಆದರೆ ಅರ್ಜಿ ಸಲ್ಲಿಸುವಂತಹ ಅಭ್ಯರ್ಥಿಗಳು ಈ ಮೊದಲು ಯಾವುದೇ ರೀತಿಯ ಸರ್ಕಾರದ ವಸತಿ ಯೋಜನೆಯ ಪ್ರಯೋಜನ ಪಡೆದಿರಬಾರದು.
ಈ ಯೋಜನೆಯಲ್ಲಿ ಪ್ರಮುಖವಾಗಿ ಮಹಿಳೆಯರಿಗೆ ಆದ್ಯತೆ ನೀಡಲಾಗುತ್ತಿದ್ದು, EWS ವರ್ಗದ ಅಭ್ಯರ್ಥಿಗಳು ಅರ್ಜಿ ಸಲ್ಲಿಸುವುದಾದರೆ ಅವರ ಕುಟುಂಬ ವಾರ್ಷಿಕ ವರಮಾನವು 6 ಲಕ್ಷ ರೂಪಾಯಿ ಒಳಗಿರಬೇಕು ಹಾಗೂ Low Income Group ಅಡಿಯಲ್ಲಿ ಬರುವ ಅಭ್ಯರ್ಥಿಗಳ ವಾರ್ಷಿಕ ವರಮಾನ 6 ಲಕ್ಷ ರೂಪಾಯಿಯಿಂದ 12 ಲಕ್ಷ ರೂಪಾಯಿಯ ಒಳಗೆ ಇರಬೇಕು.
ಇದನ್ನೂ ಓದಿ: ವಾಟ್ಸಾಪ್‌ನಿಂದ ಕೂತಲ್ಲೇ ಸಿಗುತ್ತವೆ ಈ ಎಲ್ಲ ಸೇವೆಗಳು | ಈಗಲೇ ಟ್ರೈ ಮಾಡಿ...
ಈ ಯೋಜನೆಗೆ ಹೇಗೆ ಅರ್ಜಿ ಸಲ್ಲಿಸಬೇಕು?
ಪಿಎಂ ಅವಾಸ್ ಯೋಜನೆಯ ಅಡಿಯಲ್ಲಿ ನೋಂದಾಯಿಸಿಕೊಳ್ಳಲು ಪ್ರಧಾನ ಮಂತ್ರಿ ಆವಾಸ್ ಯೋಜನೆಯ ಅಧಿಕೃತ ಜಾಲತಾಣಕ್ಕೆ ಭೇಟಿ ನೀಡುವುದರ ಮುಖಾಂತರ ಆನ್‌ಲೈನ್’ನಲ್ಲಿ ಅರ್ಜಿ ಸಲ್ಲಿಸಬಹುದು.
ಈ ಯೋಜನೆಗೆ ಅರ್ಜಿ ಸಲ್ಲಿಸುವ ಅಧಿಕೃತ ಲಿಂಕನ್ನು ಈ ಕೆಳಗೆ ನೀಡಲಾಗಿದ್ದು, ನಿಮಗೆ ಅರ್ಜಿ ಸಲ್ಲಿಸುವಾಗ ಯಾವುದೇ ರೀತಿಯ ತೊಂದರೆಯಾದಲ್ಲಿ ನಿಮ್ಮ ಹತ್ತಿರದ ಕಂಪ್ಯೂಟರ್ ಸೇವಾ ಕೇಂದ್ರಗಳಿಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು...
ಪಿಎಂ ಆವಾಸ್ ಯೋಜನೆ ಅರ್ಜಿ ಲಿಂಕ್ (Apply Now)
ಇದನ್ನೂ ಓದಿ: 17,727 ಕೇಂದ್ರ ಸರ್ಕಾರಿ ಹುದ್ದೆಗಳ ಬೃಹತ್ ನೇಮಕಾತಿಗೆ ಅರ್ಜಿ ಆಹ್ವಾನ | ಪದವೀಧರರಿಗೆ ಭರ್ಜರಿ ಅವಕಾಶ
Most Popular
- BSNL ಸೂಪರ್ ರೀಚಾರ್ಜ್ ಯೋಜನೆ : ಕೇವಲ 7 ರೂಪಾಯಿಗೆ ನಿತ್ಯ 2GB ಡೇಟಾ, ಬರೋಬ್ಬರಿ 13 ತಿಂಗಳು ವ್ಯಾಲಿಡಿಟಿ BSNL 13 Months Validity Cheap Recharge Plan
- ಸರಕಾರಿ ಯೋಜನೆಗಳ ಮಾಹಿತಿಯನ್ನು ರೈತರ ಮನೆ ಬಾಗಿಲಿಗೇ ತರುವ ಕೃಷಿಸಖಿ ಮತ್ತು ಪಶುಸಖಿಯರು Krishi Sakhi and Pashu Sakhi in Karnataka
- ನಾಟಿ ಹಸುಗಳ ಸಗಣಿಯಲ್ಲಿದೆ ಸಂಪತ್ತು | ಹಾಲಿಗಿಂತ ಸಗಣಿಗೇ ಹೆಚ್ಚು ಬೆಲೆ Importance of indian cattle dung
- ಕೃಷಿಯಲ್ಲಿ ಮಾನವ ಮೂತ್ರ ಪ್ರಯೋಗಿಸಿ ಯಶಸ್ಸು ಕಂಡ ರೈತ Human urine experiment in agriculture
- ಕೇಂದ್ರ ಸರ್ಕಾರದ ಗೇಲ್ ಇಂಡಿಯಾ ಲಿಮಿಟೆಡ್ ಹುದ್ದೆಗಳಿಗೆ ಅರ್ಜಿ ಆಹ್ವಾನ GAIL India Limited Recruitment 2024
- ಏಕೀಕೃತ ಪಿಂಚಣಿ ಯೋಜನೆ : ಸರ್ಕಾರಿ ನೌಕರರಿಗೆ ಇದರ ಪ್ರಯೋಜನಗಳೇನು? Unified Pension Scheme for Govt Employees
- ಗ್ರಾಮೀಣ ಜನರಿಗಾಗಿ ಇರುವ ಬಂಪರ್ ಪೋಸ್ಟಾಫೀಸ್ ಸ್ಕೀಮ್ | ₹1500 ಹೂಡಿಕೆ ಮಾಡಿ ₹35 ಲಕ್ಷ ಪಡೆಯಿರಿ... Rural Postal Life Insurance - RPLI
- ‘ಅನ್ನಭಾಗ್ಯ’ ಅಕ್ಕಿಯಲ್ಲಿ ಪ್ಲಾಸ್ಟಿಕ್ ಅಕ್ಕಿ ವದಂತಿ | ರಾಜ್ಯ ಸರ್ಕಾರದ ಹೇಳಿದ್ದೇನು? Plastic rice rumor in Annabhagya rice
- ಆಸ್ತಿ ನೋಂದಣಿಯನ್ನು ಇನ್ಮುಂದೆ ಎಲ್ಲಿಯಾದರೂ ಮಾಡಿ | ರಾಜ್ಯಾದ್ಯಂತ ಹೊಸ ನಿಯಮ ಜಾರಿ Anywhere Registration Karnataka
- ರೈತರೇ ಕೀಟನಾಶಕಗಳ ವಿಷಜಾಲದಿಂದ ಹೊರಬಂದು ಬಳಸಿ ನೈಸರ್ಗಿಕ ಕೀಟ ಹತೋಟಿ ತಂತ್ರ Natural pest control strategy