ಗ್ರಾಮೀಣ ಜನರಿಗಾಗಿ ಇರುವ ಬಂಪರ್ ಪೋಸ್ಟಾಫೀಸ್ ಸ್ಕೀಮ್ | ₹1500 ಹೂಡಿಕೆ ಮಾಡಿ ₹35 ಲಕ್ಷ ಪಡೆಯಿರಿ... Rural Postal Life Insurance - RPLI
FINANCIAL
14 July 2024
Rural Postal Life Insurance - RPLI : ಕಡಿಮೆ ಹೂಡಿಕೆ ಮಾಡಿ ಹೆಚ್ಚು ಗಳಿಕೆ ಕೊಡುವ ಪೋಸ್ಟಾಫೀಸಿನ ಈ ಯೋಜನೆಯ ಅಡಿಯಲ್ಲಿ ತಿಂಗಳಿಗೆ 1500 ರೂಪಾಯಿ ಹೂಡಿಕೆ ಮಾಡಿ ಭರ್ತಿ 35 ಲಕ್ಷ ರೂಪಾಯಿ ಗಳಿಸುವುದು ಹೇಗೆ? ಸಂಪೂರ್ಣ ಮಾಹಿತಿ ಇಲ್ಲಿದೆ...
ಹೂಡಿಕೆ (Investment) ಎಂಬುವುದು ವ್ಯಕ್ತಿಯ ಜೀವನಕ್ಕೆ ಅತಿ ಮುಖ್ಯವಾಗಿರುತ್ತದೆ. ಸಣ್ಣ ವಯಸ್ಸಿನಿಂದಲೇ ಹೂಡಿಕೆ ಮಾಡುವುದರಿಂದ ನಿವೃತ್ತಿ ಅವಧಿಯಲ್ಲಿ ಆರ್ಥಿಕವಾಗಿ ಸದೃಢರಾಗಿರಬಹುದು. ಪೋಸ್ಟ್ ಆಫೀಸ್’ನ ಈ ಯೋಜನೆಯ ಅಡಿಯಲ್ಲಿ ತಿಂಗಳಿಗೆ ಕೇವಲ 1500 ರೂಪಾಯಿ ಹೂಡಿಕೆ ಮಾಡುವುದರಿಂದ ಅವಧಿಯ ನಂತರ 35 ಲಕ್ಷ ರೂಪಾಯಿಯ ದೊಡ್ಡ ಮೊತ್ತವನ್ನು ಪಡೆಯುಬಹುದಾಗಿದೆ. ಈ ಯೋಜನೆ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೋಡೋಣ...
ಇದನ್ನೂ ಓದಿ: SSLC, PUC ಪಾಸಾದವರಿಗೆ ಜಿಲ್ಲಾ ನ್ಯಾಯಾಲಯ ಹುದ್ದೆಗಳಿಗೆ ಅರ್ಜಿ | ಮಾಸಿಕ ಸಂಬಳ ₹42,000
ಇದು ಗ್ರಾಮೀಣರ ಸುರಕ್ಷಾ ಯೋಜನೆ
ಇದೊಂದು ಗ್ರಾಮೀಣ ಅಂಚೆ ವಿಮಾ ಯೋಜನೆಯಾಗಿದ್ದು; ಇದು ಪಾಲಿಸಿದಾರರ ಜೀವನದುದ್ದಕ್ಕೂ ವಿಮಾ ರಕ್ಷಣೆಯನ್ನು ಒದಗಿಸುತ್ತದೆ. ಪಾಲಿಸಿಯ ಅವಧಿಯೊಳಗೆ ಪಾಲಿಸಿದಾರನ ಮರಣದ ನಂತರ, ಪಾಲಿಸಿಯ ನಾಮಿನಿಗಳು ಮರಣದ ಲಾಭದ ಮೊತ್ತವನ್ನು ಕ್ಲೈಮ್ ಮಾಡಬಹುದಾದ ಪೋಸ್ಟ್ ಆಫೀಸ್’ನ ಈ ಯೋಜನೆಯ ಹೆಸರೇ ‘ಗ್ರಾಮ ಸುರಕ್ಷಾ ಯೋಜನೆ’ (Gram suraksha yojane). 1995ರಲ್ಲಿ ಗ್ರಾಮೀಣ ಅಂಚೆ ಜೀವ ವಿಮೆ - ಆರ್‌ಪಿಎಲ್‌ಐ (Rural Postal Life Insurance - RPLI) ಯೋಜನೆಯನ್ನು ಸ್ಥಾಪಿಸಲಾಯಿತು.
ಯಾರು ಹೂಡಿಕೆ ಮಾಡಬಹುದು?
19 ವರ್ಷದಿಂದ 55 ವರ್ಷದ ವಯೋಮಿತಿ ಹೊಂದಿರುವ ಯಾವುದೇ ಭಾರತೀಯ ನಾಗರಿಕನು ಈ ಗ್ರಾಮ ಸುರಕ್ಷಾ ಯೋಜನೆಯಲ್ಲಿ ಹೂಡಿಕೆ ಮಾಡಬಹುದಾಗಿದೆ. ಈ ಯೋಜನೆಯು 19ನೇ ವರ್ಷದವರಿಗೆ ಅತ್ಯಂತ ಉಪಕಾರಿ ಮತ್ತು ಲಾಭದಾಯಕವಾಗಿದೆ. ಹೂಡಿಕೆಯ ಮೊತ್ತವು ವಾರ್ಷಿಕವಾಗಿ 10,000 ರಿಂದ 10 ಲಕ್ಷ ರೂಪಾಯಿ ಹೂಡಿಕೆ ಮಾಡಬಹುದಾಗಿದ್ದು; ಇದನ್ನು ಪ್ರತಿ ತಿಂಗಳು, ಮೂರು ತಿಂಗಳಿಗೊಮ್ಮೆ ಅಥವಾ ಆರು ತಿಂಗಳಿಗೊಮ್ಮೆ, ಇಲ್ಲವೇ ವರ್ಷಕ್ಕೊಮ್ಮೆ ಒಟ್ಟು ಮೊತ್ತವನ್ನು ಹೂಡಿಕೆ ಮಾಡಬಹುದಾಗಿದೆ.
ಇದನ್ನೂ ಓದಿ: ಸ್ವಂತ ಮನೆಗಾಗಿ ಗೃಹ ಸಾಲ ಪಡೆಯಬೇಕೆ? ಇಲ್ಲಿದೆ ಸಾಲ ಪಡೆಯುವ ಮಹತ್ವದ ಮಾಹಿತಿ
ಹೂಡಿಕೆಯ ಮೊತ್ತವೆಷ್ಟು?
ಗ್ರಾಮ ಸುರಕ್ಷಾ ಯೋಜನೆಯ ಅಡಿಯಲ್ಲಿ ನೀವು ಹೂಡಿಕೆ ಮಾಡುವುದಾದರೆ, ನಿಮ್ಮ ಗ್ರಾಮ ಸುರಕ್ಷಾ ಖಾತೆಗೆ ಪ್ರತಿ ತಿಂಗಳು ಕನಿಷ್ಟ 1500 ರೂಪಾಯಿಯನ್ನು ಜಮಾ ಮಾಡುವುದು ಕಡ್ಡಾಯವಾಗಿರುತ್ತದೆ. ನೀವು ಈ ಮೊತ್ತವನ್ನು ನಿರ್ದಿಷ್ಟ ಅವಧಿಯ ವರೆಗೆ ಮಾಡಿದರೆ ಅವಧಿಯ ನಂತರ 31 ಲಕ್ಷದಿಂದ 35 ಲಕ್ಷ ರೂಪಾಯಿಯ ವರೆಗೆ ರಿಟರ್ನ್ಸ್ ಪಡೆಯಬಹುದಾಗಿದೆ.
ಹೂಡಿಕೆ ಮಾಡುವ ಅವಧಿಯಲ್ಲಿ ಹೂಡಿಕೆದಾರನ 55 ವರ್ಷಗಳ ಪೂರೈಕೆಯ ನಂತರ 31.60 ಲಕ್ಷ ರೂಪಾಯಿಯ ಮೆಚ್ಯುರಿಟಿ ಲಾಭವನ್ನು ಪಡೆಯಬಹುದಾಗಿದೆ. ಅದೇ ಒಂದು ವೇಳೆ 58 ವರ್ಷಗಳ ನಂತರವು ನೀವು ಹೂಡಿಕೆ ಮಾಡಿದರೆ ನೀವು ಇನ್ನೂ ಹೆಚ್ಚಿನ ಲಾಭವನ್ನು ಪಡೆಯಬಹುದಾಗಿದ್ದು 33.40 ಲಕ್ಷ ರೂಪಾಯಿಯ ಲಾಭ ಪಡೆಯಬಹುದಾಗಿದೆ. ಅದೇ ರೀತಿ ನಿಮ್ಮ ಹೂಡಿಕೆಯ ಅವಧಿಯ 60 ವರ್ಷಗಳ ವರೆಗೆ ಇದ್ದರೆ ಈ ಯೋಜನೆಯ ಪ್ರಬುದ್ಧ ಪ್ರಯೋಜನವು 34.60 ಲಕ್ಷ ರೂಪಾಯಿ ಆಗಿರುತ್ತದೆ.
ಇದನ್ನೂ ಓದಿ: ಕೃಷಿ ಇಲಾಖೆಯಲ್ಲಿ 600ಕ್ಕೂ ಹೆಚ್ಚು ಹುದ್ದೆಗಳ ನೇಮಕಾತಿ | ಯಾವೆಲ್ಲ ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ?
ಒಂದು ವೇಳೆ ಹೂಡಿಕೆದಾರನು ಮೃತಪಟ್ಟರೆ ಏನು ಮಾಡುವುದು?
ಹಲವು ಕಾರಣಾಂತರಗಳಿ೦ದ ಅಥವಾ ಆಕಸ್ಮಿಕವಾಗಿ ಪಾಲಿಸಿದಾರನು ಅಥವಾ ಹೂಡಿಕೆದಾರನು ಮೃತಪಟ್ಟರೆ ನಿಮ್ಮ ಈ ಭರವಸೆಯ ಮೊತ್ತವನ್ನು ನೀವು ನೇಮಕ ಮಾಡಿರುವ ನಾಮಿನಿಗೆ ವರ್ಗಾಯಿಸಲಾಗುತ್ತದೆ.
35 ಲಕ್ಷ ರೂಪಾಯಿ ಲಾಭ ಪಡೆಯುವ ಲೆಕ್ಕಾಚಾರ
ಗ್ರಾಮ ಸುರಕ್ಷಾ ಯೋಜನೆಯ ಅಡಿಯಲ್ಲಿ ನೀವು ಸಂಪೂರ್ಣ 35 ಲಕ್ಷ ಲಾಭವನ್ನು ಪಡೆಯಬೇಕೆಂದರೆ 19ನೇ ವಯಸ್ಸಿಗೆ ಈ ಯೋಜನೆಯಲ್ಲಿ ಹೂಡಿಕೆ ಮಾಡಲು ಆರಂಭಿಸಬೇಕು.
ಆಗ 10 ಲಕ್ಷ ರೂಪಾಯಿಯ ಪಾಲಿಸಿ ಕೊಂಡರೆ, ಈ ಪಾಲಿಸಿಯ ತಿಂಗಳ ಪ್ರೀಮಿಯಂ ಮೊತ್ತವು 55 ವರ್ಷಕ್ಕೆ 1,515 ರೂಪಾಯಿ ಆಗಿರುತ್ತದೆ. ಅದೇ ರೀತಿ ನಿಮ್ಮ 58 ವರ್ಷಕ್ಕೆ 1,463 ರೂಪಾಯಿ ಮತ್ತು 60 ವರ್ಷಕ್ಕೆ 1,411 ರೂಪಾಯಿ ಆಗಿರುತ್ತದೆ.
ಈ ರೀತಿ ಹೂಡಿಕೆ ಮಾಡುವುದರಿಂದ ಹೂಡಿಕೆದಾರರಿಗೆ 55ನೇ ವಯಸ್ಸಿನಲ್ಲಿ 31.60 ಲಕ್ಷ ರೂಪಾಯಿ ರಿಟರ್ನ್ಸ್ ಸಿಗುತ್ತದೆ. ಅದೇ ರೀತಿಯಲ್ಲಿ 58ನೇ ವಯಸ್ಸಿನಲ್ಲಿ 33.40 ಲಕ್ಷ ರೂಪಾಯಿ ಮತ್ತು 60ನೇ ವಯಸ್ಸಿನಲ್ಲಿ ಭರ್ಜರಿ 34.60 ಲಕ್ಷ ರೂಪಾಯಿ ಸಿಗುತ್ತದೆ.
ಅಂದರೆ ಪ್ರತಿ ದಿನಕ್ಕೆ ಕೇವಲ 50 ರೂಪಾಯಿ ಅಥವಾ ಒಂದು ತಿಂಗಳಿಗೆ 1,515 ರೂಪಾಯಿ ಹೂಡಿಕೆ ಮಾಡುವುದಾದರೆ 34.60 ಲಕ್ಷ ರೂಪಾಯಿ ಸಿಗುತ್ತದೆ.
ಗ್ರಾಮ ಸುರಕ್ಷಾ ಯೋಜನೆಯ ಖಾತೆ ತೆರೆಯಲು ಹಾಗು ಯೋಜನೆ ಕುರಿತ ಖಚಿತ ಮಾಹಿತಿಗಾಗಿ ನಿಮ್ಮ ಹತ್ತಿರದ ಅಂಚೆ ಕಚೇರಿ ಭೇಟಿ ಮಾಡಿ...
ಇದನ್ನೂ ಓದಿ: ರೈತರು ಸರಕಾರದ ವಿವಿಧ ಯೋಜನೆಗಳ ಪ್ರಯೋಜನ ಪಡೆಯಲು ಎಫ್‌ಐಡಿ ನೋಂದಣಿ ಕಡ್ಡಾಯ...
Most Popular
- ಕೃಷಿ ಇಲಾಖೆಯಲ್ಲಿ 600ಕ್ಕೂ ಹೆಚ್ಚು ಹುದ್ದೆಗಳ ನೇಮಕಾತಿ | ಯಾವೆಲ್ಲ ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ? Karnataka Agri Department Recruitment 2024
- ಸರ್ಕಾರಿ ಕೋಟಾ ಬಿ.ಇಡಿ ಕೋರ್ಸ್ ವ್ಯಾಸಂಗಕ್ಕೆ ಅರ್ಜಿ ಆಹ್ವಾನ Karnataka B.Ed Course Online Application
- ಅಧಿಕ ಇಳುವರಿಗೆ ತಪ್ಪದೇ ಮಣ್ಣಿನ ಆರೋಗ್ಯ ತಪಾಸಣೆ ಮಾಡಿಸಿ Soil Health Check
- 2024ರ ಮುಂಗಾರು ಬೆಳೆ ಸಮೀಕ್ಷೆ ಹೀಗೆ ಮಾಡಿ... Crop Survey for Monsoon 2024
- ಸರಕಾರಿ ಯೋಜನೆಗಳ ಮಾಹಿತಿಯನ್ನು ರೈತರ ಮನೆ ಬಾಗಿಲಿಗೇ ತರುವ ಕೃಷಿಸಖಿ ಮತ್ತು ಪಶುಸಖಿಯರು Krishi Sakhi and Pashu Sakhi in Karnataka
- ಬ್ಯಾಂಕುಗಳಿಗೆ ಇನ್ನು ವಾರದಲ್ಲಿ ಎರಡು ದಿನ ರಜೆ Two Bank Holidays in a Week
- ಕಮ್ಮಿ ಬಡ್ಡಿಯಲ್ಲಿ ಗೃಹ ಸಾಲ ನೀಡುವ ಬಾಂಕುಗಳ ಪಟ್ಟಿ | ಗೃಹ ಸಾಲದ ಸಂಪೂರ್ಣ ಮಾಹಿತಿ ಇಲ್ಲಿದೆ... How to get home loan at low interest?
- 17,727 ಕೇಂದ್ರ ಸರ್ಕಾರಿ ಹುದ್ದೆಗಳ ಬೃಹತ್ ನೇಮಕಾತಿಗೆ ಅರ್ಜಿ ಆಹ್ವಾನ | ಪದವೀಧರರಿಗೆ ಭರ್ಜರಿ ಅವಕಾಶ SSC CGL Recruitment 2024
- ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಪಡೆಯಲು ನಿಮ್ಮ ಮೊಬೈಲ್ನಲ್ಲಿಯೇ ಅರ್ಜಿ ಸಲ್ಲಿಸಿ... Caste and Income Certificate Apply Online
- ಪಿಯುಸಿ ಪಾಸಾಗಿದ್ರೆ ಗ್ರಾಮ ಪಂಚಾಯಿತಿ ಗ್ರಂಥಾಲಯ ಮೇಲ್ವಿಚಾರಕರ ಹುದ್ದೆಗಳಿಗೆ ಅರ್ಜಿ ಹಾಕಿ... Gram Panchayat Library Supervisor Recruitment 2024 Dharwad