BSNL ಸೂಪರ್ ರೀಚಾರ್ಜ್ ಯೋಜನೆ : ಕೇವಲ 7 ರೂಪಾಯಿಗೆ ನಿತ್ಯ 2GB ಡೇಟಾ, ಬರೋಬ್ಬರಿ 13 ತಿಂಗಳು ವ್ಯಾಲಿಡಿಟಿ BSNL 13 Months Validity Cheap Recharge Plan

TECHNOLOGY
21 October 2024

BSNL ಸೂಪರ್ ರೀಚಾರ್ಜ್ ಯೋಜನೆ : ಕೇವಲ 7 ರೂಪಾಯಿಗೆ ನಿತ್ಯ 2GB ಡೇಟಾ, ಬರೋಬ್ಬರಿ 13 ತಿಂಗಳು ವ್ಯಾಲಿಡಿಟಿ  BSNL 13 Months Validity Cheap Recharge Plan
WhatsApp Group Join Now
Telegram Group Join Now

ಭಾರತ ಸರ್ಕಾರಿ ಸ್ವಾಮ್ಯದ ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ (Bharat Sanchar Nigam Limited -BSNL) ಪರಿಚಯಿಸುತ್ತಿರುವ ವಿವಿಧ ರೀಚಾರ್ಜ್ (Recharge Plan) ಯೋಜನೆಗಳಿಂದ ಆಕರ್ಷಿತರಾಗುತ್ತಿರುವ ಲಕ್ಷಾಂತರ ಬಳಕೆದಾರರು ಇತ್ತೀಚೆಗೆ ತಮ್ಮ ಮೊಬೈಲ್ ಸಂಖ್ಯೆಗಳನ್ನು BSNLಗೆ ಪೋರ್ಟ್ ಮಾಡುತ್ತಿದ್ದಾರೆ. ಅದಕ್ಕೆ ಪೂರಕವಾಗಿ ಬಿಎಸ್‌ಎನ್‌ಎಲ್ ಕೂಡ ತನ್ನ 4G ಸೇವೆಯನ್ನು ವಿಸ್ತರಿಸುತ್ತಾ 5G ಸೇವೆಗೆ ಸನ್ನದ್ಧವಾಗುತ್ತಿದೆ.


BSNL ಈ ಹೊಸ ಕ್ರಾಂತಿ ಮೊಬೈಲ್ ಬಳಕೆದಾರರಿಗೆ ನವ ಉತ್ಸಾಹ ಮೂಡಿಸುತ್ತಿದೆ. ಖಾಸಗಿ ಟೆಲಿಕಾಂ ಕಂಪನಿಗಳ (Private telecom companys) ಬೆಲೆ ಏರಿಕೆಗೆ ಸೆಡ್ಡು ಹೊಡೆಯುತ್ತಿರುವ ಬಿಎಸ್‌ಎನ್‌ಎಲ್ ಅಗ್ಗದ ಬೆಲೆಯ ಹೆಚ್ಚು ವ್ಯಾಲಿಡಿಟಿ (More validity), ಉಚಿತ ಕರೆ (Free Calls), ಹೆಚ್ಚು ಡೇಟಾ (More data) ಜೊತೆಗೆ ವಿವಿಧ ಆಕರ್ಷಕ ಸೌಲಭ್ಯಗಳನ್ನು ಹೊಂದಿರುವ ಹೊಸ ರೀಚಾರ್ಜ್ ಯೋಜನೆಗಳನ್ನು ಪರಿಚಯಿಸುತ್ತಿದೆ.


ಬ್ಯಾಂಕುಗಳಿಗೆ ಇನ್ನು ವಾರದಲ್ಲಿ ಎರಡು ದಿನ ರಜೆ Two Bank Holidays in a Week


ಹೊಸ ರೀಚಾರ್ಜ್ ಯೋಜನೆ ವೈಶಿಷ್ಟ್ಯವೇನು?


ಬಿಎಸ್‌ಎನ್‌ಎಲ್ ಇದೀಗ ಪರಿಚಯಿಸಿರುವ ಹೊಸ ರೀಚಾರ್ಜ್ ಯೋಜನೆಯು (BSNL Prepaid Recharge Plan) ಖಾಸಗಿ ದೂರಸಂಪರ್ಕ ಕಂಪನಿಗಳಾದ Airtel, Jio ಮತ್ತು Vi ಪ್ರಿಪೇಯ್ಡ್ ಯೋಜನೆಗಳಿಗೆ ತೀವ್ರ ಸ್ಪರ್ಧೆಯನ್ನು ನೀಡುತ್ತಿದೆ. ದಿನಕ್ಕೆ ಕೇವಲ 6.57 ರೂಪಾಯಿ ವೆಚ್ಚದಲ್ಲಿ 395 ದಿನಗಳ ವ್ಯಾಲಿಡಿಟಿ ಯೋಜನೆ ಇದಾಗಿದೆ.


ಇತರ ಕಂಪನಿಗಳು ಗರಿಷ್ಠ 365 ದಿನಗಳ ವ್ಯಾಲಿಡಿಟಿಯ (365 days validity) ಯೋಜನೆಗಳನ್ನು ಹೊಂದಿವೆ. ಆದರೆ ಬಿಎಸ್‌ಎನ್‌ಎಲ್ ಬರೋಬ್ಬರಿ 395 ದಿನಗಳು ಅಂದರೆ 13 ತಿಂಗಳ ವ್ಯಾಲಿಡಿಟಿ (BSNL 13 Months Validity Recharge Plan) ಹೊಂದಿದೆ. ಈ ರೀಚಾರ್ಜ್ ಯೋಜನೆಯು ಬಳಕೆದಾರರಿಗೆ ಉಚಿತ ಕರೆ, ಡೇಟಾ ಸೇರಿದಂತೆ ಹಲವು ಪ್ರಯೋಜನಗಳನ್ನು ನೀಡುತ್ತದೆ.


ರಾಜ್ಯದಲ್ಲಿ ಮುಂದಿನ 5 ದಿನ ಮಳೆ ಮುನ್ಸೂಚನೆ Heavy Rain in the karnataka Rain Forecast


ಏನೆಲ್ಲಾ ಪ್ರಯೋಜನಗಳು?


ಈ ಪ್ರಿಪೇಯ್ಡ್ ರೀಚಾರ್ಜ್ ಯೋಜನೆಯಲ್ಲಿ ಬಳಕೆದಾರರು ಭಾರತದಾದ್ಯಂತ ಯಾವುದೇ ನೆಟ್‌ವರ್ಕ್ಗೆ ಅನಿಯಮಿತ ಕರೆಯ ಪ್ರಯೋಜನವನ್ನು ಪಡೆಯಬಹುದು. ಈ ಯೋಜನೆಯ ಇತರ ಪ್ರಯೋಜನಗಳು ಈ ಕೆಳಗಿನಂತಿವೆ:


  1. ದಿನಕ್ಕೆ 2 GB ಹೈಸ್ಪೀಡ್ ಡೇಟಾ
  2. 40kbps ವೇಗದಲ್ಲಿ ಅನಿಯಮಿತ ಇಂಟರ್ನೆಟ್
  3. ದಿನಕ್ಕೆ 100 ಉಚಿತ SMS
  4. ಹಾರ್ಡಿ ಗೇಮ್ಸ್, ಅರೀನಾ ಗೇಮ್ಸ್, ಜಿಂಗ್ ಮ್ಯೂಸಿಕ್, ವಾವ್ ಎಂಟರ್‌ಟೈನ್‌ಮೆ೦ಟ್, BSNL ಟ್ಯೂನ್ಸ್ ಇತ್ಯಾದಿಗಳ ಉಚಿತ ಚಂದಾದಾರಿಕೆ


ಇತರ ಕಂಪನಿಗಳ ಬೆಲೆ ಎಷ್ಟು?


ಇತರ ಕಂಪನಿಗಳ ಇದೇ ರೀತಿಯ ದೀರ್ಘಾವಧಿ ರೀಚಾರ್ಜ್ ಪ್ರಿಪೇಯ್ಡ್ ಯೋಜನೆಗಳ ಬೆಲೆ ಹೋಲಿಕೆ ನೋಡುವುದಾದರೆ ಬಿಎಸ್‌ಎನ್‌ಎಲ್’ನ ಈ ಯೋಜನೆ ಅತ್ಯಂತ ಜನಸ್ನೇಹಿಯಾಗಿದೆ.


ಜಿಯೋ ಕಂಪನಿ 365 ದಿನಗಳ ವ್ಯಾಲಿಡಿಟಿ, ದಿನಕ್ಕೆ 2ಜಿಬಿ ಡೇಟಾ ನೀಡುವ ರೀಚಾರ್ಜ್ ಯೋಜನೆಗೆ 2,799 ರೂಪಾಯಿ ವಿಧಿಸುತ್ತದೆ. ಏರ್‌ಟೆಲ್ 3,599 ರೂಪಾಯಿ ಹಾಗೂ ವಿಐ 3,799 ರೂಪಾಯಿ ಶುಲ್ಕ ವಿಧಿಸುತ್ತದೆ.


ಸರ್ಕಾರಿ ಕೋಟಾ ಬಿ.ಇಡಿ ಕೋರ್ಸ್ ವ್ಯಾಸಂಗಕ್ಕೆ ಅರ್ಜಿ ಆಹ್ವಾನ Karnataka B.Ed Course Online Application

Most Popular

Related Posts