‘ಅನ್ನಭಾಗ್ಯ’ ಅಕ್ಕಿಯಲ್ಲಿ ಪ್ಲಾಸ್ಟಿಕ್ ಅಕ್ಕಿ ವದಂತಿ | ರಾಜ್ಯ ಸರ್ಕಾರದ ಹೇಳಿದ್ದೇನು? Plastic rice rumor in Annabhagya rice

NEWS
27 August 2024

‘ಅನ್ನಭಾಗ್ಯ’ ಅಕ್ಕಿಯಲ್ಲಿ ಪ್ಲಾಸ್ಟಿಕ್ ಅಕ್ಕಿ ವದಂತಿ | ರಾಜ್ಯ ಸರ್ಕಾರದ ಹೇಳಿದ್ದೇನು? Plastic rice rumor in Annabhagya rice
WhatsApp Group Join Now
Telegram Group Join Now

Plastic rice rumor in Annabhagya rice : ರಾಜ್ಯ ಸರ್ಕಾರ ‘ಅನ್ನಭಾಗ್ಯ’ ಯೋಜನೆಯಡಿ (Anna Bhagya Yojana) ವಿತರಿಸುವ ಪಡಿತರ ಧಾನ್ಯದಲ್ಲಿ ಪ್ಲಾಸ್ಟಿಕ್ ಅಕ್ಕಿ (Plastic Rice) ಇದೆ ಎಂಬ ಊಹಾಪೋಹಗಳು ಏಳುತ್ತಿವೆ. ರೇಷನ್ ಅಕ್ಕಿಯಲ್ಲಿ ಪ್ಲಾಸ್ಟಿಕ್ ಅಕ್ಕಿಯಂತೆ ತೇಲುವ ಅಕ್ಕಿ ಬಗ್ಗೆ ಜನರಲ್ಲಿ ಉಂಟಾಗಿರುವ ಆತಂಕ ನಿವಾರಿಸುವ ನಿಟ್ಟಿನಲ್ಲಿ ಸರ್ಕಾರ ಸ್ಪಷ್ಟನೆ ನೀಡಿದೆ.


ಹೌದು, ಅನ್ನಭಾಗ್ಯ ಯೋಜನೆಯಡಿ (Anna bhagya scheme) ಸರ್ಕಾರ ವಿತರಿಸುವ ಅಕ್ಕಿಯನ್ನು ಅಡುಗೆಗೆ ಇಡುವಾಗ ಕೆಲವು ಅಕ್ಕಿ ಕಾಳಗಳು ನೀರಿನಲ್ಲಿ ಮುಳುಗದೆ ತೇಲುತ್ತಿದ್ದು; ಇದು ಪ್ಲಾಸ್ಟಿಕ್ ಅಕ್ಕಿ ಎಂದು ಜನ ಗೊಂದಲಕ್ಕೆ ಈಡಾಗುತ್ತಿದ್ದಾರೆ. ಆದರೆ ಇದು ಆತಂಕ ಪಡುವ ಸಂಗತಿಯಲ್ಲ ಎಂದಿದೆ ಸರ್ಕಾರ.


ಇದನ್ನೂ ಓದಿ: ಏಕೀಕೃತ ಪಿಂಚಣಿ ಯೋಜನೆ : ಸರ್ಕಾರಿ ನೌಕರರಿಗೆ ಇದರ ಪ್ರಯೋಜನಗಳೇನು? Unified Pension Scheme for Govt Employees


ನಿಮ್ಮ ಮನೆಗೆ ತಂದ ಅನ್ನಭಾಗ್ಯದ ಅಕ್ಕಿಯಲ್ಲಿ ಪ್ಲಾಸ್ಟಿಕ್ ಅಕ್ಕಿಯಂತಹ ಕಾಳುಗಳು ಇದ್ದಲ್ಲಿ ಆತಂಕ ಪಡದಿರಿ ಮತ್ತು ಅದನ್ನು ಎಸೆಯದಿರಿ. ಏಕೆಂದರೆ ಅದು ಪ್ಲಾಸ್ಟಿಕ್ ಅಕ್ಕಿಯಲ್ಲ, ನಿಮ್ಮ ಆರೋಗ್ಯವನ್ನು ಉತ್ತಮವಾಗಿಸುವ ಪೌಷ್ಠಿಕಾಂಶವುಳ್ಳ ಸಾರವರ್ಧಿತ ಅಕ್ಕಿ.


ಕೇಂದ್ರ ಸರ್ಕಾರದ ಸಚಿವಾಲಯದ ಮಾರ್ಗಸೂಚಿಯಂತೆ ಪ್ರತಿ 1 ಕೆ.ಜಿ. ಅಕ್ಕಿಗೆ 10 ಗ್ರಾಂ. ನಷ್ಟು ಸಾರವರ್ಧಿತ ಅಕ್ಕಿಯನ್ನು (ಇಟಿಡಿiಛಿheಜ ಡಿiಛಿe) ಬೆರೆಸಲಾಗುತ್ತದೆ. ಇದು ವ್ಯಕ್ತಿಯ ಆರೋಗ್ಯಕ್ಕೆ ಅಗತ್ಯವಾದ ಜೀವಸತ್ವಗಳು, ಸೂಕ್ಷ್ಮ ಪೋಷಕಾಂಶಗಳಾದ ಕಬ್ಬಿಣಾಂಶ, ಫೋಲಿಕ್ ಆಮ್ಲ ಮತ್ತು ವಿಟಮಿನ್ ‘ಬಿ’ ಅನ್ನು ಒದಗಿಸುತ್ತದೆ.


ಇದನ್ನೂ ಓದಿ: ಗೃಹ ಆರೋಗ್ಯ ಯೋಜನೆ ಜಾರಿ: ಇನ್ನು ಮನೆಬಾಗಿಲಲ್ಲೇ ಸಿಗುತ್ತೆ ಚಿಕಿತ್ಸೆ-ಔಷಧಿ Gruha Arogya Scheme Karnataka


ರಕ್ತಹೀನತೆ, ಅಪೌಷ್ಟಿಕತೆಯನ್ನು ಹೋಗಲಾಡಿಸುವ ಈ ಸಾರವರ್ಧಿತ ಅಕ್ಕಿಯು ಆರೋಗ್ಯಕ್ಕೆ ಪೂರಕವಾಗಿದೆ. ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರವು ಪ್ರಯೋಗಾಲಯದಿಂದ ಪರೀಕ್ಷೆಗೆ ಒಳಪಟ್ಟ ಸದರಿ ಸಾರವರ್ಧಿತ ಅಕ್ಕಿಯು ಪೌಷ್ಠಿಕಾಂಶಭರಿತವಾದ ಅಕ್ಕಿ ಎಂದು ಹೇಳಿದೆ.


ಪಡಿತರ ಅಕ್ಕಿಯಲ್ಲಿ ಪ್ಲಾಸ್ಟಿಕ್ ಅಕ್ಕಿಯಂತೆ ತೇಲುವ ಪದಾರ್ಥ ಆರೋಗ್ಯಕ್ಕೆ ಉತ್ತಮವಾಗಿದ್ದು; ಯಾರೂ ಇಂತಹ ಅಕ್ಕಿಯ ಬಗ್ಗೆ ಕೇಳಿಬರುವ ಊಹಾಪೋಹಗಳಿಗೆ ಕಿವಿಗೊಡದೆ ಧೈರ್ಯವಾಗಿ ಪಡಿತರ ಅಕ್ಕಿಯನ್ನು ಬಳಸಬಹುದಾಗಿದೆ ಎಂದು ಸರ್ಕಾರ ಸ್ಪಷ್ಟನೆ ನೀಡಿದೆ.


ಇದನ್ನೂ ಓದಿ: ಗ್ರಾಮ ಆಡಳಿತ ಅಧಿಕಾರಿ ಹುದ್ದೆಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ಮಹತ್ವದ ಮಾಹಿತಿ Village Administrative Officers Recruitment Exam 2024

Most Popular

Related Posts