ರೈತರು ಸರಕಾರದ ವಿವಿಧ ಯೋಜನೆಗಳ ಪ್ರಯೋಜನ ಪಡೆಯಲು ಎಫ್‌ಐಡಿ ನೋಂದಣಿ ಕಡ್ಡಾಯ... Farmers Identity Details - FID

GOVT SCHEME
25 June 2024

ರೈತರು ಸರಕಾರದ ವಿವಿಧ ಯೋಜನೆಗಳ ಪ್ರಯೋಜನ ಪಡೆಯಲು ಎಫ್‌ಐಡಿ ನೋಂದಣಿ ಕಡ್ಡಾಯ... Farmers Identity Details - FID
WhatsApp Group Join Now
Telegram Group Join Now

Farmers Identity Details - FID  : ರೈತರು ಬರ ಪರಿಹಾರ ಸೇರಿದಂತೆ ಸರಕಾರಿ ಯೋಜನೆಗಳ ಪ್ರಯೋಜನ ಪಡೆಯಲು ಎಫ್‌ಐಡಿ ನೋಂದಣಿ ಕಡ್ಡಾಯವಾಗಿದೆ. ಕೂಡಲೇ ಈ ಕೆಲಸ ಮಾಡಿದರೆ ಮಾತ್ರ ಬರಗಾಲದ ನೆರವು ಸಿಗಲಿದೆ...


ರೈತರು ತಮ್ಮೆಲ್ಲಾ ಚಾಲ್ತಿಯಲ್ಲಿನ ಜಮೀನುಗಳ ಸರ್ವೆ ನಂಬರ್‌ಗಳನ್ನು ಎಫ್‌ಐಡಿ ಅರ್ಥಾತ್ ಫಾರ್ಮರ್ಸ್ ಐಡೆಂಟಿಟಿ ಡೀಟೈಲ್ಸ್ (Farmers Identity Details) ತಪ್ಪದೇ ನಮೂದಿಸಬೇಕು ಕೃಷಿ ಇಲಾಖೆ ಮಾಹಿತಿ ನೀಡಿದೆ. ಈ ಬಗ್ಗೆ ಗ್ರಾಮ ಪಂಚಾಯತಿ ಮಟ್ಟದಲ್ಲಿ ಕೃಷಿ ಮತ್ತು ಕಂದಾಯ ಇಲಾಖೆ ಸಹಭಾಗಿತ್ವದಲ್ಲಿ ರೈತ ಜಾಗೃತಿ ಅಭಿಯಾನ ಕೂಡ ನಡೆಸಲಾಗುತ್ತಿದೆ.


ಬೇರೆ ಬೇರೆ ತುಂಡು ಜಮೀನುಗಳನ್ನು ಹೊಂದಿರುವ ರೈತರು ಯಾವುದಾದರು ಒಂದು ಸರ್ವೆ ನಂಬರ್ ಜಮೀನಿಗೆ ಮಾತ್ರವೇ ಎಫ್‌ಐಡಿ ಮಾಡಿಸಿರುತ್ತಾರೆ. ಇದರಿಂದ ಬೇರೆ ಸರ್ವೆ ನಂಬರ್‌ನ ಜಮೀನುಗಳಿಗೆ ಸರ್ಕಾರದಿಂದ ಸಿಗುವ ಪರಿಹಾರ ಮತ್ತಿತರ ಸೌಲಭ್ಯಗಳಿಂದ ರೈತರು ವಂಚಿತರಾಗಬೇಕಾಗುತ್ತದೆ.


ಏನಿದು ಎಫ್‌ಐಡಿ?

ಎಫ್‌ಐಡಿ ಎಂದರೆ ಫಾರ್ಮರ್ಸ್ ಐಡೆಂಟಿಟಿ ಡೀಟೈಲ್ಸ್ ಎಂದರ್ಥ. ಇದೊಂದು ರೈತ ನೋಂದಣಿ ಮತ್ತು ಏಕೀಕೃತ ಫಲಾನುಭವಿ ಮಾಹಿತಿ ವ್ಯವಸ್ಥೆ. ಸರಕಾರ ಇದಕ್ಕಾಗಿಯೇ FRUITS ಎಂದು ಕರೆಯಲ್ಪಡುವ ಸಾಫ್ಟ್ವೇರ್ ಅಪ್ಲಿಕೇಶನ್ ಸಿದ್ಧಪಡಿಸಿದೆ. Farmers Registration and Unified Beneficiary Information System (FRUITS) ಎಂಬುವುದು ಇದರ ಪೂರ್ಣಾರ್ಥ.


FRUITS ವೆಬ್‌ಸೈಟ್‌ನಲ್ಲಿ ರೈತರು ಒಮ್ಮೆ ತಮ್ಮ ವಿವರ ನೋಂದಾಯಿಸಿದರೆ ಅನೇಕ ಸರ್ಕಾರಿ ಸಬ್ಸಿಡಿ ಯೋಜನೆಗಳ ಲಾಭ ಸಿಗಲಿದೆ. ಮಾತ್ರವಲ್ಲ ಸರ್ಕಾರಿ ಯೋಜನೆಯ ಲಾಭ ಪಡೆಯಲು ವಿವಿಧ ಇಲಾಖೆಗಳಿಗೆ ಅಲೆಯುವ ಪಾಡು ಕೂಡ ತಪ್ಪುತ್ತದೆ.


ಇಲ್ಲಿ ಒಮ್ಮೆ ದಾಖಲೆಗಳನ್ನು ಸಲ್ಲಿಸಿದರೆ ರೈತರು ವಿವಿಧ ಸರ್ಕಾರಿ ಯೋಜನೆಗಳ ಪ್ರಯೋಜನಗಳನ್ನು ಪಡೆಯಲು ಪ್ರತ್ಯೇಕವಾಗಿ ತಮ್ಮ ದಾಖಲೆಗಳನ್ನು ಬೇರೆ ಬೇರೆ ಇಲಾಖೆಗಳಲ್ಲಿ ಸಲ್ಲಿಸುವ ಅಗತ್ಯವಿಲ್ಲ. ಈ ಸಮಸ್ಯೆಗೆ ಪರಿಹಾರವಾಗಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯು NIC ಸಹಯೋಗದೊಂದಿಗೆ FRUITS ಸಾಫ್ಟ್‌ವೇರ್ ಅಭಿವೃದ್ಧಿಪಡಿಸಲಾಗಿದೆ. ಇದು ರೈತರು ಪ್ರಯೋಜನಗಳನ್ನು ಪಡೆಯಲು ಇಲಾಖೆಗಳಿಗೆ ಅಲೆದಾಡುವುದನ್ನು ತಪ್ಪಿಸುತ್ತದೆ. 


ನೋಂದಣಿಯಿ೦ದ ಏನೆಲ್ಲ ಪ್ರಯೋಜನವಾಗಲಿದೆ?

ರೈತರು ಕೃಷಿ ಅಥವಾ ತೋಟಗಾರಿಕೆ ಜೊತೆಗೆ ರೇಷ್ಮೆ, ಹೈನುಗಾರಿಕೆ, ಕೋಳಿ ಸಾಕಣೆ, ಕುರಿ-ಮೇಕೆ ಸಾಕಣೆ, ಮೀನುಗಾರಿಕೆ ಮುಂತಾದ ಕೃಷಿ ಹಾಗೂ ಕೃಷಿ ಸಂಬAಧಿತ ವಿಭಿನ್ನ ಚಟುವಟಿಕೆಗಳನ್ನು ಕೈಗೊಳ್ಳುತ್ತಾರೆ. ಇವುಗಳಿಗಾಗಿ ಪ್ರತ್ಯೇಕ ಕೃಷಿ ಮತ್ತು ಕೃಷಿಯೇತರ ಇಲಾಖೆಗಳಿಂದ ಪಡೆಯಬಹುದಾದ ಸಹಾಯಧನ ಮತ್ತು ಪರಿಹಾರ ಧನಕ್ಕಾಗಿ ರೈತರು ಪ್ರತಿ ವರ್ಷ ದಾಖಲೆಗಳನ್ನು ಸಲ್ಲಿಸುವುದು ಮತ್ತು ಇಲಾಖೆಗಳಿಗೆ ಅಲ್ಲೆದಾಡುವುದನ್ನು ತಪ್ಪಿಸುತ್ತದೆ.


ಎಫ್‌ಐಡಿ ಇಲ್ಲದೆ ಇರುವವರು ಪಹಣಿ, ಆಧಾರ್ ಕಾರ್ಡ್, ಬ್ಯಾಂಕ್ ಪಾಸ್ ಪುಸ್ತಕದ ನಕಲನ್ನು ತೆಗೆದುಕೊಂಡು ಹತ್ತಿರದ ರೈತ ಸಂಪರ್ಕ ಕೇಂದ್ರ, ಗ್ರಾಮ ಒನ್, ಸಿಎಸ್‌ಸಿ ಕೆಂದ್ರಗಳಲ್ಲಿ ಎಫ್‌ಐಡಿ ಮಾಡಿಸಿಕೊಳ್ಳಬಹುದು. ಇದರಿಂದ ಬೆಳೆ ನಷ್ಟ ಪರಿಹಾರ, ಸಹಾಯಧನ, ಕೃಷಿ ಪರಿಕರಗಳನ್ನು ಪಡೆಯಲು ಫ್ರೂಟ್ಸ್ ಐಡಿ ನೇರವಾಗಲಿದೆೆ. ಬರ ಪರಿಹಾರ ಸಿಗಬೇಕೆಂದರೆ ಎಫ್‌ಐಡಿ ನೋಂದಣಿ ಆಗಿರಲೇ ಬೇಕಿದೆ.


ರೈತರಿಗೆ ಫ್ರೂಟ್ಸ್ ನೋಂದಣಿ ಕಡ್ಡಾಯ

ರೈತರು ಸರಕಾರದ ವಿವಿಧ ಯೊಜನೆಗಳ ಪ್ರಯೋಜನ ಪಡೆಯಬೇಕಾದರೆ ಫ್ರೂಟ್ಸ್ ನೋಂದಣಿ ಕಡ್ಡಾಯವಾಗಿದೆ. ಫ್ರೂಟ್ಸ್ ತಂತ್ರಾ೦ಶಯದ ‘ನಾಗರೀಕ ಪ್ರವೇಶ’ (Citizen Login)ಗೆ ಭೇಟಿ ನೀಡಿ ಅವಶ್ಯ ದಾಖಲೆ ಒದಗಿಸಿ ಸ್ವಯಂ ನೋಂದಣಿ ಮಾಡಿಕೊಳ್ಳಬಹುದು. ಆಧಾರ್ ಸಂಖ್ಯೆ ಮತ್ತು ಹೆಸರು, ಜಮೀನಿನ ವಿವರ ದಾಖಲಿಸಬೇಕು. ಸಂಬ೦ಧಪಟ್ಟ ಅನುಮೋದನಾ ಅಧಿಕಾರಿಯು ಅನುಮೋದಿಸಿದ ನಂತರ, ನೋಂದಣಿ ಪೂರ್ಣಗೊಳ್ಳುತ್ತದೆ.


ಒಂದು ವೇಳೆ ಯಾರಾದರೂ ನಿರ್ದಿಷ್ಟ ವರ್ಗದ ಅಡಿಯಲ್ಲಿ ನೋಂದಾಯಿಸಲು ಬಯಸಿದರೆ (ಪರಿಶಿಷ್ಟ ಜಾತಿ ಮತ್ತು ಪಂಗಡ ಇತ್ಯಾದಿ) ಸಂಬ೦ಧಿತ ಪ್ರಮಾಣ ಪತ್ರಗಳು ಸಹ ಅಗತ್ಯವಾಗಿರುತ್ತದೆ. ಭೂ ವಿವರಗಳು, ದೂರವಾಣಿ ಸಂಖ್ಯೆಗಳು, ವಿಳಾಸ, ಆಧಾರ್ ಪ್ರಕಾರ ಹೆಸರು ಮತ್ತು ಹಿಂದೆ ತಪ್ಪಾಗಿ ನಮೂದಿಸಿರುವ ಬ್ಯಾಂಕ್ ವಿವರಗಳು, ಜಾತಿ ಮತ್ತು ಹುಟ್ಟಿದ ದಿನಾಂಕವನ್ನು ಮಾರ್ಪಡಿಸಬಹುದು.


ಸರಕಾರಿ ಸೌಲಭ್ಯಗಳು ಸುಲಭ

ರೈತರು https://fruits.karnataka.gov.in ವೆಬ್‌ಸೈಟ್ ಮೂಲಕ ನೋಂದಣಿ ಮಾಡಿಕೊಳ್ಳಬಹುದಾಗಿದೆ. ಇಲ್ಲಿ ವಿವರ ನೋಂದಾಯಿಸುವುದರಿ೦ದ ಒಂದೇ ಪೋರ್ಟಲ್ ವೇದಿಕೆಯಲ್ಲಿ ರೈತನ ಭೂಮಿಗೆ ಸಂಬ೦ಧಿಸಿದ ಪೂರ್ಣ ಮಾಹಿತಿಗಳು ಸರಕಾರದ ವಿವಿಧ ಇಲಾಖೆಗಳು ಮತ್ತು ಹಣಕಾಸಿನ ಸಂಸ್ಥೆಗಳಿಗೆ ದೊರೆಯಲಿವೆ. ಆಧಾರ್ ನಂಬರ್ ನೀಡುವ ಮೂಲಕ ಅರ್ಹ ರೈತರು ಅತ್ಯಂತ ಸುಲಭ ಮತ್ತು ಶೀಘ್ರವಾಗಿ ಸರಕಾರಿ ಸಬ್ಸಿಡಿ ಸಹಿತ ಕೃಷಿ ಸಾಲ ಪಡೆಯಬಹುದಾಗಿದೆ.


ಈಗಾಗಲೇ ರೈತರು ಫ್ರೂಟ್ಸ್ ನೋಂದಣಿ ಮಾಡಿಕೊಂಡಿದ್ದರೆ, ತಮ್ಮ ಎಲ್ಲ ಜಮೀನುಗಳ ಸರ್ವೇ ನಂಬರ್‌ಗಳನ್ನು ಸೇರ್ಪಡೆಯಾಗಿರುವ ಕುರಿತು ಖಚಿತಪಡಿಸಿಕೊಳ್ಳಬೇಕು. ಇಲ್ಲದಿದ್ದರೆ, ತಮ್ಮ ಜಮೀನಿನ ಪಹಣಿ ವಿವರಗಳು, ಆಧಾರ ಪ್ರತಿ, ಆಧಾರ ಮತ್ತು ಮೋಬೈಲ್ ನಂಬರ್ ಲಿಂಕ್ ಆಗಿರುವ ಬ್ಯಾಂಕ್ ಪಾಸ್‌ಬುಕ್‌ನ ಪ್ರತಿಯನ್ನು ಹಾಜರುಪಡಿಸಿ ನೋಂದಣಿ ಮಾಡಿಕೊಳ್ಳಬೇಕು ಎಂದು ಕೃಷಿ ಇಲಾಖೆ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Most Popular

Related Posts