ರಾಜ್ಯಾದ್ಯಂತ ಬಾಗಿಲು ಮುಚ್ಚಲಿವೆ ಕೆವಿಜಿ ಬ್ಯಾಂಕುಗಳು | ಗ್ರಾಮೀಣ ಬ್ಯಾಂಕ್ ವಿಲೀನಕ್ಕೆ ಕೇಂದ್ರ ಸರಕಾರ ಸನ್ನದ್ಧ Merger of Grameen Banks KVG Banks to Closed

NEWS
10 November 2024

ರಾಜ್ಯಾದ್ಯಂತ ಬಾಗಿಲು ಮುಚ್ಚಲಿವೆ ಕೆವಿಜಿ ಬ್ಯಾಂಕುಗಳು | ಗ್ರಾಮೀಣ ಬ್ಯಾಂಕ್ ವಿಲೀನಕ್ಕೆ ಕೇಂದ್ರ ಸರಕಾರ ಸನ್ನದ್ಧ Merger of Grameen Banks KVG Banks to Closed
WhatsApp Group Join Now
Telegram Group Join Now

ನವದೆಹಲಿ: ಕೇಂದ್ರ ಸರ್ಕಾರ ದೇಶದ ಗ್ರಾಮೀಣ ಬ್ಯಾಂಕ್‌ಗಳ ವಿಲೀನ (Merger of Grameen Banks) ಮಾಡುವ ಮೂಲಕ ಅವುಗಳನ್ನು ಆರ್ಥಿಕವಾಗಿ ಸದೃಢ ಮಾಡುವ ನಿಟ್ಟಿನಲ್ಲಿ ಮತ್ತೊಂದು ಹೆಜ್ಜೆ ಮುಂದಿಟ್ಟಿದೆ. ಕರ್ನಾಟಕ ಎರಡು ಬ್ಯಾಂಕ್ ಸೇರಿ ದೇಶದ ವಿವಿಧ ರಾಜ್ಯಗಳ 15 ಗ್ರಾಮೀಣ ಬ್ಯಾಂಕ್‌ಗಳನ್ನು ವಿಲೀನ ಮಾಡುವ ಪ್ರಸ್ತಾಪ ಸಿದ್ಧಪಡಿಸಿದೆ.


ಈ ಪ್ರಸ್ತಾಪ ಜಾರಿಗೆ ಬಂದರೆ ದೇಶವ್ಯಾಪಿ ಇರುವ ಗ್ರಾಮೀಣ ಬ್ಯಾಂಕ್‌ಗಳ ಸಂಖ್ಯೆ 43ರಿಂದ 28ಕ್ಕೆ ಇಳಿಯಲಿದೆ. ನಿರ್ವಹಣಾ ಸಾಮರ್ಥ್ಯ ಹೆಚ್ಚಳ ಮತ್ತು ವೆಚ್ಚ ಸ್ಥಿರೀಕರಣದ ಉದ್ದೇಶಕ್ಕಾಗಿ ಸರ್ಕಾರ ಈ ಪ್ರಸ್ತಾಪ ಮಾಡಿದೆ. ಗ್ರಾಮೀಣ ಬ್ಯಾಂಕ್‌ಗಳ ವಿಲೀನದ 4ನೇ ಪ್ರಕ್ರಿಯೆ ಇದಾಗಿರಲಿದೆ.


ಇದನ್ನೂ ಓದಿ: ಪಿಯುಸಿ ಪಾಸಾಗಿದ್ರೆ ಗ್ರಾಮ ಪಂಚಾಯಿತಿ ಗ್ರಂಥಾಲಯ ಮೇಲ್ವಿಚಾರಕರ ಹುದ್ದೆಗಳಿಗೆ ಅರ್ಜಿ ಹಾಕಿ... Gram Panchayat Library Supervisor Recruitment 2024 Dharwad


ಏನಿದು ಗ್ರಾಮೀಣ ಬ್ಯಾಂಕುಗಳು?


1976ರ ಆರ್‌ಆರ್‌ಬಿ (RRB Act) ಕಾಯ್ದೆ ಅನ್ವಯ ಗ್ರಾಮೀಣ ಬ್ಯಾಂಕ್‌ಗಳನ್ನು ಸ್ಥಾಪಿಸಲಾಗಿತ್ತು. ಸಣ್ಣ ರೈತರು, ಕೃಷಿ ಕಾರ್ಮಿಕರು, ಗ್ರಾಮೀಣ ಭಾಗದ ಕಲಾವಿದರಿಗೆ ಸುಲಭವಾಗಿ ಸಾಲ ನೀಡುವ ಉದ್ದೇಶವನ್ನು ಈ ಬ್ಯಾಂಕ್‌ಗಳು ಹೊಂದಿವೆ.


ಈ ಬ್ಯಾಂಕ್‌ಗಳಲ್ಲಿ ಕೇಂದ್ರ ಸರ್ಕಾರ ಶೇ.50, ಲೀಡ್ ಬ್ಯಾಂಕ್‌ಗಳು ಶೇ.35, ರಾಜ್ಯ ಸರ್ಕಾರಗಳು ಶೇ.15ರಷ್ಟು ಬಂಡವಾಳದ ಪಾಲು ಹೊಂದಿವೆ.ಯಾವುದೇ ಹಂತದಲ್ಲಿ ಈ ಮೂರೂ ವಲಯಗಳ ಷೇರು ಪಾಲು ಕಡಿತವಾದರೂ, ಬ್ಯಾಂಕ್‌ನಲ್ಲಿ ಅವುಗಳ ಒಟ್ಟಾರೆ ಪಾಲು ಶೇ.51ಕ್ಕಿಂತ ಕೆಳಗೆ ಇಳಿಯಬಾರದು ಎಂಬ ನಿಯಮ ಇದೆ.


ಬಾಗಿಲು ಮುಚ್ಚಲಿವೆಯೇ ಕೆವಿಜಿ ಬ್ಯಾಂಕುಗಳು?


ಕರ್ನಾಟಕದಲ್ಲಿ ಪ್ರಮುಖ ಗ್ರಾಮೀಣ ಬ್ಯಾಂಕುಗಳಾಗಿರುವ ‘ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್’ (Karnataka Vikas Grameena Bank -KVGB) ಹಾಗೂ ‘ಕರ್ನಾಟಕ ಗ್ರಾಮೀಣ ಬ್ಯಾಂಕ್’ಗಳು (Karnataka Gramin Bank - KGB) ರಾಜ್ಯಾದ್ಯಂತ ಗ್ರಾಮೀಣ ಭಾಗದ ಜನರ ವಿಶೇಷ ಬ್ಯಾಂಕುಗಳಾಗಿವೆ. ಕೆನರಾ ಬ್ಯಾಂಕ್ ನೇತೃತ್ವದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಈ ಎರಡೂ ಬ್ಯಾಂಕುಗಳನ್ನು ಇದೀಗ ವಿಲೀನ ಮಾಡುವ ಸನ್ನಾಹ ನಡೆದಿದೆ.


ಈ ಬ್ಯಾಂಕುಗಳು ಗ್ರಾಮೀಣ ಜನರ ಸಾಲ ಸವಲತ್ತುಗಳ ಬಹುದೊಡ್ಡ ಬ್ಯಾಂಕುಗಳಾಗಿದ್ದು; ಪ್ರಮುಖವಾಗಿ ರಾಜ್ಯದ ರೈತ ಸಮುದಾಯ ಈ ಬ್ಯಾಂಕುಗಳಲ್ಲಿಯೇ ಹೆಚ್ಚಿನ ಸಾಲ ಸೌಲಭ್ಯ ಪಡೆಯುತ್ತಿದೆ. ಇದೀಗ ಈ ಎರಡೂ ಬ್ಯಾಂಕುಗಳ ಕತೆ ಮುಕ್ತಾಯವಾಗಲಿದೆ ಎನ್ನಲಾಗುತ್ತಿದೆ.


ಇದನ್ನೂ ಓದಿ: ಹೊಸ ಬಿಪಿಎಲ್ ರೇಷನ್ ಕಾರ್ಡ್ ಅರ್ಜಿ ಆಹ್ವಾನ New Ration Card Application for E shram Registered Workers


ಯಾವ ರಾಜ್ಯದಲ್ಲಿ ಎಷ್ಟೆಷ್ಟು ಬ್ಯಾಂಕ್ ವಿಲೀನ?


ಕೇಂದ್ರ ಸರಕಾರ ದೇಶಾದ್ಯಂತ ಒಟ್ಟು 26 ಗ್ರಾಮೀಣ ಬ್ಯಾಂಕುಗಳ ಶಾರ್ಟ್ಲೀಸ್ಟ್ ತಯಾರಿಸಿದ್ದು, ಸಾಧಕ-ಬಾಧಕ ಪರಿಶೀಲಿಸಿ 15 ಬ್ಯಾಂಕ್‌ಗಳನ್ನು ವಿಲೀನ ಮಾಡಲಾಗುತ್ತದೆ. ಸಂಭಾವ್ಯ ವಿಲೀನ ವ್ಯಾಪ್ತಿಯ ಪಟ್ಟಿಯಲ್ಲಿರುವ ಬ್ಯಾಂಕುಗಳ ರಾಜ್ಯವಾರು ವಿವರ ಈ ಕೆಳಗಿನಂತಿದೆ:


  1. ಆ೦ಧ್ರಪ್ರದೇಶದ 04
  2. ಉತ್ತರಪ್ರದೇಶ 03
  3. ಪಶ್ಚಿಮ ಬಂಗಾಳದ 03
  4. ಕರ್ನಾಟಕ 02
  5. ಬಿಹಾರ 02
  6. ಗುಜರಾತ್ 02
  7. ಮಧ್ಯ ಪ್ರದೇಶ 02
  8. ಮಹಾರಾಷ್ಟ್ರ 02
  9. ಒಡಿಶಾ 02
  10. ರಾಜಸ್ಥಾನ 02
  11. ಜಮ್ಮು ಮತ್ತು ಕಾಶ್ಮೀರ 02
  12. ಒಟ್ಟು : 26


2004-05ರಲ್ಲಿ ಮೊದಲ ಬಾರಿಗೆ ಕೇಂದ್ರ ಸರ್ಕಾರ ಗ್ರಾಮೀಣ ಬ್ಯಾಂಕ್‌ಗಳ ವಿಲೀನ ಆರಂಭಿಸಿತ್ತು. ಹೀಗೆ ಮೂರು ಹಂತಗಳಲ್ಲಿ ನಡೆಸಿದ ಪ್ರಕ್ರಿಯೆ ಬಳಿಕ ಗ್ರಾಮೀಣ ಬ್ಯಾಂಕ್‌ಗಳ ಸಂಖ್ಯೆ 196 ರಿಂದ 43ಕ್ಕೆ ಇಳಿದಿದೆ.


ಇದನ್ನೂ ಓದಿ: ಪಿಎಂ ವಿದ್ಯಾಲಕ್ಷ್ಮೀ ಯೋಜನೆ : ಯಾವುದೇ ಶೂರಿಟಿ, ಗ್ಯಾರಂಟಿ ಇಲ್ಲದೇ ಸಿಗುತ್ತೆ 10 ಲಕ್ಷ ರೂಪಾಯಿ ವರೆಗೂ ಶಿಕ್ಷಣ ಸಾಲ PM Vidyalakshmi Scheme 2024

Most Popular

Related Posts