ಅತಿಥಿ ಉಪನ್ಯಾಸಕರಿಗೆ ವೇತನ ಹೆಚ್ಚಳ | ಯಾರಿಗೆ ಎಷ್ಟು ಸಂಬಳ ನಿಗದಿಯಾಗಿದೆ? Salary increase for guest lecturers

NEWS
17 August 2024

ಅತಿಥಿ ಉಪನ್ಯಾಸಕರಿಗೆ ವೇತನ ಹೆಚ್ಚಳ | ಯಾರಿಗೆ ಎಷ್ಟು ಸಂಬಳ ನಿಗದಿಯಾಗಿದೆ? Salary increase for guest lecturers
WhatsApp Group Join Now
Telegram Group Join Now

Salary increase for guest lecturers : ಉನ್ನತ ಶಿಕ್ಷಣ ಇಲಾಖೆಯು ಸರ್ಕಾರಿ ಇಂಜಿನಿಯರಿಗ್ ಕಾಲೇಜು ಮತ್ತು ಪಾಲಿಟೆಕ್ನಿಕ್, ಕಿರಿಯ ತಾಂತ್ರಿಕ ಶಾಲೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅರೆಕಾಲಿಕ ಉಪನ್ಯಾಸಕರಿಗೆ ಗೌರವಧನವನ್ನು ಸೇವಾ ಅವಧಿಯ ಅನುಸಾರವಾಗಿ 5 ರಿಂದ 8 ಸಾವಿರ ರೂಪಾಯಿ ವರೆಗೆ ಹೆಚ್ಚಿಸಿ ಆದೇಶಿಸಿದೆ.


ವಿಶೇಷವೆಂದರೆ ವೇತನ ಹೆಚ್ಚಳದೊಂದಿಗೆ ಅರೆಕಾಲಿಕ ಉಪನ್ಯಾಸಕರ ಬೋಧನಾ ಅವಧಿಯನ್ನು ಹೆಚ್ಚಿಸಿದೆ. ಹಾಲಿ ವಾರಕ್ಕೆ ಗರಿಷ್ಠ 8, 9, 9 ತಾಸಿನ ಬದಲಾಗಿ ವಾರಕ್ಕೆ ಗರಿಷ್ಠ 15, 17, 14 ತಾಸಿನ ಕಾರ್ಯಭಾರವನ್ನು ನಿಗದಿಪಡಿಸಿದೆ.


ಇದನ್ನೂ ಓದಿ: ನಾಟಿ ಹಸುಗಳ ಸಗಣಿಯಲ್ಲಿದೆ ಸಂಪತ್ತು | ಹಾಲಿಗಿಂತ ಸಗಣಿಗೇ ಹೆಚ್ಚು ಬೆಲೆ 


ಯಾರಿಗೆ ಎಷ್ಟು ಸಂಬಳ ನಿಗದಿ?


5 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ಅವಧಿಗೆ ಅರೆಕಾಲಿಕ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ ಮತ್ತು ಎಐಸಿಟಿಇ ನಿಗದಿಪಡಿಸಿದ ವಿದ್ಯಾರ್ಹತೆ ಹೊಂದಿದವರಿಗೆ 32,000 ರೂಪಾಯಿ ಮತ್ತು ಸರ್ಕಾರಿ ಪಾಲಿಟೆಕ್ನಿಕ್ ಅರೆಕಾಲಿಕ ಉಪನ್ಯಾಸಕರಿಗೆ 28,000 ರೂಪಾಯಿ ನಿಗದಿ ಪಡಿಸಿದೆ.


5 ವರ್ಷಕ್ಕಿಂತ ಕಡಿಮೆ ಅವಧಿಗೆ ಅರೆಕಾಲಿಕ ಉಪನ್ಯಾಸಕರಿಗಾಗಿ ಸೇವೆ ಸಲ್ಲಿಸಿದ ಮತ್ತು ಎಐಸಿಟಿಇ ನಿಗದಿಪಡಿಸಿದ ವಿದ್ಯಾರ್ಹತೆ ಹೊಂದಿರುವವರಿಗೆ 30,000 ಮತ್ತು 26,000 ರೂಪಾಯಿ ವೇತನ ನಿಗದಿ ಪಡಿಸಿದೆ.


5 ವರ್ಷಕ್ಕಿಂತ ಹೆಚ್ಚಿನ ಅವಧಿಗೆ ಅರೆಕಾಲಿಕ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದವರಿಗೆ 28,000 ಮತ್ತು 24,000 ರೂಪಾಯ ಹಾಗೂ 5 ವರ್ಷಕ್ಕಿಂತ ಕಡಿಮೆ ಅವಧಿಗೆ 26,000, 22,000 ರೂಪಾಯಿ, ಸರ್ಕಾರಿ ಕಿರಿಯ ತಾಂತ್ರಿಕ ಶಾಲೆಗಳಲ್ಲಿ ಅರೆಕಾಲಿಕ ಉಪನ್ಯಾಸಕರಿಗೆ 18,000 ರೂಪಯಿ ವೇತನ ನಿಗದಿಪಡಿಸಿದೆ.


ಷರತ್ತುಗಳೇನು?


2024-25 ಶೈಕ್ಷಣಿಕ ಸಾಲಿನಲ್ಲಿ ಸರ್ಕಾರಿ ಇಂಜಿನಿಯರಿ೦ಗ್ ಕಾಲೇಜುಗಳಿಗೆ 294 ಮತ್ತು ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು, ಕಿರಿಯ ತಾಂತ್ರಿಕ ಶಾಲೆಗಳಿಗೆ 1,600 ಅರೆಕಾಲಿಕ ಉಪನ್ಯಾಸಕರು ಸೇರಿ ಒಟ್ಟು 1,894 ಅರೆಕಾಲಿಕ ಉಪನ್ಯಾಸಕರನ್ನು ಮಾತ್ರ ನೇಮಕ ಮಾಡಿಕೊಳ್ಳುವಂತೆ ಉನ್ನತ ಶಿಕ್ಷಣ ಇಲಾಖೆ ಕಾರ್ಯದರ್ಶಿ ಆದೇಶದಲ್ಲಿ ಸೂಚಿಸಲಾಗಿದೆ.


ಇದನ್ನೂ ಓದಿ: ಗ್ರಾಮೀಣ ಜನರಿಗಾಗಿ ಇರುವ ಬಂಪರ್ ಪೋಸ್ಟಾಫೀಸ್ ಸ್ಕೀಮ್ | ₹1500 ಹೂಡಿಕೆ ಮಾಡಿ ₹35 ಲಕ್ಷ ಪಡೆಯಿರಿ...

Most Popular

Related Posts