ಎಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಅಳವಡಿಸದ ವಾಹನ ಮಾಲೀಕರಿಗೆ ಸದ್ಯಕ್ಕೆ ದಂಡವಿಲ್ಲ | ಹೈಕೋರ್ಟ್ ಆದೇಶ HSRP Number plate adoption postponement
NEWS
18 September 2024
HSRP Number plate adoption postponement : ರಾಜ್ಯದ ವಾಹನಗಳಿಗೆ ಎಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ (High Security Registration Plates - HSRP) ಅಳವಡಿಕೆ ಮಾಡಲು ಮತ್ತೊಂದಷ್ಟು ಕಾಲಾವಕಾಶ ಸಿಕ್ಕಿದೆ. ಎಚ್‌ಎಸ್‌ಆರ್‌ಪಿ ಅಳವಡಿಸದ ವಾಹನ ಮಾಲೀಕರಿಗೆ ಸೆಪ್ಟೆಂಬರ್ 18ರ ನಂತರ ದಂಡ ವಿಧಿಸುವ ಆತಂಕವಿತ್ತು. ಇದೀಗ ಹೈಕೋರ್ಟ್ ಪುನಃ ಗಡುವು ವಿಸ್ತರಣೆಗೆ (Extension of deadline) ಆದೇಶಿಸಿದೆ.
ಹೈಕೋರ್ಟ್ ಮಹತ್ವದ ಆದೇಶ karnataka high court Order
ಈ ಹಿಂದೆ ಸಾರಿಗೆ ಹೊರಡಿಸಿದ್ದ ಸುತ್ತೋಲೆ ಪ್ರಕಾರ, ಸೆಪ್ಟೆಂಬರ್ 15ಕ್ಕೆ ಎಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ (HSRP Number plate) ಅಳವಡಿಸಲು ಕೊನೆಯ ದಿನವಾಗಿತ್ತು. ಗಡುವು ವಿಸ್ತರಿಸಬೇಕು ಎಂದು ಹೈಕೋರ್ಟ್’ಗೆ ಸಲ್ಲಿಕೆಯಾಗಿದ್ದ ಅರ್ಜಿಯ ವಿಚಾರಣೆ ಸೆಪ್ಟೆಂಬರ್ 18ಕ್ಕೆ ಇದ್ದುದರಿಂದ ನ್ಯಾಯಾಲಯದ ವಿಚಾರಣೆಯ ನಂತರ ಎಚ್‌ಎಸ್‌ಆರ್‌ಪಿ ಅಳವಡಿಸದ ವಾಹನ ಮಾಲೀಕರಿಗೆ ದಂಡ ವಿಧಿಸುವ ನಿರ್ಧಾರ ಕೈಗೊಳ್ಳುವುದಾಗಿ ಸರ್ಕಾರ ಹೇಳಿತ್ತು.
ಇಂದು ಅರ್ಜಿ ವಿಚಾರಣೆ ನಡೆಸಿರುವ ಹೈಕೋರ್ಟ್ ವಿಭಾಗೀಯ ಪೀಠವು ನವೆಂಬರ್ 20ಕ್ಕೆ ಮುಂದಿನ ವಿಚಾರಣೆ ಮುಂದೂಡಿದೆ. ಜತೆಗೆ, ಎಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಅಳವಡಿಕೆ ದಿನಾಂಕವನ್ನೂ ಕೂಡ ವಿಸ್ತರಣೆ ಮಾಡಿ ಆದೇಶ ಪ್ರಕಟಿಸಿದೆ. ಅಲ್ಲಿಗೆ ಇನ್ನೂ ಹೈ ಸೆಕ್ಯುರಿಟಿ ನಂಬರ್ ಪ್ಲೇಟ್ ಅಳವಡಿಸದವರಿಗೆ ಹೈಕೋರ್ಟ್ನಿಂದ ಬಿಗ್ ರಿಲೀಫ್ (Big relief) ಸಿಕ್ಕಂತಾಗಿದೆ.
4ನೇ ಬಾರಿ ಗಡುವು ವಿಸ್ತರಣೆ
2019ರ ಏಪ್ರಿಲ್ 1ರ ಮೊದಲು ನೋಂದಾಯಿಸಲ್ಪಟ್ಟ ವಾಹನಗಳಿಗೆ ಎಚ್‌ಎಸ್‌ಆರ್‌ಪಿ ಕಡ್ಡಾಯಗೊಳಿಸುವ ಅಧಿಸೂಚನೆಯನ್ನು 2023ರ ಆಗಸ್ಟ್ನಲ್ಲಿ ಸಾರಿಗೆ ಇಲಾಖೆ ಪ್ರಕಟಿಸಿತ್ತು. ಮೊದಲಿಗೆ 2023ರ ನವೆಂಬರ್ 17ರ ಗಡುವನ್ನು ನಿಗದಿಪಡಿಸಲಾಗಿತ್ತು.
ನಿಧಾನಗತಿಯ ಅಳವಡಿಕೆಯ ಕಾರಣ ಆ ನಂತರದಲ್ಲಿ ಗಡುವನ್ನು ಮೂರು ಬಾರಿ ವಿಸ್ತರಿಸಲಾಗಿತ್ತು. ಇದೀಗ ಹೈಕೋರ್ಟ್ ಆದೇಶದ ನಂತರ 4ನೇ ಬಾರಿ ಗಡುವು ವಿಸ್ತರಣೆ ಮಾಡಿದಂತಾಗಿದೆ.
ಇದನ್ನೂ ಓದಿ: ನಿಮ್ಮ ಫೇಸ್‌ಬುಕ್ ಅಕೌಂಟ್ ಸೇಫ್ ಆಗಿಟ್ಟುಕೊಳ್ಳುವುದು ಹೇಗೆ? ಇಲ್ಲಿದೆ ಸುಲಭ ತಂತ್ರಗಳು Facebook Account Safe Tricks
ಸದ್ಯಕ್ಕೆ ದಂಡದಿ೦ದ ಬಚಾವ್
ಸಾರಿಗೆ ಇಲಾಖೆ ಅಂಕಿ-ಅ೦ಶಗಳ ಪ್ರಕಾರ, ಎರಡು ಕೋಟಿ ಹಳೆಯ ವಾಹನಗಳ ಪೈಕಿ ಸೆಪ್ಟೆಂಬರ್ 15ರ ಗಡುವಿನ ವರೆಗೆ ಕೇವಲ 52 ಲಕ್ಷ ವಾಹನಗಳಿಗಷ್ಟೇ ಎಚ್‌ಎಸ್‌ಆರ್‌ಪಿ ಅಳವಡಿಸಲಾಗಿದೆ.
ಡೆಡ್ಲೈನ್ ನಂತರ ಎಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಇಲ್ಲದೆ ಸಂಚರಿಸುವ ವಾಹನ ಮಾಲೀಕರಿಗೆ 500 ರೂ. ದಂಡ ವಿಧಿಸುವುದಾಗಿ ಸಾರಿಗೆ ಇಲಾಖೆ ಹೇಳಿತ್ತು. ಸದ್ಯ ಹೈಕೋರ್ಟ್ ಆದೇಶದಿಂದಾಗಿ ವಾಹನ ಮಾಲೀಕರು ದಂಡದಿ೦ದ ಬಚಾವಾಗಿದ್ದಾರೆ.
ಇದನ್ನೂ ಓದಿ: ಆಸ್ತಿ ನೋಂದಣಿಯನ್ನು ಇನ್ಮುಂದೆ ಎಲ್ಲಿಯಾದರೂ ಮಾಡಿ | ರಾಜ್ಯಾದ್ಯಂತ ಹೊಸ ನಿಯಮ ಜಾರಿ Anywhere Registration Karnataka
ನಂಬರ್ ಪ್ಲೇಟ್ ಹಾಕಿಸಿ...
Transport.karnataka.gov.in ಅಥವಾ www.siam.inಗೆ ಜಾಲತಾಣಗಳಿಗೆ ಭೇಟಿ ಕೊಟ್ಟು ಅಲ್ಲಿ Book HSRP ಮೇಲೆ ಕ್ಲಿಕ್ ಮಾಡಬೇಕು. ವಿವಿಧ ಆಯ್ಕೆಗಳ ಪೈಕಿ ವಾಹನ ತಯಾರಕರನ್ನು ಆಯ್ಕೆ ಮಾಡಿ ವಾಹನದ ಮೂಲ ವಿವರಗಳನ್ನು ಭರ್ತಿ ಮಾಡಬೇಕು. ನಂತರ ನಂಬರ್ ಪ್ಲೇಟ್ ಅಳವಡಿಕೆಗೆ ಸ್ಥಳ ಆಯ್ಕೆ ಮಾಡಿಕೊಂಡರೆ ಅವರೇ ಬಂದು ಅಳವಡಿಕೆ ಮಾಡಿ ಕೊಡುತ್ತಾರೆ.
Most Popular
- ಎಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಅಳವಡಿಸದ ವಾಹನ ಮಾಲೀಕರಿಗೆ ಸದ್ಯಕ್ಕೆ ದಂಡವಿಲ್ಲ | ಹೈಕೋರ್ಟ್ ಆದೇಶ HSRP Number plate adoption postponement
- ಆಸ್ತಿ ನೋಂದಣಿಯನ್ನು ಇನ್ಮುಂದೆ ಎಲ್ಲಿಯಾದರೂ ಮಾಡಿ | ರಾಜ್ಯಾದ್ಯಂತ ಹೊಸ ನಿಯಮ ಜಾರಿ Anywhere Registration Karnataka
- ಇನ್ಮುಂದೆ ಬದಲಾಗಲಿದೆ ಈ ಬ್ಯಾಂಕುಗಳ ಶುಲ್ಕ ನಿಯಮ Banking Service Charges New Rules
- ಮೈಕೈ ನೋವಿಗೆ ಈ ಸಿಂಪಲ್ ಮನೆಮದ್ದು ಟ್ರೈ ಮಾಡಿ... Home Remedy for body Pain
- ಏಕೀಕೃತ ಪಿಂಚಣಿ ಯೋಜನೆ : ಸರ್ಕಾರಿ ನೌಕರರಿಗೆ ಇದರ ಪ್ರಯೋಜನಗಳೇನು? Unified Pension Scheme for Govt Employees
- ಅತಿಥಿ ಉಪನ್ಯಾಸಕರಿಗೆ ವೇತನ ಹೆಚ್ಚಳ | ಯಾರಿಗೆ ಎಷ್ಟು ಸಂಬಳ ನಿಗದಿಯಾಗಿದೆ? Salary increase for guest lecturers
- 1,130 ಅಗ್ನಿಶಾಮಕ ಕಾನ್ಸ್ಟೆಬಲ್ ಹುದ್ದೆಗಳಿಗೆ ಅರ್ಜಿ ಆಹ್ವಾನ | ಪಿಯುಸಿ ಪಾಸಾಗಿದ್ರೆ ಅರ್ಜಿ ಹಾಕಿ... CISF Constable Fireman Recruitment 2024
- 17,727 ಕೇಂದ್ರ ಸರ್ಕಾರಿ ಹುದ್ದೆಗಳ ಬೃಹತ್ ನೇಮಕಾತಿಗೆ ಅರ್ಜಿ ಆಹ್ವಾನ | ಪದವೀಧರರಿಗೆ ಭರ್ಜರಿ ಅವಕಾಶ SSC CGL Recruitment 2024
- ರೈತರು ಮನೆಯಲ್ಲಿಯೇ ಯೂರಿಯಾ ಗೊಬ್ಬರ ತಯಾರಿಸುವ ವಿಧಾನ Method of Urea Preparation from Cattle Urine
- ರಾಜ್ಯದಲ್ಲಿ ಮುಂದಿನ 5 ದಿನ ಮಳೆ ಮುನ್ಸೂಚನೆ Heavy Rain in the karnataka Rain Forecast