ಕೃಷಿಯಲ್ಲಿ ಮಾನವ ಮೂತ್ರ ಪ್ರಯೋಗಿಸಿ ಯಶಸ್ಸು ಕಂಡ ರೈತ Human urine experiment in agriculture
AGRICULTURE
19 September 2024
Human urine experiment in agriculture : ಮಾನವನ ಮೂತ್ರ (Human urine) ನಿರುಪಯುಕ್ತ, ಉಪಯೋಗಕ್ಕೆ ಬಾರದು ಎಂದುಕೊ೦ಡಿದ್ದ ನಮಗೆ ಅದು ಕೃಷಿಯಲ್ಲಿ ಮುಖ್ಯ ಪರಿವರ್ತನೆಗೆ ಕಾರಣೀಭೂತವಾಗುತ್ತದೆ ಎಂಬುದನ್ನು ಯಶಸ್ವಿ ಪ್ರಯೋಗ ಮಾಡಿದ್ದಾರೆ ಗದಗ ಜಿಲ್ಲೆಯ ಕೋಟುಮಚಗಿ ಗ್ರಾಮದ ಸಾವಯವ ಕೃಷಿಕ ವೀರೇಶ ನೇಗಲಿ. ಕೃಷಿಯಲ್ಲಿ ಔಷಧಿಯಾಗಿ, ಸಾವಯವ ಗೊಬ್ಬರವಾಗಿ ಮಾನವನ ಮೂತ್ರವನ್ನು ಬಳಕೆ ಮಾಡಿದರೆ ಮಣ್ಣಿನ ಫಲವತ್ತತೆ, ಬೆಳೆಯ ಇಳುವರಿ ಹೆಚ್ಚಿಸುವಲ್ಲಿ ಬಹುಮುಖ್ಯ ಪಾತ್ರ ವಹಿಸುತ್ತದೆ. ಅಷ್ಟೇ ಅಲ್ಲದೆ ಒಣಗಿದ ಗಿಡವು ಹಚ್ಚ ಹಸಿರಾಗಿ ಚಿಗುರುತ್ತದೆ ಎಂದು ವರ್ಷದಿಂದ ಹಲವು ಪ್ರಯೋಗಗಳನ್ನು ಮಾಡುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.
ಇದನ್ನೂ ಓದಿ: ಮಾವಿನ ಮರಗಳ ಇಳುವರಿ ಹೆಚ್ಚಳಕ್ಕೆ ವಿಜ್ಞಾನಿಗಳ ಹೊಸ ಸಂಶೋಧನೆ How to Increase Mango Yield
ವೀರೇಶ ನೇಗಲಿ ಅವರು ರಾಸಾಯನಿಕ ಕೃಷಿಯಿಂದ ಬೇಸತ್ತು 2008ರಲ್ಲಿ ಸಾವಯವ ಕೃಷಿಯತ್ತ ಹೊರಳಿದವರು. ಕಳೆದ 13 ವರ್ಷಗಳಿಂದ ತಮ್ಮ ಜಮೀನಿಗೆ ಅಗತ್ಯವಿರುವಷ್ಟು ಗುಣಮಟ್ಟದ ಸಾವಯವ, ನೈಸರ್ಗಿಕ, ಜೈವಿಕ ಗೊಬ್ಬರವನ್ನು ತಯಾರು ಮಾಡುತ್ತಿದ್ದಾರೆ. ಬೆಟಗೇರಿ ಕೃಷಿ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಸಾವಯವ ಗೊಬ್ಬರ ಉತ್ಪಾದನೆಯ ಪ್ರಮಾಣವನ್ನು ಹೆಚ್ಚಿಸಿದ್ದಾರೆ. ಪ್ರತಿ ವರ್ಷ ಒಣ ಬೇಸಾಯದ ಭೂಮಿಯಲ್ಲಿಯೂ ಉತ್ತಮ ಇಳುವರಿ ಪಡೆಯುವ ಮೂಲಕ ಇತರ ರೈತರಿಗೆ ಮಾದರಿಯಾಗಿದ್ದಾರೆ.
ಮಾನವ ಮೂತ್ರದಲ್ಲಿರುವ ಪೋಷಕಾಂಶಗಳು
ಮಾನವ ಸೇವಿಸುವ ಆಹಾರದಲ್ಲಿರುವ ಪೌಷ್ಟಿಕಾಂಶಗಳನ್ನು ಶೋಧಿಸಿ, ದೇಹಕ್ಕೆ ಅಗತ್ಯವಾದಷ್ಟನ್ನು ಪೂರೈಸುವ ಜೀರ್ಣಾಂಗ ವ್ಯವಸ್ಥೆಯು ಹೆಚ್ಚುವರಿ ಪೌಷ್ಟಿಕಾಂಶಗಳನ್ನು ಮೂತ್ರ ರೂಪದಲ್ಲಿ ದೇಹದಿಂದ ಹೊರ ಹಾಕುತ್ತದೆ. ಮನುಷ್ಯನ ಒಂದು ಲೀಟರ್ ಮೂತ್ರದಲ್ಲಿ ಸಾರಜನಕ ಶೇ 0.23ರಿಂದ 12, ರಂಜಕ ಶೇ 0.17 ಮತ್ತು ಪೊಟ್ಯಾಶ್ ಶೇ 0.14ರಿಂದ 0.17 ಇರುತ್ತದೆ. ಆದರೆ ಈ ದ್ರವ ರೂಪದ ರಸಗೊಬ್ಬರವನ್ನು ಬಳಸದೇ ಇರುವುದರಿಂದ ನಿರುಪಯುಕ್ತವಾಗುತ್ತಿದೆ.
ಈ ಮೂತ್ರವನ್ನು ಸಂಗ್ರಹಿಸಿ ಬೆಳೆಗಳಿಗೆ ಸಿಂಪಡಣೆ ಮಾಡುವುದರಿಂದ ಪೋಷಕಾಂಶಗಳು ದೊರೆಯುತ್ತವೆ. ಬೆಳೆಗಳಿಗೆ ಶಿಫಾರಸು ಮಾಡಿದ ಪ್ರಮಾಣದಷ್ಟು ಸಾರಜನಕವನ್ನು ಲೆಕ್ಕಾಚಾರದ ಆಧಾರದಲ್ಲಿ ನಂತರ ಬೆಳೆಗೆ ಬೇಕಾಗುವ ಮೂತ್ರದ ಪ್ರಮಾಣವನ್ನು ವಿವಿಧ ಹಂತಗಳಲ್ಲಿ ಒದಗಿಸಬೇಕು. ಮಿಕ್ಕ ಪ್ರಮಾಣವನ್ನು ಏಕದಳ ಧಾನ್ಯದ ಹಿಟ್ಟು, ಸಗಣಿ, ಗೋಮೂತ್ರ, ಮಾನವನ ಮೂತ್ರ ಸೇರಿಸಿ ಸಾವಯವ ಗೊಬ್ಬರ ತಯಾರಿಸಿ ಬೆಳೆಗಳಿಗೆ ಜೀವಾಮೃತ ನೀಡಬಹುದು. ಭೂಮಿ ಹಾಗೂ ಬೆಳೆಗಳಿಗೆ ಸಿಂಪಡಣೆ ಮಾಡಲು ಮುಂದಾದರೆ ಉತ್ತಮ ಫಲಿತಾಂಶವೂ ದೊರೆಯುತ್ತದೆ ಎನ್ನುತ್ತಾರೆ ವೀರೇಶ ನೇಗಲಿ.
ಮಾನವನ ಮೂತ್ರ ವ್ಯರ್ಥವಾಗುತ್ತಿದ್ದು ಇದನ್ನು ಕೃಷಿಯಲ್ಲಿ ಉಪಯೋಗಿಸಬಹುದು ಎಂದು ಎಷ್ಟೋ ವಿಶ್ವವಿದ್ಯಾಲಯಗಳು ತಿಳಿಸಿವೆ. ಈಗಾಗಲೇ ಸ್ವೀಡನ್‌ನಲ್ಲಿ ಯಶಸ್ವಿಯಾಗಿರುವ ಮೂತ್ರಬ್ಯಾಂಕ್ ಯೋಜನೆ ಭಾರತಕ್ಕೂ ಬಂದರೆ ಅಚ್ಚರಿ ಪಡಬೇಕಿಲ್ಲ. ಶಾಲಾ ಕಾಲೇಜುಗಳಲ್ಲಿ, ಸಾಮೂಹಿಕ ಶೌಚಾಲಯಗಳಲ್ಲಿ ವ್ಯರ್ಥವಾಗುತ್ತಿರುವ ಮೂತ್ರವನ್ನು ಸಂಗ್ರಹಿಸಿ ಸದ್ಬಳಕೆಗೆ ಮುಂದಾದರೆ ಯೂರಿಯಾ ಗೊಬ್ಬರ ಸೇರಿದಂತೆ ಔಷಧೋಪಚಾರದ ಕೊರತೆ ಕಾಡದು ಎಂಬುವುದು ಕೃಷಿ ಅಧಿಕಾರಿ ಗಿರೀಶ ರಾಥೋಡ್ ಅವರ ಅಂಬೋಣ.
ಇದನ್ನೂ ಓದಿ: ನಾಟಿ ಹಸುಗಳ ಸಗಣಿಯಲ್ಲಿದೆ ಸಂಪತ್ತು | ಹಾಲಿಗಿಂತ ಸಗಣಿಗೇ ಹೆಚ್ಚು ಬೆಲೆ Importance of indian cattle dung
Most Popular
- ನಿಮ್ಮ ಫೇಸ್ಬುಕ್ ಅಕೌಂಟ್ ಸೇಫ್ ಆಗಿಟ್ಟುಕೊಳ್ಳುವುದು ಹೇಗೆ? ಇಲ್ಲಿದೆ ಸುಲಭ ತಂತ್ರಗಳು Facebook Account Safe Tricks
- ಇನ್ಮುಂದೆ ಇಂಟರ್ನೆಟ್ ಇಲ್ಲದೇ ಮೊಬೈಲ್ನಲ್ಲೇ ನೋಡಿ ನಿಮ್ಮಷ್ಟದ ಟಿವಿ ಚಾನೆಲ್ D2M Technology Prasar Bharati experiment
- ರಾಜ್ಯದಲ್ಲಿ ಮುಂದಿನ 5 ದಿನ ಮಳೆ ಮುನ್ಸೂಚನೆ Heavy Rain in the karnataka Rain Forecast
- ಪಿಯುಸಿ ಪಾಸಾಗಿದ್ರೆ ಗ್ರಾಮ ಪಂಚಾಯಿತಿ ಗ್ರಂಥಾಲಯ ಮೇಲ್ವಿಚಾರಕರ ಹುದ್ದೆಗಳಿಗೆ ಅರ್ಜಿ ಹಾಕಿ... Gram Panchayat Library Supervisor Recruitment 2024 Dharwad
- ವಾಟ್ಸಾಪ್ನಿಂದ ಕೂತಲ್ಲೇ ಸಿಗುತ್ತವೆ ಈ ಎಲ್ಲ ಸೇವೆಗಳು | ಈಗಲೇ ಟ್ರೈ ಮಾಡಿ... Other services of WhatsApp
- ಬ್ಯಾಂಕುಗಳಿಗೆ ಇನ್ನು ವಾರದಲ್ಲಿ ಎರಡು ದಿನ ರಜೆ Two Bank Holidays in a Week
- ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ ಹುದ್ದೆಗಳಿಗೆ ಅರ್ಜಿ ಆಹ್ವಾನ | ಸಂಬಳ 30,000 ರೂಪಾಯಿ India Post Payments Bank (IPPB) Recruitment 2024
- ಎಸ್ಬಿಐ ಆಶಾ ವಿದ್ಯಾರ್ಥಿವೇತನ | ಶಾಲೆ, ಪಿಯುಸಿ, ಪದವಿ ವಿದ್ಯಾರ್ಥಿಗಳಿಗೆ 15,000 ದಿಂದ 7.5 ಲಕ್ಷ ವರೆಗೆ ನೆರವು SBIF Asha Scholarship Program 2024
- ಕೃಷಿ ಇಲಾಖೆಯಲ್ಲಿ 600ಕ್ಕೂ ಹೆಚ್ಚು ಹುದ್ದೆಗಳ ನೇಮಕಾತಿ | ಯಾವೆಲ್ಲ ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ? Karnataka Agri Department Recruitment 2024
- ಅತಿಥಿ ಉಪನ್ಯಾಸಕರಿಗೆ ವೇತನ ಹೆಚ್ಚಳ | ಯಾರಿಗೆ ಎಷ್ಟು ಸಂಬಳ ನಿಗದಿಯಾಗಿದೆ? Salary increase for guest lecturers