ಗ್ರಾಮ ಆಡಳಿತ ಅಧಿಕಾರಿ ಹುದ್ದೆಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ಮಹತ್ವದ ಮಾಹಿತಿ Village Administrative Officers Recruitment Exam 2024
JOBS
21 August 2024
![ಗ್ರಾಮ ಆಡಳಿತ ಅಧಿಕಾರಿ ಹುದ್ದೆಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ಮಹತ್ವದ ಮಾಹಿತಿ Village Administrative Officers Recruitment Exam 2024](https://kannadaplus.com/admin/postimages/ca3d7bc5bd7a06303b8245852a0d74ff.jpg)
Village Administrative Officers Recruitment Exam 2024 : ಕಂದಾಯ ಇಲಾಖೆಯಲ್ಲಿ ವಿವಿಧ ಜಿಲ್ಲೆಗಳಲ್ಲಿ ಖಾಲಿ ಇರುವ ಒಟ್ಟು ಸಾವಿರ ಗ್ರಾಮ ಆಡಳಿತಾಧಿಕಾರಿ (Village Administrative Officers) ಹುದ್ದೆಗಳಿಗೆ ದ್ವಿತೀಯ ಪಿಯು ಅಥವಾ ತತ್ಸಮಾನ ವಿದ್ಯಾಭ್ಯಾಸ ಹೊಂದಿರುವ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿತ್ತು.
ನೇರ ನೇಮಕಾತಿ ಸಂಬ೦ಧ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (Karnataka Examination Authority- KEA) ಅರ್ಜಿ ಆಹ್ವಾನಿಸಿದ್ದ ಈ ಒಂದು ಸಾವಿರ ಹುದ್ದೆಗಳಿಗೆ ಬರೋಬ್ಬರಿ 5,70,982 ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದಾರೆ.
ಇದೀಗ ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ ಮುಗಿದಿದ್ದು; ಎರಡು ಹಂತಗಳಲ್ಲಿ ಪರೀಕ್ಷೆ ನಡೆಸಲಾಗುತ್ತಿದೆ. ಮೊದಲ ಹಂತದ ಪರೀಕ್ಷೆ ಸೆಪ್ಟೆಂಬರ್ 29 ಹಾಗೂ ಎರಡನೇ ಹಂತದ ಪರೀಕ್ಷೆ ಅಕ್ಟೋಬರ್ 27ರಂದು ಎಲ್ಲಾ ಜಿಲ್ಲೆಗಳಲ್ಲಿ ನಡೆಯಲಿದೆ.
ಇದನ್ನೂ ಓದಿ: ಅತಿಥಿ ಉಪನ್ಯಾಸಕರಿಗೆ ವೇತನ ಹೆಚ್ಚಳ | ಯಾರಿಗೆ ಎಷ್ಟು ಸಂಬಳ ನಿಗದಿಯಾಗಿದೆ? Salary increase for guest lecturers
ಕನ್ನಡ ಪರೀಕ್ಷೆ ಕಡ್ಡಾಯ
ಗ್ರಾಮ ಆಡಳಿತ ಹುದ್ದೆಗೆ ಅರ್ಜಿ ಸಲ್ಲಿಸಿರುವ ಎಲ್ಲಾ ಅಭ್ಯರ್ಥಿಗಳು ಕಡ್ಡಾಯ ಕನ್ನಡ ಭಾಷಾ ಪರೀಕ್ಷೆಗೆ ಹಾಜರಾಗಲೇಬೇಕು. ಸೆಪ್ಟೆಂಬರ್ 29ರಂದು ಕಡ್ಡಾಯ ಕನ್ನಡ ಪರೀಕ್ಷೆ ನಡೆಸಲಾಗುವುದು.
ಈಗಾಗಲೇ ನಿಗದಿತ ಶುಲ್ಕ ಪಾವತಿಸಿ ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳು ಪ್ರವೇಶ ಪತ್ರವನ್ನು ಡೌನ್‌ಲೋಡ್ ಮಾಡಿಕೊಂಡು ಈ ಪರೀಕ್ಷೆಗೆ ತಪ್ಪದೇ ಹಾಜರಾಗಬೇಕೆಂದು ಸೂಚಿಸಲಾಗಿದೆ.
ಕನಿಷ್ಠ 50 ಅಂಕ ಗಳಿಸಬೇಕು
ಕರ್ನಾಟಕ ನಾಗರಿಕ ಸೇವಾ (ನೇರ ನೇಮಕಾತಿ) (ಸಾಮಾನ್ಯ) ನಿಯಮಗಳು, 2021ರ ಅನ್ವಯ, ಕನ್ನಡ ಭಾಷಾ ಪರೀಕ್ಷೆಯಲ್ಲಿ 150 ಅಂಕಗಳಿಗೆ ಕನಿಷ್ಠ 50 ಅಂಕಗಳನ್ನು ಗಳಿಸಬೇಕು.
ಈ ಪರೀಕ್ಷೆಯಲ್ಲಿ ಅರ್ಹತೆ ಪಡೆದ ಅಭ್ಯರ್ಥಿಗಳಿಗೆ ಮಾತ್ರ ಅಕ್ಟೋಬರ್ 27ರಂದು ಪತ್ರಿಕೆ-1 ಮತ್ತು ಪತ್ರಿಕೆ-2 ಇವುಗಳನ್ನು ಒಳಗೊಂಡ ಸ್ಪರ್ಧಾತ್ಮಕ ಪರೀಕ್ಷೆಗೆ ಅವಕಾಶ ನೀಡಲಾಗುತ್ತದೆ ಎಂದು ಕೆಇಎ ಕಾರ್ಯನಿರ್ವಾಹಕ ನಿರ್ದೇಶಕ ಪ್ರಸನ್ನ ವಿವರಿಸಿದ್ದಾರೆ.
ಇದನ್ನೂ ಓದಿ: ಭರ್ಜರಿ ಬಡ್ಡಿ ನೀಡುವ ಪೋಸ್ಟ್ ಆಫೀಸ್ ಸೇವಿಂಗ್ಸ್ ಸ್ಕೀಮ್ | ಈಗಲೇ ಹೂಡಿಕೆ ಮಾಡಿ... National Savings Certificate - NSC
ಗ್ರಾಮ ಆಡಳಿತಾಧಿಕಾರಿ ಜಿಲ್ಲಾವಾರು ಖಾಲಿ ಹುದ್ದೆಗಳು
- ಬೆಂಗಳೂರು ನಗರ - 32
- ಬೆಂಗಳೂರು ಗ್ರಾಮಾಂತರ - 34
- ಚಿತ್ರದುರ್ಗ - 32
- ಕೋಲಾರ - 45
- ತುಮಕೂರು - 73
- ರಾಮನಗರ - 51
- ಚಿಕ್ಕಬಳ್ಳಾಪುರ - 42
- ಶಿವಮೊಗ್ಗ - 31
- ಮೈಸೂರು - 66
- ಚಾಮರಾಜನಗರ - 55
- ಮಂಡ್ಯ - 60
- ಹಾಸನ - 54
- ಚಿಕ್ಕಮಗಳೂರು - 23
- ಕೊಡಗು - 06
- ಉಡುಪಿ - 22
- ದಕ್ಷಿಣ ಕನ್ನಡ - 50
- ಬೆಳಗಾವಿ - 64
- ವಿಜಯಪುರ - 07
- ಬಾಗಲಕೋಟೆ - 22
- ಧಾರವಾಡ - 12
- ಗದಗ - 30
- ಹಾವೇರಿ - 34
- ಉತ್ತರ ಕನ್ನಡ - 02
- ಕೊಪ್ಪಳ - 03
- ಬಳ್ಳಾರಿ - 03
- ಬೀದರ್ - 05
- ಯಾದಗಿರಿ - 08
- ವಿಜಯನಗರ - 03
- ಕಲಬುರಗಿ - 67
- ರಾಯಚೂರು - 04
- ಕೊಪ್ಪಳ - 16
- ಬಳ್ಳಾರಿ - 14
- ಬೀದರ್ - 19
- ಯಾದಗಿರಿ - 01
- ವಿಜಯನಗರ - 10
- ಒಟ್ಟು ಹುದ್ದೆಗಳು : 1,000
ಇದನ್ನೂ ಓದಿ: ಭರ್ಜರಿ ಬಡ್ಡಿ ನೀಡುವ ಪೋಸ್ಟ್ ಆಫೀಸ್ ಸೇವಿಂಗ್ಸ್ ಸ್ಕೀಮ್ | ಈಗಲೇ ಹೂಡಿಕೆ ಮಾಡಿ... National Savings Certificate - NSC
Most Popular
- 2024ರ ಮುಂಗಾರು ಬೆಳೆ ಸಮೀಕ್ಷೆ ಹೀಗೆ ಮಾಡಿ... Crop Survey for Monsoon 2024
- ಪಿಎಂ ವಿದ್ಯಾಲಕ್ಷ್ಮೀ ಯೋಜನೆ : ಯಾವುದೇ ಶೂರಿಟಿ, ಗ್ಯಾರಂಟಿ ಇಲ್ಲದೇ ಸಿಗುತ್ತೆ 10 ಲಕ್ಷ ರೂಪಾಯಿ ವರೆಗೂ ಶಿಕ್ಷಣ ಸಾಲ PM Vidyalakshmi Scheme 2024
- ಇನ್ಮುಂದೆ ಬದಲಾಗಲಿದೆ ಈ ಬ್ಯಾಂಕುಗಳ ಶುಲ್ಕ ನಿಯಮ Banking Service Charges New Rules
- ರಾಜ್ಯಾದ್ಯಂತ ಬಾಗಿಲು ಮುಚ್ಚಲಿವೆ ಕೆವಿಜಿ ಬ್ಯಾಂಕುಗಳು | ಗ್ರಾಮೀಣ ಬ್ಯಾಂಕ್ ವಿಲೀನಕ್ಕೆ ಕೇಂದ್ರ ಸರಕಾರ ಸನ್ನದ್ಧ Merger of Grameen Banks KVG Banks to Closed
- ರೈತರು ಸರಕಾರದ ವಿವಿಧ ಯೋಜನೆಗಳ ಪ್ರಯೋಜನ ಪಡೆಯಲು ಎಫ್ಐಡಿ ನೋಂದಣಿ ಕಡ್ಡಾಯ... Farmers Identity Details - FID
- ನಾಟಿ ಹಸುಗಳ ಸಗಣಿಯಲ್ಲಿದೆ ಸಂಪತ್ತು | ಹಾಲಿಗಿಂತ ಸಗಣಿಗೇ ಹೆಚ್ಚು ಬೆಲೆ Importance of indian cattle dung
- ‘ಅನ್ನಭಾಗ್ಯ’ ಅಕ್ಕಿಯಲ್ಲಿ ಪ್ಲಾಸ್ಟಿಕ್ ಅಕ್ಕಿ ವದಂತಿ | ರಾಜ್ಯ ಸರ್ಕಾರದ ಹೇಳಿದ್ದೇನು? Plastic rice rumor in Annabhagya rice
- ಪಿಯುಸಿ ಪಾಸಾಗಿದ್ರೆ ಗ್ರಾಮ ಪಂಚಾಯಿತಿ ಗ್ರಂಥಾಲಯ ಮೇಲ್ವಿಚಾರಕರ ಹುದ್ದೆಗಳಿಗೆ ಅರ್ಜಿ ಹಾಕಿ... Gram Panchayat Library Supervisor Recruitment 2024 Dharwad
- ಕಮ್ಮಿ ಬಡ್ಡಿಯಲ್ಲಿ ಗೃಹ ಸಾಲ ನೀಡುವ ಬಾಂಕುಗಳ ಪಟ್ಟಿ | ಗೃಹ ಸಾಲದ ಸಂಪೂರ್ಣ ಮಾಹಿತಿ ಇಲ್ಲಿದೆ... How to get home loan at low interest?
- ರಾಜ್ಯದಲ್ಲಿ ಮುಂದಿನ 5 ದಿನ ಮಳೆ ಮುನ್ಸೂಚನೆ Heavy Rain in the karnataka Rain Forecast