ಆರ್.ಆರ್ ನಂಬರ್’ಗೆ ರೈತರು ಆಧಾರ್ ಜೋಡಣೆ ಮಾಡದಿದ್ದರೆ ಕೃಷಿ ಪಂಪ್‌ಸೆಟ್ ವಿದ್ಯುತ್ ಬಂದ್ | ಸರ್ಕಾರದ ಅಂತಿಮ ಸೂಚನೆ Aadhaar linking for agricultural pumpset

AGRICULTURE
25 August 2024

ಆರ್.ಆರ್ ನಂಬರ್’ಗೆ ರೈತರು ಆಧಾರ್ ಜೋಡಣೆ ಮಾಡದಿದ್ದರೆ ಕೃಷಿ ಪಂಪ್‌ಸೆಟ್ ವಿದ್ಯುತ್ ಬಂದ್ | ಸರ್ಕಾರದ ಅಂತಿಮ ಸೂಚನೆ  Aadhaar linking for agricultural pumpset
WhatsApp Group Join Now
Telegram Group Join Now

Aadhaar linking for agricultural pumpset : ಕೃಷಿ ನೀರಾವರಿ ಪಂಪ್‌ಸೆಟ್ ಬಳಕೆದಾರರು ತಮ್ಮ ನೀರಾವರಿ ಪಂಪ್‌ಸೆಟ್‌ನ ವಿದ್ಯುತ್ ಆರ್.ಆರ್ ಸಂಖ್ಯೆಗೆ (RR Number) ಕಡ್ಡಾಯವಾಗಿ ಆಧಾರ್ ಸಂಖ್ಯೆ ಜೋಡಣೆ ಮಾಡುವಂತೆ ರಾಜ್ಯದ ಎಲ್ಲ ವಿದ್ಯುತ್ ಸರಬರಾಜು ಕಂಪನಿಗಳಿಗೆ (Escom) ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗ (Karnataka Electricity Regulatory Commission- KERC) ಸೂಚನೆ ನೀಡಿದೆ.


ಕರ್ನಾಟಕದಲ್ಲಿ ಇರುವ ಕೃಷಿ ಪಂಪ್‌ಸೆಟ್‌ಗಳೆಷ್ಟು ಹಾಗೂ ಈ ಪೈಕಿ ಚಾಲ್ತಿಯಲ್ಲಿರುವ ಪಂಪ್‌ಸೆಟ್‌ಗಳೆಷ್ಟು ಎಂಬುದರ ಸಮೀಕ್ಷೆಗಾಗಿ ಪಂಪ್‌ಸೆಟ್‌ಗಳಿಗೆ ಜಿಪಿಎಸ್ ಅಳವಡಿಸುವಂತೆ ಕೆಇಆರ್‌ಸಿ ಸೂಚಿಸಿತ್ತು. ಅನಂತರ ಕೃಷಿ ಪಂಪ್‌ಸೆಟ್‌ಗಳ ಆಡಿಟ್ ಮಾಡುವಂತೆಯೂ ಹೇಳಿತ್ತು.


ಇದನ್ನೂ ಓದಿ: ರೈತರು ಮನೆಯಲ್ಲಿಯೇ ಯೂರಿಯಾ ಗೊಬ್ಬರ ತಯಾರಿಸುವ ವಿಧಾನ Method of Urea Preparation from Cattle Urine


ಅಕ್ರಮ ಪಂಪ್‌ಸೆಟ್‌ಗಳಿಗೆ ಕಡಿವಾಣ


ರಾಜ್ಯ ಸರ್ಕಾರ ರೈತರ ಕೃಷಿ ಪಂಪ್‌ಸೆಟ್‌ಗಳಿಗೆ ಉಚಿತ ವಿದ್ಯುತ್ ನೀಡುತ್ತಿದೆ. ವರ್ಷಕ್ಕೆ ಸುಮಾರು 21,000 ಮಿಲಿಯನ್ ಯೂನಿಟ್ ವಿದ್ಯುತ್ ಕೃಷಿ ಪಂಪ್‌ಸೆಟ್‌ಗಳಿಗೆ ಪೂರೈಸಲಾಗುತ್ತದೆ. 10-11 ಸಾವಿರ ಕೋಟಿ ರೂಪಾಯಿ ಇದರ ಸಬ್ಸಿಡಿ ಮೊತ್ತವಾಗಿದ್ದು, ಆಯಾ ಎಸ್ಕಾಂಗಳಿಗೆ ಈ ಮೊತ್ತವನ್ನು ಸರಕಾರ ಭರಿಸುತ್ತದೆ.


ಈ ಹಿನ್ನಲೆಯಲ್ಲಿ ಅಕ್ರಮ ಪಂಪ್‌ಸೆಟ್‌ಗಳಿಗೆ ಕಡಿವಾಣ ಹಾಕುವುದು ಹಾಗೂ ಉಚಿತ ವಿದ್ಯುತ್ ಅನ್ನು ಅಕ್ರಮವಾಗಿ ಬಳಸುತ್ತಿರುವ ಉಳ್ಳವರನ್ನು ಪತ್ತೆ ಹಚ್ಚುವುದು ಹಾಗೂ ನಿಜವಾದ ಫಲಾನುಭವಿಗೆ ಸರ್ಕಾರದ ವಿದ್ಯತ್ ಸಬ್ಸಿಡಿ ತಲುಪುತ್ತಿದೆಯೇ ಎಂಬುವುದನ್ನು ದೃಢಪಡಿಸಿಕೊಳ್ಳುವ ಹಿನ್ನಲೆಯಲ್ಲಿ ಆಧಾರ್ ಜೋಡಣೆ ಕಡ್ಡಾಯಗೊಳಿಸಿದೆ.


ಇದನ್ನೂ ಓದಿ: ನಾಟಿ ಹಸುಗಳ ಸಗಣಿಯಲ್ಲಿದೆ ಸಂಪತ್ತು | ಹಾಲಿಗಿಂತ ಸಗಣಿಗೇ ಹೆಚ್ಚು ಬೆಲೆ Importance of indian cattle dung


ಆಧಾರ್ ಜೋಡಣೆಗೆ KERC ಸೂಚನೆ


2024-25ನೇ ಸಾಲಿನಲ್ಲಿ ದರ ಪರಿಷ್ಕರಣೆ ಮಾಡುವ ಆದೇಶದಲ್ಲಿ ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗವು ಕೃಷಿ ಪಂಪ್‌ಸೆಟ್‌ಗಳಿಗೆ ಆಧಾರ್ ಲಿಂಕ್ ಮಾಡುವುದು ಕಡ್ಡಾಯಗೊಳಿಸಿತ್ತು. ಕೃಷಿ ಚಟುವಟಿಕೆಗೆ ನೀರು ಒದಗಿಸಲು 10hp ಪಂಪ್‌ಸೆಟ್ ಹೊಂದಿರುವ ರೈತರು ಕಡ್ಡಾಯವಾಗಿ ಆರ್‌ಆರ್ ಸಂಖ್ಯೆಗೆ ಆಧಾರ್ ಜೋಡಣೆ ಮಾಡುವುದು ಅಗತ್ಯವಾಗಿದೆ.


ಪಹಣಿಯಲ್ಲಿ ಹೆಸರು ಇರುವ ಜಮೀನಿನ ವಾರಸುದಾರರು ಮರಣ ಹೊಂದಿದ್ದಲ್ಲಿ ಆಧಾರ್ ಜೋಡಣೆ ಸಮಸ್ಯೆಯಾಗುತ್ತಿತ್ತು. ಈ ಸಮಸ್ಯೆಗೆ ಪರಿಹಾರವಾಗಿ ಮೃತಪಟ್ಟ ವಾರಸುದಾರರ ಮರಣ ಪ್ರಮಾಣ ಪತ್ರವನ್ನು ನೀಡಿ ಪ್ರಸ್ತುತ ಜಮೀನಿನ ವಾರಸುದಾರರಾಗಿರುವ ವ್ಯಕ್ತಿಗಳು ಆಧಾರ್ ಸಂಖ್ಯೆ ಜೋಡಣೆ ಮಾಡಿಕೊಳ್ಳಬಹುದಾಗಿದೆ.


ಜಂಟಿ ಖಾತೆ ಹೊಂದಿದ್ದರೆ ಅಂತಹ ರೈತರು ಛಾಪಾಕಾಗದದಲ್ಲಿ ಉಳಿದ ಖಾತೆದಾರರ ಒಪ್ಪಿಗೆ ಪಡೆದು ಜೋಡಣೆ ಮಾಡಿಕೊಳ್ಳಬೇಕು. ಅಲ್ಲದೆ ಜಮೀನಿನ ಕ್ರಯಪತ್ರ ಸೇರಿದಂತೆ ಹಲವು ದಾಖಲೆಗಳನ್ನು ನೀಡಿ ಜೋಡಣೆ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ.


ಇದನ್ನೂ ಓದಿ: ಅಧಿಕ ಇಳುವರಿಗೆ ತಪ್ಪದೇ ಮಣ್ಣಿನ ಆರೋಗ್ಯ ತಪಾಸಣೆ ಮಾಡಿಸಿ Soil Health Check

Most Popular

Related Posts