ಕಮ್ಮಿ ಬಡ್ಡಿಯಲ್ಲಿ ಗೃಹ ಸಾಲ ನೀಡುವ ಬಾಂಕುಗಳ ಪಟ್ಟಿ | ಗೃಹ ಸಾಲದ ಸಂಪೂರ್ಣ ಮಾಹಿತಿ ಇಲ್ಲಿದೆ... How to get home loan at low interest?

FINANCIAL
29 July 2024

ಕಮ್ಮಿ ಬಡ್ಡಿಯಲ್ಲಿ ಗೃಹ ಸಾಲ ನೀಡುವ ಬಾಂಕುಗಳ ಪಟ್ಟಿ | ಗೃಹ ಸಾಲದ ಸಂಪೂರ್ಣ ಮಾಹಿತಿ ಇಲ್ಲಿದೆ...  How to get home loan at low interest?
WhatsApp Group Join Now
Telegram Group Join Now

Low interest Home loan : ಗೃಹ ಸಾಲವು ವಿವಿಧ ಬ್ಯಾಂಕ್‌ಗಳಲ್ಲಿ ವಿವಿಧ ಬಡ್ಡಿ ದರದಲ್ಲಿ ಲಭ್ಯವಿದ್ದು, ಇದರ ಸಂಪೂರ್ಣ ಮಾಹಿತಿ ಮತ್ತು ಕಡಿಮೆ ಬಡ್ಡಿ ದರದಲ್ಲಿ ಗೃಹ ಸಾಲ ಪಡೆಯುವುದು ಹೇಗೆ? ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ...


ನೀವು ಮನೆ ನಿರ್ಮಾಣ, ಮನೆ ರಿಪೇರಿ, ಮನೆ ಖರೀದಿಗೆ ಗೃಹ ಸಾಲ ತೆಗೆದುಕೊಳ್ಳ ಬಯಸಿದ್ದರೆ, ಮೊದಲು ಯಾವ ಬ್ಯಾಂಕ್‌ಗಳಲ್ಲಿ ಎಷ್ಟು ಬಡ್ಡಿ ದರದಲ್ಲಿ ಸುಲಭ ಕಂತುಗಳ ಗೃಹಸಾಲ ಸಿಗಲಿದೆ ಎಂಬುದನ್ನು ತಿಳಿದುಕೊಳ್ಳುವುದು ಅವಶ್ಯಕ.  ಗೃಹ ಸಾಲವು ವಿವಿಧ ಬಡ್ಡಿ ದರದಲ್ಲಿ ಸಿಗುತ್ತಿದ್ದು, ದೀರ್ಘಾವಧಿ ವರೆಗೆ ಹೆಚ್ಚು ಹಣವನ್ನು ಪಡೆದುಕೊಂಡು ಸುಲಭ ಕಂತುಗಳಲ್ಲಿ ಮರುಪಾವತಿಸುವ ಉತ್ತಮ ಸೌಲಭ್ಯವಾಗಿದೆ.


ಈ ಲೇಖನದಲ್ಲಿ ಗೃಹಸಾಲವು ಕಡಿಮೆ ಬಡ್ಡಿ ದರದಲ್ಲಿ ಸಿಗುವಂತಹ ಕೆಲವೊಂದಿಷ್ಟು ಬ್ಯಾಂಕ್’ಗಳ ಪಟ್ಟಿ ನೀಡಲಾಗಿದೆ. ಜತೆಗೆ ಕಡಿಮೆ ಬಡ್ಡಿ ದರದಲ್ಲಿ ಗೃಹ ಸಾಲ ಸಿಗಬೇಕೆಂದರೆ ಅನುಸರಿಸಬೇಕಾದ ಕ್ರಮಗಳೇನು? ಎಂಬ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಿದ್ದೇವೆ.


ಗೃಹ ಸಾಲದ ವಿಧಗಳು (Types of Home loans) 

  1. ಗೃಹ ವಸತಿ ಸಾಲ 
  2. ಮನೆ ವಿಸ್ತರಣೆ ಸಾಲ
  3. ಮನೆಯ ಸುಧಾರಣೆ ಸಾಲ
  4. ಹೋಂ ಲೋನ್ ಬ್ಯಾಲೆನ್ಸ್ ವರ್ಗಾವಣೆ
  5. ಸಂಯೋಜಿತ ಗೃಹ ಸಾಲ


ಗೃಹಸಾಲಕ್ಕೆ ಬ್ಯಾಂಕ್’ಗಳು ಹೇಗೆ ಬಡ್ಡಿದರ ನಿಗಧಿಪಡಿಸುತ್ತವೆ?

ಒಂದೊ೦ದು ಬ್ಯಾಂಕುಗಳು ಒಂದೊ೦ದು ರೀತಿಯ ಬಡ್ಡಿ ದರದಲ್ಲಿ ಗೃಹ ಸಾಲವನ್ನು ನೀಡುತ್ತವೆ. ಅದೇ ರೀತಿ ಆಯಾಯ ಬ್ಯಾಂಕ್’ಗಳು ಅದರದೇ ಆದ ನಿಯಮ, ಶರತ್ತುಗಳ ಆಧಾರದ ಮೇಲೆ ಗೃಹಸಾಲ ಒದಗಿಸುತ್ತವೆ. ಬಹುಮುಖ್ಯವಾಗಿ ಗೃಹಸಾಲ ಮಾತ್ರವಲ್ಲದೇ ಬ್ಯಾಂಕ್ ಅಥವಾ ಹಣಕಾಸು ಸಂಸ್ಥೆಗಳ ಮೂಲಕ ಯಾವುದೇ ರೀತಿಯ ಸಾಲ ಪಡೆಯಬೇಕೆಂದರೂ ಮೊದಲಿಗೆ ಅರ್ಜಿದಾರನ ಕ್ರೆಡಿಟ್ ಸ್ಕೋರ್ (Credit score) ಮತ್ತು ಎಲ್‌ಟಿವಿ ಅನುಪಾತ (LTV ratio) ಈ ಎರಡರ ಆಧಾರದ ಮೇಲೆ ಸಾಲ ಒದಗಿಸುತ್ತವೆ. 


ಕ್ರೆಡಿಟ್ ಸ್ಕೋರ್ ಅಥವಾ ಸಿಬಿಲ್ ಸ್ಕೋರ್ (Cibil score)ಎಂದರೆ 300ರಿಂದ 900ರ ವರೆಗಿನ ಮೂರು ಅಂಕಿಯ ಸಂಖ್ಯೆಯಾಗಿದ್ದು; ಇದು ಸಾಲವನ್ನು ಮರುಪಾವತಿ ಮಾಡುವ ನಿಮ್ಮ ಸಾಮರ್ಥ್ಯದ ಸೂಚ್ಯಂಕವಾಗಿದೆ. ಯಾವುದೇ ಸಾಲ ಪಡೆಯಲು ಕ್ರೆಡಿಟ್ ಸ್ಕೋರ್ ಉತ್ತವಾಗಿದ್ದರೆ ಕಡಿಮೆ ಬಡ್ಡಿಯಲ್ಲಿ ಸಾಲ ಸಿಗುತ್ತದೆ. ಮಧ್ಯಮವಾಗಿದ್ದರೆ ಸಾಧಾರಣ ಬಡ್ಡಿ, ಕಡಿಮೆಯಾಗಿದ್ದರೆ ಹೆಚ್ಚು ಬಡ್ಡಿಗೆ ಸಾಲ ಸಿಗುತ್ತದೆ. ಕಳಪೆಯಾಗಿದ್ದರೆ ಯಾವುದೇ ರೀತಿಯ ಸಾಲ ಸಿಗದೇ ಇರಬಹುದು. ಇದಕ್ಕೆ ಗೃಹಸಾಲವೂ ಹೊರತಾಗಿಲ್ಲ.


ಇನ್ನು ಎಲ್‌ಟಿವಿ ಅನುಪಾತವೆಂದರೆ (Loan-to-Value) ಬ್ಯಾಂಕುಗಳ ಸಾಲದ ಮೌಲ್ಯಕ್ಕೂ ಅರ್ಜಿದಾರರನ ಆಸ್ತಿ ಮೌಲ್ಯಕ್ಕೂ ಇರುವ ಅನುಪಾತ. ಈ ಅನುಪಾತವು ಹೆಚ್ಚಿದ್ದರೆ ಹೆಚ್ಚಿನ ಬಡ್ಡಿ ದರ ಮತ್ತು ಕಡಿಮೆ ಇದ್ದರೆ ಕಡಿಮೆ ಬಡ್ಡಿ ದರದಲ್ಲಿ ನಿಮಗೆ ಗೃಹ ಸಾಲ, ಮಾತ್ರವಲ್ಲದೇ ಯಾವುದೇ ರೀತಿಯ ಸಾಲ ಸೌಲಭ್ಯ ಸಿಗುತ್ತದೆ. ಇಲ್ಲಿ ಕ್ರೆಡಿಟ್ ಸ್ಕೋರ್ ಮತ್ತು ಎಲ್‌ಟಿವಿ ಆಧಾರದ ಮೇಲೆ ಕೆಲವು ಬ್ಯಾಂಕುಗಳು ವಿಧಿಸುವ ಗೃಹಸಾಲದ ಬಡ್ಡಿ ದರಗಳ ವಿವರವನ್ನು ನೋಡೋಣ...


ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ

ಮೊದಲಿಗೆ ನಾವು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಬಡ್ಡಿದರ (interest rate) ನೋಡುವುದಾದರೆ, ಗೃಹ ಸಾಲದ ಮೇಲೆ 8.6% ರಿಂದ 9.65% ವರೆಗೆ ಬಡ್ಡಿ ವಿಧಿಸುತ್ತದೆ. ಅರ್ಜಿದಾರನ ಕ್ರೆಡಿಟ್ ಸ್ಕೋರ್ 750ಕ್ಕಿಂತ ಮೇಲಿದ್ದರೆ 8.6%, 650 ರಿಂದ 699 ಇದ್ದರೆ 9.45%, 550 ರಿಂದ 649 ಇದ್ದರೆ 9.65% ದರದಲ್ಲಿ ನಿಮಗೆ ಗೃಹ ಸಾಲ ಸಿಗುತ್ತದೆ.


ಐಸಿಐಸಿಐ ಬ್ಯಾಂಕ್ 

ಐಸಿಐಸಿಐ ಬ್ಯಾಂಕ್ ಗೃಹ ಸಾಲದ ಮೇಲೆ ವಿಧಿಸುವ ಬಡ್ಡಿ ದರ ನೋಡುವುದಾದರೆ, 9% ನಿಂದ 9.10%ರ ವರೆಗೆ ಬಡ್ಡಿ ಇದ್ದು, ಕ್ರೆಡಿಟ್ ಸ್ಕೋರ್ ಆಧಾರದ ಮೇಲೆ ನೀಡಲಾಗುವುದು. ಕ್ರೆಡಿಟ್ ಸ್ಕೋರ್ ಹೊರತುಪಡಿಸಿ ಇದು ಸಂಬಳ ಪಡೆಯುವ ಅರ್ಜಿದಾರರಿಗೆ 9% ನಷ್ಟು ಬಡ್ಡಿ ವಿದಿಸುತ್ತದೆ. ಸ್ವಯಂ ಉದ್ಯೋಗಿಗಳ ಕ್ರೆಡಿಟ್ ಸ್ಕೋರ್ 800 ಕ್ಕಿಂತ ಹೆಚ್ಚಿದ್ದರೆ ಬಡ್ಡಿ ದರ ಶೇಕಡ 9ರಷ್ಟು ಮತ್ತು 750-800ರ ಕ್ರೆಡಿಟ್ ಸ್ಕೋರ್ ಇದ್ದವರಿಗೆ 9.10%ರ ಬಡ್ಡಿ ವಿಧಿಸಲಾಗುತ್ತದೆ.


ಬ್ಯಾಂಕ್ ಆಫ್ ಬರೋಡ 

ಬ್ಯಾಂಕ್ ಆಫ್ ಬರೋಡ ಗೃಹ ಸಾಲದ ಮೇಲೆ 8.40% ನಿಂದ 10.60% ಬಡ್ಡಿದರ ವಿಧಿಸುತ್ತದೆ. ಈ ದರಗಳು ಮಾಸಿಕ ನಿಶ್ಚಿತ ಸಂಬಳ ಪಡೆಯುವ ಮತ್ತು ಸಂಬಳ ಪಡೆಯದೇ ಕೃಷಿ, ಸ್ವಯಂ ಉದ್ಯೋಗ ಇತ್ಯಾದಿ ಆದಾಯ ಮೂಲ ಹೊಂದಿರುವ ವ್ಯಕ್ತಿಗಳಿಗೆ ಅನುಗುಣವಾಗಿ ವಿಧಿಸಲಾಗುವುದು.


ಪಂಜಾಬ್ ನ್ಯಾಷನಲ್ ಬ್ಯಾಂಕ್ 

ಪಂಜಾಬ್ ನ್ಯಾಷನಲ್ ಬ್ಯಾಂಕ್ ತನ್ನ ಗ್ರಾಹಕರಿಗೆ ಗೃಹ ಸಾಲದ ಮೇಲೆ ಬಡ್ಡಿದರವನ್ನು ಶೇಕಡ 8.40 ರಿಂದ ಶೇಕಡ 10.10ರ ವರೆಗೆ ವಿಧಿಸುತ್ತ್ತದೆ. ಈ ಬಡ್ಡಿ ದರವನ್ನು ಎಲ್‌ಟಿವಿ ಅನುಪಾತ ಮತ್ತೊಂದು ಕ್ರೆಡಿಟ್ ಸ್ಕೋರ್ ಆಧಾರದ ಮೇಲೆ ನೀಡುತ್ತದೆ.

 

ಹೆಚ್‌ಡಿಎಫ್‌ಸಿ ಬ್ಯಾಂಕ್ 

ಕೊನೆಯದಾಗಿ ಹೆಚ್‌ಡಿಎಫ್‌ಸಿ ಬ್ಯಾಂಕ್ ಗ್ರಾಹಕರಿಗೆ ಗೃಹ ಸಾಲದ ಮೇಲೆ ಬಡ್ಡಿ ದರವನ್ನು ನೋಡುವುದಾದರೆ, ಶೇಕಡಾ 8.50 ರಿಂದ 9.15ರ ವರೆಗೆ ಬಡ್ಡಿ ದರವನ್ನು ಗೃಹ ಸಾಲದ ಮೇಲೆ ವಿಧಿಸುತ್ತಿದ್ದು; ಯಥಾಪ್ರಕಾರ ಈ ದರವು ವಿವಿಧ ಆಧಾರದ ಮೇಲೆ ಅನ್ವಯವಾಗಿರುತ್ತದೆ.


Most Popular

Related Posts