ನಾಟಿ ಹಸುಗಳ ಸಗಣಿಯಲ್ಲಿದೆ ಸಂಪತ್ತು | ಹಾಲಿಗಿಂತ ಸಗಣಿಗೇ ಹೆಚ್ಚು ಬೆಲೆ Importance of indian cattle dung

AGRICULTURE
16 August 2024

ನಾಟಿ ಹಸುಗಳ ಸಗಣಿಯಲ್ಲಿದೆ ಸಂಪತ್ತು | ಹಾಲಿಗಿಂತ ಸಗಣಿಗೇ ಹೆಚ್ಚು ಬೆಲೆ Importance of indian cattle dung
WhatsApp Group Join Now
Telegram Group Join Now

Importance of indian cattle dung : ನಮ್ಮ ನಾಟಿ ತಳಿ ಹಸು, ಎಮ್ಮೆ, ದನಕರುಗಳನ್ನು ನಡೆದಾಡುವ ಗೊಬ್ಬರ ಕಾರ್ಖಾಗಳೆಂದರೆ ತಪ್ಪಿಲ್ಲ. ನಾಟಿ ದನಗಳ ಸಗಣಿ-ಗಂಜಲದ ಮಹತ್ವವೇನು? ಅದರಿಂದ ರೈತರಿಗಾಗುವ ಪ್ರಯೋಜನಗಳ ಮಾಹಿತಿ ಇಲ್ಲಿದೆ...


ಈಚೆಗೆ ಭಾರತದ 192 ಮೆಟ್ರಿಕ್ ಟನ್ ನಾಟಿ ದನಗಳ ಸಗಣಿ ಕುವೈತ್ ದೇಶಕ್ಕೆ ರಫ್ತು ಮಾಡಲಾಗಿತ್ತು. ಕುವೈತ್ ಅನೇಕ ಬಾರಿ ಹೀಗೆ ಭಾರತದ ನಾಟಿ ಹಸುಗಳ ಸಗಣಿ ಆಮದು ಮಾಡಿಕೊಂಡದ್ದಿದೆ. ಅಲ್ಲಿನ ಖರ್ಜೂರದ ಬೆಳೆಗೆ ಪೌಡರ್ ರೂಪದಲ್ಲಿ ನಾಟಿ ದನಗಳ ಸಗಣಿಯನ್ನು ಬಳಸುವುದರಿಂದ ಹಣ್ಣಿನ ಗಾತ್ರ ಹಾಗೂ ಇಳುವರಿಯಲ್ಲಿ ನಿರೀಕ್ಷಿತ ಹೆಚ್ಚಳ ಕಂಡು ಬಂದಿರುವುದರ ಬಗ್ಗೆ ಕುವೈತ್‌ನ ಕೃಷಿ ವಿಜ್ಞಾನಿಗಳು ವ್ಯಾಪಕ ಸಂಶೋಧನೆ ನಡೆಸಿದ್ದಾರೆ. 


ಆದರೆ ಕುವೈತ್’ನಲ್ಲಿ ಸಾಕಷ್ಟು ನಾಟಿ ದನಗಳು ಲಭ್ಯವಿಲ್ಲದ ಕಾರಣ ಕುವೈತ್ ಮೂಲದ ಕಂಪನಿ ಲಾಮೋರ್ ಜೈಪುರ ಸಂಸ್ಥೆಯಿ೦ದ 192 ಮೆಟ್ರಿಕ್ ಟನ್ ಸಗಣಿ ಆಮದು ಮಾಡಿಕೊಳ್ಳಲು ಆರ್ಡರ್ ಮಾಡಿತ್ತು. ಈ ವಿದ್ಯಮಾನ ಭಾರತದ ನಾಟಿ ತಳಿ ದನಗಳ ಸಗಣಿ ಮಹತ್ವವನ್ನು ಜಗತ್ತಿಗೆ ಸಾರಿದೆ.


ಇದನ್ನೂ ಓದಿ: ರೈತರೇ ಕೀಟನಾಶಕಗಳ ವಿಷಜಾಲದಿಂದ ಹೊರಬಂದು ಬಳಸಿ ನೈಸರ್ಗಿಕ ಕೀಟ ಹತೋಟಿ ತಂತ್ರ 


ನಾಟಿದನಗಳ ಸ-ಗಣಿ ಸಂಪತ್ತು...

ಹಾಗೇ ನೋಡಿದರೆ ನಮ್ಮ ನಾಟಿ ದನಗಳು ಕರುಣಿಸುವ ದೊಡ್ಡ ವರವೆಂದರೆ ಅದು ಸಗಣಿ. ಈ ನಾಟಿ ಹಸುಗಳ ಸರಾಸರಿ ಹಾಲು ಉತ್ಪಾದನೆ ಸಾಮರ್ಥ್ಯ ಆರು ಲೀಟರ್. ಆದರೆ ಕನಿಷ್ಠ ಹತ್ತು ಕೆಜಿ ಸೆಗಣಿಯನ್ನು ಅವು ನೀಡುತ್ತವೆ ಎಂಬ ಅಂದಾಜಿದೆ. ಭಾರತದಲ್ಲಿ ಮೂವತ್ತು ಕೋಟಿಗೂ ಹೆಚ್ಚು ಎಮ್ಮೆ, ದನಕರುಗಳಿವೆ. ಅಂದರೆ ಸುಮಾರು 240 ಮಿಲಿಯನ್ ಟನ್‌ನಷ್ಟು ಸೆಗಣಿಯನ್ನು ನೀಡುತ್ತವೆ.


ಭಾರತದ ರಸಗೊಬ್ಬರ ಕಾರ್ಖಾನೆಗಳ ಉತ್ಪಾದನೆ ಸಾಮರ್ಥ್ಯ ಅಂದಾಜು 325 ಲಕ್ಷ ಟನ್ನಿನಷ್ಟಿದೆ. ಅಂದರೆ ನಮ್ಮ `ನಡೆದಾಡುವ ಗೊಬ್ಬರ ಕಾರ್ಖಾನೆಗಳು’ ಅಂದರೆ ಎಮ್ಮೆ ಹಸು ದನಕರುಗಳು ಎಷ್ಟು ರಸಗೊಬ್ಬರ ಕಾರ್ಖಾನೆಗಳಿಗೆ ಸಮ ಎಂಬುವುದನ್ನು ಅಂದಾಜಿಸಿ. ಆದರೆ ಇಂತಹ ಸಿದ್ಧಗೊಬ್ಬರದ ಬಗ್ಗೆ ನಮ್ಮ ಗಮನ ನೀಡದೇ, ಹಾಲು ನೀಡುವ ವಿಷಯದಲ್ಲಿ ನಾಟಿ ತಳಿಗಳು ಕಳಪೆ ಎಂಬ ಭಾವನೆ ನಮ್ಮಲ್ಲಿದೆ. ನಮ್ಮ ರಾಜ್ಯದಲ್ಲಿರುವ ದೇಸೀ ತಳಿಗಳನ್ನು ನೋಡಿದರೆ, ಅದು ನಿಜ ಕೂಡ.


ಇದನ್ನೂ ಓದಿ: ಕೃಷಿ ಇಲಾಖೆಯಲ್ಲಿ 600ಕ್ಕೂ ಹೆಚ್ಚು ಹುದ್ದೆಗಳ ನೇಮಕಾತಿ | ಯಾವೆಲ್ಲ ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ? 


ಹಾಲಿಗಿಂತ ಸಗಣಿಗೇ ಹೆಚ್ಚು ಬೆಲೆ

ಕರ್ನಾಟಕದಲ್ಲಿ ಚಾಲ್ತಿಯಲ್ಲಿರುವ ದೇಸೀ ಗೋ ತಳಿಗಳಲ್ಲಿ ಹೆಚ್ಚಿನ ಹಾಲು ನೀಡುವ ಶಕ್ತಿ ಇಲ್ಲ. ಈ ನಾಟಿ ತಳಿ ಹಸುಗಳು ತನ್ನ ಕರು ಸತ್ತರೆ ಹಾಲು ನೀಡದ ಸಿಡುಕಿನ ಸ್ವಭಾವದವು. ಈ ಕಾರಣಕ್ಕೆ ಬಕೇಟುಗಟ್ಟಲೇ ಹಾಲು ಕೊಡುವ ಶಾಂತ ಸ್ವಭಾವದ ವಿದೇಶಿ ಮೂಲದ ಜರ್ಸಿ, ಎಚ್‌ಎಫ್ ಹಸುಗಳ ಸಂಖ್ಯೆ ವಿಪರೀತ ಹೆಚ್ಚುತ್ತಿದೆ.


ಇದರಿಂದ ರಾಜ್ಯದ ಹಾಲಿನ ಉತ್ಪನ್ನ ಗಣನೀಯ ಪ್ರಮಾಣದಲ್ಲಿ ಹೆಚ್ಚಿರುವುದು ಸತ್ಯ. ಆದರೆ, ಹೈಬ್ರಿಡ್ ತಳಿಗಳಿಗೆ ಬರುವ ರೋಗಗಳು, ದುಬಾರಿ ಪಶು ಆಹಾರ ಇವುಗಳ ಕಾರಣದಿಂದ ರೈತರು ಸಾಕಷ್ಟು ಕಷ್ಟಪಡಬೇಕಿದೆ. ಕೇವಲ ಹಾಲಿನ ಉದ್ದೇಶಕ್ಕಾಗಿ ನಮ್ಮಲ್ಲಿ ಇಂದು ಹಸುಗಳನ್ನು ಸಾಕುತ್ತಿರುವುದರಿಂದ ನಾಟಿ ತಳಿಗಳು ನಶಿಸುವ ಹಂತದಲ್ಲಿವೆ. ಆದರೆ, ನಾಟಿ ದನಗಳ ಹಾಲಿಗಿಂತ ಅದರ ಸಗಣಿಯ ಮಹತ್ವದ ಬಗ್ಗೆ ನಮ್ಮಲ್ಲಿ ಅರಿವಿನ ಕೊರತೆ ಸಾಕಷ್ಟಿದೆ.


ಇದನ್ನೂ ಓದಿ: ಅಧಿಕ ಇಳುವರಿಗೆ ತಪ್ಪದೇ ಮಣ್ಣಿನ ಆರೋಗ್ಯ ತಪಾಸಣೆ ಮಾಡಿಸಿ


ಸೆಗಣಿಯಲ್ಲಿದೇ ರೋಗ ನಿರೋಧಕ ಗುಣ

ನಾಟಿ ದನಗಳ ಸಗಣಿಗೆ ಯಾಕಷ್ಟು ಮಹತ್ವವೆಂದರೆ, ನಾಟಿ ತಳಿಗಳಿಗೆ ಹೆಚ್ಚಿನ ರಾಸಾಯನಿಕ ಔಷಧಗಳನ್ನು, ಹಾಲು ಹೆಚ್ಚು ಬರುವ ಸಲುವಾಗಿ ಹಾಮೋನ್ ಇಂಜಕ್ಷನ್ ನೀಡುವುದಿಲ್ಲ. ಇವು ನಿಸರ್ಗ ಸಹಜವಾಗಿಯೇ ಬೆಳೆದಿರುತ್ತವೆ. ಕಾಡು ಮೇಡುಗಳಲ್ಲಿ ಅಲೆದು ಬರುವುದರಿಂದ ಹಲವು ಗಿಡಮೂಲಿಕೆಗಳನ್ನು ತಿನ್ನುವ ಕಾರಣಕ್ಕೆ ಅವುಗಳ ಗಂಜಲ ಮತ್ತು ಸಗಣಿ ಹೆಚ್ಚಿನ ರೋಗ ನಿರೋಧಕ ಗುಣ ಹೊಂದಿರುತ್ತದೆ.


ಪ್ರಮುಖವಾಗಿ ನಾಟಿ ತಳಿಗಳ ಸಗಣಿಯಲ್ಲಿ ಸಾರಜನಕ ಸ್ಥಿರೀಕರಣ ಬ್ಯಾಕ್ಟೀರಿಯಾಗಳು ಹೆಚ್ಚಿನ ಪ್ರಮಾಣದಲ್ಲಿರುತ್ತವೆ. ಒಂದು ಗ್ರಾಂ ಸಗಣಿಯಲ್ಲಿ 300 ರಿಂದ 500ರಷ್ಟು ಬ್ಯಾಕ್ಟೀರಿಯಾಗಳಿರುತ್ತವೆ. ಹೈಬ್ರಿಡ್ ತಳಿಗಳಲ್ಲಿ ಅವುಗಳ ಪ್ರಮಾಣ ಬಹಳ ಕಡಿಮೆ. ಅಲ್ಲದೇ ಗಂಜಲದಲ್ಲಿ ರೋಗ ನಿರೋಧಕ ಶಕ್ತಿ ಎಚ್‌ಎಫ್ ಮತ್ತು ಜರ್ಸಿ ತಳಿಗಿಂತ ಶೇ.30ಕ್ಕಿಂತ ಹೆಚ್ಚಿರುತ್ತದೆ. ಇನ್ನಾದರೂ ನಮ್ಮ ನಾಟಿ ದನಗಳ ಸಗಣಿ ಮಹತ್ವವನ್ನರಿತು ಅದನ್ನು ಸದ್ಭಳಕೆ ಮಾಡಿಕೊಳ್ಳುವ ಜಾಣ್ಮೆಯನ್ನು ನಾವು ತೋರಬೇಕಿದೆ!

Most Popular

Related Posts