ಗೃಹ ಆರೋಗ್ಯ ಯೋಜನೆ ಜಾರಿ: ಇನ್ನು ಮನೆಬಾಗಿಲಲ್ಲೇ ಸಿಗುತ್ತೆ ಚಿಕಿತ್ಸೆ-ಔಷಧಿ Gruha Arogya Scheme Karnataka

GOVT SCHEME
25 August 2024

ಗೃಹ ಆರೋಗ್ಯ ಯೋಜನೆ ಜಾರಿ: ಇನ್ನು ಮನೆಬಾಗಿಲಲ್ಲೇ ಸಿಗುತ್ತೆ ಚಿಕಿತ್ಸೆ-ಔಷಧಿ  Gruha Arogya Scheme Karnataka
WhatsApp Group Join Now
Telegram Group Join Now

Gruha Arogya Scheme Karnataka : ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ ‘ಗೃಹ ಆರೋಗ್ಯ ಯೋಜನೆ’ ಜಾರಿಗೆ ರಾಜ್ಯ ಸರ್ಕಾರ ಮುಂದಾಗಿದೆ. ಇನ್ನು ರಕ್ತದೊತ್ತಡ, ಮಧುಮೇಹ ಸೇರಿದಂತೆ ಮುಂತಾದ ಕಾಯಿಲೆಗಳಿಗೆ ಮನೆ ಬಾಗಿಲಿನಲ್ಲಿ ಚಿಕಿತ್ಸೆ, ಔಷಧಿ ಸಿಗಲಿದೆ. ಈ ಸಂಬ೦ಧ ಸಚಿವ ಸಂಪುಟದಲ್ಲಿ ಈಗಾಗಲೇ ಅನುಮೋದನೆ ದೊರೆತಿದ್ದು; ಮುಂದಿನ ತಿಂಗಳಿನಿ೦ದ ಗೃಹ ಆರೋಗ್ಯ ಯೋಜನೆ ಜಾರಿಯಾಗಲಿದೆ.


ಮನೆ ಬಾಗಿಲಿನಲ್ಲಿಯೇ ಚಿಕಿತ್ಸೆ ಹಾಗೂ ಔಷಧ


ಕರೋನಾ ಮಹಾಮಾರಿಯ ನಂತರ ಕರ್ನಾಟಕವೂ ಸೇರಿದಂತೆ ಸೇರಿದಂತೆ ದೇಶಾದ್ಯಂತ ನಾನಾ ನಮೂನೆ ವೈರಸ್ ಹಾವಳಿ ಶುರುವಾಗಿದೆ. ಅದರಲ್ಲೂ ಕೋಮಾರ್ಬಿಟಿಸ್ ರೋಗಿಗಳು ಸಾಂಕ್ರಾಮಿಕ ಕಾಯಿಲೆಗಳಿಂದ ಪರದಾಡುವಂತಾಗಿದೆ. ಹೆಚ್ಚುತ್ತಿರುವ ಖಾಯಿಲೆಗಳಿಂದ ಜನರ ಆರೋಗ್ಯದ ಸಮಸ್ಯೆಗಳು ಹೆಚ್ಚಾಗುತ್ತಿವೆ.


ಕರ್ನಾಟಕ ರಾಜ್ಯ ಆರೋಗ್ಯ ಇಲಾಖೆಯು ರಕ್ತದೊತ್ತಡ, ಸಕ್ಕರೆ ಕಾಯಿಲೆ, ಕ್ಯಾನ್ಸರ್ ಜತೆಗೆ ಕೋಮಾರ್ಬಿಟಿಸ್ ಹೊಂದಿರುವ ರೋಗಿಗಳ ಪಟ್ಟಿ ಮಾಡಿದ್ದು ಇವರಿಗೆಲ್ಲ ಮನೆ ಬಾಗಿಲಿನಲ್ಲಿಯೇ ಚಿಕಿತ್ಸೆ ಹಾಗೂ ಔಷಧ ನೀಡುವ ‘ಗೃಹ ಆರೋಗ್ಯ ಯೋಜನೆ’ ಜಾರಿಯಾಗಲಿದೆ.


ಇದನ್ನೂ ಓದಿ: ಗ್ರಾಮ ಆಡಳಿತ ಅಧಿಕಾರಿ ಹುದ್ದೆಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ಮಹತ್ವದ ಮಾಹಿತಿ


ಯಾರಿಗೆಲ್ಲ ಮನೆಯಲ್ಲೇ ಚಿಕಿತ್ಸೆ?


ಹೃದಯ, ಕಿಡ್ನಿ, ಕ್ಯಾನ್ಸರ್, ಬಿಪಿ, ಮಧುಮೇಹ, ಇಸಿಜಿ ಸೇರಿದಂತೆ ಎಲ್ಲಾ ರೀತಿಯ ಆರೋಗ್ಯ ತಪಾಸಣೆ ನಡೆಸಿ ಆಯ್ದ ಸಮಸ್ಯೆಗಳಿಗೆ ಸ್ಥಳದಲ್ಲೇ ಔಷಧಗಳನ್ನು ಉಚಿತವಾಗಿ ನೀಡಲು ಇಲಾಖೆ ಮುಂದಾಗಿದೆ. ಮುಂದಿನ ತಿಂಗಳಿನಿ೦ದ ರಾಜ್ಯದ ಜನರಿಗೆ ಮನೆ ಮನೆಗೆ ಕ್ಲಿನಿಕ್ ಸೇವೆ ನೀಡಲು ಇಲಾಖೆ ಯೋಜನೆ ಹಾಕಿಕೊಂಡಿದೆ.


ಚಿಕಿತ್ಸೆ ಜೊತೆ ಉಚಿತ ಔಷಧಿಯೂ ಮನೆಬಾಗಿಲಿಗೆ ಬರಲಿದೆ. ಈ ಯೋಜನೆಗಾಗಿ ಪ್ರತ್ಯೇಕ ಸಿಬ್ಬಂದಿ, ವೈದ್ಯರ ನೇಮಕಾತಿಗೆ ಸರ್ಕಾರ ಮುಂದಾಗಿದೆ. ಆರಂಭದಲ್ಲಿಯೇ ಖಾಯಿಲೆ ಪತ್ತೆ ಹಚ್ಚಿ ಚಿಕಿತ್ಸೆ ನೀಡುವ ಮೂಲಕ ಬಡ ಜನರ ಸಾವಿನ ಪ್ರಮಾಣ ಕಡಿಮೆ ಮಾಡಿ ಉತ್ತಮ ಆರೋಗ್ಯ ಇರುವಂತೆ ನೋಡಿಕೊಳ್ಳುವ ಉದ್ದೇಶವಾಗಿದೆ.


ಇದನ್ನೂ ಓದಿ: ಅತಿಥಿ ಉಪನ್ಯಾಸಕರಿಗೆ ವೇತನ ಹೆಚ್ಚಳ | ಯಾರಿಗೆ ಎಷ್ಟು ಸಂಬಳ ನಿಗದಿಯಾಗಿದೆ? Salary increase for guest lecturers

Most Popular

Related Posts