ಮಾವಿನ ಮರಗಳ ಇಳುವರಿ ಹೆಚ್ಚಳಕ್ಕೆ ವಿಜ್ಞಾನಿಗಳ ಹೊಸ ಸಂಶೋಧನೆ How to Increase Mango Yield
AGRICULTURE
12 September 2024
How to Increase Mango Yield : ರಾಜ್ಯದಲ್ಲಿ ವರ್ಷದಿಂದ ವರ್ಷಕ್ಕೆ ಮಾವು ಬೆಳೆ (Mango Crop) ಕುಂಠಿತವಾಗುತ್ತಿದೆ. ಈ ಹಿನ್ನಲೆಯಲ್ಲಿ ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮದ (Karnataka State Mango Development and Marketing Corporation Ltd - KSMD) ವಿಜ್ಞಾನಗಳು ಸಂಶೋಧಿಸಿರುವ ಮಾವಿವನ ಇಳುವರಿ ಹೆಚ್ಚಿಸುವ ಹೊಸ ವಿಧಾನಗಳು ಇಲ್ಲಿದೆ...
ವೈವಿಧ್ಯಮಯ ತಳಿ, ಬಗೆಬಗೆ ಗಾತ್ರ, ಮನ ಸೆಳೆಯುವ ಸುವಾಸನೆ ಹಾಗೂ ರುಚಿಯಿಂದಾಗಿ ಹಣ್ಣುಗಳ ರಾಜನೆಂದೇ ಪರಿಗಣಿಸಲಾಗುವ ಮಾವು ಎಲ್ಲರಿಗೂ ಅಚ್ಚುಮೆಚ್ಚು. ವ್ಯಾಪ್ತಿ ಹಾಗೂ ಉತ್ಪಾದನೆಯಲ್ಲಿ ದೇಶದಲ್ಲಿಯೇ ಈ ಹಣ್ಣು ಅಗ್ರಸ್ಥಾನದಲ್ಲಿದೆ. ರಾಜ್ಯದಲ್ಲಿ ಮಾವಿನ ಸ್ಥಾನ ಇತರೆಲ್ಲ ಹಣ್ಣುಗಳಿಗಿಂತ ಹೆಚ್ಚಿನದು.
ರಾಜ್ಯದಲ್ಲಿ 1.62 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಮಾವು (Mango Crop) ಬೆಳೆಯಲಾಗುತ್ತಿದೆ. ರಾಜ್ಯದಲ್ಲಿ ಚಿಕ್ಕಬಳ್ಳಾಪುರ, ಕೋಲಾರ, ರಾಮನಗರ, ಬೆಂಗಳೂರು ಗ್ರಾಮಾಂತರ, ಬೆಳಗಾವಿ, ಧಾರವಾಡ, ಹಾವೇರಿ, ಗದಗ ಹೆಚ್ಚು ಮಾವು ಬೆಳೆಯುವ ಜಿಲ್ಲೆಗಳಾಗಿವೆ. ಸುಮಾರು 60 ಸಾವಿರ ರೈತರು ಮಾವಿನ ಕೃಷಿಯಲ್ಲಿ ನೇರವಾಗಿ ತೊಡಗಿಸಿಕೊಂಡಿದ್ದಾರೆ.
ವಿಶೇಷವಾಗಿ ಮಾವಿನ ಬೇಸಾಯದಲ್ಲಿ (Mango Cultivation) ಕೋಲಾರ, ಧಾರವಾಡ ಮತ್ತು ಬೆಳಗಾವಿ ಜಿಲ್ಲೆಗಳ ರೈತರು ಹೆಚ್ಚಿನ ಪ್ರಮಾಣದಲ್ಲಿ ತೊಡಗಿಸಿಕೊಂಡಿದ್ದು, ಆಧುನಿಕ ಬೇಸಾಯ ಪದ್ಧತಿಗಳನ್ನು ಅಳವಡಿಸಿಕೊಂಡಿದ್ದಾರೆ. ಆದರೆ ಇವರಿಗೆ ಮಾವು ನಲಿವಿಗಿಂತ ನೋವನ್ನೇ ಹೆಚ್ಚು ಉಣಿಸುತ್ತಿರುವುದು ಇತ್ತೀಚಿನ ದೌರ್ಭಾಗ್ಯವೆನ್ನಬೇಕು.
ಇದನ್ನೂ ಓದಿ: ನಾಟಿ ಹಸುಗಳ ಸಗಣಿಯಲ್ಲಿದೆ ಸಂಪತ್ತು | ಹಾಲಿಗಿಂತ ಸಗಣಿಗೇ ಹೆಚ್ಚು ಬೆಲೆ Importance of indian cattle dung
ಅತಿವೃಷ್ಟಿ, ಅನಾವೃಷ್ಟಿ, ಕೀಟ ರೋಗ ಬಾಧೆ, ಹವಾಮಾನ ವೈಪರೀತ್ಯ, ಮಾರುಕಟ್ಟೆ ಸಮಸ್ಯೆ ಸೇರಿದಂತೆ ಒಂದಿಲ್ಲೊ೦ದು ಸಂಕಷ್ಟವನ್ನು ಪ್ರತಿ ವರ್ಷವೂ ಮಾವು ಬೆಳೆಗಾರರು ಎದುರಿಸುವಂತಾಗಿದೆ. ಇದೇ ಕಾರಣಕ್ಕೆ ರಾಜ್ಯದಲ್ಲಿ ವರ್ಷದಿಂದ ವರ್ಷಕ್ಕೆ ಮಾವು ಬೆಳೆ (Mango Yield Deficiency) ಕುಂಠಿತವಾಗುತ್ತಿದೆ. ಈ ಹಿನ್ನಲೆಯಲ್ಲಿ ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮದ ವಿಜ್ಞಾನಗಳು ಮಾವಿನ ಮರಗಳ ಇಳುವರಿ ಹೆಚ್ಚಿಸಲು ಹೊಸ ಸಂಶೋಧನೆ ನಡೆಸಿದ್ದಾರೆ.
ವಯಸ್ಸಾದ ಮಾವಿನ ಮರಗಳ ರೆಂಬೆಗಳನ್ನು ಕತ್ತರಿಸಿದರೆ ಇಳುವರಿ ಹೆಚ್ಚಳವಾಗಲಿದೆ. ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮವು ಅಕ್ಟೋಬರ್ ಒಳಗೆ ಈ ಪ್ರಕ್ರಿಯೆ ನಡೆಸಬೇಕು ಎಂದು ಮಾವು ಬೆಳೆಗಾರರಿಗೆ ಮನವಿ ಮಾಡಿದೆ.
ಬಾಗಲಕೋಟೆಯ ತೋಟಗಾರಿಕಾ ಕಾಲೇಜು (University of Horticultural Sciences Bagalkot) ರಾಜ್ಯದ 2 ಲಕ್ಷ ಹೆಕ್ಟೇರ್ ಮಾವು ಬೆಳೆಯುವ ಪ್ರದೇಶದಲ್ಲಿ ಸಮೀಕ್ಷೆ ನಡೆಸಿದೆ. ಇದರಲ್ಲಿ 15-20 ವರ್ಷ ವಯಸ್ಸಾದ ಮರಗಳಲ್ಲಿ ಹೆಚ್ಚಿನ ಮಾವಿನ ಕಾಯಿಗಳು ಸಿಗುತ್ತಿಲ್ಲ ಎಂಬುದು ದೃಢಪಟ್ಟಿದೆ. 15 ವರ್ಷ ಮೇಲ್ಪಟ್ಟ ಪ್ರತಿ ಮರಗಳಲ್ಲಿ ಶೇ.40 ರಷ್ಟು ಇಳುವರಿ ಕುಸಿಯುತ್ತಿದೆ.
ಇದನ್ನು ಮರಳಿ ಪಡೆಯಲು ಮರದ ಒಂಬೆ, ಎಲೆಗಳನ್ನು ತೆಗೆದು ಚಿಗುರುವಂತೆ ಮಾಡಬೇಕು. ಅಕ್ಟೋಬರ್ ಒಳಗಾಗಿ ಮಾವು ಬೆಳೆಗಾರರು ಎಲೆ, ಕೊಂಬೆ ತೆಗೆದು ಹಾಕುವ ಕೆಲಸ ಮಾಡಬೇಕು ಎಂದು ನಿಗಮ ತಿಳಿಸಿದೆ.
ಇದನ್ನೂ ಓದಿ: ಅಧಿಕ ಇಳುವರಿಗೆ ತಪ್ಪದೇ ಮಣ್ಣಿನ ಆರೋಗ್ಯ ತಪಾಸಣೆ ಮಾಡಿಸಿ Soil Health Check
ನಿಗಮದ ಅಧ್ಯಕ್ಷರು ‘2 ಲಕ್ಷ ಹೆಕ್ಟೇರ್‌ನಲ್ಲಿ ಶೇ.60ರಷ್ಟು ಮರಗಳು ಹಳೆಯ ಮರಗಳಾಗಿವೆ. ಇವುಗಳು ಹೆಚ್ಚು ಇಳುವರಿ ನೀಡಲು ರೈತರು ಕೊಂಬೆ, ಹಳೆ ಎಲೆಗಳನ್ನು ಸವರುವ (ತೆಗೆದು ಹಾಕುವ) ಕೆಲಸ ಮಾಡಬೇಕು. ಮಣ್ಣು, ನೀರಿನ ಸಂರಕ್ಷಣಾ ಕ್ರಮ, ಸುಣ್ಣ ಬಳಸುವುದು, ಕಾಂಡ ರಕ್ಷಕ ಪೇಸ್ಟ್ ಹಚ್ಚುವುದು, ಕೀಟ ಹಾಗೂ ರೋಗ ನಿಯಂತ್ರಕ ಕ್ರಮಗಳನ್ನು ಕೈಗೊಳ್ಳುವುದು ಕೂಡಾ ಅಗತ್ಯವಾಗಿದೆ’ ಎನ್ನುತ್ತಾರೆ.
ಸಾಮಾನ್ಯವಾಗಿ 4-5 ವರ್ಷಗಳಲ್ಲಿ ಮಾವಿನ ಮರ ಉತ್ತಮ ಇಳುವರಿ ನೀಡಲು ಆರಂಭಿಸುತ್ತದೆ. ಆದರೆ ಎಲೆಗಳು ದಟ್ಟವಾಗಿ ಹಬ್ಬಿದಾಗ ಒಳಗೆ ಬೆಳಕು ಹೋಗದ ಇಳುವರಿ ಕಡಿಮೆಯಾಗುತ್ತದೆ. ಹಳೆ ಎಲೆ, ಕೊಂಬೆಗಳು ಕೂಡಾ ಇಳುವರಿ ಕಡಿಮೆಯಾಗುವಂತೆ ಮಾಡುತ್ತದೆ.
ಹೊಸ ಚಿಗುರು ಬಂದಾಗ ಮಾವಿನ ಇಳುವರಿ ಹೆಚ್ಚಾಗುತ್ತದೆ. ಇದರ ಜತೆಗೆ ಮರಕ್ಕೆ ಹೆಚ್ಚು ಪೌಷ್ಟಿಕಾಂಶ ಪೂರೈಸುವ ಕೆಲಸವೂ ನಡೆಯಬೇಕು. ಹಳೆಯ ಮರಗಳನ್ನು ಪುನಶ್ಚೇತನಗೊಳಿಸದೇ ಇರುವುದಿರುವುದೂ ಇದಕ್ಕೆ ಕಾರಣ ಎನ್ನುವುದು ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮದ ವಿಜ್ಞಾನಿಗಳ ಅಭಿಪ್ರಾಯವಾಗಿದೆ.
Most Popular
- ಏಕೀಕೃತ ಪಿಂಚಣಿ ಯೋಜನೆ : ಸರ್ಕಾರಿ ನೌಕರರಿಗೆ ಇದರ ಪ್ರಯೋಜನಗಳೇನು? Unified Pension Scheme for Govt Employees
- ಇನ್ಮುಂದೆ ಇಂಟರ್ನೆಟ್ ಇಲ್ಲದೇ ಮೊಬೈಲ್ನಲ್ಲೇ ನೋಡಿ ನಿಮ್ಮಷ್ಟದ ಟಿವಿ ಚಾನೆಲ್ D2M Technology Prasar Bharati experiment
- ಅತಿಥಿ ಉಪನ್ಯಾಸಕರಿಗೆ ವೇತನ ಹೆಚ್ಚಳ | ಯಾರಿಗೆ ಎಷ್ಟು ಸಂಬಳ ನಿಗದಿಯಾಗಿದೆ? Salary increase for guest lecturers
- ವಾಟ್ಸಾಪ್ನಿಂದ ಕೂತಲ್ಲೇ ಸಿಗುತ್ತವೆ ಈ ಎಲ್ಲ ಸೇವೆಗಳು | ಈಗಲೇ ಟ್ರೈ ಮಾಡಿ... Other services of WhatsApp
- ಸ್ವಂತ ಮನೆ ಕಟ್ಟಿಕೊಳ್ಳಲು ಕೇಂದ್ರ ಸರಕಾರದಿಂದ ಆರ್ಥಿಕ ನೆರವು | ಅರ್ಜಿ ಸಲ್ಲಿಸುವ ಮಾಹಿತಿ ತಿಳಿಯಿರಿ Pradhanmantri Aawas Yojana Home
- ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ ಹುದ್ದೆಗಳಿಗೆ ಅರ್ಜಿ ಆಹ್ವಾನ | ಸಂಬಳ 30,000 ರೂಪಾಯಿ India Post Payments Bank (IPPB) Recruitment 2024
- ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಪಡೆಯಲು ನಿಮ್ಮ ಮೊಬೈಲ್ನಲ್ಲಿಯೇ ಅರ್ಜಿ ಸಲ್ಲಿಸಿ... Caste and Income Certificate Apply Online
- ಗ್ರಾಮೀಣ ಜನರಿಗಾಗಿ ಇರುವ ಬಂಪರ್ ಪೋಸ್ಟಾಫೀಸ್ ಸ್ಕೀಮ್ | ₹1500 ಹೂಡಿಕೆ ಮಾಡಿ ₹35 ಲಕ್ಷ ಪಡೆಯಿರಿ... Rural Postal Life Insurance - RPLI
- 17,727 ಕೇಂದ್ರ ಸರ್ಕಾರಿ ಹುದ್ದೆಗಳ ಬೃಹತ್ ನೇಮಕಾತಿಗೆ ಅರ್ಜಿ ಆಹ್ವಾನ | ಪದವೀಧರರಿಗೆ ಭರ್ಜರಿ ಅವಕಾಶ SSC CGL Recruitment 2024
- ಎಸ್ಬಿಐ ಆಶಾ ವಿದ್ಯಾರ್ಥಿವೇತನ | ಶಾಲೆ, ಪಿಯುಸಿ, ಪದವಿ ವಿದ್ಯಾರ್ಥಿಗಳಿಗೆ 15,000 ದಿಂದ 7.5 ಲಕ್ಷ ವರೆಗೆ ನೆರವು SBIF Asha Scholarship Program 2024