ಇನ್ಮುಂದೆ ಇಂಟರ್‌ನೆಟ್ ಇಲ್ಲದೇ ಮೊಬೈಲ್‌ನಲ್ಲೇ ನೋಡಿ ನಿಮ್ಮಷ್ಟದ ಟಿವಿ ಚಾನೆಲ್ D2M Technology Prasar Bharati experiment

TECHNOLOGY
22 October 2024

ಇನ್ಮುಂದೆ ಇಂಟರ್‌ನೆಟ್ ಇಲ್ಲದೇ ಮೊಬೈಲ್‌ನಲ್ಲೇ ನೋಡಿ ನಿಮ್ಮಷ್ಟದ ಟಿವಿ ಚಾನೆಲ್ D2M Technology Prasar Bharati experiment
WhatsApp Group Join Now
Telegram Group Join Now

ಇಂದಿನ ಆಧುನಿಕ ತಂತ್ರಜ್ಞಾನದ (Modern technology) ಯುಗದಲ್ಲಿ ಬಹುತೇಕ ಸಾಧನಗಳ ಬಳಕೆಗೆ ಇಂಟರ್‌ನೆಟ್ (Internet) ಅನಿವಾರ್ಯವಾಗಿದೆ. ರೀಚಾರ್ಜ್’ಗಾಗಿ ಹಣ ಪಾವತಿಸಿದರೆ ಮಾತ್ರ ಜಾಲತಾಣಗಳ ಮೂಲಕ ಮೀಡಿಯಾ, ಮನರಂಜನೆ ಹಾಗೂ ಸೋಷಿಯಲ್ ಮೀಡಿಯಾ ಸಕ್ರೀಯವಾಗುತ್ತವೆ.


ಇನ್ನು ಮನೆಯಲ್ಲಿ ಕುಳಿತು ಸಿನಿಮಾ, ನ್ಯೂಸ್, ಧಾರಾವಾಹಿ ನೋಡಲು ಅಗತ್ಯವಾಗಿ ಟಿವಿ ಬೇಕು. ಇದರಲ್ಲಿ ಕೆಲವನ್ನು ಹೊರತುಪಡಿಸಿ ಬಹುತೇಕ ಚಾನೆಲ್‌ಗಳಿಗೆ ಹಣ ಪಾವತಿಸಬೇಕು. ಆದರೆ, ಆದರೆ ಟಿವಿ ಇಲ್ಲದೇ, ಇಂಟರ್‌ನೆಟ್ ಕೂಡ ಇಲ್ಲದೇ ಮೊಬೈಲ್‌ನಲ್ಲಿಯೇ ನಮ್ಮಿಷ್ಟದ ಚಾನೆಲ್ ನೋಡಲು ಇನ್ನು ಸಾಧ್ಯವಾಗಲಿದೆ.


ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ ಹುದ್ದೆಗಳಿಗೆ ಅರ್ಜಿ ಆಹ್ವಾನ | ಸಂಬಳ 30,000 ರೂಪಾಯಿ India Post Payments Bank (IPPB) Recruitment 2024


D2M Technology ಪ್ರಯೋಗ


ಹೌದು, ಡೈರೆಕ್ಟ್-ಟು-ಮೊಬೈಲ್ (Direct to Mobile - D2M) ತಂತ್ರಜ್ಞಾನದ ಪ್ರಯೋಗ ಆರಂಭಗೊAಡಿದ್ದು; ಇದು ಸಾಧ್ಯವಾದರೆ ಇಂಟರ್ನೆಟ್ ಸಂಪರ್ಕವಿಲ್ಲದಿದ್ದರೂ ಮೊಬೈಲ್ ಫೋನ್‌ನಲ್ಲೇ ಟಿವಿ ಚಾನೆಲ್‌ಗಳನ್ನು ವೀಕ್ಷಿಸಲು ಸಾಧ್ಯವಾಗಲಿದೆ. ಸ್ಮಾರ್ಟ್ ಫೋನ್‌ಗಳಲ್ಲಿ ಲೈವ್ ಟಿವಿ ಚಾನೆಲ್‌ಗಳ ಪ್ರಸಾರ ಸಾಧ್ಯವಾಗಿಸುವ ಹೊಸ ಪ್ರಯತ್ನಕ್ಕೆ ‘ಪ್ರಸಾರ ಭಾರತಿ’ ಮುಂದಾಗಿದೆ.


‘ಐಐಟಿ-ಕಾನ್ಪುರ’ (IIT-Kanpur) ಮತ್ತು ‘ಸಾಂಖ್ಯ ಲ್ಯಾಬ್’ (Sankhya Lab) ಸಹಯೋಗದಲ್ಲಿ ದೆಹಲಿ ಮತ್ತಿತರ ಮಹಾನಗರಗಳಲ್ಲಿ ಗರಿಷ್ಠ ಮತ್ತು ಕನಿಷ್ಠ ಶಕ್ತಿಯ ಟ್ರಾನ್ಸ್ ಮೀಟರ್‌ಗಳನ್ನು ಅಳವಡಿಸಿ ಪ್ರಯೋಗಗಳನ್ನು ನಡೆಸಲಾಗುತ್ತಿದೆ. ಈ ಪ್ರಯೋಗ ಫಲಿಸಿದರೆ ‘ಇಂಟರ್ನೆಟ್ ಸಂಪರ್ಕ’ ಇಲ್ಲದ ಮೊಬೈಲ್ ಫೋನ್’ನಲ್ಲಿಯೂ ಸುದ್ದಿವಾಹಿನಿ, ಮನರಂಜನಾ ವಾಹಿನಿಗಳ ವೀಕ್ಷಣೆ ಸಾಧ್ಯವಾಗಲಿದೆ ಎಂದು ಪ್ರಸಾರ ಸಚಿವಾಲಯದ ಅಧಿಕಾರಿಗಳು ಹೇಳಿದ್ದಾರೆ.


ಬ್ಯಾಂಕುಗಳಿಗೆ ಇನ್ನು ವಾರದಲ್ಲಿ ಎರಡು ದಿನ ರಜೆ Two Bank Holidays in a Week


‘D2M’ ಪ್ರಯೋಗ ಯಶಸ್ವಿ


ಈಗಾಗಲೇ ಐಐಟಿ-ಕಾನ್ಸುರ ನಡೆಸಿದ ‘D2M’ ಪ್ರಯೋಗ ಯಶಸ್ವಿಯಾಗಿದೆ. ಅದೇ ತಂತ್ರಜ್ಞಾನವನ್ನು ಮತ್ತಷ್ಟು ಸರಳವಾಗಿಸಲು ಸೆಲ್ಯುಲರ್ ಟವರ್‌ಗಳಲ್ಲಿ ಟ್ರಾನ್ಸ್ಮೀಟರ್‌ಗಳ ಅಳವಡಿಕೆ ಮತ್ತು ಸ್ಮಾರ್ಟ್ ಫೋನ್‌ಗಳಲ್ಲಿ ವಿಶಿಷ್ಟ ಚಿಪ್‌ಗಳ ಜೋಡಣೆ ಮಾಡಬೇಕಿದೆ. ಏಕೆಂದರೆ ಟಿವಿ-ರೇಡಿಯೊದಲ್ಲಿ ಬಳಸುವಂತಹ ಬ್ರಾಡ್‌ಕ್ಯಾಸ್ಟ್ ಸಿಗ್ನಲ್ (Broadcast signal) ಬಳಸಿ ಮೊಬೈಲ್ ಫೋನ್‌ಗೆ ಟಿವಿ ಪ್ರಸಾರ ನೇರ ತಲುಪುವಂತೆ ಮಾಡಲಾಗುತ್ತಿದೆ.


ಈ ಸಿಗ್ನಲ್ ಸ್ವೀಕರಿಸಿ ಡಿಕೋಡ್ ಮಾಡಲು ಫೋನ್‌ಗಳಲ್ಲಿ ನಿರ್ದಿಷ್ಟ ಹಾರ್ಡ್ವೇರ್‌ನ ಅಗತ್ಯವಿದೆ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. ತಂತ್ರಾ೦ಶಗಳು ಗುಣಮಟ್ಟದ ವಿಡಿಯೊ, ಆಡಿಯೊ ಸ್ಟೀಮಿಂಗ್ ಸಕ್ರಿಯಗೊಳಿಸಬಹುದು. ಏಕೆಂದರೆ ಇದು ಇಂಟರ್ನೆಟ್ ಸಂಪರ್ಕದ ವೇರಿಯಬಲ್ ವೇಗ ಮತ್ತು ಸ್ಥಿರತೆ ಅವಲಂಬಿಸಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.


ನಾಟಿ ಹಸುಗಳ ಸಗಣಿಯಲ್ಲಿದೆ ಸಂಪತ್ತು | ಹಾಲಿಗಿಂತ ಸಗಣಿಗೇ ಹೆಚ್ಚು ಬೆಲೆ Importance of indian cattle dung

Most Popular

Related Posts