SSLC, PUC ಪಾಸಾದವರಿಗೆ ಜಿಲ್ಲಾ ನ್ಯಾಯಾಲಯ ಹುದ್ದೆಗಳಿಗೆ ಅರ್ಜಿ | ಮಾಸಿಕ ಸಂಬಳ ₹42,000 | Uttara Kannada District Court recruitment 2024

JOBS
14 July 2024

SSLC, PUC ಪಾಸಾದವರಿಗೆ ಜಿಲ್ಲಾ ನ್ಯಾಯಾಲಯ ಹುದ್ದೆಗಳಿಗೆ ಅರ್ಜಿ | ಮಾಸಿಕ ಸಂಬಳ ₹42,000 | Uttara Kannada District Court recruitment 2024
WhatsApp Group Join Now
Telegram Group Join Now

Uttara Kannada District Court recruitment 2024 :  ಉತ್ತರ ಕನ್ನಡ ಜಿಲ್ಲೆಯ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಜಿಲ್ಲಾ ಘಟಕದಲ್ಲಿ ಖಾಲಿ ಇರುವ ಆದೇಶ ಜಾರಿಕಾರರು ಹುದ್ದೆಗಳು ಹಾಗೂ ಇತರೆ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲು ಅರ್ಜಿ ಕರೆದಿದ್ದಾರೆ. ಈ ನೇಮಕಾತಿಗೆ ಅರ್ಜಿ ಸಲ್ಲಿಸುವ ಸಂಪೂರ್ಣ ಅರ್ಹತೆಯ ವಿವರ ಇಲ್ಲಿದೆ...


ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ, ಉತ್ತರ ಕನ್ನಡ ಜಿಲ್ಲೆಯ ವಿವಿಧ ಘಟಕಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು (District Court Jobs) ಭರ್ತಿ ಮಾಡಿಕೊಳ್ಳಲು ಅರ್ಹ ಅಭ್ಯರ್ಥಿಗಳಿಗೆ ನೇರ ನೇಮಕಾತಿಯ ಮುಖಾಂತರ ನೇಮಕಾತಿ ಮಾಡಿಕೊಳ್ಳಲು ಅರ್ಜಿ ಆಹ್ವಾನಿಸಲಾಗಿದೆ. ನೇಮಕಾತಿಗೆ ಅರ್ಜಿ ಸಲ್ಲಿಸಲು ನಿಗದಿಸಿದಂತಹ ಅರ್ಹತೆಗಳು ಹಾಗೂ ಇತರೆ ನೇಮಕಾತಿಯ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ನೀಡಲಾಗಿದೆ.


ಇದನ್ನೂ ಓದಿ:  ಪಿಯುಸಿ ಪಾಸಾದವರಿಗೆ ಗ್ರಾಮ ಪಂಚಾಯಿತಿ ಹುದ್ದೆಗಳಿಗೆ ಅರ್ಜಿ ಆಹ್ವಾನ 


ಉತ್ತರ ಕನ್ನಡ ಜಿಲ್ಲಾ ನ್ಯಾಯಾಲಯ ನೇಮಕಾತಿ ಸಂಕ್ಷಿಪ್ತ ವಿವರ 

  • ನೇಮಕಾತಿ ಇಲಾಖೆ : ಉತ್ತರ ಕನ್ನಡ ಜಿಲ್ಲಾ ನ್ಯಾಯಾಲಯ 
  • ಖಾಲಿ ಹುದ್ದೆಗಳು : 26 ಹುದ್ದೆಗಳು 
  • ಅರ್ಜಿ ಸಲ್ಲಿಕೆ : ಆನ್‌ಲೈನ್ ಮೂಲಕ 
  • ಉದ್ಯೋಗ ಸ್ಥಳ : ಉತ್ತರ ಕನ್ನಡ ಜಿಲ್ಲೆ 


ಹುದ್ದೆಗಳ ವಿಂಗಡಣೆ 

  • ಆದೇಶ ಜಾರಿಕಾರರು : 20 ಹುದ್ದೆಗಳು 
  • ಬೆರಳಚ್ಚುಗಾರರು : 03 ಹುದ್ದೆಗಳು 
  • ಬೆರಳಚ್ಚು ನಕಲುಗಾರರು : 03 ಹುದ್ದೆಗಳು


ಇದನ್ನೂ ಓದಿ: ಸ್ವಂತ ಮನೆ ಕಟ್ಟಿಕೊಳ್ಳಲು ಕೇಂದ್ರ ಸರಕಾರದಿಂದ ಆರ್ಥಿಕ ನೆರವು | ಅರ್ಜಿ ಸಲ್ಲಿಸುವ ಮಾಹಿತಿ ತಿಳಿಯಿರಿ  


ಶೈಕ್ಷಣಿಕ ವಿದ್ಯಾರ್ಹತೆ ಏನು?

ಆದೇಶ ಜಾರಿಕಾರರು ಹುದ್ದೆಗಳಿಗೆ 10ನೇ ತರಗತಿ ಪಾಸ್ ಆಗಿರಬೇಕು ಜೊತೆಗೆ ಲಘು ವಾಹನ ಚಾಲನ ಪರವಾನಗಿಯನ್ನು ಹೊಂದಿರುವುದು ಕಡ್ಡಾಯವಾಗಿದೆ.

ಇನ್ನು ಬೆರಳಚ್ಚುಗಾರರು ಹಾಗೂ ಬೆರಳಚ್ಚು ನಕಲುಗಾರು ಹುದ್ದೆಗಳಿಗೆ ಅರ್ಜಿ ಸಲ್ಲಿಸುವವರು ದ್ವಿತೀಯ ಪಿಯುಸಿ ಪಾಸ್ ಆಗಿರಬೇಕು ಜೊತೆಗೆ ಅಧಿಸೂಚನೆಯಲ್ಲಿ ನಿಗದಿಪಡಿಸಿರುವ ಅರ್ಹತೆಗಳನ್ನು ಹೊಂದಿರಬೇಕು.


ವಯೋಮಿತಿ ಅರ್ಹತೆಗಳೇನು?

Uttara Kannada District Court recruitment 2024 ಜಿಲ್ಲಾ ನ್ಯಾಯಾಲಯದಲ್ಲಿ ಖಾಲಿ ಇರುವಂತಹ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕನಿಷ್ಠ 18 ವರ್ಷ ಹಾಗೂ ಗರಿಷ್ಠ ವಯೋಮಿತಿಯನ್ನು ವರ್ಗಗಳಿಗೆ ಅನುಗುಣವಾಗಿ ನಿಗದಿಪಡಿಸಿದ್ದು ಈ ಕೆಳಗಿನಂತಿದೆ:

  • ಸಾಮಾನ್ಯ ವರ್ಗ : 35 ವರ್ಷ
  • ಪ್ರವರ್ಗ : 2ಎ, 2ಬಿ, 3ಎ, 3ಬಿ : 38 ವರ್ಷ 
  • ಎಸ್‌ಸಿ, ಎಸ್‌ಟಿ ಹಾಗೂ ಪ್ರವರ್ಗ 1 ವರ್ಗದ ಅಭ್ಯರ್ಥಿಗಳಿಗೆ : 40 ವರ್ಷ 


ಇದನ್ನೂ ಓದಿ: ನಾಟಿ ದನಗಳ ಸಗಣಿ ಸಂಪತ್ತು | ಹಾಲಿಗಿಂತ ಸಗಣಿಗೇ ಹೆಚ್ಚು ಬೆಲೆ


ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ಸಂಬಳವೇನು?

ನೇಮಕಾತಿ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ವೇತನವು 21,400 ರೂ. ಯಿಂದ 42,000 ರೂ. ವರೆಗೆ ಇರಲಿದೆ.


ಅರ್ಜಿ ಶುಲ್ಕವೆಷ್ಟು?

  • ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ : 200 ರೂ.
  • ಪ್ರವರ್ಗ 2ಎ, 2ಬಿ, 3ಎ, 3ಬಿ ವರ್ಗದ ಅಭ್ಯರ್ಥಿಗಳಿಗೆ : 100 ರೂ.
  • ಇನ್ನುಳಿದ ವರ್ಗದ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕವಿರುವುದಿಲ್ಲ 


ಅರ್ಜಿ ಸಲ್ಲಿಸಲು ಪ್ರಮುಖ ದಿನಾಂಕಗಳ ವಿವರ 

  • ಅರ್ಜಿ ಸಲ್ಲಿಕೆ ಆರಂಭ ದಿನಾಂಕ : 20-06-2024
  • ಅರ್ಜಿ ಸಲಿಕೆ ಕೊನೆಯ ದಿನಾಂಕ : 19-07-2024


ಅರ್ಜಿ ಸಲ್ಲಿಸುವ ಡೈರೆಕ್ಟ ಲಿಂಕ್ : Apply Now

ಅಧಿಸೂಚನೆ : Download


ಇದನ್ನೂ ಓದಿ: ರೈತರು ಮನೆಯಲ್ಲಿಯೇ ಯೂರಿಯಾ ಗೊಬ್ಬರ ತಯಾರಿಸುವ ವಿಧಾನ 

Most Popular

Related Posts