ಡಿಸಿಸಿ ಬ್ಯಾಂಕ್ SDA ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ SCDCC Bank Recruitment 2024

JOBS
08 July 2024

ಡಿಸಿಸಿ ಬ್ಯಾಂಕ್ SDA ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ  SCDCC Bank Recruitment 2024
WhatsApp Group Join Now
Telegram Group Join Now

SCDCC Bank Recruitment 2024 : ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್’ನಲ್ಲಿ (ಡಿಸಿಸಿ) ಖಾಲಿ ಇರುವ 123 Sಆಂ ಹುದ್ದೆಗಳನ್ನು ನೇಮಕಾತಿ ಮಾಡಿಕೊಳ್ಳಲು ಅಧಿಕೃತ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. ಖಾಲಿ ಇರುವ ಈ ಹುದ್ದೆಗಳ ನೇಮಕಾತಿಯ ಸಂಪೂರ್ಣ ವಿವರ ಇಲ್ಲಿದೆ...


ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನಲ್ಲಿ 123 ದ್ವಿತೀಯ ದರ್ಜೆ ಗುಮಾಸ್ತ ಹುದ್ದೆಗಳ ನೇಮಕಾತಿ ಕುರಿತು, ಬಿಡುಗಡೆಯಾಗಿರುವ ಅಧಿಕೃತ ಅಧಿಸೂಚನೆಯಲ್ಲಿ ತಿಳಿಸಿರುವಂತೆ ಅರ್ಹತೆಗಳು, ಪ್ರಮುಖ ದಿನಾಂಕ, ವೇತನ ಸೇರಿ ಇತರೆ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಲಾಗಿದೆ.


ಇದನ್ನೂ ಓದಿ: SSLC, PUC ಪಾಸಾದವರಿಗೆ ಜಿಲ್ಲಾ ನ್ಯಾಯಾಲಯ ಹುದ್ದೆಗಳಿಗೆ ಅರ್ಜಿ | ಮಾಸಿಕ ಸಂಬಳ ₹42,000 


SCDCC Bank Second Division Clerk recruitment 2024 ನೇಮಕಾತಿ ಸಂಕ್ಷಿಪ್ತ ವಿವರ

* ನೇಮಕಾತಿ ಸಂಸ್ಥೆ :  ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿ. (SCDCC bank)

* ಒಟ್ಟು ಹುದ್ದೆಗಳ ಸಂಖ್ಯೆ : 123

* ಹುದ್ದೆಗಳ ಹೆಸರು : ಸೆಕೆಂಡ್ ಡಿವಿಷನ್ ಕ್ಲರ್ಕ್ 

* ಉದ್ಯೋಗ ಸ್ಥಳ : ದಕ್ಷಿಣ ಕನ್ನಡ ಜಿಲ್ಲೆ 


ಶೈಕ್ಷಣಿಕ ವಿದ್ಯಾರ್ಹತೆ ವಿವರ Educational Qualification 

ಸೆಕೆಂಡ್ ಡಿವಿಷನ್ ಕ್ಲರ್ಕ್ ಅಥವಾ ದ್ವಿತೀಯ ದರ್ಜೆ ಗುಮಾಸ್ತರು ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಕರ್ನಾಟಕ ರಾಜ್ಯದ ಅಂಗೀಕೃತ ವಿಶ್ವವಿದ್ಯಾಲಯದಿಂದ ಪದವಿಯಲ್ಲಿ ಕನಿಷ್ಠ 50% ಅಂಕಗಳನ್ನು ಪಡೆದು ಪಾಸಾಗಿರಬೇಕು.


ಇದನ್ನೂ ಓದಿ: ಸ್ವಂತ ಮನೆಗಾಗಿ ಗೃಹ ಸಾಲ ಪಡೆಯಬೇಕೆ? ಇಲ್ಲಿದೆ ಸಾಲ ಪಡೆಯುವ ಮಹತ್ವದ ಮಾಹಿತಿ   


ನೇಮಕವಾದವರಿಗೆ ಸಿಗುವ ವೇತನವೆಷ್ಟು?

ದ್ವಿತೀಯ ದರ್ಜೆ ಗುಮಾಸ್ತರು ಹುದ್ದೆಗೆ ನೇಮಕಗೊಂಡ ಅಭ್ಯರ್ಥಿಗಳಿಗೆ 24,910 ರೂಪಾಯಿಯಿಂದ 55,655 ರೂಪಾಯಿ ವರೆಗೆ ಮಾಸಿಕ ವೇತನ ನೀಡಲಾಗುತ್ತದೆ. ಜೊತೆಗೆ ಇತರೆ ಸವಲತ್ತುಗಳು ಅನ್ವಯವಾಗುತ್ತವೆ.


ವಯೋಮಿತಿ ಅರ್ಹತೆಗಳು

ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ನಿಗದಿಪಡಿಸಿದ ದಿನಾಂಕಕ್ಕೆ ಕನಿಷ್ಠ 18 ವರ್ಷ ಪೂರೈಸಿದ್ದು, ಗರಿಷ್ಠ ವಯೋಮಿತಿ ಕೆಳಗಿನಂತಿರಬೇಕು.

* ಎಸ್‌ಸಿ/ಎಸ್‌ಟಿ ಅಭ್ಯರ್ಥಿಗಳು : 40 ವರ್ಷ

* ಒಬಿಸಿ ಅಭ್ಯರ್ಥಿಗಳು : 38 ವರ್ಷ

* ಸಾಮಾನ್ಯ ವರ್ಗದ ಅಭ್ಯರ್ಥಿಗಳು : 35 ವರ್ಷ


ಅರ್ಜಿ ಶುಲ್ಕ ಎಷ್ಟು?

 ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ 590 ರೂಪಾಯಿ ಹಾಗೂ ಉಳಿದ ಎಲ್ಲಾ ವರ್ಗದ ಅಭ್ಯರ್ಥಿಗಳಿಗೆ 1,180 ರೂಪಾಯಿ ಅರ್ಜಿ ಶುಲ್ಕವನ್ನು ನಿಗದಿಪಡಿಸಲಾಗಿದೆ.


ಅರ್ಜಿ ಸಲ್ಲಿಸಲು ಪ್ರಮುಖ ದಿನಾಂಕಗಳು

ಅರ್ಜಿ ಸಲ್ಲಿಕೆ ಪ್ರಾರಂಭ ದಿನಾಂಕ : 01-07-2024

ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ : 18-07-2024


ಅಧಿಸೂಚನೆ (Download)

ಅಧಿಕೃತ ಜಾಲತಾಣ : www.scdccbank.com

Most Popular

Related Posts