ಪಿಎಂ ವಿದ್ಯಾಲಕ್ಷ್ಮೀ ಯೋಜನೆ : ಯಾವುದೇ ಶೂರಿಟಿ, ಗ್ಯಾರಂಟಿ ಇಲ್ಲದೇ ಸಿಗುತ್ತೆ 10 ಲಕ್ಷ ರೂಪಾಯಿ ವರೆಗೂ ಶಿಕ್ಷಣ ಸಾಲ PM Vidyalakshmi Scheme 2024
EDUCATION
08 November 2024
ಸುಗಮ ಶಿಕ್ಷಣಕ್ಕೆ ಎದುರಾಗುವ ಆರ್ಥಿಕ ಅಡಚಣೆಗಳನ್ನು ನಿವಾರಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರವು ‘ಪಿಎಂ ವಿದ್ಯಾಲಕ್ಷ್ಮೀ ಯೋಜನೆ’ಯನ್ನು (PM-Vidyalakshmi Scheme) ಜಾರಿಗೆ ತಂದಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ನವೇಂಬರ್ 6ರಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆಯು ಈ ಯೋಜನೆಗೆ ಅನುಮೋದನೆ ನೀಡಿದೆ.
ಹಣಕಾಸಿನ ಕಾರಣಕ್ಕೆ ಉನ್ನತ ಅಧ್ಯಯನದಿಂದ ವಂಚಿತರಾಗುವುದನ್ನು ತಡೆಯಲು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಆರ್ಥಿಕ ಸಹಾಯ (Education Loan) ನೀಡುವುದು ಈ ಯೋಜನೆಯ ಗುರಿಯಾಗಿದೆ. ಅಗ್ರ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಪ್ರವೇಶ ಪಡೆಯುವ ವಿದ್ಯಾರ್ಥಿಗಳು ಯಾವುದೇ ಮೇಲಾಧಾರ, ಗ್ಯಾರಂಟಿ (Education loan without collateral) ಇಲ್ಲದೆ ಬ್ಯಾಂಕ್‌ಗಳು ಮತ್ತು ಹಣಕಾಸು ಸಂಸ್ಥೆಗಳಿAದ ಸಾಲವನ್ನು ಪಡೆಯಬಹುದು.
ಈ ಯೋಜನೆಯು ಸರಳ, ಪಾರದರ್ಶಕ ಮತ್ತು ವಿದ್ಯಾರ್ಥಿಸ್ನೇಹಿ ವ್ಯವಸ್ಥೆಯ ಮೂಲಕ ಕಾರ್ಯನಿರ್ವಹಿಸಲಿದ್ದು; ಸಂಪೂರ್ಣವಾಗಿ ಡಿಜಿಟಲ್ ಆಗಿರುತ್ತದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.
ಯಾವ ಸಂಸ್ಥೆಗಳಿಗೆ ಅನ್ವಯ?
ಎನ್‌ಐಆಎಫ್ ಬ್ಯಾಂಕಿ೦ಗ್ ಪಡೆದ ದೇಶದ ಅತ್ಯುನ್ನತ ಗುಣಮಟ್ಟದ ಉನ್ನತ ಶಿಕ್ಷಣ ಸಂಸ್ಥೆಗಳಿಗೆ ಈ ಯೋಜನೆಯು ಅನ್ವಯಿಸುತ್ತದೆ. ವಿವಿಧ ವಿಷಯ, ವಿವಿಧ ವಿಭಾಗಗಳಲ್ಲಿ ಅಗ್ರ 100ರೊಳಗಿನ ಸರ್ಕಾರಿ ಮತ್ತು ಖಾಸಗಿ ಸೇರಿದಂತೆ ಎಲ್ಲ ಉನ್ನತ ಶಿಕ್ಷಣ ಸಂಸ್ಥೆಗಳು; ಎನ್‌ಐಆರ್‌ಎಫ್‌ನಲ್ಲಿ 101-200 ಸ್ಥಾನ ಪಡೆದಿರುವ ರಾಜ್ಯ ಸರ್ಕಾರದ ಉನ್ನತ ಶಿಕ್ಷಣ ಸಂಸ್ಥೆಗಳು ಮತ್ತು ಕೇಂದ್ರ ಸರ್ಕಾರ ನಡೆಸುವ ಎಲ್ಲ ಸಂಸ್ಥೆಗಳು ಇದರಲ್ಲಿ ಸೇರುತ್ತವೆ. 22 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಈ ಯೋಜನೆಗೆ ಒಳಪಡುತ್ತಾರೆ.
ಎಷ್ಟೆಷ್ಟು ಆರ್ಥಿಕ ನೆರವು ಸಿಗಲಿದೆ?
7.5 ಲಕ್ಷ ರೂಪಾಯಿ ವರೆಗಿನ ಸಾಲದ ಮೊತ್ತಕ್ಕೆ, ಬಾಕಿಯಾಗಿರುವ ಮೊತ್ತದ ಶೇ.75 ರಷ್ಟು ಸಾಲ ಖಾತರಿಗೆ ಅರ್ಹರಾಗಿರುತ್ತಾರೆ. 10 ಲಕ್ಷ ರೂ.ವರೆಗಿನ ಸಾಲಕ್ಕೆ ಶೇ.3 ಬಡ್ಡಿ ರಿಯಾಯಿತಿಯನ್ನು ಒದಗಿಸಲಾಗುತ್ತದೆ. ಪ್ರತಿವರ್ಷ ಒಂದು ಲಕ್ಷ ವಿದ್ಯಾರ್ಥಿಗಳಿಗೆ ಬಡ್ಡಿ ರಿಯಾಯಿತಿ ನೀಡಲಾಗುವುದು. ಸರ್ಕಾರಿ ಸಂಸ್ಥೆಗಳಿ೦ದ ಬಂದಿರುವ ಮತ್ತು ತಾಂತ್ರಿಕ ಹಾಗೂ ವೃತ್ತಿಪರ ಕೋರ್ಸ್ಗಳನ್ನು ಆಯ್ಕೆ ಮಾಡಿಕೊಂಡಿರುವ ವಿದ್ಯಾರ್ಥಿಗಳಿಗೆ ಆದ್ಯತೆ ನೀಡಲಾಗುವುದು.
ಉನ್ನತ ಶಿಕ್ಷಣ ಇಲಾಖೆಯು ಪಿಎಂ-ವಿದ್ಯಾಲಕ್ಷ್ಮೀ ಏಕೀಕೃತ ಪೋರ್ಟಲ್ ಹೊಂದಿದ್ದು, ಸರಳೀಕೃತ ಅಪ್ಲಿಕೇಶನ್ ಪ್ರಕ್ರಿಯೆಯ ಮೂಲಕ ವಿದ್ಯಾರ್ಥಿಗಳು ಶಿಕ್ಷಣ ಸಾಲ ಮತ್ತು ಬಡ್ಡಿ ರಿಯಾಯಿತಿಗೆ ಅರ್ಜಿ ಸಲ್ಲಿಸಲು ಮತ್ತು ಎಲ್ಲ ಬ್ಯಾಂಕ್‌ಗಳು ಬಳಸಲು ಸಾಧ್ಯವಾಗುತ್ತದೆ. ಇ-ವೋಚರ್ ಮತ್ತು ಸೆಂಟ್ರಲ್ ಬ್ಯಾಂಕ್ ಡಿಜಿಟಲ್ ಕರೆನ್ಸಿ (ಸಿಬಿಡಿಸಿ) ವ್ಯಾಲೆಟ್ ಮೂಲಕ ಬಡ್ಡಿ ರಿಯಾಯಿತಿ ಪಾವತಿಸಲಾಗುತ್ತದೆ.
ಇದನ್ನೂ ಓದಿ: ಬ್ಯಾಂಕುಗಳಿಗೆ ಇನ್ನು ವಾರದಲ್ಲಿ ಎರಡು ದಿನ ರಜೆ Two Bank Holidays in a Week
Most Popular
- ಮಾವಿನ ಮರಗಳ ಇಳುವರಿ ಹೆಚ್ಚಳಕ್ಕೆ ವಿಜ್ಞಾನಿಗಳ ಹೊಸ ಸಂಶೋಧನೆ How to Increase Mango Yield
- ಇನ್ಮುಂದೆ ಬದಲಾಗಲಿದೆ ಈ ಬ್ಯಾಂಕುಗಳ ಶುಲ್ಕ ನಿಯಮ Banking Service Charges New Rules
- ಇನ್ಮುಂದೆ ಇಂಟರ್ನೆಟ್ ಇಲ್ಲದೇ ಮೊಬೈಲ್ನಲ್ಲೇ ನೋಡಿ ನಿಮ್ಮಷ್ಟದ ಟಿವಿ ಚಾನೆಲ್ D2M Technology Prasar Bharati experiment
- 2024ರ ಮುಂಗಾರು ಬೆಳೆ ಸಮೀಕ್ಷೆ ಹೀಗೆ ಮಾಡಿ... Crop Survey for Monsoon 2024
- ಸ್ವಂತ ಮನೆ ಕಟ್ಟಿಕೊಳ್ಳಲು ಕೇಂದ್ರ ಸರಕಾರದಿಂದ ಆರ್ಥಿಕ ನೆರವು | ಅರ್ಜಿ ಸಲ್ಲಿಸುವ ಮಾಹಿತಿ ತಿಳಿಯಿರಿ Pradhanmantri Aawas Yojana Home
- ‘ಅನ್ನಭಾಗ್ಯ’ ಅಕ್ಕಿಯಲ್ಲಿ ಪ್ಲಾಸ್ಟಿಕ್ ಅಕ್ಕಿ ವದಂತಿ | ರಾಜ್ಯ ಸರ್ಕಾರದ ಹೇಳಿದ್ದೇನು? Plastic rice rumor in Annabhagya rice
- ಎಸ್ಬಿಐ ಆಶಾ ವಿದ್ಯಾರ್ಥಿವೇತನ | ಶಾಲೆ, ಪಿಯುಸಿ, ಪದವಿ ವಿದ್ಯಾರ್ಥಿಗಳಿಗೆ 15,000 ದಿಂದ 7.5 ಲಕ್ಷ ವರೆಗೆ ನೆರವು SBIF Asha Scholarship Program 2024
- ಡಿಸಿಸಿ ಬ್ಯಾಂಕ್ SDA ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ SCDCC Bank Recruitment 2024
- ನಿಮ್ಮ ಫೇಸ್ಬುಕ್ ಅಕೌಂಟ್ ಸೇಫ್ ಆಗಿಟ್ಟುಕೊಳ್ಳುವುದು ಹೇಗೆ? ಇಲ್ಲಿದೆ ಸುಲಭ ತಂತ್ರಗಳು Facebook Account Safe Tricks
- ಗೃಹ ಆರೋಗ್ಯ ಯೋಜನೆ ಜಾರಿ: ಇನ್ನು ಮನೆಬಾಗಿಲಲ್ಲೇ ಸಿಗುತ್ತೆ ಚಿಕಿತ್ಸೆ-ಔಷಧಿ Gruha Arogya Scheme Karnataka