8th ಪಾಸಾದವರಿಗೂ ಕೂಡ ITI ಮಾಡುವ ಸೌಭಾಗ್ಯ ಕಲ್ಪಿಸಿದ ಸರ್ಕಾರ : ಅರ್ಜಿ ಸಲ್ಲಿಕೆ ಆರಂಭ | ITI Admission for 8th Pass

EDUCATION
25 June 2024

8th ಪಾಸಾದವರಿಗೂ ಕೂಡ ITI ಮಾಡುವ ಸೌಭಾಗ್ಯ ಕಲ್ಪಿಸಿದ ಸರ್ಕಾರ : ಅರ್ಜಿ ಸಲ್ಲಿಕೆ ಆರಂಭ | ITI Admission for 8th Pass
WhatsApp Group Join Now
Telegram Group Join Now

ITI Admission for 8th Pass : ಕರ್ನಾಟಕ ಸರ್ಕಾರದ ಕೌಶಲ್ಯ ಅಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯಿಂದ ಎಂಟನೇ ತರಗತಿ ಪಾಸಾದವರಿಗೆ ಐಟಿಐ ಮಾಡಲು ಅವಕಾಶ ನೀಡಿ ಅರ್ಜಿ ಆಹ್ವಾನಿಸಲಾಗಿದ್ದು ಅರ್ಜಿ ಸಲ್ಲಿಸುವ ಸಂಪೂರ್ಣ ಮಾಹಿತಿ ಇಲ್ಲಿದೆ...


  • ಇಂದಿನ ಈ ಸ್ಪರ್ಧಾತ್ಮಕ ಜಗತ್ತಿನಲ್ಲಿ ಉದ್ಯೋಗ ಪಡೆಯಲು ಕೇವಲ ಶಿಕ್ಷಣವಿದ್ದರೆ ಸಾಲದು. ಉತ್ತಮ ಗುಣಮಟ್ಟದ ಶಿಕ್ಷಣದ ಜೊತೆಗೆ ವಿದ್ಯಾರ್ಥಿಗಳಿಗೆ ಕೌಶಲ್ಯಗಳು (Skills) ಸಹ ಜೀವನದಲ್ಲಿ ಮುಂದುವರೆಯಲು ಮುಖ್ಯ ಪಾತ್ರವನ್ನು ವಹಿಸುತ್ತವೆ. ಕೇವಲ 10ನೇ ತರಗತಿ ಪಾಸಾದವರಿಗೆ ಐಟಿಐ ಮಾಡಲು ಅವಕಾಶ ನೀಡದೆ 8ನೇ ತರಗತಿ ಪಾಸಾದವರಿಗೂ ಕೂಡ ಐಟಿಐ ಮಾಡಲು ಇದೀಗ ಕರ್ನಾಟಕ ಸರ್ಕಾರವು ಅವಕಾಶ ಕಲ್ಪಿಸಿಕೊಡಲಾಗಿದೆ.

ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಹಾಗೂ ಜೀವನೋಪಾಯ ಇಲಾಖೆ ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಆಯುಕ್ತಾಲಯದ ವತಿಯಿಂದ 8ನೇ ತರಗತಿ ಪಾಸಾದವರಿಗೆ ಬದುಕು ಕಟ್ಟಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಯಾವ ಕೋರ್ಸ್’ನಲ್ಲಿ ಐಟಿಐ ಪ್ರವೇಶಾತಿ ಸಿಗಲಿದೆ? ಯಾರು ಅರ್ಜಿ ಸಲ್ಲಿಸಬಹುದು? ಅರ್ಜಿ ಸಲ್ಲಿಸುವುದು ಹೇಗೆ ಎಂಬ ಮಾಹಿತಿಯನ್ನು ಈ ಕೆಳಗಿನಂತೆ ನೀಡಲಾಗಿದೆ.


8ನೇ ತರಗತಿ ಪಾಸಾದವರಿಗೆ ಯಾವ್ಯಾವ ಕೋರ್ಸ್ ಐಟಿಐ ಪ್ರವೇಶಾತಿ ಸಿಗಲಿದೆ?

ಎಂಟನೇ ತರಗತಿ ಪಾಸಾದ ಕರ್ನಾಟಕ ರಾಜ್ಯದವರಿಗೆ ವಿವಿಧ ಕೋರ್ಸ್’ಗಳಲ್ಲಿ ಐಟಿಐ ಪ್ರವೇಶಾತಿ ನೀಡಲಿದ್ದು ಸದ್ಯಕ್ಕೆ ಪ್ರಮುಖವಾಗಿ ‘ಡ್ರೆಸ್ ಮೇಕಿಂಗ್ (ಫ್ಯಾಷನ್ ಡ್ರೆಸ್ಸಿಂಗ್) - Dress Making (Fashion Dressing) ಕೋರ್ಸ್’ನಲ್ಲಿ ಪ್ರವೇಶಾತಿ ಸಿಗಲಿದೆ. ಈ ಕ್ಷೇತ್ರದಲ್ಲಿ ಸ್ವಯಂ ಉದ್ಯೋಗ ಮಾಡಲು ಬಯಸುವರಿಗೆ ಇದು ಒಂದು ಉತ್ತಮ ಅವಕಾಶವಾಗಿದೆ.


ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯಿಂದ ನೀಡುತ್ತಿರುವ ಈ ಐಟಿಐ ಕೋರ್ಸ್ ಮಾಡಲು ಅಭ್ಯರ್ಥಿಗಳು ಕನಿಷ್ಠ 8ನೇ ತರಗತಿ ಪಾಸ್ ಆಗಿರಬೇಕು. 


ಹೇಗೆ ಅರ್ಜಿ ಸಲ್ಲಿಸಬೇಕು?

ಅರ್ಜಿ ಸಲ್ಲಿಸಲು ಅರ್ಹರಿರುವ ಅಭ್ಯರ್ಥಿಗಳು ಕೌಶಲ್ಯಾಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯ ಅಧಿಕೃತ ಜಾಲತಾಣಕ್ಕೆ ಭೇಟಿ ನೀಡಿ ಅಥವಾ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡುವುದರ ಮುಖಾಂತರ ಅರ್ಜಿ ಸಲ್ಲಿಸಬಹುದು. ಇದನ್ನು ಹೊರತುಪಡಿಸಿ ನೀವು ನಿಮ್ಮ ಹತ್ತಿರದ ಸರ್ಕಾರದಿಂದ ಮಾನ್ಯತೆ ಪಡೆದಿರುವ ಐಟಿಐ ಕಾಲೇಜುಗಳಲ್ಲಿ ವಿಚಾರಿಸಿ ಪ್ರವೇಶಾತಿ ಪಡೆಯಲು ಕೂಡ ಅವಕಾಶವಿದೆ.


ಯಾವುದೇ ರೀತಿಯ ಹೆಚ್ಚಿನ ಮಾಹಿತಿ ಬೇಕಾದಲ್ಲಿ ಸಹಾಯವಾಣಿ ಸಂಖ್ಯೆ : 155 267ಗೆ ಕರೆ ಮಾಡಿ


ಅರ್ಜಿ ಸಲ್ಲಿಕೆ ಲಿಂಕ್ (Click) 

Most Popular

Related Posts