ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ ಹುದ್ದೆಗಳಿಗೆ ಅರ್ಜಿ ಆಹ್ವಾನ | ಸಂಬಳ 30,000 ರೂಪಾಯಿ India Post Payments Bank (IPPB) Recruitment 2024

JOBS
21 October 2024

ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ ಹುದ್ದೆಗಳಿಗೆ ಅರ್ಜಿ ಆಹ್ವಾನ | ಸಂಬಳ 30,000 ರೂಪಾಯಿ India Post Payments Bank (IPPB) Recruitment 2024
WhatsApp Group Join Now
Telegram Group Join Now

ಭಾರತೀಯ ಅಂಚೆ ಇಲಾಖೆಯ (IndiaPost) ಅಧೀನದಲ್ಲಿ ಕಾರ್ಯ ನಿರ್ವಹಿಸುವ ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ (India Post Payments Bank - IPPB) ಬ್ಯಾಂಕಿ೦ಗ್ ವಲಯದ ಉದ್ಯೋಗಾಸಕ್ತರಗೆ ಹೊಸ ಅವಕಾಶ ಕಲ್ಪಿಸಿದೆ. ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ನಲ್ಲಿ ಕಾರ್ಯನಿರ್ವಾಹಕರಾಗಿ ಕೆಲಸ ನಿರ್ವಹಿಸಲು ಇಚ್ಛಿಸುವ ಅಭ್ಯರ್ಥಿಗಳಿಗೆ ಅರ್ಜಿ ಆಹ್ವಾನಿಸಿದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದಾಗಿದೆ.


ದೇಶಾದ್ಯಂತ ಒಟ್ಟು 344 ಹುದ್ದೆಗಳು ಖಾಲಿ ಇದ್ದು; ಈ ಪೈಕಿ ಕರ್ನಾಟಕಕ್ಕೆ 20 ಹುದ್ದೆಗಳು ಮೀಸಲಾಗಿವೆ. ಜಿಲ್ಲಾವಾರು ಹುದ್ದೆಗಳ ವಿವರ ನೋಡುವುದಾದರೆ, ಬಾಗಲಕೋಟೆ, ಗುಲ್ಬರ್ಗ, ಅಂಕೋಲಾ, ಬೆಳಗಾವಿ, ಬಳ್ಳಾರಿ, ಬೀದರ್, ಚಿತ್ರದುರ್ಗ, ದಾವಣಗೆರೆ, ಧಾರವಾಡ, ಹಾವೇರಿ, ಮೈಸೂರು, ಕೋಲಾರ, ಕೊಪ್ಪಳ, ಮಂಡ್ಯ, ರಾಮನಗರ, ಶಿವಮೊಗ್ಗ, ವಿಜಯಪುರ ಹಾಗೂ ಯಾದಗಿರಿಗಳಲ್ಲಿ ಖಾಲಿ ಹುದ್ದೆಗಳಿವೆ.


ಇದನ್ನೂ ಓದಿ: ಬ್ಯಾಂಕುಗಳಿಗೆ ಇನ್ನು ವಾರದಲ್ಲಿ ಎರಡು ದಿನ ರಜೆ Two Bank Holidays in a Week


ವಿದ್ಯಾರ್ಹತೆ ವಿವರ


ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಯಾವುದೇ ವಿಷಯದಲ್ಲಿ ಪದವಿ ಪೂರ್ಣಗೊಳಿಸಿರಬೇಕು. ಹುದ್ದೆಗೆ ಸಂಬAಧಿತ ಕ್ಷೇತ್ರದಲ್ಲಿ ಎರಡು ವರ್ಷಗಳ ಅನುಭವವನ್ನು ಹೊಂದಿರಬೇಕು.


ವಯೋಮಿತಿ ವಿವರ


ಅಭ್ಯರ್ಥಿಗಳು 1-9-2024ಕ್ಕೆ ಅನ್ವಯವಾಗುವಂತೆ ಕನಿಷ್ಠ 20 ವರ್ಷದಿಂದ ಗರಿಷ್ಠ 35 ವರ್ಷದೊಳಗಿನವರು ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ ಹುದ್ದೆಗೆ ಅರ್ಜಿ ಸಲ್ಲಿಸಬಹುದಾಗಿದೆ. ಸಂಸ್ಥೆಯ ನಿಯಮಾನುಸಾರ ವಯೋಮಿತಿ ಸಡಿಲಿಕೆ ಇರಲಿದೆ.


ಇದನ್ನೂ ಓದಿ: ಸರ್ಕಾರಿ ಕೋಟಾ ಬಿ.ಇಡಿ ಕೋರ್ಸ್ ವ್ಯಾಸಂಗಕ್ಕೆ ಅರ್ಜಿ ಆಹ್ವಾನ Karnataka B.Ed Course Online Application


ಆಯ್ಕೆ ಪ್ರಕ್ರಿಯೆ ಹೇಗೆ?


ಅಭ್ಯರ್ಥಿಗಳನ್ನು ಪದವಿಯಲ್ಲಿ ಪಡೆದ ಶೇಕಡಾವಾರು ಅಂಕಗಳ ಆಧಾರದ ಮೇಲೆ ಆಯ್ಕೆ ಮಾಡಲಾಗುತ್ತದೆ. ಆದರೂ ಬ್ಯಾಂಕ್ ಆನ್‌ಲೈನ್ ಪರೀಕ್ಷೆಯನ್ನು ನಡೆಸುವ ಹಕ್ಕನ್ನು ಹೊಂದಿದೆ. ಅರ್ಹತಾ ಪಟ್ಟಿಯಲ್ಲಿ ಇಬ್ಬರು ಅಭ್ಯರ್ಥಿಗಳು ಸಮಾನ ಪದವಿ ಶೇಕಡಾವಾರು ಅಂಕ ಪಡೆದಿರುವ ಸಂದರ್ಭದಲ್ಲಿ ಸೇವಾ ಹಿರಿತನವನ್ನು ಹೊಂದಿರುವ ಅಭ್ಯರ್ಥಿಯನ್ನು ಆಯ್ಕೆ ಮಾಡಲಾಗುತ್ತದೆ. ಸೇವಾ ಹಿರಿತನವೂ ಒಂದೇ ಆಗಿದ್ದಲ್ಲಿ, ಅಭ್ಯರ್ಥಿಯನ್ನು ಜನ್ಮ ದಿನಾಂಕದ ಆಧಾರದ ಮೇಲೆ ಆಯ್ಕೆ ಮಾಡಲಾಗುತ್ತದೆ.


ಅರ್ಜಿ ಶುಲ್ಕ ಮತ್ತು ವೇತನ ವಿವರ


ಈ ಹುದ್ದೆಗೆ ಅರ್ಜಿ ಸಲ್ಲಿಸಲು ಭಯಸುವ ಎಲ್ಲ ವರ್ಗದ ಅಭ್ಯರ್ಥಿಗಳು 750 ರೂಪಾಯಿ ಅರ್ಜಿ ಶುಲ್ಕವನ್ನು ಪಾವತಿಸಬೇಕು. ಇನ್ನು ಈ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ 30,000 ರೂಪಾಯಿ ವೇತನವನ್ನು ನಿಗದಿಪಡಿಸಲಾಗಿದೆ. ಜೊತೆಗೆ ಸರ್ಕಾರಿ ಸವಲತ್ತುಗಳು ಅನ್ವಯವಾಗಲಿವೆ.


ಅರ್ಹ, ಆಸಕ್ತ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಆನ್‌ಲೈನ್ ಅರ್ಜಿ ಸಲ್ಲಿಕೆಗೆ ಮಾತ್ರ ಅವಕಾಶ ಕಲ್ಪಿಸಲಾಗಿದ್ದು, ಇತರ ಮಾಧ್ಯಮಗಳ ಮೂಲಕ ಅರ್ಜಿ ಸಲ್ಲಿಸಿದ್ದಲ್ಲಿ ತಿರಸ್ಕರಿಸಲಾಗುವುದು ಎಂದು ಇಲಾಖೆಯು ಸ್ಪಷ್ಟ ಪಡಿಸಿದೆ.


ಅರ್ಜಿ ಸಲ್ಲಿಕೆ ಹಾಗೂ ಶುಲ್ಕ ಪಾವತಿಸಲು ಕೊನೆಯ ದಿನಾಂಕ :

31-10-2024


ಅಧಿಸೂಚನೆ : Download

ಹೆಚ್ಚಿನ ಮಾಹಿತಿಗೆ : https://ippbonline.com/


ಇದನ್ನೂ ಓದಿ: ಭರ್ಜರಿ ಬಡ್ಡಿ ನೀಡುವ ಪೋಸ್ಟ್ ಆಫೀಸ್ ಸೇವಿಂಗ್ಸ್ ಸ್ಕೀಮ್ | ಈಗಲೇ ಹೂಡಿಕೆ ಮಾಡಿ... National Savings Certificate - NSC

Most Popular

Related Posts