ನಿಮ್ಮ ಫೇಸ್‌ಬುಕ್ ಅಕೌಂಟ್ ಸೇಫ್ ಆಗಿಟ್ಟುಕೊಳ್ಳುವುದು ಹೇಗೆ? ಇಲ್ಲಿದೆ ಸುಲಭ ತಂತ್ರಗಳು Facebook Account Safe Tricks

TECHNOLOGY
30 August 2024

ನಿಮ್ಮ ಫೇಸ್‌ಬುಕ್ ಅಕೌಂಟ್ ಸೇಫ್ ಆಗಿಟ್ಟುಕೊಳ್ಳುವುದು ಹೇಗೆ? ಇಲ್ಲಿದೆ ಸುಲಭ ತಂತ್ರಗಳು Facebook Account Safe Tricks
WhatsApp Group Join Now
Telegram Group Join Now

Facebook Account Safe Tricks : ಇತ್ತೀಚೆಗೆ ನಕಲಿ ಫೇಸ್‌ಬುಕ್ ಅಕೌಂಟ್‌ಗಳು (Fake Facebook account), ಫೇಸ್‌ಬುಕ್ ಹ್ಯಾಕ್ (Facebook hack) ಆಗುವುದು, ಯಾರದ್ದೋ ಹೆಸರಿನಲ್ಲಿ ಖಾತೆ ರಚಿಸಿ, ಆ ಮೂಲಕ ಬೇರೆಯವರ ಬಳಿ ಹಣ ಕೇಳುವವರು ಹೆಚ್ಚುತ್ತಿದ್ದಾರೆ. ಇನ್ನು ನಮ್ಮ ಅಕೌಂಟ್‌ನಿ೦ದ ಫೋಟೋಗಳನ್ನು ಬಳಸಿಕೊಂಡು ದುರ್ಬಳಕೆ ಮಾಡಕೊಳ್ಳುವುದೂ ಇದೆ. ಹಾಗಿದ್ದರೆ ಫೇಸ್‌ಬುಕ್ ಅಕೌಂಟ್ ಅನ್ನು ಸೇಫ್ ಆಗಿ ಇಟ್ಟುಕೊಳ್ಳುವುದು ಹೇಗೆ? ಈ ಕೆಳಗಿನ ಕ್ರಮಗಳನ್ನು ಅನುಸರಿಸಿದರೆ ಖಂಡಿತವಾಗಿಯೂ ನಿಮ್ಮ ಫೇಸ್‌ಬುಕ್ ಅಕೌಂಟ್ ಅನ್ನು ಸೇಫ್ ಆಗಿ ಇಟ್ಟುಕೊಳ್ಳಬಹುದು.


ಮೊದಲಿಗೆ ನಿಮ್ಮ ಫೇಸ್‌ಬುಕ್ ಖಾತೆಯನ್ನು ಪ್ರೊಫೈಲ್ ಲಾಕ್ ಮಾಡಿ. ನಿಮ್ಮ ಫೇಸ್‌ಬುಕ್ ಖಾತೆಯ ಮುಖಪುಟಕ್ಕೆ ಹೋಗಿ. ಅಲ್ಲಿ Add to Story ಆಯ್ಕೆ ಬಳಿಯಲ್ಲಿ ಮೂರು ಚುಕ್ಕೆಯನ್ನು ಆಯ್ಕೆ ಮಾಡಿ. ಅಲ್ಲಿ Lock Your Profile ಅನ್ನು ಕ್ಲಿಕ್ ಮಾಡಿ.


ಇದನ್ನೂ ಓದಿ: ‘ಅನ್ನಭಾಗ್ಯ’ ಅಕ್ಕಿಯಲ್ಲಿ ಪ್ಲಾಸ್ಟಿಕ್ ಅಕ್ಕಿ ವದಂತಿ | ರಾಜ್ಯ ಸರ್ಕಾರದ ಹೇಳಿದ್ದೇನು? Plastic rice rumor in Annabhagya rice


ಪ್ರೊಫೈಲ್ ಫೋಟೋವನ್ನು ಪ್ರೊಟೆಕ್ಟ್ ಮಾಡಿ ಇಡಿ


ಇಡೀ ಅಕೌಂಟ್ ಲಾಕ್ ಆಗಿದ್ದರೂ, ಪ್ರೊಫೈಲ್ ಫೋಟೋ ಒಂದು ಓಪನ್ ಇದ್ರೂ ಸಂಕಷ್ಟ ಎದುರಾಗಬಹುದು. ಹಾಗಾಗಿ, ಪ್ರೊಫೈಲ್ ಪಿಕ್ಟರ್ ಗಾರ್ಡ್ ಅನ್ನು ಎನೇಬಲ್ ಮಾಡಿ. ಫೇಸ್ಟುಕ್‌ನಲ್ಲಿ ನಿಮ್ಮ ಪ್ರೊಫೈಲ್ ಫೋಟೋ ಮೇಲೆ ಟ್ಯಾಪ್ ಮಾಡಿ. ಆಗ ಅಲ್ಲಿ Turn On Profile Guard ಆಯ್ಕೆ ಆರಿಸಿ. ಬೇರೆ ಯಾರಾದರೂ, ನಿಮ್ಮ ಆಕೌಂಟ್‌ಗೆ ಬಂದರೆ ಫೇಸ್‌ಬುಕ್ ಪ್ರೊಫೈಲ್ ಫೋಟೋವನ್ನು ಎಲ್ಲೂ ಹಂಚಿಕೊಳ್ಳಲಾಗುವುದಿಲ್ಲ. ಸ್ಕ್ರೀನ್ ಶಾಟ್ ತೆಗೆಯಲು ಕೂಡಾ ಆಗುವುದಿಲ್ಲ!


ಇನ್ನು ನೀಮ್ಮ ಅಕೌಂಟ್ ಪಬ್ಲಿಕ್ ಆಗಿಟ್ಟರೂ, ನೀವು ಹಾಕುವ ಪೋಸ್ಟ್ ನಿಮಗೆ ಮಾತ್ರ ಕಾಣಿಸಬೇಕು ಅಂತಾದರೆ, Settings & Privacy > Settings > Audience & visibility > Posts > Who Can See Your Posts ನಲ್ಲಿ ಪೋಸ್ಟ್, ಸ್ಟೋರಿ ಹಾಗೂ ರೀಲ್‌ಗಳನ್ನು ಪ್ರತ್ಯೇಕವಾಗಿ ಫ್ರೆಂಡ್ಸ್ ಅಥವಾ ಪಬ್ಲಿಕ್ ಎಂದು ಬದಲಿಸಬಹುದು.


ಇದನ್ನೂ ಓದಿ: ಏಕೀಕೃತ ಪಿಂಚಣಿ ಯೋಜನೆ : ಸರ್ಕಾರಿ ನೌಕರರಿಗೆ ಇದರ ಪ್ರಯೋಜನಗಳೇನು? Unified Pension Scheme for Govt Employees


ಸ್ಟ್ರಾಂಗ್ ಪಾಸ್‌ವರ್ಡ್ ರಚಿಸಿ


ಪಾಸ್ವರ್ಡ್ ಎಷ್ಟು ಸ್ಟ್ರಾಂಗ್ ಆಗಿರುತ್ತದೆಯೋ ಅಷ್ಟು ಒಳ್ಳೆಯದು. ಪಾಸ್ವರ್ಡ್ ರಚಿಸುವಾಗ ಅದು ನಿಮಗೆ ಮಾತ್ರ ಹೊಳೆಯುವ ಹಾಗೆ ಇರಬೇಕು. ನಿಮ್ಮ ಹೆಸರು, ಊರು, ಜನ್ಮದಿನ ಇತ್ಯಾದಿ ಮಾಹಿತಿಗಳನ್ನು ಪಾಸ್‌ವರ್ಡ್ ಇಡದೇ, ಅಕ್ಷರ, ಅಂಕಿಗಳನ್ನೆಲ್ಲಾ ಒಟ್ಟು ಮಾಡಿ ಪಾಸ್‌ವರ್ಡ್ ರಚಿಸಬೇಕು.


ನಿಮ್ಮ ಪಾಸ್‌ವರ್ಡ್ಗಳನ್ನು ಯಾವ ಕಾರಣಕ್ಕೂ ಯಾರೊಂದಿಗೂ ಹಂಚಿಕೊಳ್ಳಬೇಡಿ. ಒಂದು ವೇಳೆ, ಬೇರೆಯವರ ಲ್ಯಾಪ್ಟಾಪ್ ಅಥವಾ ಫೋನ್‌ನಲ್ಲಿ ನೀವು ಲಾಗಿನ್ ಆದರೆ, ಕೆಲಸ ಮುಗಿದ ತಕ್ಷಣ ಲಾಗೌಟ್ ಆಗುವುದನ್ನು ಮರೆಯದಿರಿ.


ಫ್ರೆಂಡ್ ರಿಕ್ವೆಸ್ಟ್ ಎಚ್ಚರಿಕೆಯಿಂದ ಎಕ್ಸೆಪ್ಟ್ ಮಾಡಿ


ಫ್ರೆಂಡ್ಸ್ಗಳ ಸಂಖ್ಯೆ ಹೆಚ್ಚಿಸಿಕೊಳ್ಳುವ ಉದ್ದೇಶದಿಂದ ಬರುವ ಎಲ್ಲಾ ರಿಕ್ವೆಸ್ಟ್ಗಳನ್ನು ಎಕ್ಸೆಪ್ಟ್ ಮಾಡದಿರಿ. ಕೆಲವು ಅಕೌಂಟ್‌ಗಳೊ೦ದಿಗೆ ಮ್ಯೂಚುವಲ್ ಫ್ರೆಂಡ್ಸ್ ಇರುತ್ತಾರೆ. ಅಂಥವರಿAದ ರಿಕ್ವೆಸ್ಟ್ ಬಂದಾಗ, ಮ್ಯೂಚುವಲ್ ಫ್ರೆಂಡ್‌ಗಳೊAದಿಗೆ ವಿಚಾರಿಸಿ, ಬೇಕೆನಿಸಿದರೆ ರಿಕ್ವೆಸ್ಟ್ ಎಕ್ಸೆಪ್ಟ್ ಮಾಡಿ.


ಮೆಸೆಂಜರ್‌ನಲ್ಲಿ ಸಂಶಯಾಸ್ಪದ ಲಿಂಕ್‌ಗಳನ್ನು ಯಾರಾದರೂ ಮೆಸೇಜ್ ಮಾಡಿ ಕಳುಹಿಸಿದರೆ, ಅದನ್ನು ಓಪನ್ ಮಾಡದಿರಿ. ಕೆಲವು ಲಿಂಕ್‌ಗಳನ್ನು ಟ್ಯಾಪ್ ಮಾಡುವುದರಿಂದ ನಿಮ್ಮ ಮಾಹಿತಿಗಳಿ ಲೀಕ್ ಆಗುವ ಸಾಧ್ಯತೆ ಇರುತ್ತದೆ.


ಇದನ್ನೂ ಓದಿ: ಗೃಹ ಆರೋಗ್ಯ ಯೋಜನೆ ಜಾರಿ: ಇನ್ನು ಮನೆಬಾಗಿಲಲ್ಲೇ ಸಿಗುತ್ತೆ ಚಿಕಿತ್ಸೆ-ಔಷಧಿ Gruha Arogya Scheme Karnataka


ಇವುಗಳನ್ನು ಆಗಾಗ ಮಾಡುತ್ತಿರಿ


ಕನಿಷ್ಠ ಆರು ತಿಂಗಳಿಗೊಮ್ಮೆ ಪಾಸ್‌ವರ್ಡ್ ಬದಲಿಸಿ. ಈ ಕನಿಷ್ಠ ಎರಡು ತಿಂಗಳಿಗೊಮ್ಮೆ ಯಾವೆಲ್ಲಾ ಡಿವೈಸ್‌ನಲ್ಲಿ ನೀವು ಲಾಗಿನ್ ಆಗಿದ್ದೀರಿ ಎಂದು ಪರಿಶೀಲಿಸಿ. ನೀವು ಮಾಡಬೇಕಾಗಿದ್ದು ಇಷ್ಟೆ : Settings Password & security - Change password update


ವಾರಕ್ಕೊಮ್ಮೆ ಫೇಸ್‌ಬುಕ್‌ನಲ್ಲಿ ನಿಮ್ಮ ಹೆಸರಿನ ಹಾಗೂ ನಿಮ್ಮದೇ ಪ್ರೊಫೈಲ್ ಫೋಟೋ ಹೊಂದಿರುವ ಖಾತೆಗಳು ಇವೆಯೇ ಎಂದು ನೋಡುತ್ತಿರಿ. ಇದ್ದರೆ ಅವು ಫೇಕ್ ಅಕೌಂಟ್. ಅದರ ಬಗ್ಗೆ ರಿಪೋರ್ಟ್ ಮಾಡಿ, ಸ್ನೇಹಿತರಿಗೆ ತಿಳಿಸಿ.


ಇದನ್ನೂ ಓದಿ: ಆರ್.ಆರ್ ನಂಬರ್’ಗೆ ರೈತರು ಆಧಾರ್ ಜೋಡಣೆ ಮಾಡದಿದ್ದರೆ ಕೃಷಿ ಪಂಪ್‌ಸೆಟ್ ವಿದ್ಯುತ್ ಬಂದ್ | ಸರ್ಕಾರದ ಅಂತಿಮ ಸೂಚನೆ Aadhaar linking for agricultural pumpset

Most Popular

Related Posts