ವಾಟ್ಸಾಪ್‌ನಿಂದ ಕೂತಲ್ಲೇ ಸಿಗುತ್ತವೆ ಈ ಎಲ್ಲ ಸೇವೆಗಳು | ಈಗಲೇ ಟ್ರೈ ಮಾಡಿ... Other services of WhatsApp
EDUCATION
27 June 2024
Other services of WhatsApp : ವಾಟ್ಸಾಪ್ ಈಗ ಕೇವಲ ಚಾಟ್ ಮಾಡಲು, ಮಾಹಿತಿ ಹಂಚಿಕೊಳ್ಳಲು ಮಾತ್ರ ಬಳಕೆಯಾಗುತ್ತಿಲ್ಲ. ಅರಿತು ಬಳಸಿದರೆ ಅದರಿಂದ ಹಲವು ಸೇವೆಗಳನ್ನು ಪಡೆಯಬಹುದು. ಹೇಗೆ ಎಂಬುದರ ಮಾಹಿತಿ ಇಲ್ಲಿದೆ...
ಸೋಷಿಯಲ್ ಮಿಡಿಯಾಗಳಲ್ಲೇ ಅತೀ ಹೆಚ್ಚು ಜನ ಬಳಕೆಯಲ್ಲಿರುವ ವಾಟ್ಸಾಪ್ (WhatsApp) ಮೂಲಕ ಇಂದು ಕೂತಲ್ಲಿಂದಲೇ ಹಲವು ಸೇವೆಗಳನ್ನು ಪಡೆಯಬಹುದಾಗಿದೆ. ಆಗಾಗ ಹೊಸ ಹೊಸ ಪೀಚರ್ ಅಪ್ಡೇಟ್ ಆಗುತ್ತಿದ್ದು; ಈಗಾಗಲೇ ವಾಟ್ಸಾಪ್ ಮೆಸೇಜ್ (WhatsApp Message), ವಾಟ್ಸಾಪ್ ಚಾಟ್ (WhatsApp Chat), ವಾಟ್ಸಾಪ್ ಗ್ರುಪ್, ವಾಟ್ಸಾಪ್ ಚಾನಲ್ ಇತ್ಯಾದಿಗಳ ಮೂಲಕ ಜನರು ಸಂವಹನ ನಡೆಸುತ್ತಿದ್ದಾರೆ.
ನಿಜಕ್ಕಾದರೆ, ಮೊಬೈಲ್ ಬಳಸುವ ಪ್ರತಿಯೊಬ್ಬರು ವಾಟ್ಸಾಪ್ ಬಳಸಿಯೇ ಬಳಸುತ್ತಾರೆ. ವಾಟ್ಸಾಪ್ ಬಳಕೆಯ ನಂತರ ಮೊಬೈಲ್ ಮೆಸೇಜ್ (SMS) ಬಳಕೆ ತೀರಾ ಕಮ್ಮಿಯಾಗಿದೆ. ಈಗ ಪ್ರತಿಯೊಂದು ಲಿಂಕ್, ಮಾಹಿತಿ ವಾಟ್ಸಾಪ್ ಮೂಲಕವೇ ಹಂಚಿಕೆ ಆಗುವುದುಂಟು. ವಾಟ್ಸಾಪ್ ಗ್ರಾಮೀಣ ಭಾಗದ ಜನರಿಗೆ ತ್ವರಿತವಾಗಿ ತಲುಪುವ ಅತ್ಯಂತ ಸರಳ ಸಾಮಾಜಿಕ ಮಾಧ್ಯಮವಾಗಿದೆ.
ಹಾಗಿದ್ದರೆ, ವಾಟ್ಸಾಪ್ ತನ್ನ ಬಳಕೆದಾರರಿಗೆ (WhatsApp Users) ಕೇವಲ ಚಾಟ್ ಮಾಡುವುದು, ಸಂದೇಶ ಕಳಿಸುವುದು ಹಾಗೂ ಮಾಹಿತಿ ಹಂಚಿಕೆಗೆ ಮಾತ್ರ ಉಪಯೋಗವಾಗುತ್ತಿಲ್ಲ. ಅರಿತು ಬಳಸಿದರೆ ಅದರಿಂದ ಈ ಸೇವೆಗಳ ಜತೆಗೆ ಇತರ ಹಲವು ಸೇವೆಗಳನ್ನು ಕೂಡ ಪಡೆಯಬಹುದಾಗಿದೆ. ಹೇಗೆ? ಇಲ್ಲಿದೆ ಆ ಕುರಿತ ಸಂಕ್ಷಿಪ್ತ ವಿವರ...
ಇದನ್ನೂ ಓದಿ: ಕೃಷಿ ಇಲಾಖೆಯಲ್ಲಿ 600ಕ್ಕೂ ಹೆಚ್ಚು ಹುದ್ದೆಗಳ ನೇಮಕಾತಿ | ಯಾವೆಲ್ಲ ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ?
ಹಣ ವರ್ಗಾವಣೆ ಮಾಡಿ
ಮುಖ್ಯವಾಗಿ ವಾಟ್ಸಾಪ್ ಅನ್ನು ಗೂಗಲ್ ಪೇ, ಫೋನ್ ಪೇ, ಪೇಟಿಎಂ ಥರ ಹಣ ವರ್ಗಾವಣೆ ಮತ್ತು ಹಣ ಸ್ವೀಕಾರಕ್ಕೆ ಬಳಸಿಕೊಳ್ಳಬಹುದು. ‘ವಾಟ್ಸಾಪ್ ಪೇ’ ಇದಕ್ಕೆ ಸೇತುವೆಯಾಗಿ ಕೆಲಸ ಮಾಡುತ್ತದೆ. ಒಂದೊಮ್ಮೆ ನಿಮ್ಮ ವಾಟ್ಸಾಪ್ ಪಾವತಿಗಳ ವ್ಯಾಲೆಟ್‌ಗೆ ಬ್ಯಾಂಕ್ ಖಾತೆಯನ್ನು ಲಿಂಕ್ ಮಾಡಿದರೆ ಯಾವುದೇ ಶುಲ್ಕವಿಲ್ಲದೆ ಯುಪಿಐ ಅಪ್ಲಿಕೇಶನ್‌ಗಳನ್ನು ಬಳಸುವ ಯಾರಿಗಾದರೂ ಸುರಕ್ಷಿತವಾಗಿ ಹಣ ಕಳಿಸಬಹುದು, ಅವರಿಂದ ಹಣ ಪಡೆಯಲೂಬಹುದು.
Metro Ticket ಖರೀದಿಸಬಹುದು
ಇನ್ನು ಬೆಂಗಳೂರಿನ೦ತಹ ಮೆಟ್ರೋ ನಗರಗಳಲ್ಲಿ ಇರುವವರು ವಾಟ್ಸಾಪ್‌ನಿಂದಲೇ ‘ಮೆಟ್ರೋ ಟಿಕೆಟ್’ ಕೂಡ ಖರೀದಿಸಬಹುದು. ಇದಕ್ಕಾಗಿ 9650855800 ನಂಬರ್ ಅನ್ನು ಕಾಂಟಾಕ್ಟ್ ಲಿಸ್ಟ್ ಲ್ಲಿ ಸೇವ್ ಮಾಡಿಕೊಳ್ಳಿ. ನಿಮಗೆ ಮೆಟ್ರೊ ಟಿಕೆಟ್ ಅಗತ್ಯ ಬಿದ್ದಾಗ ಚಾಟ್ ಓಪನ್ ಮಾಡಿ ‘ಹಾಯ್’ ಎಂದು ಟೈಪ್ ಮಾಡಿ. ಆನಂತರ ಭಾಷೆಯನ್ನು ಆಯ್ದುಕೊಂಡು ನೀವು ಇಳಿಯುವ ಸ್ಟೇಷನ್ ಹೆಸರು ಹಾಗೂ ಎಷ್ಟು ಟಿಕೆಟ್ ಬೇಕು ಎಂಬುದನ್ನು ನಮೂದಿಸಬೇಕು. ಆಗ ನಿಮಗೆ ದೊರೆಯುವ ಕ್ಯೂಆರ್ ಟಿಕೆಟ್ ಅನ್ನು ಸೇವ್ ಮಾಡಿಟ್ಟುಕೊಂಡು ಟಿಕೆಟ್’ನಂತೆ ಬಳಸಬಹುದು.
ಇದನ್ನೂ ಓದಿ: ಕಡಿಮೆ ಬಡ್ಡಿಯಲ್ಲಿ ಗೃಹ ಸಾಲ ಪಡೆಯುವುದು ಹೇಗೆ? ಬಾಂಕುಗಳ ಪಟ್ಟಿ ಸಹಿತ ಸಂಪೂರ್ಣ ಮಾಹಿತಿ ಇಲ್ಲಿದೆ...
ವಾಟ್ಸಾಪ್ ಮೂಲಕವೇ ದಿನಸಿ ಸಾಮಗ್ರಿ ಖರೀದಿಸಿ
ಈಗಾಗಲೇ ಬಹುತೇಕರು ಬಲ್ಲಂತೆ ವಾಟ್ಸಾಪ್ ಸಂಸ್ಥೆ ರಿಲಯನ್ಸ್ ಇಂಡಸ್ಟ್ರೀಸ್‌ನ ಜಿಯೋ ಮಾರ್ಟ್ ಜತೆ ಸಹಯೋಗವನ್ನು ಹೊಂದಿದೆ. ಹೀಗಾಗಿ ವಾಟ್ಸಾಪ್ ಮೂಲಕ ಜಿಯೋ ಮಾರ್ಟ್ನಿಂದ ದಿನಸಿ ಸಾಮಗ್ರಿಗಳನ್ನು ಖರೀದಿಸಬಹುದು. ಇದಕ್ಕೆ ಪ್ರತಿಯಾಗಿ ಡಿಸ್ಕೌಂಟ್ ಕೂಡ ಸಿಗಲಿದೆ.
ಇದಕ್ಕಾಗಿ ಜಿಯೋ ಮಾರ್ಟ್ 79770 79770 ನಂಬರ್ ಸೇವ್ ಮಾಡಿಕೊಂಡು ಚಾಟ್ ಬಾಕ್ಸ್ ಲ್ಲಿ ‘ಹಾಯ್’ ಎಂದು ಟೈಪ್ ಮಾಡಿ. ಆಗ ದೊರೆಯುವ ಸಾಮಗ್ರಿಗಳ ಪಟ್ಟಿಯಲ್ಲಿ, ನಿಮಗೆ ಬೇಕಾದವುಗಳನ್ನು ಹುಡುಕಿ ಕಾರ್ಟ್ಗೇ ಸೇರಿಸಿ. ಬಳಿಕ ವಾಟ್ಸಾಪ್ ಪೇ ಯುಪಿಐ ಮೂಲಕ ಹಣ ಪಾವತಿಸಿ ಆರ್ಡರ್ ಮಾಡಿದರೆ ದಿನಸಿ ಸಾಮಗ್ರಿಗಳು ಮನೆ ಬಾಗಿಲಿಗೇ ಬರಲಿವೆ.
ಟ್ಯಾಕ್ಸಿ ಬುಕ್ ಮಾಡಿ...
ವಾಟ್ಸಾಪ್ ಬಳಸಿಕೊಂಡು ಬಾಡಿಗೆಗೆ ಟ್ಯಾಕಿಯನ್ನು ಮನೆ ಬಾಗಿಲಿಗೇ ತರಿಸಿಕೊಳ್ಳಬಹುದು. ಟ್ಯಾಕ್ಸಿ ಸೇವೆ ಒದಗಿಸುವ ಪ್ರಮುಖ ಸಂಸ್ಥೆಗಳಲ್ಲೊ೦ದಾಗಿರುವ ಉಬರ್ ಬುಕ್ (Uber Booking) ಮಾಡಬಹುದು. ಅದಕ್ಕಾಗಿ ಉಬರ್ ಆ್ಯಪ್‌ಗೆ ಹೋಗದೇ 7292000002 ನಂಬರ್ ನಿಮ್ಮ ಮೊಬೈಲ್‌ನಲ್ಲಿ ಸೇವ್ ಮಾಡಿಕೊಟ್ಟುಕೊಳ್ಳಿ. ನಿಮಗೆ ಟ್ಯಾಕ್ಸಿ ಅಗತ್ಯವಿದ್ದಾಗ ವಾಟ್ಸಾಪ್ ಚಾಟ್ ಓಪನ್ ಮಾಡಿ ‘ಹಾಯ್’ ಎಂದು ಟೈಪ್ ಮಾಡಿ, ನಿಮ್ಮ ಪಿಕ್‌ಅಪ್ ಲೊಕೇಷನ್ ಮತ್ತು ನೀವು ಹೋಗುವ ಸ್ಥಳವನ್ನು ನಮೂದಿಸಿ. ಕೂಡಲೇ ನಿಮಗೆ ತಗಲುವ ವೆಚ್ಚ ಮತ್ತು ಡ್ರೈವರ್ ಮಾಹಿತಿ ದೊರೆಯುತ್ತದೆ.
ಇದನ್ನೂ ಓದಿ: 8th ಪಾಸಾದವರಿಗೂ ಕೂಡ ITI ಮಾಡುವ ಸೌಭಾಗ್ಯ ಕಲ್ಪಿಸಿದ ಸರ್ಕಾರ : ಅರ್ಜಿ ಸಲ್ಲಿಕೆ ಆರಂಭ
ಡಾಕ್ಟರ್ ಸೇವೆಯೂ ಲಭ್ಯ
ವಿಶೇಷವೆಂದರೆ ವಾಟ್ಸಾಪ್ ಮೂಲಕ ಸುಲಭವಾಗಿ ಪ್ರಾಥಮಿಕ ಆರೋಗ್ಯ ಸೇವೆಗಳನ್ನು ಸಹ ಪಡೆದುಕೊಳ್ಳಲು ಸಾಧ್ಯವಿದೆ. ಅದಕ್ಕಾಗಿ ವಾಟ್ಸಾಪ್ ಬಳಕೆದಾರರು +917290055552 ನಂಬರ್ ಸೇವ್ ಮಾಡಿಕೊಂಡು ‘ಹಾಯ್’ ಎಂದು ಟೈಪ್ ಮಾಡಿ ಸೆಂಡ್ ಮಾಡಬಹುದು. ನಂತರ ಕಾಣಿಸುವ ಮೆನುವಿನಲ್ಲಿ ನಿಮಗೆ ಬೇಕಾದ ಸೇವೆಗಳನ್ನು ಆಯ್ಕೆ ಮಾಡಿ, ವೈದ್ಯರಿಗೆ ನಿಮ್ಮ ಅನಾರೋಗ್ಯ ಮಾಹಿತಿಯನ್ನು ನೀಡಿದರೆ ಆರೋಗ್ಯ ಸೇವೆಯೂ ಸಿಗಲಿದೆ.
ಡಿಜಿಲಾಕರ್ ಮೂಲಕ ದಾಖಲೆ ಪತ್ರ ಪಡೆಯಿರಿ
ಪಾನ್ ಕಾರ್ಡ್, ಡ್ರೈವಿಂಗ್ ಲೆಸೆನ್ಸ್ ಇತ್ಯಾದಿ ದಾಖಲೆಗಳನ್ನು ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು ಅವಕಾಶವಿದೆ. ಇದಕ್ಕಾಗಿ ಮೊದಲಿಗೆ ಡಿಜಿಲಾಕರ್‌ನಲ್ಲಿ ಅಧಿಕೃತ ಖಾತೆ ತೆರೆದು ಪಾನ್ ಕಾರ್ಡ್, ಡ್ರೈವಿಂಗ್ ಲೈಸೆನ್ಸ್, ಆರ್‌ಸಿ ಇತ್ಯಾದಿ ದಾಖಲೆಗಳನ್ನು ಸಂಗ್ರಹಿಸಿಟ್ಟು, ಅಗತ್ಯ ಬಿದ್ದಾಗ ಡೌನ್‌ಲೋಡ್ ಮಾಡಬಹುದು.
ಹೀಗೆ ಮಾಡಲು 9013151515 ನಂಬರ್ ಸೇವ್ ಮಾಡಿಕೊಳ್ಳಬೇಕು. ನಿಮಗೆ ಡಿಜಿಟಲ್ ದಾಖಲೆಗಳು ಬೇಕಾದಾಗ ವಾಟ್ಸಾಪ್ ಚಾಟ್ ಓಪನ್ ಮಾಡಿ ‘ಹಾಯ್’ ಎಂದು ಟೈಪ್ ಮಾಡಿ. ಡಿಜಿಲಾಕರ್ ಡಾಕ್ಯುಮೆಂಟ್‌ಗಳನ್ನು ಪ್ರವೇಶಿಸಲು ಮೆನು ಪ್ರಾಂಪ್ಟ್ಳನ್ನು ಅನುಸರಿಸಬೇಕು.
...ಹೀಗೆ ವಾಟ್ಸಾಪ್ ಈಗಾಗಲೇ ಇಂತಹ ಹಲವು ಸೇವೆಗಳನ್ನು ಒದಗಿಸುತ್ತಿದ್ದು, ಮತ್ತಷ್ಟು ಮಗದಷ್ಟು ಸೇವೆಗಳು ದಿನೇ ದಿನೆ ಅಪ್ಡೇಟ್ ಆಗುತ್ತಲೇ ಇವೆ. ಅರಿತು ಬಳಸುವ ಮೂಲಕ ವಾಟ್ಸಾಪ್ ಬಳಕೆದಾರರು ವಿವಿಧ ಸೇವೆಗಳನ್ನು ಸುಲಭದಲ್ಲಿ ಪಡೆಯಬಹುದಾಗಿದೆ.
ಇದನ್ನೂ ಓದಿ: ಸರಕಾರಿ ಯೋಜನೆಗಳ ಮಾಹಿತಿಯನ್ನು ರೈತರ ಮನೆ ಬಾಗಿಲಿಗೇ ತರುವ ಕೃಷಿಸಖಿ ಮತ್ತು ಪಶುಸಖಿಯರು
Most Popular
- ಬ್ಯಾಂಕುಗಳಿಗೆ ಇನ್ನು ವಾರದಲ್ಲಿ ಎರಡು ದಿನ ರಜೆ Two Bank Holidays in a Week
- ರೈತರು ಸರಕಾರದ ವಿವಿಧ ಯೋಜನೆಗಳ ಪ್ರಯೋಜನ ಪಡೆಯಲು ಎಫ್ಐಡಿ ನೋಂದಣಿ ಕಡ್ಡಾಯ... Farmers Identity Details - FID
- ಅತಿಥಿ ಉಪನ್ಯಾಸಕರಿಗೆ ವೇತನ ಹೆಚ್ಚಳ | ಯಾರಿಗೆ ಎಷ್ಟು ಸಂಬಳ ನಿಗದಿಯಾಗಿದೆ? Salary increase for guest lecturers
- ಪಿಯುಸಿ ಪಾಸಾಗಿದ್ರೆ ಗ್ರಾಮ ಪಂಚಾಯಿತಿ ಗ್ರಂಥಾಲಯ ಮೇಲ್ವಿಚಾರಕರ ಹುದ್ದೆಗಳಿಗೆ ಅರ್ಜಿ ಹಾಕಿ... Gram Panchayat Library Supervisor Recruitment 2024 Dharwad
- ಆಸ್ತಿ ನೋಂದಣಿಯನ್ನು ಇನ್ಮುಂದೆ ಎಲ್ಲಿಯಾದರೂ ಮಾಡಿ | ರಾಜ್ಯಾದ್ಯಂತ ಹೊಸ ನಿಯಮ ಜಾರಿ Anywhere Registration Karnataka
- ರೈತರು ಮನೆಯಲ್ಲಿಯೇ ಯೂರಿಯಾ ಗೊಬ್ಬರ ತಯಾರಿಸುವ ವಿಧಾನ Method of Urea Preparation from Cattle Urine
- ನಿಮ್ಮ ಫೇಸ್ಬುಕ್ ಅಕೌಂಟ್ ಸೇಫ್ ಆಗಿಟ್ಟುಕೊಳ್ಳುವುದು ಹೇಗೆ? ಇಲ್ಲಿದೆ ಸುಲಭ ತಂತ್ರಗಳು Facebook Account Safe Tricks
- ಮಾವಿನ ಮರಗಳ ಇಳುವರಿ ಹೆಚ್ಚಳಕ್ಕೆ ವಿಜ್ಞಾನಿಗಳ ಹೊಸ ಸಂಶೋಧನೆ How to Increase Mango Yield
- SSLC, PUC ಪಾಸಾದವರಿಗೆ ಜಿಲ್ಲಾ ನ್ಯಾಯಾಲಯ ಹುದ್ದೆಗಳಿಗೆ ಅರ್ಜಿ | ಮಾಸಿಕ ಸಂಬಳ ₹42,000 | Uttara Kannada District Court recruitment 2024
- ಸರಕಾರಿ ಯೋಜನೆಗಳ ಮಾಹಿತಿಯನ್ನು ರೈತರ ಮನೆ ಬಾಗಿಲಿಗೇ ತರುವ ಕೃಷಿಸಖಿ ಮತ್ತು ಪಶುಸಖಿಯರು Krishi Sakhi and Pashu Sakhi in Karnataka