ಆಸ್ತಿ ನೋಂದಣಿಯನ್ನು ಇನ್ಮುಂದೆ ಎಲ್ಲಿಯಾದರೂ ಮಾಡಿ | ರಾಜ್ಯಾದ್ಯಂತ ಹೊಸ ನಿಯಮ ಜಾರಿ Anywhere Registration Karnataka
GOVT SCHEME
26 August 2024
Anywhere Registration Karnataka : ಜನಸಾಮಾನ್ಯರಿಗೆ ಆಸ್ತಿ ನೋಂದಣಿ ವಿಚಾರದಲ್ಲಿ ತ್ವರಿತ ಸೇವೆ ಕಲ್ಪಿಸಲು ಉದ್ದೇಶಿತ ‘ಎಲ್ಲಾದರೂ ನೋಂದಣಿ’ (Anywhere Registration) ಸೌಲಭ್ಯವನ್ನು ರಾಜ್ಯಾದ್ಯಂತ ವಿಸ್ತರಣೆ ಮಾಡಲು ಸರ್ಕಾರ ಮುಂದಾಗಿದೆ.
ಇನ್ಮು೦ದೆ ರಾಜ್ಯದಲ್ಲಿರುವ ಎಲ್ಲಾ 35 ಜಿಲ್ಲಾ ನೋಂದಣಿ ಕಚೇರಿ (District Registrar Office) ಹಾಗೂ 257 ಉಪನೋಂದಣಿ ಕಚೇರಿಗಳಲ್ಲಿ (Sub registrar office) ಸಾರ್ವಜನಿಕರು ಆಯಾ ಜಿಲ್ಲಾ ವ್ಯಾಪ್ತಿಯಲ್ಲಿ ಅವರು ಬಯಸಿದ ದಿನ, ಸಮಯದಲ್ಲಿ ಸ್ಥಿರಾಸ್ತಿಯನ್ನು ನೋಂದಾಯಿಸಬಹುದು.
ಇದನ್ನೂ ಓದಿ: ಗೃಹ ಆರೋಗ್ಯ ಯೋಜನೆ ಜಾರಿ: ಇನ್ನು ಮನೆಬಾಗಿಲಲ್ಲೇ ಸಿಗುತ್ತೆ ಚಿಕಿತ್ಸೆ-ಔಷಧಿ Gruha Arogya Scheme Karnataka
ಬೆಂಗಳೂರಿನಿ೦ದ ರಾಜ್ಯಾದ್ಯಂತ
ಕಳೆದ 2011ರಲ್ಲಿಯೇ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ‘ಎನಿವೇರ್ ರಿಜಿಸ್ಟ್ರೇಷನ್’ ಸೌಲಭ್ಯ ಜಾರಿಗೊಳಿಸಲು ನೋಂದಣಿ ಕಾಯ್ದೆ 1908ರ ಕಲಂ (5) ಹಾಗೂ ಕಲಂ (6)ಅಡಿ ಅನುವು ಮಾಡಿಕೊಡಲಾಗಿತ್ತು. ಇಷ್ಟು ದಿನ ಬೆಂಗಳೂರಿಗೆ ಮಾತ್ರ ಸೀಮಿತವಾಗಿದ್ದ ಸೇವೆಯನ್ನು ರಾಜ್ಯಾದ್ಯಂತ ಚಾಲ್ತಿಗೆ ತರಲು ಉದ್ದೇಶಿಸಲಾಗಿದೆ ಎಂದು ಕಂದಾಯ ಸಚಿವ ಕೃಷ್ಣಬೈರೇಗೌಡ ಅವರು ಮಾಹಿತಿ ನೀಡಿದ್ದಾರೆ.
ಬೆಂಗಳೂರು ನಗರ ಜಿಲ್ಲೆಯ ಗಾಂಧಿನಗರ, ಬಸವನಗುಡಿ, ಜಯನಗರ, ಶಿವಾಜಿನಗರ ಹಾಗೂ ರಾಜಾಜಿನಗರ ಉಪನೋಂದಣಿ ಕಚೇರಿಗಳಲ್ಲಿ ಪ್ರಾಯೋಗಿಕವಾಗಿ ಜಾರಿಗೆ ತಂದ ಯೋಜನೆ ಯಶಸ್ವಿಯಾಗಿದೆ. ಬೆಂಗಳೂರು ನಗರದ ಜಿಲ್ಲಾ ಉಪನೋಂದಣಿ ಕಚೇರಿ ವ್ಯಾಪ್ತಿಯ ಯಾವುದಾದರೂ ಉಪನೋಂದಣಿ ಕಚೇರಿಯಲ್ಲಿ ಆಸ್ತಿ ನೋಂದಣಿಗೆ ಅವಕಾಶ ಕಲ್ಪಿಸಲಾಗಿತ್ತು.
ಬೆಂಗಳೂರು ನಗರ ಜಿಲ್ಲೆಯಲ್ಲಿ ಪ್ರಾಯೋಗಿಕವಾಗಿ ಜಾರಿಗೊಳಿಸಿದ ತುಮಕೂರು ಹಾಗೂ ಬೆಳಗಾವಿ ಜಿಲ್ಲೆಗಳಲ್ಲಿ ಕಳೆದ ಮಾರ್ಚ್ 14ರಿಂದ ಪ್ರಾಯೋಗಿಕವಾಗಿ ಅನುಷ್ಠಾನಕ್ಕೆ ತರಲಾಗಿದೆ. ತುಮಕೂರು ಮತ್ತು ಬೆಳಗಾವಿ ಜಿಲ್ಲೆಗಳಲ್ಲಿ 72 ಸಬ್ ರಿಜಿಸ್ಟ್ರಾರ್ ಕಚೇರಿಗಳು ಈ ಯೋಜನೆ ವ್ಯಾಪ್ತಿಗೆ ಒಳಪಟ್ಟಿದ್ದು; ಇದೀಗ ರಾಜ್ಯಾದ್ಯಂತ ಈ ವ್ಯವಸ್ಥೆ ಜಾರಿಯಾಗುತ್ತಿದೆ.
ಯಾವುದಾದರೂ ಕಚೇರಿಯಲ್ಲಿ ನೋಂದಣಿ ಮಾಡಬಹುದು
ಸೆಪ್ಟೆಂಬರ್ ತಿಂಗಳಿ೦ದ ‘ಎನಿವೇರ್ ನೋಂದಣಿ’ ವ್ಯವಸ್ಥೆಯಡಿ ಯಾವುದೇ ವ್ಯಕ್ತಿ ನೋಂದಣಿ ದಸ್ತಾವೇಜನ್ನು ಆಯಾ ಜಿಲ್ಲಾ ವ್ಯಾಪ್ತಿಯ ಯಾವುದಾದರೂ ಉಪನೋಂದಣಿ ಕಚೇರಿಯಲ್ಲಿ ನೋಂದಣಿ ಮಾಡಿಕೊಳ್ಳಬಹುದಾಗಿದೆ.
ದಸ್ತಾವೇಜುಗಳ ನೋಂದಣಿಯಲ್ಲಿ ಅನಗತ್ಯ ವಿಳಂಬವನ್ನು ತಡೆಗಟ್ಟಲು, ನೋಂದಣಿ ಪ್ರಕ್ರಿಯೆ ಸುಲಭಗೊಳಿಸಲು ಹಾಗೂ ಉಪ ನೋಂದಣಾಧಿಕಾರಿ ಕಚೇರಿ ಸಿಬ್ಬಂದಿ ಮೇಲಿನ ಕೆಲಸದ ಒತ್ತಡ ಕಡಿಮೆ ಮಾಡುವುದು ಈ ಯೋಜನೆ ಉದ್ದೇಶವಾಗಿದೆ.
ದಸ್ತಾವೇಜು ನೋಂದಣಿಯಲ್ಲಿ ಪಾರದರ್ಶಕತೆ ತರಲು, ತ್ವರಿತ ಸೇವೆ ಒದಗಿಸಲು, ವಿಳಂಬ ಹಾಗೂ ಕಚೇರಿಗಳಲ್ಲಿ ಜನದಟ್ಟಣೆ ನಿಯಂತ್ರಣ ಮಾಡಲು ಈ ಯೋಜನೆ ಪರಿಣಾಮಕಾರಿಯಾಗಿದೆ. ಇದರಿಂದ ಜನರ ಸಮಯ ಉಳಿಯಲಿದೆ, ನೊಂದಣಿ ಕಚೇರಿಯ ಸಿಬ್ಬಂದಿ ಮೇಲಿನ ಒತ್ತಡವೂ ಕಡಿಮೆ ಆಗಲಿದೆ ಎಂದು ಕಂದಾಯ ಸಚಿವರು ಹೇಳಿದ್ದಾರೆ.
Most Popular
- ಕೇಂದ್ರ ಸರ್ಕಾರದ ಗೇಲ್ ಇಂಡಿಯಾ ಲಿಮಿಟೆಡ್ ಹುದ್ದೆಗಳಿಗೆ ಅರ್ಜಿ ಆಹ್ವಾನ GAIL India Limited Recruitment 2024
- BSNL ಸೂಪರ್ ರೀಚಾರ್ಜ್ ಯೋಜನೆ : ಕೇವಲ 7 ರೂಪಾಯಿಗೆ ನಿತ್ಯ 2GB ಡೇಟಾ, ಬರೋಬ್ಬರಿ 13 ತಿಂಗಳು ವ್ಯಾಲಿಡಿಟಿ BSNL 13 Months Validity Cheap Recharge Plan
- ಕೃಷಿ ಇಲಾಖೆಯಲ್ಲಿ 600ಕ್ಕೂ ಹೆಚ್ಚು ಹುದ್ದೆಗಳ ನೇಮಕಾತಿ | ಯಾವೆಲ್ಲ ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ? Karnataka Agri Department Recruitment 2024
- ಡಿಸಿಸಿ ಬ್ಯಾಂಕ್ SDA ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ SCDCC Bank Recruitment 2024
- ಸರ್ಕಾರಿ ಕೋಟಾ ಬಿ.ಇಡಿ ಕೋರ್ಸ್ ವ್ಯಾಸಂಗಕ್ಕೆ ಅರ್ಜಿ ಆಹ್ವಾನ Karnataka B.Ed Course Online Application
- ರೈತರು ಸರಕಾರದ ವಿವಿಧ ಯೋಜನೆಗಳ ಪ್ರಯೋಜನ ಪಡೆಯಲು ಎಫ್ಐಡಿ ನೋಂದಣಿ ಕಡ್ಡಾಯ... Farmers Identity Details - FID
- ಅಧಿಕ ಇಳುವರಿಗೆ ತಪ್ಪದೇ ಮಣ್ಣಿನ ಆರೋಗ್ಯ ತಪಾಸಣೆ ಮಾಡಿಸಿ Soil Health Check
- ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ ಹುದ್ದೆಗಳಿಗೆ ಅರ್ಜಿ ಆಹ್ವಾನ | ಸಂಬಳ 30,000 ರೂಪಾಯಿ India Post Payments Bank (IPPB) Recruitment 2024
- ಪಿಯುಸಿ ಪಾಸಾಗಿದ್ರೆ ಗ್ರಾಮ ಪಂಚಾಯಿತಿ ಗ್ರಂಥಾಲಯ ಮೇಲ್ವಿಚಾರಕರ ಹುದ್ದೆಗಳಿಗೆ ಅರ್ಜಿ ಹಾಕಿ... Gram Panchayat Library Supervisor Recruitment 2024 Dharwad
- ಪಿಯುಸಿ ಪಾಸಾದವರಿಗೆ ಗ್ರಾಮ ಪಂಚಾಯಿತಿ ಹುದ್ದೆಗಳಿಗೆ ಅರ್ಜಿ ಆಹ್ವಾನ Gram Panchayat Library Supervisor Recruitment 2024