ಕೇಂದ್ರ ಸರ್ಕಾರದ ಗೇಲ್ ಇಂಡಿಯಾ ಲಿಮಿಟೆಡ್ ಹುದ್ದೆಗಳಿಗೆ ಅರ್ಜಿ ಆಹ್ವಾನ GAIL India Limited Recruitment 2024

JOBS
16 November 2024

ಕೇಂದ್ರ ಸರ್ಕಾರದ ಗೇಲ್ ಇಂಡಿಯಾ ಲಿಮಿಟೆಡ್ ಹುದ್ದೆಗಳಿಗೆ ಅರ್ಜಿ ಆಹ್ವಾನ GAIL India Limited Recruitment 2024
WhatsApp Group Join Now
Telegram Group Join Now

ಕೇಂದ್ರ ಸರಕಾರದ (Government of India) ಅಧೀನದಲ್ಲಿರುವ ಗೇಲ್ ಇಂಡಿಯಾ ಲಿಮಿಟೆಡ್’ನಲ್ಲಿ (GAIL India Limited Recruitment 2024) ಖಾಲಿ ಇರುವ ಒಟ್ಟು 275 ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಸೀನಿಯರ್ ಎಂಜಿನಿಯರ್ (Senior Engineer), ಸೀನಿಯರ್ ಆಫೀಸರ್ (Senior Officer), ಚೀಫ್ ಮ್ಯಾನೇಜರ್‌ಗಳ (Chief Manager) ನೇಮಕಾತಿಗೆ (GAIL Recruitment 2024) ಅಧಿಸೂಚನೆ ಪ್ರಕಟಿಸಿದ್ದು; ಆಸಕ್ತರು ಇದೇ ಡಿಸೆಂಬರ್ ಡಿಸೆಂಬರ್ 11 ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.


ಈ ಹುದ್ದೆಗಳಿಗೆ ನೇಮಕವಾಗುವ ಅಭ್ಯರ್ಥಿಗಳಿಗೆ ಹುದ್ದೆಗಳಿಗೆ ಅನುಗುಣವಾಗಿ 50,000 ರೂಪಾಯಿಗಳಿಂದ 2,40,000 ರೂಪಾಯಿ ವರೆಗೂ ಮಾಸಿಕ ವೇತನ ನಿಗದಿಪಡಿಸಲಾಗಿದೆ. ಆಯಾ ಹುದ್ದೆಗನುಸಾರ ವಿದ್ಯಾರ್ಹತೆ, ವಯೋಮಿತಿ ಬೇರೆ ಬೇರೆಯಾಗಿದ್ದು, https://gailonline.com ವೆಬ್‌ಸೈಟ್‌ಗೆ ಭೇಟಿ ನೀಡಿ ಅಧಿಸೂಚನೆ ನೋಡಿಕೊಂಡು ಅಭ್ಯರ್ಥಿಗಳು ಅರ್ಜಿ ಸಲ್ಲಿಸುವಂತೆ ಕೋರಲಾಗಿದೆ.


ರಾಜ್ಯಾದ್ಯಂತ ಬಾಗಿಲು ಮುಚ್ಚಲಿವೆ ಕೆವಿಜಿ ಬ್ಯಾಂಕುಗಳು | ಗ್ರಾಮೀಣ ಬ್ಯಾಂಕ್ ವಿಲೀನಕ್ಕೆ ಕೇಂದ್ರ ಸರಕಾರ ಸನ್ನದ್ಧ Merger of Grameen Banks KVG Banks to Closed


ಅರ್ಹತೆಗಳೇನು?


ಕೆಮಿಕಲ್, ಎಲೆಕ್ಟ್ರಿಕಲ್, ಎಲೆಕ್ಟ್ರಾನಿಕ್ಸ್ ಆಂಡ್ ಪವರ್, ಇನ್‌ಸ್ಟ್ರುಮೆಂಟೇಶನ್, ಮೆಕಾನಿಕಲ್, ಸಿವಿಲ್, ಪ್ರೊಡಕ್ಷನ್ ಆಂಡ್ ಇಂಡಸ್ಟ್ರಿಯಲ್, ಪೆಟ್ರೋಕೆಮಿಕಲ್ ಅಥವಾ ಇದಕ್ಕೆ ಪೂರಕ ವಿಷಯಗಳಲ್ಲಿ ಎಂಜಿನಿಯರಿAಗ್ ಪದವಿ ಪಡೆದಿರುವ ಅಭ್ಯರ್ಥಿಗಳಿಗೆ ಅವಕಾಶವಿದೆ. ಕಾನೂನು ಪದವೀಧರರಿಗೂ ಅವಕಾಶವಿದೆ.


ಎಂಬಿಬಿಎಸ್ ಅರ್ಹತೆಯುಳ್ಳವರಿಗೂ ಸೀನಿಯರ್ ಮೆಡಿಕಲ್ ಆಫೀಸರ್ ಹುದ್ದೆಗಳಿವೆ. ಲ್ಯಾಬೊರೇಟರಿ ವಿಭಾಗದಲ್ಲಿನ ಹುದ್ದೆಗಳಿಗೆ ಎಂಎಸ್ಸಿ ಅರ್ಹತೆ ನಿಗದಿಪಡಿಸಲಾಗಿದೆ. ಹಿಂದಿಯಲ್ಲಿ ಸ್ನಾತಕೋತ್ತರ ಪದವಿ ಪಡೆದವರು ಲಾಂಗ್ವೇಜ್ ವಿಭಾಗದ ಹುದ್ದೆಗಳಿಗೆ ಪ್ರಯತ್ನಿಸಬಹುದು.


ಈ ಹುದ್ದೆಗಳಿಗೆ ಕನಿಷ್ಠ 1ರಿಂದ 2 ವರ್ಷಗಳ ಸೇವಾನುಭವ ಹೊಂದಿರಬೇಕು. ಚೀಫ್ ಮ್ಯಾನೇಜರ್ ಹುದ್ದೆಗೂ ಎಂಜಿನಿಯರಿ೦ಗ್ ಪದವಿ ಓದಿದವರು ಅರ್ಜಿ ಸಲ್ಲಿಸಬಹುದು. ಆದರೆ ಈ ಹುದ್ದೆಗಳಿಗೆ 12 ವರ್ಷ ಅದೇ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸಿದ ಅನುಭವ ಹೊಂದಿರಬೇಕು.


ಇನ್ಮುಂದೆ ಇಂಟರ್‌ನೆಟ್ ಇಲ್ಲದೇ ಮೊಬೈಲ್‌ನಲ್ಲೇ ನೋಡಿ ನಿಮ್ಮಷ್ಟದ ಟಿವಿ ಚಾನೆಲ್ D2M Technology Prasar Bharati experiment


ಅರ್ಜಿ ಶುಲ್ಕದ ವಿವರ


ಎಸ್‌ಸಿ/ಎಸ್‌ಟಿ, ವಿಶೇಷಚೇತನ ಅಭ್ಯರ್ಥಿಗಳಿಗೆ ಸಂಪೂರ್ಣ ಶುಲ್ಕ ವಿನಾಯಿತಿ ನೀಡಲಾಗಿದೆ. ಉಳಿದ ಎಲ್ಲಾ ವರ್ಗದವರು 200 ರೂ. ಶುಲ್ಕ ಪಾವತಿಸಬೇಕು. ಆನ್‌ಲೈನ್ ಮೂಲಕವೇ ಶುಲ್ಕ ಪಾವತಿಗೆ ಅವಕಾಶವಿದೆ.


ಅರ್ಜಿ ಸಲ್ಲಿಕೆಯ ಕೊನೆಯ ದಿನಾಂಕ : 11-12-2024


ಅರ್ಜಿ ಲಿಂಕ್ : https://gailebank.gail.co.in/recruitmentSystem/user/er_login.aspx

Most Popular

Related Posts