ಭರ್ಜರಿ ಬಡ್ಡಿ ನೀಡುವ ಪೋಸ್ಟ್ ಆಫೀಸ್ ಸೇವಿಂಗ್ಸ್ ಸ್ಕೀಮ್ | ಈಗಲೇ ಹೂಡಿಕೆ ಮಾಡಿ... National Savings Certificate - NSC

FINANCIAL
15 August 2024

ಭರ್ಜರಿ ಬಡ್ಡಿ ನೀಡುವ ಪೋಸ್ಟ್ ಆಫೀಸ್ ಸೇವಿಂಗ್ಸ್ ಸ್ಕೀಮ್ | ಈಗಲೇ ಹೂಡಿಕೆ ಮಾಡಿ... National Savings Certificate - NSC
WhatsApp Group Join Now
Telegram Group Join Now

National Savings Certificate - NSC : ಇದು ಅತ್ಯಂತ ಸುರಕ್ಷಿತವಾದ, ಸ್ಥಿರ ಮತ್ತು ತೀ ಹೆಚ್ಚು ಬಡ್ಡಿ ನೀಡಿ ನೀಡುವ ಪೋಸ್ಟ್ ಆಫೀಸ್ ಉಳಿತಾಯ ಯೋಜನೆ. ನ್ಯಾಷನಲ್ ಸೇವಿಂಗ್ಸ್ ಸರ್ಟಿಫಿಕೇಟ್  ಎಂದು ಕರೆಯುವ ಈ ಯೋಜನೆಯಡಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಕೂಡ ಹೂಡಿಕೆ ಮಾಡಿರುವುದು ಈಚೆಗೆ ನಡೆದ ಲೋಕಸಭಾ ಚುನಾವಣೆಯಲ್ಲಿ ಅವರು ಸಲ್ಲಿಸಿದ್ದ ಅಫಿಡವಿಟ್’ನಿಂದ ಗೊತ್ತಾಗಿದೆ.


ಹಾಗಾದರೆ ಏನಿದು ನ್ಯಾಷನಲ್ ಸೇವಿಂಗ್ಸ್ ಸರ್ಟಿಫಿಕೇಟ್ (National Savings Certificate - NSC) ಏನಿದು ಯೋಜನೆ? ಅದರ ಲಾಭಗಳೇನು? ಪ್ರಸತು ನೀಡುವ ಬಡ್ಡಿದರವೆಷ್ಟು? ಎಫ್‌ಡಿ ಗೂ ಎನ್‌ಎಸ್‌ಸಿಗೂ ಇರುವ ವ್ಯತ್ಯಾಸವೇನು? ಎಂಬ ವಿವರವನ್ನು ಇಲ್ಲಿ ನೋಡೋಣ...


ಸ್ಥಿರ ಆದಾಯ ಹೂಡಿಕೆಯ ಯೋಜನೆ


ನ್ಯಾಷನಲ್ ಸೇವಿಂಗ್ಸ್ ಸರ್ಟಿಫಿಕೇಟ್ (ಎನ್‌ಎಸ್‌ಸಿ) ಎನ್ನುವುದು ಭಾರತ ಸರಕಾರವು ಅಂಚೆ ಕಛೇರಿಗಳ ಮೂಲಕ ನೀಡುವ ಸ್ಥಿರ ಆದಾಯ ಹೂಡಿಕೆಯ ಯೋಜನೆಯಾಗಿದೆ. ಬಡ ಹಾಗೂ ಕೆಳ ಮಧ್ಯಮವರ್ಗದ ಜನರಿಗೆ ತಮ್ಮ ಆದಾಯವನ್ನು ಉಳಿಸಲು ಹಾಗೂ ಖಾತರಿ ಮೊತ್ತವನ್ನು ಗಳಿಸಲು ಯೋಜನೆಯನ್ನು ಜಾರಿಗೆ ತರಲಾಗಿದೆ.


ಒಂದು ಸಣ್ಣ ಉದಾಹರಣೆಯ ಮೂಲಕ ಇದನ್ನು ಅರ್ಥಮಾಡಿಕೊಳ್ಳಬಹುದು : ಆಗಸ್ಟ್ 15, 2024 ರಂದು ಎನ್‌ಎಸ್‌ಸಿ ಯಲ್ಲಿ  50,000 ಹೂಡಿಕೆ ಮಾಡಿದ್ದೀರಿ, ಅಂದುಕೊಳ್ಳೋಣ. ಅದರ ಪ್ರಸ್ತುತ ಬಡ್ಡಿ ದರವು ಶೇ. 7.7 ಆಗಿರುವುದರಿಂದ ಐದು ವರ್ಷಗಳ ನಂತರ ರೂ. 69.250 ಅನ್ನು ನೀವು ಸ್ವೀಕರಿಸುತ್ತೀರಿ.


ಎನ್‌ಎಸ್‌ಸಿ ಯೋಜನೆಯ ವೈಶಿಷ್ಟ್ಯಗಳು


  • ಈ ಯೋಜನೆಯು ಸರಕಾರದಿಂದ ಬೆಂಬಲಿತ ಆಗಿರುವುದರಿಂದ ಇದನ್ನು ಕಡಿಮೆ ಅಪಾಯ ಹೊಂದಿರುವ ಸುರಕ್ಷಿತ ಹೂಡಿಕೆ ಎಂದು ಪರಿಗಣಿಸಬಹುದು.
  • ಬಡ್ಡಿದರವನ್ನು ಸರಕಾರವು ನಿಗದಿಪಡಿಸುತ್ತದೆ ಮತ್ತು ಮೂರು ತಿಂಗಳಿಗೊಮ್ಮೆ ಪರಿಷ್ಕರಿಸುತ್ತದೆ. ಜೂನ್ 2024ರ ಅನ್ವಯ ಇದರ ಬಡ್ಡಿದರ ವಾರ್ಷಿಕ ಶೇ. 7.7 ಆಗಿದೆ.
  • ಎನ್‌ಎಸ್‌ಸಿ ಯಲ್ಲಿನ ಹೂಡಿಕೆಗಳು ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 80ಸಿ ಅಡಿಯಲ್ಲಿ ತೆರಿಗೆ ಕಡಿತಕ್ಕೆ ಅರ್ಹವಾಗಿದೆ. ವಾರ್ಷಿಕ ಗರಿಷ್ಠ ಮೊತ್ತ ರೂ. 1.5 ಲಕ್ಷ.
  • ಹಣವನ್ನು ಐದು ವರ್ಷಗಳ ವರೆಗೆ ಖಾತೆಯಲ್ಲಿ ಇಡಲಾಗುತ್ತದೆ. ಈ ಮೊದಲು 10 ವರ್ಷ ಇತ್ತಾದರೂ, ಡಿಸೆಂಬರ್ 2015ರಲ್ಲಿ ಅದನ್ನು ಐದು ವರ್ಷಕ್ಕೆ ಸೀಮಿತಗೊಳಿಸಲಾಯಿತು.
  • ನೀವು ಕನಿಷ್ಠ ಹೂಡಿಕೆಯೊಂದಿಗೆ ಪ್ರಾರಂಭಿಸಬಹುದು. ಎನ್‌ಎಸ್‌ಸಿಯಲ್ಲಿ ಹೂಡಿಕೆ ಮಾಡಬಹುದಾದ ಒಟ್ಟು ಮೊತ್ತದ ಮೇಲೆ ಯಾವುದೇ ಗರಿಷ್ಠ ಮಿತಿ ಇಲ್ಲ.


FD ಹಾಗೂ NSCಗೂ ಇರುವ ವ್ಯತ್ಯಾಸವೇನು?


ಎಫ್‌ಡಿ ಹಾಗೂ ಎನ್‌ಎಸ್ಸಿ ಎರಡೂ ಹೂಡಿಕೆ ಆಯ್ಕೆಗಳು ಒಂದೇ ರೀತಿ ಕಂಡರೂ, ಎರಡರ ಕೆಲ ವ್ಯತ್ಯಾಸಗಳು ಇವೆ. 


ಎನ್‌ಎಸ್‌ಸಿಯಲ್ಲಿ ಹಣ ಹೂಡಿಕೆ ಮಾಡಿದ ಬಳಿಕ ಮುಂದಿನ ಐದು ವರ್ಷ ಮೊತ್ತವನ್ನಾಗಲಿ, ಬಡ್ಡಿಯನ್ನಾಗಲಿ ಖಾತೆಯಿಂದ ತೆಗೆಯುವಂತಿಲ್ಲ. ಎಫ್‌ಡಿ ಖಾತೆಯಿಂದ, ನಿಮಗೆ ಸಿಗುವ ಬಡ್ಡಿದರವನ್ನು ತಿಂಗಳಿಗೆ ಅಥವಾ ವರ್ಷಕ್ಕೊಮ್ಮೆ ತೆಗೆದುಕೊಳ್ಳಬಹುದು.


ಇನ್ನು ಎನ್‌ಎಸ್‌ಸಿ ಅಂಚೆ ಕಚೇರಿಯಲ್ಲಿ ಮಾತ್ರ ಇರುವಂತದ್ದು, ಎಫ್‌ಡಿ ಅಂಚೆ ಕಚೇರಿಯ ಜೊತೆಗೆ ಹಲವು ಬ್ಯಾಂಕ್‌ಗಳಲ್ಲೂ ಇದೆ. ಬಡ್ಡಿದರದಲ್ಲಿ ಬ್ಯಾಂಕ್‌ನಿ೦ದ ಬ್ಯಾಂಕ್‌ಗೆ ವ್ಯತ್ಯಾಸವಾಗುತ್ತದೆ.


ಎನ್‌ಎಸ್‌ಸಿಯಲ್ಲಿ ತೆರಿಗೆ ಪ್ರಯೋಜನಗಳು ಜಾಸ್ತಿ. ನೀವು ಒಂದು ವೇಳೆ ನಿಮ್ಮ ಆದಾಯದ ಒಂದು ಭಾಗವನ್ನು ಎನ್‌ಎಸ್‌ಸಿಯಲ್ಲಿ ಹೂಡಿಕೆ ಮಾಡಿದ್ದರೆ, ನಿಮ್ಮ ಆದಾಯದಿಂದ ಆ ಮೊತ್ತವನ್ನು ಕಡಿತಗೊಳಿಸಿ. ಉಳಿದ ಮೊತ್ತಕ್ಕೆ ಮಾತ್ರ ಆದಾಯ ತೆರಿಗೆ ನಿಗದಿ ಆಗುತ್ತದೆ.


ಉದಾಹರಣೆಗೆ ನಿಮ್ಮ ವಾರ್ಷಿಕ ಆದಾಯ ರೂ. 5 ಲಕ್ಷ ಇದ್ದು, ನೀವು ರೂ. 1 ಲಕ್ಷ ಮೊತ್ತವನ್ನು ಎನ್‌ಎಸ್‌ಸಿಯಲ್ಲಿ ಹೂಡಿಕೆ ಮಾಡಿದರೆ ಆದಾಯ ತೆರಿಗೆಯನ್ನು ರೂ. 4 ಲಕ್ಷಕ್ಕೆ ವಿಧಿಸಲಾಗುತ್ತದೆ.

Most Popular

Related Posts