ಮಂಗಳ, ಶುಕ್ರವಾರಗಳಲ್ಲಿ ಹಣ ನೀಡಬಾರದು ಎನ್ನುತ್ತಾರೆ ಯಾಕೆ? ಹೊಸ ಬಟ್ಟೆಗೆ ಅರಿಶಿಣ ಯಾಕೆ ಹಚ್ಚುತ್ತಾರೆ?

ಹಿಂದೂ ಸಂಪ್ರದಾಯದ ಭಾಗವಾಗಿ ಪ್ರತಿ ಒಳ್ಳೆಯ ಕೆಲಸಕ್ಕೂ ಅರಿಶಿಣ ಬಳಸುತ್ತಾರೆ. ಶುಭಕಾರ್ಯಗಳಲ್ಲಿ, ಯಜ್ಞದೀಕ್ಷಾ ಸಮಯಗಳಲ್ಲಿ ಬಟ್ಟೆಯನ್ನು ಅರಿಶಿಣ ನೀರಿನಲ್ಲಿ ಹಾಕಿ ಒಣಗಿಸುವುದು ಅನಾದಿಕಾಲದಿಂದ ಬರುತ್ತಿರುವ ಆಚಾರ. ಒಗೆದು ಒಣಗಿಸಿದ ವಸ್ತ್ರಗಳನ್ನು ಇತರರಿಗೆ ನೀಡಬಾರದು. ಹೊಸ ಬಟ್ಟೆಗಳನ್ನೇ ನೀಡಬೇಕು. ಅರಿಶಿಣ ನೀರಿನಲ್ಲಿ ಒಗೆದರೆ ವಸ್ತ್ರಗಳು ಹಳೆಯದಾಗುತ್ತವೆ. ಹಾಗಾಗಿ ಅರಿಶಿಣ ನೀರಿನಲ್ಲಿ ಒಗೆದ ಫಲಕ್ಕಾಗಿ ಇತರರಿಗೆ ಹೊಸ ಬಟ್ಟೆ ನೀಡುವಾಗ ಅರಿಶಿಣ ಕೊಂಬು ಇಡುತ್ತಾರೆ. ಈ ರೀತಿ ಮಾಡುವುದು ಮಂಗಳಕರ ಎಂದು ಭಾವಿಸುತ್ತಾರೆ. ಅರಿಶಿಣ ಕ್ರಿಮಿ ಸಂಹಾರಿಣಿ, ಅನೇಕ ಕೈಗಳು ಬದಲಾಗಿ ಬರುವ ಹೊಸ ಬಟ್ಟೆಗಳಲ್ಲಿ ಯಾವುದೇ ಕ್ರಿಮಿಗಳಿದ್ದರೂ ಅರಿಶಿಣ ನಿವಾರಿಸುತ್ತದೆ. ಆಗಾಗ ಧರಿಸಿದರೂ ಯಾವುದೇ ಅನಾರೋಗ್ಯ ಬರದಂತೆ ಇರುತ್ತದೆ ಎಂದು ಭಾವಿಸುತ್ತಾರೆ.

ಇನ್ನು ಮಂಗಳ, ಶುಕ್ರವಾರಗಳಲ್ಲಿ ಯಾರಿಗೂ ಹಣ ಕೊಡದೆ ಇರುವ ಸಂಗತಿಯನ್ನು ನೋಡೋಣ. ಶ್ರೀಮಹಾಲಕ್ಷ್ಮಿದೇವಿ ಶ್ರೀ ಭೃಗುಮಹರ್ಷಿ ಮಗಳು. ಶುಕ್ರವಾರಕ್ಕೆ ಮತ್ತೊಂದು ಹೆಸರು ಭೃಗುವಾರ. ಮಂಗಳವಾರ ಕುಜಗ್ರಹಕ್ಕೆ ಸಂಬಂಧಿಸಿದ್ದು. ಶುಕ್ರವಾರ ಯಾರಾದರೂ ಸಾಲ ಕೊಟ್ಟರೆ ತಿರುಗಿ ವಾಪಸ್ ಬರುವುದು ಕಷ್ಟ ಎಂದೂ, ಮಂಗಳವಾರದ ದಿನ ಸಾಲ ನೀಡಿದರೆ ಜಗಳ ನಡೆಯುತ್ತದೆಂಬ ನಂಬಿಕೆ ಇದೆ.

ಹಾಗಾಗಿ ಈ ಎರಡು ದಿನಗಳಲ್ಲಿ ಯಾರಿಗೂ ಸಾಲ ನೀಡಲ್ಲ. ಇದು ಸಂಪೂರ್ಣ ಅಶಾಸ್ತ್ರೀಯವಾದ ವಾದ. ವಾಸ್ತವಕ್ಕೆ ಮಂಗಳ, ಶುಕ್ರವಾರಗಳಲ್ಲಿ ಸಾಲ ತೀರಿಸಿಕೊಳ್ಳಲು, ಸ್ವಂತಕ್ಕೆ, ಕುಟುಂಬದ ವ್ಯವಹಾರಗಳಿಗಾಗಿ ಧಾರಾಳವಾಗಿ ಖರ್ಚು ಮಾಡಬಹುದು. ಈ ರೀತಿಯ ನಿಯಮಗಳು ಜನ ನಂಬಿದಷ್ಟು ದಿನ ಮುಂದುವರೆಯುತ್ತಲೇ ಇರುತ್ತವೆ. ಅಷ್ಟೇ ಹೊರತು ಮಂಗಳ, ಶುಕ್ರವಾರಕ್ಕೂ ಹಣ ಕೊಡುವುದಕ್ಕೂ ಯಾವುದೇ ಸಂಬಂಧ ಇಲ್ಲ.

SHARE