ಆ ಒಂದು ಗಿಡವನ್ನು ಮನೆಯಲ್ಲಿ ಇಟ್ಟುಕೊಂಡರೆ ಸಾಕು..! ಎಷ್ಟೇ ದುರದೃಷ್ಟ ಇದ್ದರೂ “ಲಕ್” ಕೂಡಿಬರುತ್ತದಂತೆ..!

ಬಹಳಷ್ಟು ಮಂದಿ ತಮ್ಮತಮ್ಮ ಮನೆಗಳಲ್ಲಿ ತುಳಸಿ, ಬ್ಯಾಂಬೂ, ಮನಿ ಪ್ಲಾಂಟ್, ಅಪರಾಜಿತದಂತಹ ಗಿಡಗಳನ್ನು ಬೆಳೆಸಿಕೊಳ್ಳುತ್ತಾರೆ. ಇದರಿಂದ ಮನೆಯಲ್ಲಿರುವವರಿಗೆ ಆರೋಗ್ಯ ಚೆನ್ನಾಗಿರುತ್ತದೆ. ಹಣ ನಿಲ್ಲುತ್ತದೆ ಎಂಬುದು ಅವರ ನಂಬಿಕೆ. ಆದರೆ ಇದೆಲ್ಲಾ ಓಕೆ. ಆದರೆ… ಬ್ಯಾಂಬೂ ಗಿಡದ ವಿಚಾರಕ್ಕೆ ಬಂದರೆ ಮಾತ್ರ ಅದನ್ನು ಒಂದು ನಿರ್ದಿಷ್ಟ ಪದ್ಧತಿಯಲ್ಲಿ ಬೆಳೆಸಿದರೆ ಆ ಮೂಲಕ ಮನೆಯಲ್ಲಿ ಪಾಸಿಟೀವ್ ಎನರ್ಜಿ ಬರುತ್ತದೆ. ಇದರಿಂದ ಎಲ್ಲವೂ ಒಳಿತಾಗುತ್ತದೆ. ಹಾಗಿದ್ದರೆ.. ಬ್ಯಾಂಬೂ ಗಿಡವನ್ನು ಮನೆಯಲ್ಲಿ ಹೇಗೆ ಇಟ್ಟುಕೊಳ್ಳಬೇಕು ಎಂದು ಈಗ ತಿಳಿದುಕೊಳ್ಳೋಣ.

ಫೆಂಗ್ ಶೂಯಿ ವಾಸ್ತು ಪ್ರಕಾರವಾದರೆ ಬ್ಯಾಂಬು ಗಿಡಗಳನ್ನು ಭೂಮಿ, ನೀರು, ಅಗ್ನಿ, ಲೋಹ ಎಂಬ ಅಂಶಗಳನ್ನು ಪ್ರತಿಬಿಂಬಿಸುವಂತೆ ಇಟ್ಟುಕೊಳ್ಳಬೇಕಂತೆ. ಅದರಿಂದ ಆ ಮನೆಯಲ್ಲಿ ಪಾಸಿಟೀವ್ ಎನರ್ಜಿ ಪಸರಿಸಿ ಎಲ್ಲರಿಗೂ ಒಳಿತಾಗುತ್ತದೆ. ಅಂದುಕೊಂಡಿದ್ದು ನೆರವೇರುತ್ತದಂತೆ. ಆದರೆ ಆಯಾ ಅಂಶಗಳನ್ನು ಪ್ರತಿಬಿಂಬಿಸುವಂತೆ ಗಿಡವನ್ನು ಇಟ್ಟುಕೊಳ್ಳಬೇಕೆಂದರೆ ಏನು ಮಾಡಬೇಕು ಎಂದು ನೋಡೋಣ..!

  • ಬ್ಯಾಂಬೂ ಗಿಡವನ್ನು ಒಂದು ಪುಟ್ಟ ಕಂಟೈನರ್‌ನಲಿ ಇಟ್ಟು ಅದರಲ್ಲಿ 2-3 ಇಂಚು ನೀರು ಹಾಕಬೇಕು. ಇದರಿಂದ ನೀರು ಎಂಬ ಅಂಶ ಪ್ರತಿಬಿಂಬಿಸುತ್ತದೆ.
  • ಆ ನೀರಿನಲ್ಲಿ ಯಾವುದಾದರೂ ಒಂದು ನಾಣ್ಯವನ್ನು ಹಾಕಬೇಕು. ಇದರಿಂದ ಲೋಹ ಎಂಬ ಅಂಶ ಪೂರ್ಣವಾಗುತ್ತದೆ.
  • ಆ ನೀರಿನಲ್ಲಿ ಕಲ್ಲುಗಳನ್ನು ಹಾಕಿದರೆ ಅದು ಭೂಮಿಯನ್ನು ಪ್ರತಿನಿಧಿಸುತ್ತದೆ.
  • ಇನ್ನು ಆ ಗಿಡ ಅಗ್ನಿಯನ್ನು ಪ್ರತಿಬಿಂಬಿಸಬೇಕಾದರೆ ಅದರ ಸುತ್ತಲೂ ಕೆಂಪು ಬಣ್ಣದ ದಾರ ಸುತ್ತಬೇಕು. ಆಗ ನಾಲ್ಕು ಅಂಶಗಳು ಪ್ರತಿಬಿಂಬಿಸುತ್ತವೆ.
  • ಬಳಿಕ ಗಿಡಗಳು ಬೆಸಸಂಖ್ಯೆಯಲ್ಲಿ ಇರದಂತೆ ನೋಡಿಕೊಳ್ಳಬೇಕು. ಆ ರೀತಿ ಸರಿಪಡಿಸಿದ ಬಳಿಕ ಆ ಗಿಡವನ್ನು ಸೂರ್ಯನ ರಶ್ಮಿ ತಾಕದ ಪ್ರದೇಶದಲ್ಲಿ ಇಡಬೇಕು. ನೀರನ್ನು ಆಗಾಗ ಬದಲಾಯಿಸುತ್ತಾ ಇರಬೇಕು. ಇದರಿಂದ ನಿಮ್ಮ ಮನೆಯಲ್ಲಿ ಪಾಸಿಟೀವ್ ಎನರ್ಜಿ ಪ್ರವಹಿಸುತ್ತದೆ. ಎಲ್ಲರಿಗೂ ಲಕ್ ಕೂಡಿಬರುತ್ತದೆ..!
SHARE