ಶ್ರೀದೇವಿ ಈತನ ಪತ್ನಿಯಂತೆ..! ನಿಧನದ ಬಳಿಕ ಊಟ ಬಿಟ್ಟು ಆಚಾರದ ಪ್ರಕಾರ “ತಲೆ” ಬೋಳಿಕೊಂಡ.?

ಖ್ಯಾತ ಬಾಲಿವುಡ್ ತಾರೆ ಶ್ರೀದೇವಿ ನಿಧನರಾಗಿ ಸುಮಾರು 10 ದಿನಗಳಾಗುತ್ತಿದೆ. ಆದರೂ ಅನೇಕ ಮಂದಿ ಅಭಿಮಾನಿಗಳು ಮಾತ್ರ ಇನ್ನೂ ವಿಷಾದದಲ್ಲಿ ಮುಳುಗಿದ್ದಾರೆ. ಆಕೆ ಈ ಭೂಮಿ ಮೇಲೆ ಇಲ್ಲ ಎಂಬ ವಿಷಯವನ್ನು ಅವರು ಇನ್ನೂ ನಂಬಲು ಸಾಧ್ಯವಾಗುತ್ತಿಲ್ಲ. ಎಂದಿನಿಂದಲೋ ಆಕೆಯನ್ನು ಅಭಿಮಾನಿಸುತ್ತಿರುವ ಆಕೆಯ ಅಭಿಮಾನಿಗಳು ಆಕೆ ಇಲ್ಲ ಎಂಬ ಸುದ್ದಿಯನ್ನು ಇನ್ನೂ ಮರೆಯಲು ಸಾಧ್ಯವಾಗುತ್ತಿಲ್ಲ. ಅಷ್ಟೆಲ್ಲಾ ಆರಾಧಿಸುವ ಅಭಿಮಾನಿಗಳು ಶ್ರೀದೇವಿಗೆ ಇದ್ದಾರೆ. ಆದರೆ ಆ ವ್ಯಕ್ತಿ ಮಾತ್ರ ಅಭಿಮಾನವನ್ನು ಉಳಿದವರಿಗಿಂತ ಸ್ವಲ್ಪ ಹೆಚ್ಚಾಗಿ ಪ್ರದರ್ಶಿಸುತ್ತಿದ್ದಾನೆ. ಶ್ರೀದೇವಿ ತನ್ನ ಪತ್ನಿ ಎಂದು ಹೇಳಿ, ಆಕೆ ಮೃತಪಟ್ಟ ಬಳಿಕ ಆಕೆಗೆ ಅಂತ್ಯಕ್ರಿಯೆಗಳನ್ನು ಮಾಡಿಸಿದ. ಕೇಳಲು ಶಾಕಿಂಗ್ ಎನ್ನಿಸಿದರೂ ಇದು ನಿಜ.

ಮಧ್ಯಪ್ರದೇಶದಲ್ಲಿನ ಶಿಯಾಪೂರ್ ಮೂಲದ ಓಂ ಪ್ರಕಾಶ್ ಮೆಹ್ರಾ ಎಂಬ ವ್ಯಕ್ತಿಗೆ ಶ್ರೀದೇವಿ ಎಂದರೆ ತುಂಬಾ ಇಷ್ಟ. ಆಕೆಯ ಕಟ್ಟಾ ಅಭಿಮಾನಿ. ಆದರೆ ಆ ಅಭಿಮಾನ ಮಾತ್ರ ಒಂದು ಹಂತದಲ್ಲಿ ಹದ್ದು ಮೀರಿತು. ಆಕೆಯನ್ನು ಮದುವೆಯಾಗೋಣ ಎಂದುಕೊಂಡ. ಆದರೆ ಅದು ಸಾಧ್ಯವಾಗಲಿಲ್ಲ. ಇದರಿಂದ ಆಕೆಯನ್ನು ಆರಾಧಿಸುತ್ತಾ ಅದೆಷ್ಟೋ ಕಾಲ ಮದುವೆ ಮಾಡಿಕೊಳ್ಳದಂತೆ ಇದ್ದುಬಿಟ್ಟ. ಅಲ್ಲಿಗೆ ಸುಮ್ಮನಾಗದೆ ಮತದಾರರ ಪಟ್ಟಿಯಲ್ಲಿ ತನ್ನ ಪತ್ನಿ ಜಾಗದಲ್ಲಿ ಶ್ರೀದೇವಿ ಹೆಸರು ಬರೆಸಿದ. ಆಕೆಗೆ ಬೋನಿ ಕಪೂರ್ ಜತೆ ಮದುವೆಯಾಗಿದೆ ಎಂದು ಗೊತ್ತಾದರೂ, ಇಬ್ಬರು ಮಕ್ಕಳಿದ್ದಾರೆಂದು ಗೊತ್ತಿದ್ದರೂ ಆಕೆಯನ್ನು ಆರಾಧಿಸುವುದನ್ನು ಬಿಡಲಿಲ್ಲ. ಯಾರಾದರೂ ಏನು ಕೆಲಸ ಇದು ಎಂದು ಕೇಳಿದರೆ ಆಕೆಗೆ ಮದುವೆಯಾದರೂ, ಹೇಗಿದ್ದರೂ ಆಕೆ ನನ್ನ ಪತ್ನಿ ಎನ್ನುತ್ತಿದ್ದ.

ಆ ರೀತಿ ಇರಬೇಕಾದರೆ ಇತ್ತೀಚೆಗೆ ಶ್ರೀದೇವಿ ಮೃತಪಟ್ಟರಲ್ಲವೇ. ಇದರಿಂದ ಆಕೆಯ ನಿಧನವನ್ನು ಓಂ ಪ್ರಕಾಶ್ ಜೀರ್ಣಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಆಕೆ ನಿಧನರಾದ ಬಳಿಕ ಅನ್ನ ಆಹಾರ, ನೀರು ಬಿಟ್ಟುಬಿಟ್ಟಿದ್ದಾರೆ. ನಿದ್ದೆ ಮಾಡುತ್ತಿಲ್ಲ. ಇತ್ತೀಚೆಗಷ್ಟೆ ಆಕೆಯ ಅಂತ್ಯಕ್ರಿಯೆಯನ್ನೂ ನೆರವೇರಿಸಿದ. ಸ್ಥಳೀಯ ಶಾಲೆಯಲ್ಲಿ ಸಂತಾಪ ಸಭೆಯನ್ನೂ ಮಾಡಿದ. ಅಲ್ಲಿ ಶ್ರೀದೇವಿ ಫೋಟೋ ಇಟ್ಟು ಆಕೆಯನ್ನು ಹೂವಿನ ಮಾಲೆಯೊಂದಿಗೆ ಶ್ರದ್ಧಾಂಜಲಿ ಸಲ್ಲಿಸಿದ. ಬಳಿಕ ತಲೆಬೋಳಿಸಿಕೊಂಡಿದ್ದಾರೆ. ಸುತ್ತಮುತ್ತಲಿನ ಜನ ನೋಡಿ ಚಕಿತರಾಗಿದ್ದಾರೆ. ಇನ್ನು ಈ ವಿಷಯ ಗೊತ್ತಾದವರು ಅಯ್ಯೋ ಪಾಪ ಹುಚ್ಚ ಎಂದುಕೊಂಡರು. ಅದೇನೇ ಇರಲಿ ಈ ಘಟನೆ ಮಾತ್ರ ಸಾಮಾಜಿಕ ತಾಣಗಳಲ್ಲಿ ವೈರಲ್ ಆಗುತ್ತಿದೆ..!

SHARE