71 ವರ್ಷಗಳ ಹಿಂದೆ ನಮ್ಮ ದೇಶದಿಂದ ಬ್ರಿಟೀಷರು ಕದ್ದುಹೊಯ್ದ ಸಸ್ಯಗಳು ಮತ್ತೆ ನಮಗೆ ಸಿಗುತ್ತಿವೆ ಗೊತ್ತಾ..?

ನಮ್ಮ ದೇಶವನ್ನು ಪಾಲಿಸಿದ ಬ್ರಿಟೀಷರು ನಮ್ಮ ಬಳಿ ಇದ್ದ ಅನೇಕ ಬೆಲೆಬಾಳುವ ವಸ್ತುಗಳನ್ನು ಕದ್ದೊಯ್ದದ್ದು ಗೊತ್ತೇ ಇದೆ. ಅಂತಹವುಗಳಲ್ಲಿ ಅತಿ ಬೆಲೆಬಾಳುವ ಕೋಹಿನೂರ್ ವಜ್ರ ಸಹ ಇದೆ. ಇದು ನಮಗೆಲ್ಲ ಗೊತ್ತಿರುವ ಸಂಗತಿ. ಆದರೆ ಗೊತ್ತಿಲ್ಲದ ಇನ್ನೂ ಅನೇಕ ವಸ್ತುಗಳನ್ನು ಬ್ರಿಟೀಷರು ಕದ್ದೊಯ್ದರು. ಅವುಗಳಲ್ಲಿ ನಮ್ಮ ದೇಶದ ಅತಿಮುಖ್ಯವಾದ ಸಸ್ಯಸಂಪತ್ತು ಇದೆ. ಅವು ನಮಗೆ ಸಿಗದಂತೆ ನಾಮಾವಶೇಷ ಮಾಡಿದರು. ಅವುಗಳ ಪ್ರಬೇಧ ಇಲ್ಲಿ ಇರದಂತೆ ಲಂಡನ್‍ಗೆ ಸಾಗಿಸಿದರು. ಆ ರೀತಿ ಕೆಲವು ವರ್ಷಗಳ ಕಾಲ ಅವು ಲಂಡನ್‌ನಲ್ಲೇ ಇದ್ದವು. ಆದರೆ ಈಗ ಮತ್ತೆ ನಮ್ಮ ವಿಜ್ಞಾನಿಗಳು ಅವನ್ನು ಭಾರತಕ್ಕೆ ತರಲಿದ್ದಾರೆ.

ಲಂಡನ್ ನ್ಯಾಚುರಲ್ ಹಿಸ್ಟರಿ ಮ್ಯೂಸಿಯಂನಲ್ಲಿ ಭಾರತದ ಅನೇಕ ಗಿಡಗಳು, ವೃಕ್ಷ ಜಾತಿಗಳು ಇವೆ. ಅವನ್ನು ಮತ್ತೆ ಈಗ ನಮ್ಮ ವಿಜ್ಞಾನಿಗಳು ಭಾರತಕ್ಕೆ ತರಲಿದ್ದಾರೆ. 71 ವರ್ಷಗಳ ಬಳಿಕ ಮತ್ತೆ ಆ ಸಸ್ಯ ಪ್ರಭೇದಗಳು ನಮಗೆ ಲಭಿಸುತ್ತಿವೆ. ಇದಕ್ಕೆ ಕಾರಣ ಭಾರತಕ್ಕೂ, ಬ್ರಿಟನ್‌ಗೂ ನಡುವೆ ನಡೆದ ಒಂದು ಒಪ್ಪಂದ. ಆ ಒಪ್ಪಂದದ ಪ್ರಕಾರ ಅಪರೂಪದ ಗಿಡಗಳು ನಮಗೆ ಮತ್ತೆ ಲಭಿಸಲಿವೆ.

ಇದುವರೆಗೂ ಬೊಟಾನಿಕಲ್ ಸರ್ವೇ ಆಫ್ ಇಂಡಿಯಾ (ಬಿಎಸ್‌ಐ) ವಿಜ್ಞಾನಿಗಳು ಆ ಗಿಡಗಳನ್ನು ಪರಿಶೀಲಿಸುವ ಕೆಲಸದಲ್ಲಿದ್ದಾರೆ. ಸುಮಾರು 25 ಸಾವಿರ ಸಸ್ಯ ಪ್ರಬೇಧಗಳನ್ನು ಅವರು ಪರಿಶೀಲಿಸುತ್ತಿದ್ದಾರೆ. ಅದರ ಡಿಜಿಟಲ್ ಇಮೇಜ್ ಸ್ವೀಕರಿಸಿದ್ದಾರೆ. ಇನ್ನೂ 60 ಲಕ್ಷ ಪ್ರಬೇಧಗಳು ಮ್ಯೂಸಿಯಂನಲ್ಲಿ ಅಧ್ಯಯನಕ್ಕೆ ನಮ್ಮ ವಿಜ್ಞಾನಿಗಳಿಗೆ ಲಭ್ಯವಿದೆ. ಅವನ್ನೂ ಅವರು ಪರಿಶೀಲಿಸುತ್ತಿದ್ದಾರೆ. ಇದರ ಹಿಂದಿನ ಮುಖ್ಯ ಉದ್ದೇಶವೇನೆಂದರೆ..? ಭತ್ತ, ಗೋಧಿ, ಜೋಳ ಇನ್ನಿತರೆ ಆಹಾರ ಧಾನ್ಯಗಳ ಪ್ರಬೇಧಗಳಲ್ಲದೆ ಹೊಸ ರೀತಿಯ ಯಾವುದಾದರೂ ಪ್ರಬೇಧ ಸಿಗುತ್ತಾ ಎಂಬುದೇ ಅವರ ಉದ್ದೇಶ. ಮಾರ್ಚ್ 15ರವರೆಗೂ ಅನೇಕ ರೀತಿಯ ಪ್ರಬೇಧಗಳನ್ನು ಪರಿಶೀಲಿಸಿ ಒಂದು ಕನ್‌ಕ್ಲೂಷನ್‌ಗೆ ಬರಬೇಕೆಂದು ವಿಜ್ಞಾನಿಗಳು ಭಾವಿಸುತ್ತಿದ್ದಾರೆ. ಅವರು ಪರಿಶೀಲಿಸುತ್ತಿರುವ ಅನೇಕ ಗಿಡಗಳಲ್ಲಿ ನೂರಾರು ವರ್ಷದವೂ ಇವೆ. 20 ರಿಂದ 300 ವರ್ಷ ವಯಸ್ಸಿನ ಗಿಡಗಳು, ವೃಕ್ಷ ಪ್ರಬೇಧಗಳನ್ನು ವಿಜ್ಞಾನಿಗಳು ಪರಿಶೀಲಿಸುತ್ತಿದ್ದಾರೆ. ಅದೇನೇ ಇರಲಿ ಇದೊಂದು ಒಳ್ಳೆಯ ಬೆಳವಣಿಗೆ ಎನ್ನಬಹುದು. ಇದರಿಂದ ಹೊಸ ರೀತಿಯ ಆಹಾರ ಪ್ರಬೇಧಗಳು ಏನಾದರೂ ಸಿಕ್ಕಿದರೆ ಒಳ್ಳೆಯದೇ ಅಲ್ಲವೇ..?

SHARE