ಮೊದಲು ನಿಮ್ಮ ಘನತೆ ಎಷ್ಟಿದೆ ? ಅಂತ ತಿಳ್ಕೊಂಡು ಮಾತಾಡಿ ಸ್ವಾಮಿ !!

ಎಲ್ಲರೂ ಅಷ್ಟೇ… ಮೊದಲು ತಾವೇನೆಂಬುದು ತಿಳ್ಕೊಬೇಕು ಸಿವಾ.. ಆಮೇಲೆ ಬೇರೆಯವರು ನಮಗಿಂತಲೂ ಘನತೆ, ಗೌರವ ಹೊಂದಿದ್ದಾರೆಯೇ ಎಂಬುದನ್ನು ಅರಿತುಕೊಳ್ಳಬೇಕು, ಆಮೇಲೆ ಮಾತಾಡಬೇಕು…. ಯಾಕಪ್ಪ ಈ ರೀತಿ ಯಾರ ಬಗ್ಗೆ ಹೇಳ್ತ ಇದ್ದಾರೆ ಅಂತ ಕೇಳ್ತಾ ಇದ್ದೀರಾ ? ಅದೇ ಸ್ವಾಮಿ ವಿವಾದಾತ್ಮಕ ಡೋಂಗಿ ಸ್ವಾಮಿ ರಿಷಿ ಕುಮಾರ್ ಬಗ್ಗೆ… ಹೆಂಡ್ತಿ ಪಕ್ಕದಲ್ಲೇ ಇಟ್ಕೊಂಡು ಮದುವೆಯಾಗಿಲ್ಲ ನನಗೆ ಅಂತ ಕಾಗೆ ಹಾರಿಸಿದ್ದ ಕಾಳಿ ಸ್ವಾಮಿ ಬಗ್ಗೆ.

ಹೌದು, ಈವಯ್ಯ ಯಾರ್ ಬಗ್ಗೆ ಏನ್ ಮಾತನಾಡಿದ ಅಂತ ಕೇಳ್ತೀರಾ ? ನಮ್ಮೆಲ್ಲರ ಪ್ರೀತಿಯ ಅಪ್ಪು ಬಗ್ಗೆ. ನಮಗೆಲ್ಲರಿಗೂ ತಿಳಿದಿರುವಂತೆ ಇತ್ತೀಚಿಗೆ ನಮ್ ಪವರ್ ಸ್ಟಾರ್ ಅವ್ರು ಕೆಂಪೇಗೌಡ ಪಾತ್ರದಲ್ಲಿ ಜಾಹಿರಾತಿನಲ್ಲಿ ಕಾಣಿಸಿಕೊಂಡಿದ್ದಾರೆ. ಈ ಜಾಹಿರಾತು ಈಗ ಎಲ್ಲೆಡೆ ಟಾಕ್ ಕ್ರೆಯೆಟ್ ಮಾಡಿದೆ ಕೂಡ. ಅಭಿಮಾನಿಗಳಂತೂ ಈ ಪಾತ್ರವನ್ನು ಖುಷಿಯಾಗಿ ಸ್ವೀಕರಿಸಿದ್ದಾರೆ.

ಆದ್ರೆ, ಈ ಮನುಷ್ಯ ಜಾಹೀರಾತು ಪ್ರಖ್ಯಾತಿ ಪಡೆಯಲು ಕೆಂಪೇಗೌಡರ ಹೆಸರನ್ನು ಬಳಸ ಬಾರದಿತ್ತು ಎಂದು ನಟ ಹಾಗೂ ಸ್ವಾಮಿಜಿ ರಿಷಿ ಕುಮಾರ ತಕರಾರು ತೆಗೆದಿದ್ದರು. ಪೋತಿಸ್ ಕಂಪನಿಯ ಜಾಹೀರಾತು ಪ್ರಖ್ಯಾತಿ ಮಾಡುವ ಉದ್ದೇಶದಿಂದ ಕೆಂಪೇಗೌಡರ ಹೆಸರನ್ನ ಬಳಸಿಕೊಳ್ಳಲಾಗಿದೆ ಹಾಗೂ ರಾಜ್ ಕುಮಾರ್ ಅವರ ಪುತ್ರ ಇದರಲ್ಲಿ ಅಭಿನಯಿಸುವ ಮುನ್ನ ಯೋಚನೆ ಮಾಡಬೇಕಿತ್ತು ಎನ್ನುವ ಅಭಿಪ್ರಾಯವನ್ನ ವ್ಯಕ್ತ ಪಡಿಸಿದ್ದರು.

ಈ ವಿಚಾರ ತಿಳಿದ ಪುನೀತ್ ಅಭಿಮಾನಿಗಳು ರಿಷಿ ಕುಮಾರ ಅವರ ವಿರುದ್ಧ ಕಿಡಿ ಕಾರಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ರಿಷಿ ವಿರುದ್ದ ಸ್ಟೇಟಸ್ ಹಾಕುವುದರ ಜೊತೆಯಲ್ಲಿ ರಿಷಿ ಕುಮಾರ ಸ್ವಾಮಿಜಿ ಅವರಿಗೆ ಕರೆ ಮಾಡಿ ತರಾಟೆಗೆ ತೆಗೆದುಕೊಂಡಿದ್ದಾರೆ. ಜಾಹೀರಾತಿನಲ್ಲಿ ಪುನೀತ್ ಅಭಿನಯಿಸಬಾರದಿತ್ತು ಎಂದು ಅಭಿಪ್ರಾಯ ವ್ಯಕ್ತ ಪಡಿಸಿದ ಕಾಳಿ ಸ್ವಾಮಿ ವಿರುದ್ದ ಅಪ್ಪು ಅಭಿಮಾನಿಗಳು ತಿರುಗಿ ಬಿದ್ದಿದ್ದಾರೆ.

ಕೊನೆಗೆ ಅಭಿಮಾನಿಗಳು ಬೆಂಡ್ ಎತ್ತುತ್ತಿರುವುದನ್ನು ಕಂಡ ರಿಷಿ ಕುಮಾರ್ ಲೈವ್ ನಲ್ಲಿ ನಾನು ಪವರ್ ಸ್ಟಾರ್ ಪುನೀತ್ ಕುಮಾರ್ ಅಭಿಮಾನಿ ನನ್ನನ್ನು ತಪ್ಪಾಗಿ ಅರ್ಥೈಸಿಕೊಂಡಿದ್ದೀರ, ನನ್ನ ಹೋರಾಟ ಪೋತಿಸ್ ಸಂಸ್ಥೆಯ ಮೇಲೆ ಹೊರತು ರಾಜ್ ಕುಮಾರ್ ಕುಟುಂಬದ ಮೇಲೆ ಅಲ್ಲ ಎಂದು ಸ್ಪಷ್ಟ ಪಡಿಸಿದ್ದಾರೆ. ಒಟ್ಟಿನಲ್ಲಿ ಫೇಮಸ್ ಆಗಿರುವವರನ್ನು ಕೆಣಕಿ ಅಗ್ಗದ ಜನಪ್ರಿಯತೆ ತೆಗೆದುಕೊಳ್ಳುವುದಕ್ಕೆ ಇಂತವರು ಕಾಯುತ್ತಿರುತ್ತಾರೆ ಎಂಬುದನ್ನು ಅರಿತು ನಾವೆಲ್ಲರೂ ಸುಮ್ಮನಾಗಬೇಕಷ್ಟೆ !

SHARE