ಕೇವಲ instagram ಅಕೌಂಟಿನಿಂದ ಲಕ್ಷ ಲಕ್ಷ ಸಂಪಾದಿಸುತ್ತಿರುವ ಪ್ರಿಯ !!

ನಸೀಬು ಸರಿ ಇದ್ರೆ ಕತ್ತೆ ಕೂಡ ಕುದುರೆಯಾಗಿ ಕಾಣುತ್ತೆ ಗುರು… ಅಂತ ಹೇಳ್ತ ಇರ್ತಾರೆ. ಆದ್ರೆ ಈಕೆಯ ವಿಚಾರದಲ್ಲಿ ಈ ಲೈನ್ ಕರೆಕ್ಟ್ ಆಗಿ ಸೂಟ್ ಆಗುತ್ತೆ ಎನ್ನಬಹುದು. ಕೇವಲ 8 ಸೆಕೆಂಡ್ ವಿಡಿಯೋ ಈಕೆಯ ಜೀವನವನ್ನೇ ಬದಲಾಯಿಸಿತು ಎಂದರೆ ನೀವು ನಂಬಲೇ ಬೇಕು. ಎಷ್ಟರ ಮಟ್ಟಿಗೆ ಎಂದರೆ ಈಕೆ ಸದ್ಯ ಅತಿ ಹೆಚ್ಚು ಕಾಸು ಮಾಡುತ್ತಿರುವ ಕಣ್ಮಣಿ ಎನ್ನಬಹುದು. ಏನಿದು ಕಾಸು ? ಜೀವನ ? ಅಂತಿದ್ದಾರೆ ಅನ್ಕೊಂಡ್ರಾ ಮುಂದೆ ಓದಿ…

ಕೇರಳದ ಹುಡುಗಿ ಪ್ರಿಯಾ ವಾರಿಯರ್ ಬಗ್ಗೆ ಹೇಳ್ತ ಇದ್ದಿವಿ… ಹೌದು. ಹುಬ್ಬೇರಿಸೋ ಹಾಡಿನ ಮೂಲಕ ಪಡ್ಡೆ ಹುಡುಗರ ಹಾರ್ಟಿಗೆ ಕಚಗುಳಿ ಇಟ್ಟ ಈಕೆ ಸದ್ಯದ ಟ್ರೆಂಡ್ ಸೆಟ್ಟರ್… ಈಕೆ ಏನು ಮಾಡಿದರು ಅದು ಸುದ್ದಿಯಾಗುತ್ತೆ. ಎಲ್ಲಿ ಹೋದರೂ ಜನರು ಇರುವ ಮುತ್ತಿಕೊಳ್ಳುವ ಹಾಗೆ ಮುತ್ತಿಕೊಳ್ಳುತ್ತಾರೆ. ಒಟ್ಟಿನಲ್ಲಿ ಈಕೆ ಭಾರತೀಯ ಸೂಪರ್ ಸ್ಟಾರ್‌ಗಳನ್ನೂ ಮೀರಿಸಿ ಸಾಮಾಜಿಕ ಜಾಲತಾಣದಲ್ಲಿ ರಾಣಿಯಾಗಿ ಮೆರೆಯುತ್ತಿದ್ದಾಳೆ..

ಸಾಧಾರಣವಾಗಿ ಚಿತ್ರರಂಗ, ಕ್ರಿಕೆಟ್ ಆಟದ ಸೆಲಬ್ರಿಟಿಗಳು ತಮ್ಮ ಸಾಮಾಜಿಕ ಜಾಲತಾಣ ಖಾತೆಗಳಲ್ಲಿ ವಿವಿಧ ಕಂಪೆನಿಗಳ ಪ್ರಚಾರಮಾಡುವ ಪೋಸ್ಟ್‌ಗಳನ್ನು ಮಾಡುತ್ತಾರೆ. ಅದಕ್ಕೆ ಅವರು ತಕ್ಕ ಸಂಭಾವನೆಯನ್ನೂ ಕೂಡ ಕಂಪನಿಗಳಿಂದ ಪಡೆಯುತ್ತಾರೆ. ಪ್ರಿಯಾ ಪ್ರಕಾಶ್ ವಿಚಾರದಲ್ಲೂ ಇದು ಆಗುತ್ತಿದ್ದು ಒಂದು ಪೋಸ್ಟ್‌ಗೆ 8 ಲಕ್ಷ ರೂ. ಸಂಭಾವನೆ ಪಡೆಯುತ್ತಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಪ್ರಿಯಾಗೆ ಇನ್ಸ್ಟಾಗ್ರಾಮ್‌ನಲ್ಲಿ 51 ಲಕ್ಷ ಮಂದಿ ಫಾಲೋವರ್ ಗಳಿರುವುದರಿಂದ ಇಷ್ಟೊಂದು ದೊಡ್ಡ ಮೊತ್ತದ ಸಂಭಾವನೆ ಸಿಗುತ್ತಿದೆ ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.. ಒಟ್ಟಿನಲ್ಲಿ ಅರ್ಧ ನಿಮಿಷದ ವಿಡಿಯೋ ಮೂಲಕವೇ ಪ್ರಪಂಚದಾದ್ಯಂತ ಸುದ್ದಿಯಾಗಿದ್ದ ಪ್ರಿಯಾ ಅದೃಷ್ಟ ಖುಲಾಯಿಸಿದ್ದು ಕೇವಲ ಒಂದು ಪೋಸ್ಟ್ ಮೂಲಕೆ ಬರೋಬ್ಬರಿ ಎಂಟು ಲಕ್ಷ ಪಡೆದು ಎಲ್ಲರು ಬೆರಗಾಗುವಂತೆ ಮಾಡಿದ್ದಾಳೆ.

SHARE