ಹುಟ್ಟುಮಚ್ಚೆಗಳ ಪವರ್.!? ಮಚ್ಚೆ ಮೇಲೆ ಕೂದಲಿದ್ದರೆ ಕೀರ್ತಿವಂತರು, ತಲೆಯಲ್ಲಿದ್ದರೆ ಗರ್ವ.

ಕೈಗೆರೆಗಳು, ಹುಟ್ಟುಮಚ್ಚೆಗಳು ನಮ್ಮ ಜಾತಕವನ್ನು ಹೇಳಲು ಉಪಯೋಗಿಸುವ ಬೇಸ್ ಐಟಮ್ಸ್… ಇವನ್ನು ಮೂಢನಂಬಿಕೆ ಎಂದು ತಳ್ಳಿಹಾಕುವವರು ಕೆಲವರು, ನಂಬುವವರು ಇನ್ನೂ ಕೆಲವರು. ಈ ಮೂಲಕ ನಾವು ಹೇಳುವುದು ಒಂದೇ ನಂಬುವುದು ಬಿಡುವುದು ನಿಮ್ಮಿಷ್ಟ. ಆದರೆ ಒಳ್ಳೆಯದಾಗುತ್ತದೆ ಎಂದರೆ ನಂಬಿ. ಅದು ಪಾಸಿಟೀವ್ ಆಟಿಟ್ಯೂಡ್ ನೀಡುತ್ತದೆ. ಕೆಟ್ಟದು ಎಂದರೆ ಆ ವಿಷಯಗಳ ಬಗ್ಗೆ ಸ್ವಲ್ಪ ಎಚ್ಚರದಿಂದ ಇದ್ದು ಅವನ್ನು ಸರಿಪಡಿಸಿಕೊಳ್ಳಿ. ಸೋ ಈಗ ದೇಹದಲ್ಲಿರುವ ಹುಟ್ಟುಮಚ್ಚೆಗಳ ಆಧಾರವಾಗಿ ನಮಗೆ ಆಗುವ ಪ್ರಯೋಜನಗಳ ಬಗ್ಗೆ ತಿಳಿದುಕೊಳ್ಳೋಣ.

scalp-55956_960_720

 • ಹುಟ್ಟುಮಚ್ಚೆ ಮೇಲೆ ಕೂದಲು ಇರುವವರು ಶ್ರೀಮಂತರು, ಕೀರ್ತಿವಂತರು ಆಗುತ್ತಾರಂತೆ. ಪುರುಷರಿಗೆ ಎರಡು ಹುಬ್ಬುಗಳ ನಡುವೆ ಹುಟ್ಟುಮಚ್ಚೆ ಇದ್ದರೆ ಆ ವ್ಯಕ್ತಿ ದೀರ್ಘಾಯುಷಿ ಆಗುತ್ತಾನೆ. ಬಂಧುಪ್ರಿಯನಾಗುತ್ತಾನೆ. ಭೋಗಗಳಲ್ಲಿ ಆಸಕ್ತಿ ಹೊಂದಿರುತ್ತಾನೆ. ಸುಗಂಧ ದ್ರವ್ಯಗಳ ಬಗ್ಗೆ ಆಸಕ್ತಿ ಹೊಂದಿರುತ್ತಾನೆಂದು ಜ್ಯೋತಿಷಿಗಳು ಹೇಳುತ್ತಿದ್ದಾರೆ.
 • ತಲೆಯಲ್ಲಿ ಹುಟ್ಟುಮಚ್ಚೆ ಇದ್ದರೆ ಪುರುಷನಿಗೆ ಗರ್ವ ಜಾಸ್ತಿ. ಅವರು ಪ್ರತಿ ಅಂಶವನ್ನೂ ವಿಮರ್ಶಾತ್ಮಕವಾಗಿ ಗಮನಿಸುತ್ತಾರೆ. ಒಳ್ಳೆಯ ಆಶಾಭಾವ ಇರುವವರು. ರಾಜಕೀಯ, ಸಾಮಾಜಿಕ ಅಂಶಗಳಲ್ಲಿ ಆಸಕ್ತಿ ಹೊಂದಿರುತ್ತಾರೆ. ಹಣೆ ಮೇಲೆ ಇದ್ದರೆ ಒಳ್ಳೆಯ ಕೀರ್ತಿ, ಪ್ರತಿಷ್ಠೆಗಳನ್ನು ಸಾಧಿಸುತ್ತಾರೆ. ಆರ್ಥಿಕ ಸ್ವಾತಂತ್ರ್ಯ ಇರುತ್ತದೆ. ರಾಜಕೀಯದಲ್ಲಿ ಮುಂದೆ ಬರುತ್ತಾರೆ.
 • ಹಣೆ ಕೆಳಗಿನ ಭಾಗದಲ್ಲಿ ಇದ್ದರೆ ಒಳ್ಳೆಯ ಗುರಿಯನ್ನು, ಏಕಾಗ್ರತೆಯನ್ನು ಹೊಂದಿರುತ್ತಾರೆ. 40 ವರ್ಷಗಳ ಬಳಿಕ ಗೆಲುವು ಸಾಧಿಸುತ್ತಾರೆ. ಕಣ್ಣಿನ ಹುಬ್ಬುಗಳ ಮೇಲೆ ಇದ್ದರೆ ಕಷ್ಟಪಟ್ಟು ಕೆಲಸ ಮಾಡಬೇಕಾಗುತ್ತದೆ. ಕೆಲವು ಮಂದಿಗೆ ಉದ್ಯೋಗ ಅವಕಾಶಗಳು ಲಭಿಸುತ್ತವೆ. ದ್ವೇಷ ಇರಲ್ಲ.
 • ಮೂಗಿನ ಮೇಲೆ ಇದ್ದರೆ ಸ್ವಲ್ಪ ಮಂದಿಯಲ್ಲಿ ಶಿಸ್ತು ಲೋಪಿಸುತ್ತದೆ. ಕಿವಿಯ ಕೆಳಗೆ ಯಾವ ಭಾಗದಲ್ಲಿದ್ದರೂ ಧನ ಕಾಣಿಸುತ್ತಿರುತ್ತದೆ. ಸಮಾಜದಲ್ಲಿ ಗೌರವದಿಂದ ನೋಡುತ್ತಾರೆ.

494372287_XS

 • ತುಟಿಯ ಮೇಲೆ ಇದ್ದರೆ ಕೆಲವು ಸಲ ನಿಮ್ಮ ಬಂಧುಗಳೂ, ಸ್ನೇಹಿತರ ವಿಷಯದಲ್ಲಿ ನಿಮಗೆ ದ್ವೇಷ ಉಂಟಾಗುತ್ತದೆ. ಕೆನ್ನೆ ಮೇಲೆ ಇದ್ದರೆ ರಾಜಕೀಯದಲ್ಲಿ ಮುಂದೆ ಬರುತ್ತಾರೆ. ಸ್ಥಿರಾಸ್ತಿ ಗಳಿಸುತ್ತಾರೆ.
 • ನಾಲಿಗೆ ಮೇಲೆ ಇದ್ದರೆ ನೀವು ಒಳ್ಳೆಯ ಬುದ್ಧಿವಂತರು, ಶಿಕ್ಷಣ ಪಡೆದಿರುತ್ತೀರ. ಗಡ್ಡದ ಮೇಲೆ ಇದ್ದರೆ ಹೆಣ್ಣು, ಗಂಡಿನಲ್ಲಿ ಭಿನ್ನ ಫಲಿತಾಂಶಗಳಿರುತ್ತವೆ. ಗಡ್ಡದ ನಡುವೆ ಮಚ್ಚೆ ಇರುವ ಪುರುಷರು ಉದಾರಗುಣ ಹೊಂದಿರುತ್ತಾರೆ. ಹೆಂಗಸರಲ್ಲಿ ಭಕ್ತಿಭಾವ ಜಾಸ್ತಿ. ಒಳ್ಳೆಯ ಅದೃಷ್ಟವಂತರಾಗುತ್ತಾರೆ.
 • ಭುಜದ ಮೇಲೆ ಇದ್ದರೆ ಮರ್ಯಾದಸ್ತರಾಗಿರುತ್ತಾರೆ. ಕಷ್ಟಪಟ್ಟು ಕೆಲಸ ಮಾಡುವ ಸ್ವಭಾವ ಇರುತ್ತದೆ. ಆನಂದಕರವಾದ ದಾಂಪತ್ಯ ಜೀವನ ನಡೆಸುತ್ತಾರೆ. ಮೊಣಕೈ ಮೇಲೆ ಇದ್ದರೆ ನಿಮ್ಮ ಜೀವನದಲ್ಲಿ ಗುರಿಯನ್ನು ಮುಟ್ಟಲು ಕೆಲವು ತೊಂದರೆಗಳು ತಪ್ಪಿದ್ದಲ್ಲ.
 • ಎಡ ಕಂಕುಳ ಭಾಗದಲ್ಲಿ ಇದ್ದರೆ ನಿಮ್ಮ ಆರಂಭದ ಜೀವನದಲ್ಲಿ ಸ್ವಲ್ಪ ತೊಂದರೆಗಳಿದ್ದರೂ ಬಳಿಕ ನಿಧಾನಕ್ಕೆ ಹೊಂದಿಕೊಳ್ಳುತ್ತವೆ. ಬಲ ಕಂಕುಳ ಭಾಗದಲ್ಲಿ ಇದ್ದರೆ ಭದ್ರತೆ ವಿಚಾರದಲ್ಲಿ ನೀವು ತುಂಬಾ ಎಚ್ಚರದಿಂದ ಇರುತ್ತೀರ. ಕುತ್ತಿಗೆ ಭಾಗದಲ್ಲಿ ಇದ್ದರೆ ಕೆಲವು ಸಮಯಗಳಲ್ಲಿ ನಿಮಗೆ ದುರದೃಷ್ಟ ತಪ್ಪಿದ್ದಲ್ಲ. ಇತರರು ನಿಮ್ಮನ್ನು ಮೋಸ ಮಾಡಲು ಪ್ರಯತ್ನಿಸುತ್ತಾರೆ.
 • ಹಣೆಯ ಮೇಲ್ಭಾಗದಲ್ಲಿ ಮಚ್ಚೆ ಇರುವ ಮಹಿಳೆಯರಿಗೆ ಅಹಂಕಾರ ಹೆಚ್ಚಾಗಿ ಇರುತ್ತದೆ ಎಂದು ಜ್ಯೋತಿಷಿಗಳು ಹೇಳುತ್ತಿದ್ದಾರೆ. ಆದರೂ ಉನ್ನತ ಶಿಕ್ಷಣವನ್ನು ಅಭ್ಯಸಿಸಿರುತ್ತಾರೆ. ಜ್ಞಾನವುಳ್ಳವರಾಗಿರುತ್ತಾರೆ. ಕಲೆಗಳಲ್ಲಿ ಆಸಕ್ತಿ ಹೊಂದಿರುತ್ತಾರೆ. ಬರೆಯುವುದು, ಪತ್ರಿಕಾ ಕ್ಷೇತ್ರದಲ್ಲಿ ಖ್ಯಾತ ಬರಹಗಾರ್ತಿ ಆಗುವ ಅವಕಾಶ ಇದೆ.
 • ಬಲ ಕಣ್ಣುಬ್ಬಿನ ಮೇಲೆ ಮಚ್ಚೆ ಇರುವವರಿಗೆ ವಿವಾಹ ಬೇಗ ಆಗುತ್ತದೆ. ಬಲ ಕಣ್ಣಿನ ರೆಪ್ಪೆ ಮೇಲೆ ಮಚ್ಚೆ ಇದ್ದರೆ ಸಂಪತ್ತನ್ನು ಹೊಂದಿರುತ್ತಾರೆ. ವಾಹನ ಸೌಖ್ಯ ಲಭಿಸುತ್ತದೆ. ಒಟ್ಟಾರೆ ಮುಖದ ಬಲಗಡೆ ಮಚ್ಚೆ ಇರುವ ಪುರುಷರು ಅದೃಷ್ಟವಂತರಾಗಿರುತ್ತಾರೆ. ಎಡಗಡೆ ಮಚ್ಚೆ ಇದ್ದರೆ ಫಲಿತಾಂಶಳು ಮಿಶ್ರವಾಗಿರುತ್ತವೆ.
 • ದೇಹದ ಮುಂಭಾಗದಲ್ಲಿ ಇದ್ದರೆ ಆಕಸ್ಮಿಕ ಧನ ಲಾಭ. ದೇಹದ ಹಿಂಭಾಗದಲ್ಲಿ ಇದ್ದರೆ ನೀವು ಕಷ್ಟಪಟ್ಟು ಕೆಲಸ ಮಾಡಿದರೂ ಆ ಹೆಸರು ಇತರರಿಗೆ ಲಭಿಸುತ್ತದೆ.
SHARE