ಕೆಟ್ಟ ದೃಷ್ಟಿಯಲ್ಲಿ ನೋಡುವ ಬದಲು, ಹೆಮ್ಮೆಯಿಂದ ಈ ಪೋಸ್ಟ್ ಶೇರ್ ಮಾಡೋಣ…

ನನಗೆ ಈ ಚಿತ್ರವನ್ನು ಪೋಸ್ಟ್ ಮಾಡಲು ಯಾವುದೇ ಅಳುಕ್ಕಿಲ್ಲ… ಈಗಿನ ಆಧುನಿಕ ತಾಯಂದಿರು, ತನ್ನ ಸೌಂದರ್ಯಕ್ಕೆ ಧಕ್ಕೆ ಬರುವುದೆಂದು ಮಗುವಿಗೆ ಎದೆಹಾಲುಣಿಸುವ ಬದಲಾಗಿ, ಬಾಟಲಿ ಹಾಲುಣಿಸುತ್ತಿದ್ದು, ಇದರಿಂದ ಮಕ್ಕಳಿಗೆ ಸಿಗಬೇಕಾದ ಪೌಷ್ಟಿಕಾಂಶ ಸಿಗುತ್ತಿಲ್ಲ… ಈ ಬಗ್ಗೆ ತಾಯಂದಿರಲ್ಲಿ ಅರಿವು ಮೂಡಿಸುವ ಸಲುವಾಗಿ ಕೇರಳದಲ್ಲಿ ಆಂದೋಲನ ಕೈಗೊಂಡಿದ್ದು, ಅದರ ಪ್ರಯತ್ನವೇ, ಈ ತಾಯಿ ತನ್ನ ಮಗುವಿಗೆ ಹಾಲುಣಿಸುತ್ತಿರುವ ಚಿತ್ರ …

ಆಧುನಿಕತೆಯ ಕೈಯಲ್ಲಿ ಸಿಲುಕಿರುವ ಈಗಿನ ತಾಯಂದಿರನ್ನು ತಮ್ಮ,ತಮ್ಮ ಮಕ್ಕಳಿಗೆ ಎದೆ ಹಾಲುಣಿಸುವಂತೆ ಮಾಡಲು ಆಂದೋಲನದ ಮೂಲಕ ತಿಳಿಸಬೇಕಾಗಿ ಬಂದಿರುವುದು ನಮ್ಮ ದುರದೃಷ್ಟ… ಅದರಲ್ಲೂ ಸಂಸ್ಕೃತಿಯ ತವರು ಭಾರತೀಯರಿಗೆ ಮತ್ತು ಭಾರತದಲ್ಲಿ ಈ ಸ್ಥಿತಿ ಬರಬಾರದಿತ್ತು…

ಇಂತಹ ತಾಯಂದಿರು ತಮ್ಮ ಮನಸ್ಥಿತಿಯನ್ನು ಬದಲಾಯಿಸಿಕೊಳ್ಳಬೇಕಿದೆ… ಮಾತೃತ್ವ ಪಾಲನೆಯ ಮಹತ್ವ ಅರಿಯಬೇಕಿದೆ…ಈ ಚಿತ್ರದಲ್ಲಿ ತಾಯಿ-ಮಗುವನ್ನು ಹೊರತುಪಡಿಸಿ ನಿಮಗೇನಾದರೂ ಆಕ್ಷೇಪಣೆಗಳಿದ್ದರೆ, ಅಂತಹವರು ನಿಮ್ಮನ್ನು ನೀವು ಬದಲಾಯಿಸಿಕೊಳ್ಳಿ…

ವಿವಾದಾತ್ಮಕ ಚಿತ್ರದ ಬಗ್ಗೆ :

ಸ್ತನ್ಯಪಾನದ ಕುರಿತ ಮನೋಭಾವ ಬದಲಾಯಿಸುವ ನಿಟ್ಟಿನಲ್ಲಿ ಜನಪ್ರಿಯ ಮಲಯಾಳಿ ಪಾಕ್ಷಿಕ ‘ಗೃಹಲಕ್ಷ್ಮಿ’ ಹೊಸ ಹೆಜ್ಜೆಯನ್ನಿಟ್ಟಿದೆ. ನಿಯತಕಾಲಿಕೆಯ ಮುಖಪುಟದಲ್ಲಿ ಮಹಿಳೆಯೊಬ್ಬರು ಮಗುವಿಗೆ ಸ್ತನ್ಯಪಾನ ಮಾಡಿಸುತ್ತಿರುವ ಚಿತ್ರವನ್ನು ಇದೇ ಮೊದಲ ಬಾರಿ ಪ್ರಕಟಿಸಿದೆ. ನಟಿ ಮತ್ತು ರೂಪದರ್ಶಿ ಜೀಲು ಜೋಸೆಫ್‌ (27) ಈ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಜೀಲು ಅವಿವಾಹಿತರು.

‘ದಿಟ್ಟಿಸಿ ನೋಡಬೇಡಿ, ನಾವು ಎದೆ ಹಾಲುಣಿಸುತ್ತಿದ್ದೇವೆ- ಇದು ತಾಯಂದಿರ ಮಾತು’ ಎನ್ನುವ ಶೀರ್ಷಿಕೆಯನ್ನು ಮುಖಪುಟದಲ್ಲಿ ನೀಡಲಾಗಿದೆ. ಈ ವಿಷಯ ಸಾಮಾಜಿಕ ಜಾಲತಾಣಗಳಲ್ಲೂ ವ್ಯಾಪಕವಾಗಿ ವೈರಲ್‌ ಆಗಿದ್ದು, ಹಲವರು ವಿಭಿನ್ನ ರೀತಿಯ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ.

SHARE