ಅಲ್ಲಿನ ಮಹಿಳೆಯರು.. ಗಂಡ ಸತ್ತುಹೋದರೆ ಮೈದುನನ್ನು ಮದುವೆಯಾಗುತ್ತಾರೆ.! ಯಾಕೆ ಗೊತ್ತಾ.? ಬೇರೆಲ್ಲೋ ಅಲ್ಲ ಆಂಧ್ರದಲ್ಲೇ.?

ನಮ್ಮ ದೇಶದ ಅನೇಕ ಪ್ರದೇಶಗಳಲ್ಲಿ ಇರುವ ಜನರ ಆಚಾರ ವಿಚಾರಗಳು, ಸಂಪ್ರದಾಯಗಳು, ಜೀವನಶೈಲಿ ತುಂಬಾ ಭಿನ್ನವಾಗಿ ಇರುತ್ತದೆ ಎಂದು ಎಲ್ಲರಿಗೂ ಗೊತ್ತು. ಆದರೆ ಅಂತಹ ಭಿನ್ನವಾದ ಜೀವನಶೈಲಿ ಇರುವ ಒಂದು ಬುಡಕಟ್ಟು ಜನರ ಬಗ್ಗೆ ನಾವೀಗ ತಿಳಿದುಕೊಳ್ಳೋಣ. ಅವರೇ ಕೊಂಡ ರೆಡ್ಲು. ಇವರು ತೆಲುಗು ಮೂಲದವರು. ಆದರೆ ಇವರ ಭಾಷೆಯ ಶೈಲಿಗೂ ತೆಲುಗಿಗೂ ಸ್ವಲ್ಪ ವ್ಯತ್ಯಾಸ ಇರುತ್ತದೆ. ಗೋದಾವರಿ ನದಿಗೆ ಹೊಂದಿಕೊಂಡಂತೆ ಇವರು ಜೀವನ ನಡೆಸುತ್ತಿದ್ದಾರೆ. ಅಲ್ಲಿರುವ ಬೆಟ್ಟಗಳಲ್ಲೇ ಇವರ ನಿವಾಸ. ಅದೆಷ್ಟೋ ವರ್ಷಗಳಿಂದ ಆ ಬೆಟ್ಟಗಳಲ್ಲೇ ಇವರು ವಾಸವಾಗಿದ್ದಾರೆ. ಇವರ ಆಚಾರ, ವಿಚಾರ, ಪದ್ಧತಿಗಳು ಎಲ್ಲರಿಗಿಂತಲೂ ಸ್ವಲ್ಪ ಭಿನ್ನವಾಗಿ ಇರುತ್ತವೆ.

ಕೊಂಡ ರೆಡ್ಲು ಹೆಚ್ಚಿನ ಪ್ರಮಾಣದಲ್ಲಿ ತೆಲಂಗಾಣ ಖಮ್ಮಂ ಜಿಲ್ಲೆಯಲ್ಲಿ, ಗೋವಾವರಿ ಉತ್ತರ ದಿಕ್ಕಿನಲ್ಲಿರುವ ಚಿಂತೂರು, ಕೂನವರಂ, ವರ ರಾಮಚಂದ್ರಾಪುರಗಳಲ್ಲಿ ಇರುತ್ತಾರೆ. ಅದೇ ರೀತಿ ದಕ್ಷಿಣ ದಿಕ್ಕಿನಲ್ಲಿರುವ ಅಶ್ವರಾವು ಪೇಟ, ದಮ್ಮುಪೇಟ, ವೇಲೇರುಪಾಡು ಪಂಚಾಯಿತಿಗಳಲ್ಲಿ ಇವರು ವಾಸವಾಗಿದ್ದಾರೆ. ಇವರ ಜತೆಗೆ ಆಂಧ್ರಪ್ರದೇಶದಲ್ಲಿನ ಪಶ್ಚಿಮ ಗೋದಾವರಿ ಜಿಲ್ಲೆಗಳಲ್ಲೂ ಸಹ ಕೊಂಡ ರೆಡ್ಲು ವಾಸವಾಗಿದ್ದಾರೆ. ಗೋದಾವರಿಗೆ ಎರಡೂ ಕಡೆ ಪಾಪಿಕೊಂಡಲು ಪ್ರದೇಶದಲ್ಲಿ ಇವರು ನಮಗೆ ಹೆಚ್ಚಾಗಿ ಕಾಣಿಸುತ್ತಾರೆ.

ಕೊಂಡ ರೆಡ್ಲ ಆಚಾರ ವ್ಯವಹಾರಗಳು ಎಲ್ಲವು ಭಿನ್ನವಾಗಿ ಇರುತ್ತವೆ ಎಂದು ಹೇಳಿದೆವಲ್ಲವೇ. ಇವರ ಮದುವೆಗಳ ಒಟ್ಟಾರೆ ಖರ್ಚನ್ನು ಹುಡುಗನ ಕಡೆಯವರೇ ಮಾಡಬೇಕಾಗುತ್ತದೆ. ಇವರಿಗೆ ವರದಕ್ಷಿಣೆ ಎಂದರೆ ಗೊತ್ತಿಲ್ಲ. ಇನ್ನು ಈ ಜಾತಿ ಜನರಲ್ಲಿ ಪುರುಷರು ಕೆಲವರು ಹೆಚ್ಚು ಮಂದಿ ಮಹಿಳೆಯರನ್ನೂ ಸಹ ಪತ್ನಿಯಾಗಿ ಮಾಡಿಕೊಳ್ಳುತ್ತಾರೆ. ಗಂಡ ಸತ್ತು ಹೋದರೆ ಮಹಿಳೆ ಮತ್ತೆ ಮದುವೆಯಾಗುವ ಅವಕಾಶ ಕಲ್ಪಿಸಿದ್ದಾರೆ. ಹಾಗಾಗಿ ತನ್ನ ಗಂಡ ಸತ್ತು ಹೋದರೆ ಮೈದುನನ್ನು ಸಹ ಇವರು ಮಾಡಿಕೊಳ್ಳಬಹುದು. ಅದನ್ನು ತಪ್ಪು ಎಂದು ಭಾವಿಸಲ್ಲ. ಇನ್ನು ಇವರಲ್ಲಿ ಯಾವ ಹುಡುಗಿಯಾದರೂ ತನ್ನ ಸೋದರ ಮಾವನ ಅನುಮತಿಯಿಂದ ಮದುವೆ ಕುದುರಿಸಿಕೊಳ್ಳಬೇಕು. ಆ ರೀತಿ ಅಲ್ಲದೆ ಒಂದು ವೇಳೆ ಸೋದರ ಮಾವನನಿಗೆ ಸೊಸೆ ಇದ್ದರೆ, ಸೋದರ ಸೊಸೆಯನ್ನು ತನ್ನ ಮಗನಿಗೆ ಕೊಟ್ಟು ಮದುವೆ ಮಾಡುತ್ತೇನೆ ಎಂದು ಹೇಳಿದರೆ ಆಗ ನಿಶ್ಚಯವಾದ ಮದುವೆ ಸಂಬಂಧ ರದ್ದಾಗುತ್ತದೆ. ಅಂತಹ ಸಂದರ್ಭದಲ್ಲಿ ಒಂದು ಬಾಟಲಿ ಸಾರಾಯಿ ಹುಡುಗಿಯ ಮನೆಯಲ್ಲಿ ಯಾವುದಾದರೂ ಒಂದು ಜಾಗದಲ್ಲಿ ಇಟ್ಟು ಹಿಂತಿರುಗುತ್ತಾರೆ.

ಕೊಂಡ ರೆಡ್ಲ ಮಕ್ಕಳ ವಿಷಯದಲ್ಲೂ ಪದ್ಧತಿಗಳನ್ನು ಪಾಲಿಸುತ್ತಾರೆ. ಮಕ್ಕಳಿಗೆ ದೃಷ್ಟಿ ತಾಕಬಾರದು ಎಂದು ಕಾಡಿಗೆಯನ್ನು ದಿಷ್ಟಿ ಬೊಟ್ಟಿನಂತೆ ಇಡುತ್ತಾರೆ. ಇನ್ನು ಇವರು ಪ್ರಸವವನ್ನು ಕೀಳಾಗಿ ಭಾವಿಸುತ್ತಾರೆ. ಇನ್ನೇನು ಸ್ವಲ್ಪ ದಿನಗಳಲ್ಲಿ ಪ್ರಸವಿಸುತ್ತಾಳೆ ಎಂಬ ಮಹಿಳೆಯನ್ನು, ಸೂಲಗಿತ್ತಿಯನ್ನು ಒಂದೇ ಮನೆಯಲ್ಲಿ ಇರಿಸುತ್ತಾರೆ. ಆ ಮನೆಯನ್ನು ’ಕೀಡುಪಾಕ’ ಎಂದು ಕರೆಯುತ್ತಾರೆ. 11 ದಿನಗಳ ಕಾಲ ಅವರು ಆ ಮನೆಯಲ್ಲೇ ಇರಬೇಕು. ಅವರಿಗೆ ಬೇಕಾದ ಊಟ, ಇತರೆ ವಸ್ತುಗಳನ್ನು ಮನೆಯಿಂದ ಕಳುಹಿಸುತ್ತಾರೆ. ಇನ್ನು ಡೆಲಿವರಿ ಆದ 11ನೇ ದಿನಕ್ಕೆ ಬಾಣಂತಿಗೆ ಸ್ನಾನ ಮಾಡಿಸಿ ಮನೆಗೆ ಕರೆತರುತ್ತಾರೆ. ಬಳಿಕ ಕೀಡುಪಾಕವನ್ನು ನೆಲಸಮ ಮಾಡುತ್ತಾರೆ. ಅದನ್ನು ನಿರ್ಮಿಸಲು ಬಳಸಿದ ಕಟ್ಟಿಗೆ, ಎಲೆಗಳನ್ನು ಸುಡುತ್ತಾರೆ. ಬಳಿಕ ಹುಟ್ಟಿದ ಮಗುವಿಗೆ ದೃಷ್ಟಿ ತಾಕದಂತೆ ಮಂಚದ ಬಳಿ ಕೋಳಿ ಕೊಯ್ದು ನೈವೇದ್ಯವಾಗಿ ಇಡುತ್ತಾರೆ. ಕೋಳಿ ಕಾಲು ಒಂದು, ಎರಡು ಎಲೆಗಳು, ಮೊರ, ಕುಟ್ಟಾಣಿ ಮಗುವಿನ ಕೈಯಲ್ಲಿಟ್ಟು, ಬಳಿಕ ಅವನ್ನು ಸುಡುತ್ತಾರೆ.

ಕೊಂಡ ರೆಡ್ಲು ಋತುಮತಿಯಾದ ಹುಡುಗಿಯರನ್ನು ಸಹ ಕೀಡುಪಾಕದಲ್ಲಿ ಇಡುತ್ತಾರೆ. 11ನೇ ದಿನ ಸ್ನಾನ ಮಾಡಿಸಿ ಮನೆಗೆ ಕರೆತರುತ್ತಾರೆ. ಆ ಬಳಿಕ ಕೀಡುಪಾಕವನ್ನು ಸುಡುತ್ತಾರೆ. ಆ ಸಮಯದಲ್ಲಿ ಯುವತಿ ಜತೆಗೆ ಗ್ರಾಮದಲ್ಲಿನ ಹಿರಿಯ ಮಹಿಳೆಯರನ್ನು ಇಡುತ್ತಾರೆ. ಇನ್ನು ಆ ಯುವತಿಗೆ ಆಕೆಯೊಂದಿಗೆ ಇರುವ ಮಹಿಳೆಯರೇ ಎಲ್ಲ ಕೆಲಸ ಮಾಡಬೇಕು. ಅಡುಗೆಯಲ್ಲಿ ಉಪ್ಪು, ಖಾರ, ಶುಂಠಿ ಬಳಸಲ್ಲ. 11ನೇ ದಿನದ ಬಳಿಕ ಆ ಯುವತಿ ಬಳಸಿದ, ಮುಟ್ಟಿದ ವಸ್ತುಗಳನ್ನು ಅಲ್ಲೇ ಬಿಡುತ್ತಾರೆ ಅಥವಾ ಋತುಮತಿಯಾದ ಇನ್ನೊಬ್ಬ ಯುವತಿಗೆ ಕೊಡುತ್ತಾರೆ. ಅಷ್ಟೇ ಹೊರತು ಮನೆಗೆ ಅವನ್ನು ತೆಗೆದುಕೊಂಡು ಬರಲ್ಲ. ಇಲ್ಲದಿದ್ದರೆ ಗೋದಾವರಿ ನದಿಯಲ್ಲಾದರೂ ಹಾಕುತ್ತಾರೆ. ಇದಿಷ್ಟು ಕೊಂಡ ರೆಡ್ಲ ಆಚಾರ, ವಿಚಾರಗಳು. ವಿಚಿತ್ರವಾಗಿವೆ ಅಲ್ಲವೇ..?

SHARE