ಮತ್ತೆ ಮತ್ತೆ ಭೇಟಿ ಮಾಡ್ತಾ ಇದ್ದಾರೆ ಕಿಚ್ಚ ಮತ್ತು ಕುಮ್ಮಿ…!! ಏನ್ ಮ್ಯಾಟರ್ ಗೊತ್ತೆ ?

ಕಿಚ್ಚ ಸುದೀಪ್ ಹೆಸರೇ ಒಂದು ಶಕ್ತಿ ಎನ್ನಬಹುದು. ಈ ಶಕ್ತಿಯ ಜೊತೆಗೆ ರಾಜಕೀಯದ ಮತ್ತೊಂಡು ಶಕ್ತಿಯೂ ಜೊತೆಯಾದರೆ ಹೀಗಿರುತ್ತೆ ? ಎಂತ ಥಿಂಕ್ ಮಾಡೋ ಅಷ್ಟರಲ್ಲೇ ಕಳೆದ ವರ್ಷದ ಅಂತ್ಯದಲ್ಲಿ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯವರು ಸುದೀಪ್ ಅವರನ್ನು ಭೇಟಿ ಮಾಡಿ ಚಿತ್ರರಂಗದಲ್ಲಿ ಮತ್ತು ರಾಜಕೀಯ ವಲಯದಲ್ಲಿ ಸಂಚಲ ಉಂಟು ಮಾಡಿದ್ದರು. ಈಗ ಮತ್ತೆ ಈ ಜೋಡಿ ಭೇಟಿಯಾಗಿದ್ದು, ಚುನಾವಣೆಯ ಸಮಯದಲ್ಲಿ ಈ ಭೇಟಿ ಸಾಕಷ್ಟು ಚರ್ಚೆಗೆ ಎಡೆ ಮಾಡಿಕೊಟ್ಟಿದೆ.

ಹೌದು, ಸದ್ಯ ಸ್ಯಾಂಡಲ್ ವುಡ್, ಬಾಲಿವುಡ್, ಟಾಲಿವುಡ್ ಸೇರಿದಂತೆ ಹಾಲಿವುಡ್ ನಲ್ಲೂ ಬ್ಯುಸಿ ಆಗಿರುವ ನಟ. ಬೆಳ್ಳಿತೆರೆಯಲ್ಲಷ್ಟೇ ಅಲ್ಲದೆ ಕಿರುತೆರೆಯಲ್ಲೂ ‘ರಿಯಾಲಿಟಿ ಶೋ’ ನಡೆಸಿಕೊಡುತ್ತಾ, ಇವುಗಳ ಮಧ್ಯೆದಲ್ಲಿ ಬಿಡುವು ಮಾಡಿಕೊಂಡು ‘ಸಿಸಿಎಲ್’ ಪಂದ್ಯಗಳಲ್ಲೂ ಭಾಗಿಯಾಗುತ್ತಿರುವ ಹೀರೋ ಕಿಚ್ಚ ಸುದೀಪ್, ಕುಮಾರಸ್ವಾಮಿಯವರನ್ನೂ ಸಹ ಭೇಟಿ ಮಾಡಿದ್ದು ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಯಾಗಿ ಕನ್ನಡಿಗರ ಸ್ವಾಭಿಮಾನದ ಪ್ರಶ್ನೆಯಾಗಿರುವ ಈ ಬಾರಿಯ ಚುನಾವಣೆಯಲ್ಲಿ ನಿರ್ಣಾಯಕ ಪಾತ್ರ ವಹಿಸುವ ಬಗ್ಗೆ ಚಿಂತಿಸುತ್ತಿದ್ದಾರೆ ಎಂದು ಆಪ್ತ ಮೂಲಗಳಿಂದ ತಿಳಿದುಬಂದಿದೆ.

ಹೌದು, ಕುಮಾರಸ್ವಾಮಿಯವರೊಂದಿಗೆ ಹಿಂದಿನಿಂದಲೂ ಉತ್ತಮ ಸಂಭಂಧ ಹೊಂದಿರುವ ಅಭಿನಯ ಚಕ್ರವರ್ತಿ ಸುದೀಪ್ ಅವರನ್ನು ಹಲವಾರು ಜೆಡಿಎಸ್ ಅಭ್ಯರ್ಥಿಗಳು ಭೇಟಿಯಾಗಿ ತಮ್ಮ ಪರ ಪ್ರಚಾರ ಮಾಡಲು ಮನವಿ ಮಾಡಿದ್ದಾರೆ ಹಾಗೂ ಅಭಿನಯ ಚಕ್ರವರ್ತಿ ಅದಕ್ಕೆ ಸೂಕ್ತವಾಗಿ ಸ್ಪಂದಿಸಿದ್ದಾರೆ ಎಂದು ಹೇಳಾಗುತ್ತಿದೆ.

ಈ ಬಾರಿಯ ಚುನಾವಣೆಯಲ್ಲಿ ರಾಷ್ಟ್ರೀಯ ಪಕ್ಷಗಳನ್ನು ಯಾವ ಕಾರಣಕ್ಕೆ ದೂರ ಇಟ್ಟು ಕನ್ನಡಿಗರ ಪಕ್ಷವನ್ನೇ ಬೆಂಬಲಿಸಬೇಕು ಎಂದು ಒಂದು ಸೂಕ್ತವಾದ ಅಜೆಂಡಾ ತಯಾರಿಸಿಕೊಂಡು ಹಾಗೂ ರಾಷ್ಟ್ರೀಯ ಪಕ್ಷಗಳಿಂದ ಬರುವ ಟೀಕೆಗೆ ಸೂಕ್ತ ಪ್ರತ್ಯತ್ತರದ ತಯಾರಿ ಮಾಡಿಕೊಂಡು ಆ ಮೂಲಕ ವ್ಯವಸ್ಥಿತವಾಗಿ ಚುನಾವಣಾ ಪ್ರಚಾರಕ್ಕೆ ಧುಮುಕುವ ಚಿಂತನೆಯಲ್ಲಿದ್ದಾರೆ ಎಂದು ಹೇಳಲಾಗುತ್ತಿದೆ.

ಒಟ್ಟಿನಲ್ಲಿ ಈ ಬಾರಿ ಕನ್ನಡಿಗರ ಪಕ್ಷವೇ ಅಧಿಕಾರಕ್ಕೆ ಬರಬೇಕು ಅಂದು ಜನ ಸಾಮಾನ್ಯರಲ್ಲದೇ ಸೆಲಬ್ರಟಿಗಳು ಕೂಡ ಹೇಳಿ ಅದಕ್ಕೆ ಕೈಗೂಡಿಸುತ್ತಿರುವುದು ಕನ್ನಡಿಗರ ಪಾಲಿಗೆ ಉತ್ತಮ ದಿನಗಳ ಮುನ್ಸೂಚನೆ ಎಂದೇ ಹೇಳಲಾಗುತ್ತಿದೆ.

SHARE