ಫೋನ್‌ಗಳನ್ನು ನೀವು ಎಲ್ಲಿ ಇಡುತ್ತೀರ. ಈ ಜಾಗಗಳಲ್ಲಾದರೆ ಇಟ್ಟು ಬಳಸಬಾರದು ಗೊತ್ತಾ..?

ಇಂದು ಮೊಬೈಲ್ ಫೋನ್‌ಗಳು ನಮ್ಮ ಜೀವನವನ್ನು ಹೇಗೆಲ್ಲಾ ಪ್ರಭಾವಗೊಳಿಸುತ್ತಿವೆ ಎಂದು ಎಲ್ಲರಿಗೂ ಗೊತ್ತು. ತುಂಬಾ ಕಡಿಮೆ ಬೆಲೆಗೆ ಫೋನ್‌ಗಳು ಲಭಿಸುತ್ತಿವೆ. ಇದರಿಂದ ಅನೇಕ ಮಂದಿ ಕೈಗಳಲ್ಲಿ ಈಗ ಫೋನ್‍ಗಳು ದರ್ಶನ ನೀಡುತ್ತಿವೆ. ಇನ್ನು ಸ್ಮಾರ್ಟ್‍ಫೋನ್‌ಗಳು ತುಂಬಾ ಕಡಿಮೆ ಬೆಲೆಗೆ ಸಿಗುತ್ತಿರುವ ಕಾರಣ ಅವನ್ನೂ ಸಹ ಹೆಚ್ಚಿನ ಮಂದಿ ಬಳಸುತ್ತಿದ್ದಾರೆ. ಹೇಗೆ ಬಳಸಿದರೂ ಅದರಿಂದ ಅಪಾಯ ಇದ್ದೇ ಇದೆ ಎನ್ನುತ್ತಿದ್ದಾರೆ ವೈದ್ಯರು. ಮುಖ್ಯವಾಗಿ ಫೋನ್‌ಗಳನ್ನು ಕೆಲವು ಜಾಗಗಳಲ್ಲಿ ಇಡುವುದರಿಂದ ಅವುಗಳಿಂದ ಅಪಾಯ ತಪ್ಪಿದ್ದಲ್ಲ ಎಂದು ವೈದ್ಯರು ಹೇಳುತ್ತಿದ್ದಾರೆ. ಹಾಗಿದ್ದರೆ ಯಾವ್ಯಾವ ಜಾಗಗಳಲ್ಲಿ ಫೋನ್‍ಗಳನ್ನು ಇಡಬಾರದು ಎಂದು ಈಗ ತಿಳಿದುಕೊಳ್ಳೋಣವೇ..!

1. ಚಾರ್ಜರ್ ಮೇಲೆ
ಬಹಳಷ್ಟು ಮಂದಿ ಫೋನ್‍ಗಳನ್ನು ಚಾರ್ಜ್‌ಗೆ ಇಟ್ಟು ಅವನ್ನು ಕೆಳಗೆ ಇಡಲು ಟೇಬಲ್, ಸ್ಟೂಲ್ ಏನೂ ಇಲ್ಲ ಎಂದು ಹೇಳಿ ಅದನ್ನು ಚಾರ್ಜರ್ ಮೇಲೆ ಇಡುತ್ತಾರೆ. ಆದರೆ ಈ ರೀತಿ ಮಾಡಬಾರದು. ಇದರಿಂದ ರೇಡಿಯೇಷನ್ ತುಂಬಾ ಆಗುತ್ತದೆ ಎನ್ನುತ್ತಿದ್ದಾರೆ ತಜ್ಞರು. ಆದಕಾರಣ ಚಾರ್ಜಿಂಗ್ ಇಟ್ಟಾಗ ಅವನ್ನು ಚಾರ್ಜರ್ ಮೇಲೆ ಇಡಬಾರದು. ಅದೇ ರೀತಿ ರಾತ್ರಿಯಲ್ಲಾ ಚಾರ್ಜಿಂಗ್‌ಗೆ ಫೋನ್‌ಗಳನ್ನು ಇಡಬಾರದು. ಇದರಿಂದ ಫೋನ್‌ಗಳು ಸ್ಫೋಟಗೊಳ್ಳುವ ಅಪಾಯ ಇದೆ.

2. ದಿಂಬಿನ ಕೆಳಗೆ
ಬಹಳಷ್ಟು ಮಂದಿ ದಿಂಬಿನ ಕೆಳಗೆ ಫೋನ್‌ಗಳನ್ನು ಇಟ್ಟು ನಿದ್ರಿಸುತ್ತಾರೆ. ಈ ರೀತಿ ಮಾಡಬಾರದು. ಮಾಡಿದರೆ ದೇಹದಲ್ಲಿನ ಮೆಲಟೋನಿನ್ ಉತ್ಪತ್ತಿ ಕಡಿಮೆಯಾಗುತ್ತದೆ. ಹಲವು ಅನಾರೋಗ್ಯ ಸಮಸ್ಯೆಗಳು ಬರುತ್ತವೆ. ಮುಖ್ಯವಾಗಿ ಚರ್ಮ ಸಮಸ್ಯೆಗಳು ಬರುತ್ತವೆ. ಆದಕಾರಣ ನಿದ್ರಿಸುವಾಗ ಫೋನ್‌ಗಳನ್ನು ಯಾವುದೇ ಕಾರಣಕ್ಕೂ ದಿಂಬಿನ ಕೆಳಗೆ ಇಡಬೇಡಿ.

3. ಹಿಂಬದಿ ಜೇಬಿನಲ್ಲಿ
ಹುಡುಗಿಯರು ಹೆಚ್ಚಾಗಿ ಈ ರೀತಿ ಇಟ್ಟುಕೊಳ್ಳುವ ಅಭ್ಯಾಸ ಇದೆ. ಆದರೆ ಈ ರೀತಿ ಮಾಡುವುದರಿಂದ ಫೋನ್‍ನಿಂದ ಬರುವ ರೇಡಿಯೇಷನ್ ಹೊಟ್ಟೆನೋವು, ಕಾಲು ನೋವನ್ನು ಉಂಟುಮಾಡುತ್ತದೆ. ಆದಕಾರಣ ಫೋನ್ ಬ್ಯಾಕ್ ಪ್ಯಾಕೆಟ್‌ನಲ್ಲಿ ಇಟ್ಟುಕೊಳ್ಳಬಾರದು.

4. ಮುಂಬದಿ ಜೇಬು
ಪುರುಷರು ಹೆಚ್ಚಾಗಿ ಫೋನ್‌ಗಳನ್ನು ಮುಂದಿನ ಜೇಬಿನಲ್ಲಿ ಇಟ್ಟುಕೊಳ್ಳುತ್ತಾರೆ. ಈ ರೀತಿ ಮಾಡಿದರೆ ಫೋನ್‌ನಿಂದ ಬರುವ ರೇಡಿಯೇಷನ್‌ನಿಂದ ವೀರ್ಯಾಣುಗಳು ನಾಶವಾಗುತ್ತವೆ. ಇದರಿಂದ ಸಂತಾನ ಹೀನತೆ ಸಮಸ್ಯೆಗಳು ಉಂಟಾಗುತ್ತವೆಂದು ವೈದ್ಯರು ಎಚ್ಚರಿಸಿದ್ದಾರೆ.

5. ತಲೆ ಪಕ್ಕದಲ್ಲಿ
ಬಹಳಷ್ಟು ಮಂದಿ ನಿದ್ರಿಸುವಾಗ ತಲೆ ಪಕ್ಕದಲ್ಲಿ ಫೋನ್‌ಗಳನ್ನು ಇಟ್ಟುಕೊಂಡು ಮಲಗುತ್ತಾರೆ. ಈ ರೀತಿ ಮಾಡುವುದರಿಂದ ಮಿದುಳಿನಲ್ಲಿ ಗಡ್ಡೆಗಳು ಉಂಟಾಗುವ ಸಾಧ್ಯತೆ ಇದೆ. ಅದು ಬ್ರೈನ್ ಟ್ಯೂಮರ್‌ಗೆ ದಾರಿಯಾಗುತ್ತದೆ ಎನ್ನುತ್ತಿದ್ದಾರೆ ವೈದ್ಯರು. ಆದಕಾರಣ ಈ ಜಾಗಗಳಲ್ಲಿ ಬಿಟ್ಟು ಫೋನನ್ನು ಎಲ್ಲಿ ಬೇಕಾದರೂ ಇಟ್ಟು ಬಳಸಿಕೊಳ್ಳಬಹುದು ಎಂದು ಸೂಚಿಸಿದ್ದಾರೆ ವೈದ್ಯರು.

SHARE