ಹುಟ್ಟು ಹಬ್ಬದಂದು ಅಮ್ಮನನ್ನು ನೆನೆದು ಪತ್ರ ಬರೆದ ಜಾಹ್ನವಿ !!

ತಾಯಿ ಅಗಲಿದ ಹನ್ನೊಂದೇ ದಿನಕ್ಕೆ 21ನೇ ವರ್ಷಕ್ಕೆ ಕಾಲಿಟ್ಟ ಬಾಲಿವುಡ್‌ನ ಉದಯೋನ್ಮುಖ ನಟಿ ಜಾಹ್ನವಿ ಕಪೂರ್‌ ಇನ್ನು ದುಃಖದಿಂದ ಹೊರಬಂದಿಲ್ಲ. ಕಳೆದ ವರ್ಷ ಹುಟ್ಟುಹಬ್ಬದಂದು ಶ್ರೀದೇವಿ ಮಗಳಿಗೆ ಶುಭ ಹಾರೈಸಿದ್ದ ಸ್ಟೇಟಸ್‌ ಅನ್ನು ಪುನಾ ರೀಟ್ವೀಟ್‌ ಮಾಡಲಾಗಿದ್ದು, ಇದು ಎಲ್ಲರ ಮನ ಕಲಕುವಂತೆ ಮಾಡಿದೆ. ಅದರಲ್ಲಿ ಶ್ರೀದೇವಿ, ಜಾಹ್ನವಿ ಪುಟ್ಟ ಹುಡುಗಿಯಾಗಿದ್ದಾಗಿನ ಹುಟ್ಟುಹಬ್ಬದ ಫೋಟೋ ಕೂಡಾ ಇದೆ.

ತಾಯಿ ಶ್ರೀದೇವಿ ಸಾವಿನ ಬಗ್ಗೆ ಇದೂವರೆಗೂ ಎಲ್ಲಿಯೂ ಮಾತನಾಡದ ಮಗಳು ಜಾಹ್ನವಿ ಕಪೂರ್ ಇಂದು ತಮ್ಮ ಇನ್ ಸ್ಟಾಗ್ರಾಂ ಭಾವನಾತ್ಮಕವಾಗಿ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ. ಇದರ ಸಂಪೂರ್ಣ ವಿವರ ಇಲ್ಲಿದೆ… “ನನ್ನ ಹುಟ್ಟುಹಬ್ಬದ ದಿನವಾದ ಇಂದು ಒಂದೇ ಒಂದನ್ನು ನಾನು ಕೇಳುತ್ತೇನೆ. ನೀವೆಲ್ಲರೂ ನಿಮ್ಮ ತಂದೆ ತಾಯಿಯನ್ನು ಪ್ರೀತಿಸಿ. ಅವರನ್ನು ಖುಷಿಯಾಗಿಡಿ. ನಿಮ್ಮ ಪ್ರೀತಿ ಅವರಿಗೆ ಗೊತ್ತಾಗುವಂತೆ ನಡೆದುಕೊಳ್ಳಿ. ನಿಮ್ಮನ್ನು ರೂಪಿಸಿದವರು ಅವರು ಮತ್ತೂ ಅದರ ಜತೆಯಲ್ಲಿ ನನ್ನ ಅಮ್ಮನನ್ನು ನೆನಪಿಸಿಕೊಳ್ಳಿ ಎಂದು ಕೇಳಿಕೊಳ್ಳುತ್ತೇನೆ”.

“ನನ್ನಮ್ಮನ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸಿ. ಅವರ ಮೇಲೆ ನೀವು ತೋರಿಸಿದ ಅಪಾರ ಪ್ರೀತಿ ಹೀಗೆಯೇ ಮುಂದುವರಿಯಲಿ. ನನ್ನ ತಂದೆಯ ಜತೆ ನನ್ನಮ್ಮ ಹಂಚಿಕೊಂಡ ಪ್ರೀತಿ ಬಹಳ ದೊಡ್ಡದು. ಅವರ ಪ್ರೀತಿ ಅಮರ. ಯಾಕೆಂದರೆ ಆ ಪ್ರೀತಿಯಂತೆ ಇನ್ಯಾವುದೂ ಜಗತ್ತಿನಲ್ಲಿಲ್ಲ. ಅವರು ಪರಸ್ಪರ ಪ್ರೀತಿಸಿದ್ದಕ್ಕಿಂತ ಪವಿತ್ರವಾದ್ದು ದೊಡ್ಡ ಸಂತೋಷ ಇನ್ನೊಂದಿಲ್ಲ. ಹಾಗಾಗಿ ದಯವಿಟ್ಟು ಅವರನ್ನು ಗೌರವಿಸಿ.”

“ಯಾರಾದರೂ ಇದಕ್ಕೆ ಮಸಿ ಬಳಲಿಯಲು ಪ್ರಯತ್ನಿಸುತ್ತಾರೆ ಎಂದು ಯೋಚಿಸುವಾಗ ನನಗೆ ಬಹಳ ನೋವಾಗುತ್ತದೆ. ನನ್ನ ಅಮ್ಮನಿಗೆ ಮಾತ್ರ ಅಲ್ಲ, ಜೀವನದುದ್ದಕ್ಕೂ ಅವಳ ಮತ್ತು ಇಬ್ಬರು ಮಕ್ಕಳ ಹತ್ತಿರವೇ ಇದ್ದ ಪಪ್ಪನಿಗೆ, ಜತೆಗೆ ಅವರ ಪ್ರೀತಿಯಲ್ಲಿ ಇರುವ ನಮಗೂ ನೋವಾಗುತ್ತದೆ. ನಾನು, ಖುಷಿ ನಮ್ಮ ಅಮ್ಮನನ್ನು ಕಳೆದುಕೊಂಡಿದ್ದೇವೆ. ಪಪ್ಪಾ ತಮ್ಮ ಜಾನ್‌ಳನ್ನು ಕಳೆದುಕೊಂಡಿದ್ದಾರೆ. ಅವಳು ನಮ್ಮ ಪಾಲಿಗೆ ನಟಿ, ಅಮ್ಮ. ಪಪ್ಪನಿಗೆ ಪತ್ನಿಗಿಂತ ಹೆಚ್ಚಿನದಾಗಿದ್ದರು.”

“ಈ ಎಲ್ಲಾ ಪಾತ್ರಗಳನ್ನು ಅವರು ಅದ್ಭುತವಾಗಿ ನಿರ್ವಹಿಸಿದ್ದರು. ಪ್ರೀತಿಯಲ್ಲಿ ಕೊಡು-ಕೊಳ್ಳುವ ವ್ಯವಹಾರ ಮಾಡಿದವರಲ್ಲ. ಜನರೊಂದಿಗೆ ಉತ್ತಮವಾಗಿ, ಪ್ರೀತಿಯಿಂದ ನಡೆದುಕೊಂಡಿದ್ದಾರೆ. ಫ್ರಸ್ಪ್ರೇಷನ್‌, ಅಸೂಯೆ ಇದ್ಯಾವುದೂ ಅವಳಿಗೆ ಗೊತ್ತಿರಲಿಲ್ಲ. ಹಾಗಾಗಿ ಎಲ್ಲವೂ ಇದೇ ರೀತಿ ಇರಲಿ. ಒಳ್ಳೆಯದನ್ನು ಮತ್ತು ಪ್ರೀತಿಯನ್ನು ಮಾತ್ರ ನೀಡೋಣ. ಅದು ಅವರಿಗೆ ತುಂಬಾ ಖುಷಿಕೊಡುತ್ತೆ. ಸಾವಿನಲ್ಲೂ ಅವರು ಎಲ್ಲರಿಗೆ ಸ್ಫೂರ್ತಿ, ಉತ್ಸಾಹವನ್ನು ಕೊಟ್ಟಿದ್ದಾರೆ. ಪ್ರೀತಿ ಹೊರತುಪಡಿಸಿ ಯಾವುದೇ ರೀತಿಯ ಕಹಿ ತೋರಿಸುವುದು ಬೇಡ. ಯಾಕೆಂದರೆ ಸದಾ ನನ್ನಮ್ಮ ಮುಗ್ಧತೆ, ದೃಢತೆ ಮತ್ತು ಸ್ವಾಭಿಮಾನದ ಪರವಾಗಿದ್ದರು. ನಿಮ್ಮೆಲ್ಲರ ಪ್ರೀತಿ ಮತ್ತು ಬೆಂಬಲಕ್ಕೆ ಧನ್ಯವಾದಗಳು. ಇದು ನಮಗೆ ಶಕ್ತಿ ತುಂಬಿದೆ. ವಿಶ್ವಾಸ ಮೂಡಿಸಿದೆ”.

ಹೀಗೆ ಜಾಹ್ನವಿ ಬರೆದಿರುವ ಪ್ರತೀ ಸಾಲು ಓದುಗರನ್ನು ಕಲಕುವಂತಿದೆ. ಅದಕ್ಕೆ ಅಭಿಮಾನಿಗಳು, ಬಾಲಿವುಡ್‌ ಸಿಲೆಬ್ರಿಟಿಗಳಿಂದ ಭಾವಪೂರ್ಣ ಪ್ರತಿಕ್ರಿಯೆ ವ್ಯಕ್ತವಾಗಿದೆ.

SHARE