ಲೈಂಗಿಕ ಕಿರುಕುಳಕ್ಕೆ ಒಳಗಾದ ಆತನನ್ನು “ಶ್ರೀದೇವಿ” ಕಾಪಾಡಿದರಂತೆ..! ಹೇಗೆ ಗೊತ್ತಾ.?

ಬಾಲಿವುಡ್ ತಾರೆ ಶ್ರೀದೇವಿ ನಿಧನ ದೇಶದಾದ್ಯಂತ ಇರುವ ಅವರ ಅಭಿಮಾನಿಗಳನ್ನು ಎಷ್ಟೆಲ್ಲಾ ನೋವಿಗೆ ಗುರಿ ಮಾಡಿತು ಎಂಬುದು ಎಲ್ಲರಿಗೂ ಗೊತ್ತೇ ಇದೆ. ಬಹಳಷ್ಟು ಮಂದಿ ಅವರ ಮರಣವನ್ನು ಜೀರ್ಣಿಸಿಕೊಳ್ಳಲಾಗಲಿಲ್ಲ. ತುಂಬಾ ಆರೋಗ್ಯವಾಗಿ ಇದ್ದ ವ್ಯಕ್ತಿ ಅಷ್ಟು ಸಡನ್ ಅಗೈ ಹೇಗೆ ಮೃತಪಟ್ಟರು ಎಂದು ಎಲ್ಲರೂ ಆತಂಕ ವ್ಯಕ್ತಪಡಿಸಿದರು. ಖ್ಯಾತ ತಾರೆಯೊಬ್ಬರನ್ನು ಕಳೆದುಕೊಂಡೆವು ಎಂದು ಸಿನಿ ಜಗತ್ತು ಕಣ್ಣೀರಾಯಿತು. ಆದರೆ ನಟಿಯಾಗಿ ಅವರು ಬಹಳಷ್ಟು ಮಂದಿಗೆ ಸ್ಫೂರ್ತಿ ತುಂಬಿದ್ದಾರೆ ಎಂಬುದರಲ್ಲಿ ಯಾವುದೇ ಅನುಮಾನ ಇಲ್ಲ. ಈ ಹಿನ್ನೆಲೆಯಲ್ಲಿ ವ್ಯಕ್ತಿಯೊಬ್ಬರಿಗೆ ನಟಿಯಾಗಿ ಅಲ್ಲದೆ, ಒಂದು ಶಕ್ತಿಯಾಗಿ ಸ್ಫೂರ್ತಿ ತುಂಬಿದ್ದಾರೆ ಶ್ರೀದೇವಿ. ಹೌದು ಇದು ನಿಜ. ಆ ವ್ಯಕ್ತಿ ಯಾರೆಂದರೆ…

ಅವರ ಹೆಸರು ಹರೀಶ್ ಅಯ್ಯರ್. ಇವರು ಸಾಮಾಜಿಕ ಹೋರಾಟಗಾರ. ಸರಕಾರೇತರ ಕಾರ್ಯಕ್ರಮಗಳಲ್ಲಿ ಭಾಗಿಯಾಗುತ್ತಿರುತ್ತಾರೆ. ಆದರೆ ಹರೀಶ್ ಚಿಕ್ಕಂದಿನಲ್ಲಿ ಲೈಂಗಿಕ ಕಿರುಕುಳಕ್ಕೆ ಬಹಳಷ್ಟು ಸಲ ಒಳಗಾಗಿದ್ದರು. ಅದರ ಪ್ರಭಾವ ಅವರ ಮಾನಸಿಕ ಆರೋಗ್ಯದ ಮೇಲೆ ಬಿತ್ತು. ಆ ಹೊಡೆತಕ್ಕೆ ಅವರು ಚೇತರಿಸಿಕೊಳ್ಳಲಿಲ್ಲ. ಆದರೆ ಶ್ರೀದೇವಿ ಎಂದರೆ ಅಭಿಮಾನ ಇರುವ ಕಾರಣ ಅವರ ಸಿನಿಮಾಗಳನ್ನು ನೋಡುತ್ತಾ ಸ್ಫೂರ್ತಿ ಪಡೆದ. ಬಾಲ ನಟಿಯಾಗಿ ಅವರು ಕರಿಯರ್ ಪ್ರಾರಂಭಿಸಿದ್ದು, ಹೇಗೆ ಬಾಲಿವುಡ್‍ಗೆ ಅಡಿಯಿಟ್ಟರು ಎಂಬ ಬಗ್ಗೆ ಸ್ಫೂರ್ತಿ ಪಡೆದರು. ಇದರಿಂದ ಲೈಂಗಿಕ ಕಿರುಕುಳಕ್ಕೆ ಒಳಗಾದರೂ ಅವರಿಗೆ ಸೂಕ್ತ ಪ್ರೇರಣೆ ಸಿಕ್ಕ ಕಾರಣ ಅವರು ಮಾನಸಿಕವಾಗಿ ಬೆಳೆದರು. ಒಂದು ಹಂತದಲ್ಲಿ ಜೀವನವನ್ನು ಮುಗಿಸಿಕೊಳ್ಳೋಣ ಎಂದುಕೊಂಡರೂ ಅವರಿಗೆ ಸಿಕ್ಕ ಪ್ರೇರಣೆಯಿಂದ ಜೀವನದಲ್ಲಿ ಮುಂದೆ ಸಾಗಿದರು.

ಹರೀಶ್ ತಾನು ಶ್ರೀದೇವಿಯನ್ನು ಸ್ಫೂರ್ತಿಯಾಗಿ ತೆಗೆದುಕೊಂಡ ಸಂಗತಿಯನ್ನು ಯಾವಾಗ ಹೇಳಿದ ಗೊತ್ತಾ..? 2012ರಲ್ಲಿ ನಡೆದ ಸತ್ಯಮೇವ ಜಯತೇ ಎಂಬ ಟಿವಿ ಶೋನಲ್ಲಿ ತಾನು ಒಬ್ಬ ಅತಿಥಿಯಾಗಿ ಹೋದಾಗ ನಟ ಅಮೀರ್ ಖಾನ್ ಜತೆಗೆ ಮಾತನಾಡುವ ಸಂದರ್ಭದಲ್ಲಿ ಈ ವಿಷಯವನ್ನು ಅವರು ತಿಳಿಸಿದರು. ಅಷ್ಟೇ ಅಲ್ಲ, ಆ ಶೋನಲ್ಲಿ ಸ್ವತಃ ಶ್ರೀದೇವಿ ಪಾಲ್ಗೊಂಡು ಹರೀಶ್‌ರನ್ನು ಭೇಟಿ ಮಾಡಿದರು. ಇದರಿಂದ ಹರೀಶ್‌ಗೆ ಆದ ಸಂತೋಷವನ್ನು ಮಾತಿನಲ್ಲಿ ಹೇಳಲಾಗದು. ಆಗ ಹರೀಶ್‌ರನ್ನು ಶ್ರೀದೇವಿ ಅವರ ಮಾನಸಿಕ ಶಕ್ತಿ ಮತ್ತು ಅವರನ್ನು ಅಭಿನಂದಿಸಿದರು. ಅವರ ಚಟುವಟಿಕೆಗಳಿಗೆ ಬೆಂಬಲ ನೀಡುತ್ತಾ ಅವರು ಸಹಿ ಸಹ ಹಾಕಿದರು. ಆದರೆ ಮತ್ತೆ ಅವರನ್ನು ಭೇಟಿಯಾಗದಿದ್ದರೂ, ಅವರ ಜೀವನವನ್ನು ಮಾತ್ರ ಸ್ಫೂರ್ತಿಯಾಗಿ ತೆಗೆದುಕೊಂಡ. ಇತ್ತೀಚೆಗೆ ಅವರ ನಿಧನ ಹರೀಶ್‌ರನ್ನು ನೋವಿಗೆ ಗುರಿಮಾಡಿದೆ. ತನ್ನ ಟ್ವಿಟ್ಟರ್‌ನಲ್ಲಿ ಆಕೆಗೆ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ. ಇದಿಷ್ಟು ಶ್ರೀದೇವಿ ಅವರನ್ನು ಸ್ಫೂರ್ತಿಯಾಗಿ ತೆಗೆದುಕೊಂಡ ವ್ಯಕ್ತಿಯ ಸ್ಟೋರಿ. ಇನ್ನೆಷ್ಟು ಮಂದಿ ಈ ರೀತಿಯವರಿದ್ದಾರೋ ಅಲ್ಲವೇ..!

watch video :

SHARE