ರೋಸ್ ವಾಟರ್‌ನಿಂದ ಈ ರೀತಿ ಮಾಡಿದರೆ ಅನಗತ್ಯ ರೋಮಗಳು ಬರಲ್ಲ, ಹೇಗೆ ಗೊತ್ತಾ …!

ಕೂದಲು ಸ್ತ್ರೀಯರ ತಲೆ ಮೇಲೆ ಇದ್ದರೆ ಅಂದ. ಅದೇ ಕೈಗಳು, ಕಾಲುಗಳು, ಮುಖದ ಮೇಲೆ ಬರುವಂತಹದ್ದೇ ಅನಗತ್ಯ ರೋಮಗಳು. ಬಹಳಷ್ಟು ಮಂದಿ ಮಹಿಳೆಯರನ್ನು ಕಾಡುತ್ತಿರುವ ಸಮಸ್ಯೆಗಳಲ್ಲಿ ಅನಗತ್ಯ ಕೂದಲು ಸಹ ಒಂದು. ಈ ಕೂದಲು ಅವರನ್ನು ಸೌಂದರ್ಯ ಹೀನವನ್ನಾಗಿ ಮಾಡುತ್ತವೆ. ಇಂತಹವರು ಎಷ್ಟೇ ಸುಂದರವಾಗಿ ಇದ್ದರೂ ಈ ಲೋಪ ಅಂದವನ್ನು ಕಡಿಮೆ ಮಾಡುತ್ತದೆ. ಹಾಗಾಗಿ ಈ ಅನಗತ್ಯ ಕೂದಲಿಂದ ಮಹಿಳೆಯರು ತುಂಬಾ ತೊಂದರೆ ಅನುಭವಿಸಬೇಕಾಗುತ್ತದೆ. ಬಹಳಷ್ಟು ಮಂದಿ ನಾಚಿಕೆಯಿಂದ ನರಳುತ್ತಾ, ಕೊರಗುತ್ತಾ ಹತ್ತು ಮಂದಿಯಲ್ಲಿ ಬೆರೆಯಬೇಕೆಂದರೆ ಕುಗ್ಗಿಹೋಗುತ್ತಾರೆ. ಕೆಲವು ರೀತಿಯ ಔಷಧಿಗಳನ್ನು ದೀರ್ಘಕಾಲ ಬಳಸುವುದರಿಂದ ಹಾರ್ಮೋನ್ ಅಸಮತೋಲನದಿಂದ ಕೆಲವರಲ್ಲಿ ಈ ಸಮಸ್ಯೆಗಳು ತಲೆ ಎತ್ತುತ್ತವೆ. ಕೆಳಗೆ ಕೊಟ್ಟಿರುವ ಸಿಂಪಲ್ ಟಿಪ್ಸ್ ಪಾಲಿಸಿದರೆ 15 ದಿನಗಳಲ್ಲಿ ಬೆಸ್ಟ್ ರಿಸಲ್ಟ್ ಪಡೆಯಬಹುದು.

ಬೇಕಾದ ಪದಾರ್ಥಗಳು:
* ಕಡಲೆ ಹಿಟ್ಟು 2 ಸ್ಫೂನ್
* ಕೊಬ್ಬರಿ ಎಣ್ಣೆ ಅಗತ್ಯವಿರುವಷ್ಟು
* ರೋಸ್ ವಾಟರ್ 1 ಟೀ ಸ್ಫೂನ್

ತಯಾರಿಸುವುದು ಹೇಗೆ:
ಒಂದು ಬೌಲ್‌ನಲ್ಲಿ ಒಂದೂವರೆ ಸ್ಫೂನ್ ಕಡಲೆ ಹಿಟ್ಟು, ಕೊಬ್ಬರಿ ಎಣ್ಣೆಯನ್ನು ತಕ್ಕಷ್ಟು ಬಳಸಿಕೊಳ್ಳಬೇಕು. ಅದರಲ್ಲಿ ಒಂದು ಟೀ ಸ್ಫೂನ್ ರೋಸ್ ವಾಟರ್ ಹಾಕಿಕೊಳ್ಳಬೇಕು. ಚೆನ್ನಾಗಿ ಗಟ್ಟಿಯಾಗಿರುವಂತೆ (ಜಾರುವಂತೆ ಆಗದಂತೆ ಎಚ್ಚರ ವಹಿಸಬೇಕು) ಬೆರೆಸಿಕೊಳ್ಳಬೇಕು. ಅದೇ ಥಿಕ್ ಫಾಮ್‍ನಲಿ (ಸ್ವಲ್ಪ ಮುದ್ದೆಯಂತೆ) ಇರುವ ಪೇಸ್ಟನ್ನು ಅನಗತ್ಯ ರೋಮಗಳು ಇರುವ ಜಾಗದಲ್ಲಿ ಕೂದಲ ಬೆಳೆಯುವ ವಿರುದ್ಧ ದಿಕ್ಕಿನಲ್ಲಿ ಹಚ್ಚಬೇಕು. ಶೇವಿಂಗ್ ಮಾಡುವಾಗ ಹೇಗೆ ವಿರುದ್ಧ ದಿಕ್ಕಿನಲ್ಲಿ ತೆಗೆಯುತ್ತೇವೋ ಮೇಲೆ ತಿಳಿಸಿದ ಮಿಶ್ರಣವನ್ನು ಹಚ್ಚಬೇಕು. ಆ ಬಳಿಕ ಸಂಪೂರ್ಣ ಒಣಗುವವರೆಗೂ ಕನಿಷ್ಠ 20, 25 ನಿಮಿಷಗಳು ಹಾಗೆಯೇ ಬಿಡಬೇಕು. ಹೇಗೆ ಹಚ್ಚಿದಿರೋ ಅದೇ ರೀತಿ ಗಟ್ಟಿಯಾಗಿ ಉಜ್ಜುತ್ತಾ ತೆಗೆಯಬೇಕು. ಈ ರೀತಿ ಉಜ್ಜುವುದರಿಂದ ಕೂದಲು ಸೆನ್ಸಿಟೀವ್ ಆಗಿ ಬದಲಾಗುತ್ತವೆ. ಬಳಿಕ ನೀರಿನಲ್ಲಿ ತೊಳೆದುಕೊಳ್ಳಬಹುದು. ಹೀಗೆ ವಾರಕ್ಕೆ ಎರಡು ಸಲ 2 ವಾರಗಳ ಕಾಲ ಮಾಡಿದರೆ ಒಳ್ಳೆಯ ಫಲಿತಾಂಶ ಇರುತ್ತದೆ. ಒಂದು ತಿಂಗಳ ಕಾಲ ಪಾಲಿಸಿದರೆ ಇನ್ನೂ ಒಳ್ಳೆಯ ರಿಸಲ್ಟ್ ಪಡೆಯಬಹುದು. ಇದರಲ್ಲಿ ಬಳಸುವ ಕೊಬ್ಬರಿ ಎಣ್ಣೆ ಮಾಯಿಶ್ಚರೈಸರ್ ಆಗಿ ಕೆಲಸ ಮಾಡುತ್ತದೆ. ಅನಗತ್ಯ ಕೂದಲು, ಅದೇ ರೀತಿ ಬ್ಯಾಕ್ಟೀರಿಯಾ, ಡಸ್ಟ್ ರಿಮೂವ್ ಮಾಡಲು ಈ ಮಿಶ್ರಣ ಎಫೆಕ್ಟೀವ್ ಆಗಿ ಕೆಲಸ ಮಾಡುತ್ತದೆ. ಕಡಲೆ ಹಿಟ್ಟು ನ್ಯಾಚುರಲ್ ಸ್ಕ್ರಬ್ಬರ್.

SHARE