ವಾಹನಗಳ ಹಿಂದೆ ಬರೆದಿರುವ ಈ 9 ಮೆಸೇಜ್‌ಗಳನ್ನು ನೋಡಿದರೆ ನೀವು ನಗು ತಡೆದುಕೊಳ್ಳಲ್ಲ.

ಸಾಮಾನ್ಯವಾಗಿ ನಾವು ಪ್ರಯಾಣಿಸುತ್ತಿರುವಾಗ ಅನೇಕ ವಾಹಗಳನ್ನು ನೋಡುತ್ತಿರುತ್ತೇವೆ. ಅವುಗಳ ಮೇಲೆ ನಮಗೆ ಅನೇಕ ಚಿತ್ರಗಳು, ಸಂದೇಶಗಳು ಕಾಣಿಸುತ್ತಿರುತ್ತವೆ. ಕೆಲವರು ತಮ್ಮ ಕುಟುಂಬ ಸದಸ್ಯರ ಹೆಸರುಗಳನ್ನು ವಾಹನಗಳ ಮೇಲೆ ಬರೆಸಿಕೊಂಡರೆ ಕೆಲವರು ತಮ್ಮ ಇಷ್ಟದೈವದ ಹೆಸರನ್ನು ವಾಹನಗಳ ಮೇಲೆ ಬರೆದುಕೊಳ್ಳುತ್ತಾರೆ. ಇನ್ನೂ ಕೆಲವರು ಇವಲ್ಲದೆ ಇತರೆ ಚಿತ್ರಗಳನ್ನು ಬರೆಸಿಕೊಳ್ಳುತ್ತಾರೆ. ಆದರೆ ಕೆಲವರು ಮಾತ್ರ ವಾಹನಗಳ ಹಿಂಭಾಗದಲ್ಲಿ ಸಂದೇಶಗಳನ್ನು ಬರೆದುಕೊಳ್ಳುತ್ತಾರೆ. ಈ ಹಿನ್ನೆಲೆಯಲ್ಲಿ ಆ ರೀತಿ ಬರೆದ ಕೆಲವು ಸಂದೇಶಗಳನ್ನು ನೋಡಿದರೆ ಮಾತ್ರ ನಮಗೆ ನಗು ತಡೆದುಕೊಳ್ಳಲು ಆಗಲ್ಲ. ಹಾಗಿದ್ದರೆ ಆ ಫನ್ನಿ ಸಂದೇಶಗಳು ಏನು ಅಂತ ಈ ವಾಹನಗಳ ಮೇಲೆ ಒಮ್ಮೆ ಕಣ್ಣಾಕಿ.

1. ಹಾವನ್ನಾದರೂ ನಂಬಬಹುದು ಆದರೆ ಹೆಣ್ಣನ್ನು ಮಾತ್ರ ನಂಬಬಾರದು ಎಂದು ಬರೆದಿದೆ ಅಲ್ಲವೇ. ಪಾಪ ಇವನ್ಯಾರೋ ಮಹಿಳೆಯರಿಂದ ಜಾಸ್ತಿ ಹೊಡೆತ ತಿಂದಿದ್ದಾನೆ ಅನ್ನಿಸುತ್ತದೆ. ಹಾಗಾಗಿ ಈ ರೀತಿ ಬರೆದುಕೊಂಡಿದ್ದಾನೆ.

2. ವೋಕ್ಸ್ ವ್ಯಾಗನ್ ಕಾರು ಕೊಳ್ಳಲು ಸಾಧ್ಯವಿಲ್ಲ, ಹಾಗಾಗಿ ಆಟೋ ಕೊಂಡೆ. ಹೌದು, ನಿಜ ಅಲ್ಲವೇ.

3. ಈತನಿಗೆ ಬೇರೆ ಮರ್ಸಿಡೆಸ್ ಬೆಂಜ್ ಕಾರು ಇದೆಯಂತೆ. ಅದರಲ್ಲಿ ಸುತ್ತಾಡದೆ ಈ ಮಾರುತಿ ಕಾರಿನಲ್ಲಿ ಯಾಕೆ ತಿರುಗುತ್ತಿದ್ದಾನೋ?

4. ಈತನಿಗೆ ದೇಶಭಕ್ತಿ ಜಾಸ್ತಿ ಅನ್ನಿಸುತ್ತದೆ. ಉಗ್ರರನ್ನು ಸಾಯಿಸುತ್ತೇನೆ ಎಂದು ಬರೆದುಕೊಂಡಿದ್ದಾನೆ.

5. ಅಣ್ಣಾ ಅದು ಡಿಪ್ಪರ್. ಡೈಪರ್ ಅಲ್ಲ. ಅಂದರೆ ರಾತ್ರಿ ಹೊತ್ತು ಡ್ರೈವರ್ ಡೈಪರ್ ಹಾಕಿಕೊಳ್ಳಬೇಕಾ..? ಒಮ್ಮೆ ಅರ್ಥ ತಿಳಿದುಕೋ ಗುರು..!

6. ಸಿರೀಯಸ್ ವಾರ್ನಿಂಗ್ ಎಂದರೆ ಇದೇ. ಈ ರೀತಿ ಮಾಡಿದರೆ ಆಕ್ಸಿಡೆಂಟ್ ನಿಲ್ಲುತ್ತಾ?

7. ಗರ್ಲ್‌ಫ್ರೆಂಡನ್ನು ಅವಾಯ್ಡ್ ಮಾಡಿದರೆ ಶೇ.90ರಷ್ಟು ಇಂಧನ ಉಳಿತಾಯ ಆಗುತ್ತದಂತೆ. ಇವನ್ಯಾರೋ ತುಂಬಾ ಅನುಭವಿ ಅನ್ನಿಸುತ್ತದೆ.

8. ನಿನಗೊಂದು ನಮಸ್ಕಾರ ಕಣಣ್ಣೋ. ಜಗತ್ತಿನಲ್ಲಿ ಯಾರೂ ಕನ್ಯೆ ಅಲ್ಲವಂತೆ. ನಿನಗೊಂದು ನಮಸ್ಕಾರ.

9. ಈ ಕಾರಿನ ಓನರ್ ಯಾರೋ ಏನೋ.. ನಿಜವಾಗಿ ಎಂಜಾಯ್ ಎಂದರೆ ಇವನದೇ. ಕೊಡಿಸಿದ್ದು ತಾಯಿ, ಇಎಂಐ ಕಟ್ಟೋದು ಪತ್ನಿ.. ವಾರೆವ್ಹಾ..

SHARE