ಮಗನ ಮದುವೆ ಸಂಭ್ರಮದಲ್ಲಿ…ಸೊಸೆಯನ್ನು ಎಲ್ಲರಿಗೂ ಪರಿಚಯ ಮಾಡುತ್ತಾ, ಸಡನ್ ಆಗಿ ಆಕೆಗೆ ಲಿಪ್ ಟು ಲಿಪ್ ಕಿಸ್ ಕೊಟ್ಟ ಆ ನೀಚ.!

ಮದುವೆಯಾಗಿ ಬಂದ ಸೊಸೆಯನ್ನು ಮಾವ ಮಗಳಂತೆ ನೋಡಿಕೊಳ್ಳಬೇಕು. ಆಕೆ ಹೆತ್ತ ತಂದೆತಾಯಿ ಪ್ರೀತಿಯನ್ನು ಮರೆಯುವಂತೆ ಪ್ರೀತಿಯನ್ನು ನೀಡಬೇಕು. ಅಷ್ಟೇ ಹೊರತು.. ಅಂತಹವರ ಮೇಲೆ ವಿಕೃತ ಚೇಷ್ಟೆಗಳನ್ನು ಮಾಡಬಾರದು. ಅಸಭ್ಯವಾಗಿ ವರ್ತಿಸಬಾರದು. ಆದರೆ ಆ ವ್ಯಕ್ತಿ ಅದೇ ರೀತಿ ಮಾಡಿದ. ಮಗನಿಗೆ ಮದುವೆ ಮಾಡಿದ ಬಳಿಕ ಮನೆಗೆ ಬಂದ ಸೊಸೆಯನ್ನು ಕಾರ್ಯಕ್ರಮದಲ್ಲಿ ಎಲ್ಲರ ಮುಂದೆ ಅವಮಾನಿಸುವಂತೆ ನಡೆದುಕೊಂಡಿದ್ದಾನೆ. ಆಕೆಯ ಜತೆಗೆ ಅಸಭ್ಯವಾಗಿ ವರ್ತಿಸಿದ್ದಾನೆ. ಇದರಿಂದ ಆ ವ್ಯಕ್ತಿ ಮಾಡಿದ ಚೇಷ್ಟೆಗಳು ಈಗ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿವೆ. ಇಷ್ಟಕ್ಕೂ ಅಸಲಿ ಸಂಗತಿ ಏನೆಂದರೆ…

ಪಶ್ಚಿಮ ಚೀನಾ ಜಿಯಾಂಗ್ಜೌ ಪ್ರಾವಿನ್ಸ್‌ನಲ್ಲಿ ಇತ್ತೀಚೆಗೆ ಯುವ ಜೋಡಿಯೊಂದು ವಿವಾಹವಾಯಿತು. ಯಾಂಚೆಂಗ್‌ನಲ್ಲಿನ ವುಜೌ ಅಂತಾರಾಷ್ಟ್ರೀಯ ಫಂಕ್ಷನ್ ಹಾಲ್‌ನಲ್ಲಿ ರಿಸೆಪ್ಷನ್‍ಗೆ ವ್ಯವಸ್ಥೆ ಮಾಡಿದರು. ಈ ಹಿನ್ನೆಲೆಯಲ್ಲಿ ಸ್ಟೇಜ್ ಮೇಲೆ ವರನ ತಂದೆ ತನ್ನ ಹೊಸ ಸೊಸೆ ಎಂದು ಪರಿಚಯ ಮಾಡುತ್ತಿದ್ದ. ಅಷ್ಟರಲ್ಲೇ ಏನಾಯಿತೋ ಏನೋ ಗೊತ್ತಿಲ್ಲ, ಮಗ, ಬಂಧುಗಳ ಸಮ್ಮುಖದಲ್ಲೇ ಹೊಸ ಸೊಸೆಯೊಂದಿಗೆ ಮಾವ ವಿಕೃತವಾಗಿ ವರ್ತಿಸಿದ. ಬಲವಂತವಾಗಿ ಆಕೆಯನ್ನು ಬರಸೆಳೆದು ತುಟಿಗೆ ತುಟಿ ಬೆರೆಸಿದ. ಆಕೆ ಬೇಡ ಬೇಡ ಎಂದು ದೂರ ಸರಿಯುತ್ತಿದ್ದರೂ ಆ ಹಿರಿಯ ಮಾತ್ರ ವಿಚಿತ್ರವಾಗಿ ವರ್ತಿಸಿದ. ಆಕೆಯ ಜತೆಗೆ ಅಸಭ್ಯವಾಗಿ ವರ್ತಿಸಿದ. ಇದರಿಂದ ಆತನ ಚೇಷ್ಟೆಗಳು ಗಲಾಟೆಗೆ ಕಾರಣವಾದವು. ವಧುವಿನ ಕಡೆಯ ಬಂಧುಗಳು, ಸ್ನೇಹಿತರು ವರನ ಕುಟುಂಬದ ಜತೆಗೆ ಗಲಾಟೆಗೆ ಇಳಿದರು. ಆದರೆ ಕೊನೆಗೆ ಹೇಗೋ ಗಲಾಟೆ ತಣ್ಣಗಾಯಿತು.

ಆ ಮಾವ ಆ ರೀತಿ ತನ್ನ ಸೊಸೆಯೊಂದಿಗೆ ವಿಕೃತವಾಗಿ ನಡೆದುಕೊಳ್ಳುತ್ತಿದ್ದಾಗ ಯಾರೋ ವಿಡಿಯೋ ತೆಗೆದು ಅದನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್ ಮಾಡಿದ್ದಾರೆ. ಇದರಿಂದ ಈ ಘಟನೆ ಒಮ್ಮೆಲೆ ವೈರಲ್ ಆಯಿತು. ಅದನ್ನು ನೋಡಿ ಆ ಹಿರಿಯನ ಮೇಲೆ ಕೆಂಡಕಾರುತ್ತಿದ್ದಾರೆ. ಮಗನ ಪತ್ನಿಯನ್ನು ಮಗಳಂತೆ ನೋಡಿಕೊಳ್ಳಬೇಕು. ಅಷ್ಟೇ ಹೊರತು ಆಕೆ ಬಗ್ಗೆ ಆ ರೀತಿ ಅಸಭ್ಯವಾಗಿ ವರ್ತಿಸುವುದು ಏನು.. ಎಂದು ನೆಟ್ಟಿಗರು ಆ ಹಿರಿಯರಿಗೆ ತಿಳಿವಳಿಕೆ ಹೇಳುತ್ತಿದ್ದಾರೆ. ಇನ್ನೂ ಕೆಲವರು ಮಾತ್ರ ಆ ಮಾವನಿಗೆ ಸರಿಯಾಗಿ ಬುದ್ಧಿ ಕಲಿಸಬೇಕೆಂದು, ಆತನನ್ನು ಬಿಡಬಾರದೆಂದು ಬೊಬ್ಬೆ ಹೊಡೆಯುತ್ತಿದ್ದಾರೆ. ಏನೇ ಆಗಲಿ.. ನಮ್ಮ ದೇಶದಲ್ಲೇ ಎಂದುಕೊಂಡಿದ್ದೆವು….. ಈ ರೀತಿ ಬೇರೆ ದೇಶಗಳಲ್ಲೂ ಕಾಮಾಂಧರು ಇದ್ದಾರೆಂದಾಯಿತು. ಏನು ಮಾಡೋಣ..

SHARE