ಯಜಮಾನ ಸೆಟ್‌ಗೆ ವಿಶೇಷವಾದ ಅಭಿಮಾನಿಯ ಆಗಮನ…!!

ಕನ್ನಡ ಚಿತ್ರರಂಗದಲ್ಲಿ ಚಿಂಗಾರಿ ಚಾಲೆಂಜಿಂಗ್ ಸ್ಟಾರ್ ಅಂದ್ರೆ ಅಂದ್ರೆ ಅದೊಂದು ಶಕ್ತಿ… ಪ್ರೀತಿಗೆ ಪ್ರಾಣ ನೀಡೋ ವ್ಯಕ್ತಿ. ಸಾಕಷ್ಟು ಬಾರಿ ಬಲಗಯ್ಯಲ್ಲಿ ಕೊಟ್ಟಿದ್ದನ್ನು ಎಡಗಯ್ಯಿಗೆ ಹೇಳದೆ ಇರೋ ವ್ಯಕ್ತಿತ್ವ. ಆತ ಏನ್ ಮಾಡಿದ್ರೂ ಸುದ್ದಿಯಾಗುತ್ತೆ. ಇಂತಹ ದರ್ಶನ್ ಅವರನ್ನು ನೋಡಲು ಇಂದು ಯಜಮಾನ ಸೆಟ್‌ಗೆ ವಿಶೇಷವಾದ ಅಭಿಮಾನಿಯೊಬ್ಬರು ಆಗಮಿಸಿದ್ದರು. ಅಬ್ಬಾ !! ಸ್ಟಾರ್ ಮತ್ತು ಅಭಿಮಾನಿಯ ಸಮಾಗಮ ನೋಡಿದ ಸುತ್ತಲಿನ ಜನರ ಕಣ್ಣಲ್ಲಿ ನೀರು ಜಿನುಗಿದ್ದು ಸುಳ್ಳಲ್ಲ… ಏನಿದು ಮ್ಯಾಟರ್ ಮುಂದೆ ಓದಿ…

ಹೌದು, ದರ್ಶನ್ ನೋಡಲು ಇಂದು ಒಬ್ಬ ವಿಶಿಷ್ಟ ಅಭಿಮಾನಿಯ ಆಗಮನವಾಗಿತ್ತು. ದರ್ಶನ್ ಅಂದ್ರೆ ಅದೊಂದು ಶಕ್ತಿ…ಬಾಕ್ಸ್ ಅಫೀಸ್ ಸುಲ್ತಾನ್ ಚಾಲೆಂಜಿಂಗ್ ಸ್ಟಾರ್ ದಾಸ ದರ್ಶನ್ ಬಾಸ್ ಅವರ ಈ ಪುಟ್ಟ ಅಭಿಮಾನಿಗೆ ಹಾರ್ಟ್ ಹೋಲ್ ಅಗಿ ತೊಂದರೆ ಅಗಿದನ್ನು ತಿಳಿದು ಅ ಪುಟ್ಟ ಅಭಿಮಾನಿಯನ್ನು ಕರೆಸಿ ಅರೋಗ್ಯ ವಿಚಾರಿಸಿ ತಮ್ಮ ಕೈಲಾದಷ್ಟು ಸಹಾಯವನ್ನು ತಮ್ಮ ಮ್ಯಾನೇಜರ್ ಕಡೆಯಿಂದ ಮಾಡಿಸಿದ್ದಾರೆ.

ವೀಕ್ ಎಂಡ್ ವಿಥ್ ರಮೇಶ್ ಕಾರ್ಯಕ್ರಮದಲ್ಲಿಯೂ ಕೂಡ ತಮ್ಮ ಸ್ನೇಹಿತನಿಗೆ ಮಾಡಿದ ಸಹಾಯವನ್ನು ಹೇಳಕೂಡದು ಎಂದು ತಾಕೀತು ಮಾಡಿ ತಾವು ಏನೆಂಬುದನ್ನು ಸಾರಿ ಹೇಳಿದ್ದರು. ಅದೆಷ್ಟೋ ಬಾರಿ ಈ ರೀತಿಯ ಸಹಾಯ ಹಸ್ತ ಚಾಚಿರುವ ನಮ್ಮ ದರ್ಶನ್, ತಮ್ಮ ಕಾರ್ಯವನ್ನು ಎಲ್ಲಿಯೂ ಹೇಳಿಕೊಳ್ಳದೆ ತಮ್ಮ ಘನತೆಯನ್ನು ಹೆಚ್ಚಿಸಿಕೊಂಡಿದ್ದಾರೆ ಎನ್ನಬಹುದು.

ದರ್ಶನ್ ಅವರ ಈ ರೀತಿಯ ನಡೆ ಸಾಕಷ್ಟು ಜನರಿಗೆ ಸ್ಪೂರ್ತಿಯಾಗಬೇಕಾಗಿರುವ ಸಂಗತಿಯಾಗಿದೆ. ಗಿಡ ನೆಟ್ಟರೂ ಫೋಟೋ ತೆಗೆಸಿಕೊಂಡು, ಏನೋ ಮಹತ್ ಕಾರ್ಯ ಮಾಡಿರುವ ರೀತಿಯಲ್ಲಿ ದುಡ್ಡು ಕೊಟ್ಟು ಪೇಪರ್‌ಗೆ ಹಾಕಿಸಿಕೊಳ್ಳುವ ಜನರ ಮದ್ಯೆ, ನಮ್ಮ ದಾಸ ದರ್ಶನ್ ಭಿನ್ನವಾಗಿ ನಿಲ್ಲುತ್ತಾರೆ.

SHARE