ಇಂದಿನ ಭವಿಷ್ಯ: 11-03-2018

ಮೇಷ ರಾಶಿ
ಈದಿನ ನಿಮ್ಮ ಮನೋಕಾಮನೆಗಳು ಕೈಗೂಡುವುದು. ಗುರುವಿನ ಅನುಗ್ರಹವಿದ್ದು ಸಕಾಲದಲ್ಲಿ ಹಣಕಾಸು ದೊರೆಯುವುದು. ಪ್ರತಿರೋಧಗಳ ನಡುವೆಯೂ ಗೆಲ್ಲುವ ಆಶಾಭಾವನೆ ನಿಮ್ಮದಾಗುವುದು. ಆರೋಗ್ಯದ ಕಡೆ ತುಸು ಗಮನ ಕೊಡುವುದು ಒಳ್ಳೆಯದು.

ವೃಷಭ ರಾಶಿ
ನಗುವಾಗ ಎಲ್ಲ ನೆಂಟರು, ಅಳುವಾಗ ಯಾರೂ ಇಲ್ಲ ಎನ್ನುವಂತಹ ಪರಿಸ್ಥಿತಿ. ಗುರು ಮತ್ತು ಶನಿ ಗ್ರಹರು ಅಶುಭ ಸ್ಥಾನದಲ್ಲಿ ಸಂಚರಿಸುತ್ತಿದ್ದು ನಿಮ್ಮ ಇಚ್ಛಿತ ಕಾರ್ಯಗಳಿಗೆ ಹಿನ್ನಡೆ ಉಂಟಾಗುವುದು. ಮನಃಕಾರಕ ಚಂದ್ರ ಈದಿನ ನಿಮಗೆ ಧೈರ್ಯ ತುಂಬುವರು.

ಮಿಥುನ ರಾಶಿ
ಮಾತುಗಾರಿಕೆಯ ಪ್ರಭಾವದಿಂದ ಸುತ್ತಮುತ್ತಲಿನವರ ವಿರೋಧವನ್ನು ಕಟ್ಟಿಕೊಳ್ಳುವಿರಿ. ಮನೆಯಲ್ಲಿ ಸಂಗಾತಿಯ ಹುಸಿ ಕೋಪವು ನಿಮ್ಮ ಉತ್ಸಾಹಕ್ಕೆ ತಣ್ಣೀರು ಎರಚುವುದು. ಗುರು ಬಲವಿರುವುದರಿಂದ ಚಿಂತೆ ಇಲ್ಲ.

ಕಟಕ ರಾಶಿ
ಮಾತು ಬಲ್ಲವರಿಗೆ ಜಗಳವಿಲ್ಲ ಎನ್ನುವಂತೆ ಈದಿನ ನೀವು ಮಾತಾಡುವಾಗ ಎರಡು ಬಾರಿ ಚಿಂತಿಸಿರಿ. ಮನೆಯಿಂದ ಹೊರಗೆ ಹೊರಡುವಾಗ ಗುರು-ಹಿರಿಯರ ಆಶೀರ್ವಾದ ಪಡೆಯಿರಿ. ಕಾರ್ಯಾನುಕೂಲವಾಗುವುದು.

ಸಿಂಹ ರಾಶಿ
ಅನವಶ್ಯಕ ಕೆಲಸ ಕಾರ್ಯಗಳ ಜವಾಬ್ದಾರಿಯನ್ನು ತೆಗೆದುಕೊಳ್ಳಿರಿ. ಈಗಿರುವ ಜವಾಬ್ದಾರಿಯನ್ನು ಸರಿತೂಗಿಸುವುದರಲ್ಲಿಯೇ ಇಂದು ಹೈರಾಣವಾಗುವಿರಿ. ಗುರುವಿನ ಮಂತ್ರವನ್ನು ಪಠಿಸಿರಿ ಮತ್ತು ಶಿವನ ದೇವಾಲಯಕ್ಕೆ ಭೇಟಿ ನೀಡಿರಿ.

ಕನ್ಯಾ ರಾಶಿ
ನೂತನ ಜನರ ಪರಿಚಯವಾಗುವುದು. ಅಂತೆಯೇ ನಿಮ್ಮ ಕಾರ್ಯಕ್ಷೇತ್ರದ ವ್ಯಾಪ್ತಿಯು ವಿಸ್ತಾರಗೊಳ್ಳುತ್ತಿರುವುದು. ಎಲ್ಲರನ್ನೂ ಎಲ್ಲ ಕಾಲಕ್ಕೂ ಸಂತೋಷಪಡಿಸಲು ಆಗುವುದಿಲ್ಲ. ಹಾಗಾಗಿ ಕೆಲವರ ವಿರೋಧವನ್ನು ಕಟ್ಟಿಕೊಳ್ಳುವುದು ಅನಿವಾರ್ಯ.

ತುಲಾ ರಾಶಿ
ಮಕ್ಕಳು ಮಾಡುವ ತುಂಟಾಟ ನಿಮಗೆ ಕೋಪವನ್ನುಂಟು ಮಾಡುವುದು. ಕೋಪದ ಭರದಲ್ಲಿ ಮಕ್ಕಳನ್ನು ಶಿಕ್ಷಿಸದಿರಿ. ಅವರನ್ನು ಪ್ರೀತಿ, ವಿಶ್ವಾಸದಿಂದ ಗೆಲ್ಲಿರಿ. ಗುರುವಿನ ಕೃಪೆಗಾಗಿ ಪ್ರಾರ್ಥಿಸಿರಿ.

ವೃಶ್ಚಿಕ ರಾಶಿ
ಸಂಪಾದನೆಗಿಂತ ಹೆಚ್ಚು ಖರ್ಚಾಗುವುದು. ನೆರೆಹೊರೆಯವರ ವ್ಯಾಜ್ಯವನ್ನು ಬಗೆಹರಿಸಲು ಹೋಗಿ ಅವಮಾನಿತರಾಗುವಿರಿ. ವಾಕ್‌ಸ್ಥಾನದ ಶನಿಯು ಹಣಕಾಸಿನ ವಿಷಯದಲ್ಲಿ ಮನಸ್ತಾಪವನ್ನುಂಟು ಮಾಡಿಸುವರು. ಆಂಜನೇಯ ಸ್ತೋತ್ರ ಪಠಿಸಿರಿ.

ಧನಸ್ಸು ರಾಶಿ
ಅನಗತ್ಯ ಕೆಲಸ ಮಾಡಲು ಮುಂದಾಗುವಿರಿ. ಇಲ್ಲವೇ ಮಾಡುವ ಕೆಲಸದಲ್ಲಿ ಉದಾಸೀನ ತೋರುವಿರಿ. ಪ್ರಯಾಣದಲ್ಲಿ ಎಚ್ಚರ. ಗುರುರೂಪದ ಹಿರಿಯರೊಬ್ಬರ ಆಶೀರ್ವಾದವನ್ನು ಇಂದು ನೀವು ಪಡೆಯುವಿರಿ.

ಮಕರ ರಾಶಿ
ನಿಮ್ಮ ಬದುಕಿನ ಕನಸೊಂದು ಕೆಲವು ರಾಜಿ ಸೂತ್ರಗಳೊಂದಿಗೆ ಈಡೇರುವ ಸಾಧ್ಯತೆ. ಕೆಲಸದ ಸ್ಥಳ ಬದಲಾವಣೆ ಅಥವಾ ವಾಸ ಮಾಡುವ ಸ್ಥಳದ ಬಗ್ಗೆ ಚಿಂತಿಸುವಿರಿ. ಆದಾಗ್ಯೂ ಕುಲದೇವರ ಪ್ರಾರ್ಥನೆಯನ್ನು ತಪ್ಪದೆ ಮಾಡಿರಿ.

ಕುಂಭ ರಾಶಿ
ಗುರುವಿನ ಆಶೀರ್ವಾದ ಮತ್ತು ಚಮತ್ಕಾರಗಳಿಂದ ಪ್ರತಿರೋಧಗಳ ನಡುವೆಯೂ ಗೆಲ್ಲುವ ಅವಕಾಶವನ್ನು ಸೃಷ್ಟಿ ಮಾಡಿಕೊಳ್ಳುವಿರಿ. ಚಾತುರ್ಯದ ಮಾತುಗಳು ನಿಮ್ಮನ್ನು ಎತ್ತರಕ್ಕೆ ಕೊಂಡೊಯ್ಯುವುದು.

ಮೀನ ರಾಶಿ
ನಯವಾದ ಮಾತುಗಳನ್ನು ನಂಬಿ ಹಣಕಾಸಿನ ವಿಷಯದಲ್ಲಿ ಮೋಸ ಹೋಗುವಿರಿ. ಆದಷ್ಟು ಜಾಗ್ರತೆಯಿಂದ ಇರಿ. ಅಕಾಲದಲ್ಲಿ ಸೇವಿಸಿದ ಆಹಾರದ ವ್ಯತ್ಯಯದಿಂದ ಉದರಶೂಲೆಯನ್ನು ಅನುಭವಿಸುವಿರಿ.

SHARE