ಇಂದಿನ ಭವಿಷ್ಯ: 10-03-2018

ಮೇಷ ರಾಶಿ
ಜಗತ್ತಿನ ಎಲ್ಲ ವೈಭವಗಳು ನಿಮ್ಮಲಿವೆ ಎಂದು ಭಾವಿಸುವಿರಿ. ದೈವ ಕೃಪೆಯಿಂದ ಅಂತಃಶಕ್ತಿಯನ್ನು ಗಳಿಸುವ ನಿಮ್ಮ ಮುಖದಲ್ಲಿ ತೇಜಸ್ಸು ಹೊರಹೊಮ್ಮುವುದು. ಸಂಗಾತಿಯ ಸಾಂಗತ್ಯ ಮುದ ನೀಡುವುದು.

ವೃಷಭ ರಾಶಿ
ನಿಮ್ಮ ಕರ್ತವ್ಯಪರತೆಯೇ ನಿಮ್ಮನ್ನು ಉತ್ತುಂಗಕ್ಕೆ ಕೊಂಡೊಯ್ಯುವುದು. ಸ್ವಾಭಾವಿಕವಾಗಿ ಆ ಕಾರಣದಿಂದ ಈದಿನ ಆನಂದ ನಿಮ್ಮ ಕೆಲಸದಲ್ಲಿ ವ್ಯಕ್ತಗೊಳ್ಳುವುದು. ಶತ್ರುಗಳು ನಿಮ್ಮ ವಿಚಾರಧಾರೆಯನ್ನು ಗೌರವಿಸುವರು.

ಮಿಥುನ ರಾಶಿ:-

ಈದಿನ ವೃತ್ತಿಗೆ ಸಂಬಂಧಪಟ್ಟಂತೆ ಉತ್ತಮ ಭರವಸೆ ಮೂಡಿರುವುದು. ಸಕಾರಾತ್ಮಕ ಚಿಂತನೆಯು ಯಶಸ್ಸು ತಂದುಕೊಡುವುದು. ಗುರು ಹಿರಿಯರ ಆಶೀರ್ವಾದ ಪಡೆಯಿರಿ.

ಕಟಕ ರಾಶಿ
ಈದಿನ ನೀವು ಪ್ರಯಾಣವನ್ನು ಹಮ್ಮಿಕೊಳ್ಳದಿರುವುದು ಒಳ್ಳೆಯದು. ಆಸ್ತಿ ವಿಚಾರದಲ್ಲಿ ಇದ್ದ ಸಮಸ್ಯೆಗಳು ಅಚ್ಚರಿ ಎಂಬಂತೆ ಬಗೆಹರಿಯುವುದು. ಹಣಕಾಸಿನ ಪರಿಸ್ಥಿತಿ ಉತ್ತಮವಿದ್ದು ನಿಮ್ಮ ಮಾತಿಗೆ ಎಲ್ಲೆಡೆ ಗೌರವ ದೊರೆಯುವುದು.

ಸಿಂಹ ರಾಶಿ
ಈದಿನ ಧ್ಯಾನ ಮತ್ತು ಅಧ್ಯಾತ್ಮಿಕ ಕ್ಷೇತ್ರಗಳಲ್ಲಿ ಹೆಚ್ಚು ಸಮಯ ಕಳೆಯುವುದರಿಂದ ಸಹಜವಾಗಿಯೇ ಮನಃಶಾಂತಿಯನ್ನು ಹೊಂದುವಿರಿ. ಮತ್ತು ಮಾನಸಿಕವಾಗಿ ದೃಢರಾಗುವಿರಿ.

ಕನ್ಯಾ ರಾಶಿ
ದಿಢೀರನೆ ಪ್ರಯಾಣ ಮಾಡಬೇಕಾಗಿ ಬರುವುದರಿಂದ ಖರ್ಚುಗಳು ಏಕಾಏಕಿ ಹೆಚ್ಚಾಗುವುದು. ಹಣಕಾಸಿನ ವ್ಯವಸ್ಥೆ ಸರಿಪಡಿಸಲು ಕೈ ಸಾಲ ಮಾಡಬೇಕಾಗುವುದು.

ತುಲಾ ರಾಶಿ
ನಿಮ್ಮ ದೌರ್ಬಲ್ಯ ಎಂದರೆ ಅತಿ ಮುಂಗೋಪ. ಸಿಟ್ಟಿನಿಂದ ಕೆಲವು ಅವಕಾಶಗಳನ್ನು ಕಳೆದುಕೊಳ್ಳುವಿರಿ. ನಿಮ್ಮನ್ನು ಪ್ರಚೋದಿಸುವ ಅಥವಾ ಕೆರಳಿಸುವ ಹಲವು ವಿದ್ಯಮಾನಗಳು ನಡೆಯುವುದು. ಯಾವುದಕ್ಕೂ ಪ್ರತಿಕ್ರಿಯಿಸದೆ ಇರಿ.

ವೃಶ್ಚಿಕ ರಾಶಿ
ಮಾನಸಿಕವಾಗಿ ಸಣ್ಣಪುಟ್ಟ ಕಿರಿಕಿರಿಗಳು ಇಂದು ನಿಮ್ಮನ್ನು ಕಾಡುವ ಸಾಧ್ಯತೆ ಇದೆ. ವಾಹನ ಚಾಲನಾ ವೇಳೆಯಲ್ಲಿ ರಸ್ತೆಯ ಕಡೆ ಗಮನ ಇರಲಿ. ಆರೋಗ್ಯ ಸಮಸ್ಯೆ ಬಗೆಹರಿಯುವುದು. ಕೆಲವರಿಗೆ ಉದರ ಶೂಲೆ ಕಾಡುವುದು.

ಧನಸ್ಸು ರಾಶಿ
ಕಚೇರಿ ಕೆಲಸಗಳು ಸುಗಮವಾಗಿ ನಡೆಯುವುದು. ಕೌಟುಂಬಿಕ ವಿಚಾರದಲ್ಲಿ ಹಿರಿಯರ ಮಾರ್ಗದರ್ಶನ ಪಡೆಯಿರಿ. ನಿಮ್ಮ ಕೌಶಲ್ಯ, ಸಾಮರ್ಥ್ಯ‌ ನಿರೂಪಿಸುವ ಇಲ್ಲವೇ ಸಾಬೀತು ಪಡಿಸುವ ದಿನವಾಗಿದೆ.

ಮಕರ ರಾಶಿ
ಕಚೇರಿ ಕೆಲಸದಲ್ಲಿ ಬಡ್ತಿ ದೊರೆಯುವುದು. ಕೆಲವು ಕ್ಲಿಷ್ಟ ಸಮಸ್ಯೆಗಳನ್ನು ಬಹು ಚಾಣಾಕ್ಷ ತನದಿಂದ ಬಗೆಹರಿಸಿಕೊಳ್ಳುವಿರಿ. ಕೌಟುಂಬಿಕ ಜೀವನ ಉತ್ತಮವಾಗಿರುತ್ತದೆ. ಆಂಜನೇಯ ಸ್ತೋತ್ರ ಪಠಿಸಿರಿ.

ಕುಂಭ ರಾಶಿ
ನಿಮ್ಮ ಧೋರಣೆಯಲ್ಲಿ ಸಾಕಷ್ಟು ಬದಲಾವಣೆಗಳು ಕಂಡುಬರುವುದು. ಕೌಟುಂಬಿಕ ಸದಸ್ಯರ ಬೆಂಬಲ ದೊರೆಯುವುದು. ಸ್ನೇಹಿತರು , ಬಂಧುಗಳು ಸಕಾಲದಲ್ಲಿ ನೆರವು ನೀಡುವರು.

ಮೀನ ರಾಶಿ
ನಿಮ್ಮ ಕ್ರಿಯಾಶೀಲ ಯೋಜನೆಯನ್ನು ಸರಿಯಾದ ದಿಕ್ಕಿನಲ್ಲಿ ಬಳಸಿಕೊಂಡರೆ ಈದಿನ ಹೆಚ್ಚು ಸಮಂಜಸವಾಗುವುದು. ಈ ದಿಶೆಯಲ್ಲಿ ಬಂಧುಗಳು, ಸ್ನೇಹಿತರು ನಿಮಗೆ ಸಹಕಾರ ನೀಡುವರು. ಆರ್ಥಿಕ ಸ್ಥಿತಿ ಉತ್ತಮ.

SHARE