ಇಂದಿನ ಭವಿಷ್ಯ: 09-03-2018

ಮೇಷ ರಾಶಿ
’ನಂಬಿ ಕೆಟ್ಟವರಿಲ್ಲವೋ ರಂಗಯ್ಯನ’ ಎಂದು ದಾಸರು ಹಾಡಿದ್ದಾರೆ. ಅಂತೆಯೇ ಈದಿನ ಬಲವಾಗಿ ನಿಮ್ಮ ಇಷ್ಟ ದೈವವನ್ನು ನೆನೆಯಿರಿ. ಇದರಿಂದ ಇಂದಿನ ಕೆಲಸ ಕಾರ್ಯಗಳು ಸುಗಮವಾಗಿ ಆಗುವುದು.

ವೃಷಭ ರಾಶಿ
ಮಾಡಿ ಮುಗಿಸಲೇಬೇಕಾದ ಕೆಲಸವನ್ನು ಆದಷ್ಟು ಜಾಗ್ರತೆಯಾಗಿ ಮುಗಿಸಿರಿ. ಏಕೆಂದರೆ ಈದಿನ ಮನೆಗೆ ಬಂದು ಹೋಗುವ ಬಂಧುಗಳ ಸಂಖ್ಯೆ ಅಧಿಕವಾಗಿರುತ್ತದೆ. ಅವರ ಇಷ್ಟನಿಷ್ಟಗಳನ್ನು ಪೂರೈಸುವುದರಲ್ಲಿಯೇ ಈದಿನ ಕಳೆದು ಹೋಗುವುದು.

ಮಿಥುನ ರಾಶಿ
ಕೆಲಸದ ಒತ್ತಡದ ದೆಸೆಯಿಂದ ಗೊಂದಲದ ಗೂಡಾಗಿರುವ ಮನಸ್ಸಿನಲ್ಲಿ ಯಾವ ಕೆಲಸವನ್ನು ಮೊದಲು ಮುಗಿಸಬೇಕು ಎಂದು ಚಿಂತಿಸುವಿರಿ. ಮೊದಲು ಮಾಡಿಕೊಂಡ ಒಪ್ಪಂದದ ಕೆಲಸವನ್ನು ಬೇಗನೆ ಮುಗಿಸಿ ಮತ್ತೊಂದು ಕೆಲಸವನ್ನು ಕೈಗೆತ್ತಿಕೊಳ್ಳಿರಿ.

ಕಟಕ ರಾಶಿ
ಕೋರ್ಟು-ಕಚೇರಿ ಕೆಲಸಗಳಲ್ಲಿ ಹಿನ್ನಡೆ ತೋರುವ ಸಾಧ್ಯತೆ. ಈ ಬಗ್ಗೆ ನಿಮ್ಮ ಕೇಸು ನಡೆಸುತ್ತಿರುವ ವಕೀಲರನ್ನೇ ಬದಲಿಸಬೇಕೆಂದ ಇಚ್ಛೆ ಮನದಲ್ಲಿ ಸುಳಿಯುವುದು. ಆದರೆ ಹಾಗೆ ಮಾಡುವುದು ಈ ಹಂತದಲ್ಲಿ ಸರಿಯಲ್ಲ.

ಸಿಂಹ ರಾಶಿ
ವೃಥಾ ಕಾಡುಹರಟೆಯಿಂದ ಸಮಯ ಕಳೆಯಲು ಈದಿನ ಸಮಯವಿಲ್ಲ. ಮೈ ತುಂಬಾ ಕೆಲಸಗಳು ಯಾವ ಕೆಲಸ ಮಾಡಲು ಹೋದರೂ ಟೀಕೆಗೆ ಗುರಿ ಆಗುವಿರಿ. ಆದರೆ ಬಂದದ್ದೆಲ್ಲ ಬರಲಿ ಗೋವಿಂದನ ದಯೆ ಇರಲಿ ಎಂದು ಬಯಸಿರಿ.

ಕನ್ಯಾ ರಾಶಿ
ಗುರುಕಾರುಣ್ಯದಿಂದ ಪಾಪರಾಶಿಗಳು ಸುಟ್ಟುಹೋಗುವುದು. ದೇಹದಲ್ಲಿ ನವ ಚೈತನ್ಯ ತುಂಬುವುದು. ಧಾರ್ಮಿಕ ಕಾರ್ಯದಲ್ಲಿ ಭಾಗವಹಿಸುವಿರಿ. ಈದಿನ ಲೌಕಿಕ ಕಾರ್ಯ ಮಾಡಲು ಬಿಡುವು ಸಿಗದೆ ಹೋಗುವ ಸಾಧ್ಯತೆ ಇರುವುದು.

ತುಲಾ ರಾಶಿ
ಕುಟುಂಬದ ಜನರೊಂದಿಗೆ ಬೆರೆತು ಉಲ್ಲಾಸದ ದಿನವನ್ನಾಗಿ ಪರಿವರ್ತಿಸಿಕೊಳ್ಳುವಿರಿ. ಮಡದಿ-ಮಕ್ಕಳು ನಿಮ್ಮ ಸಂತೋಷದಲ್ಲಿ ಪಾಲ್ಗೊಳ್ಳುವರು. ಹಣಕಾಸು ಅಲ್ಪಮಟ್ಟಿಗೆ ಕೈ ಬಿಟ್ಟರೂ ಅದರಿಂದ ಸಂತೋಷವನ್ನು ಹೊಂದುವಿರಿ.

ವೃಶ್ಚಿಕ ರಾಶಿ
ದೂರ ದೂರದ ಊರಿನ ಪ್ರಯಾಣದಿಂದ ಅನೇಕ ಉತ್ತಮ ಅವಕಾಶಗಳು ಲಭ್ಯವಾಗಲಿದೆ. ಧೈರ್ಯವನ್ನು ಕಳೆದುಕೊಳ್ಳಬೇಡಿರಿ. ಗುರುವಿನ ಕೃಪಾ ದೃಷ್ಟಿಯಿಂದ ಎಲ್ಲವೂ ಒಳಿತಾಗಲಿದೆ.

ಧನಸ್ಸು ರಾಶಿ
ಮನೆಗೆದ್ದು ಮಾರುಗೆಲ್ಲು ಎಂದರು ಹಿರಿಯರು. ಹಾಗಾಗಿ ಮನೆಯ ವಾತಾವರಣವನ್ನು ನಿರ್ಲಕ್ಷಿಸದಿರಿ. ಮಗ/ ಮಗಳಿನ ವಿದ್ಯಾಭ್ಯಾಸದ ವಿಚಾರವಾಗಿ ಸ್ವಲ್ಪ ಗಮನಹರಿಸಿ ಸಾಧ್ಯವಾದರೆ ಅವರ ಓದಿಗೆ ಸಹಾಯ ಮಾಡಿರಿ.

ಮಕರ ರಾಶಿ
ಮಾತು ಬೆಳ್ಳಿ ಮೌನ ಬಂಗಾರ ಎಂದರು ಹಿರಿಯರು. ಹಾಗಾಗಿ ಈದಿನ ನೀವಾಡುವ ಮಾತುಗಳು ಹಿತಮಿತವಾಗಿರಲಿ. ಸೂಜಿಗೆ ಮುತ್ತು ಕೊಟ್ಟಂತೆ ನಿಮ್ಮ ಮಾತುಗಳು ಹೊರಗೆ ಬರಲಿ. ಇದರಿಂದ ಗೌರವ ಘನತೆ ನಿಮ್ಮದಾಗುವುದು.

ಕುಂಭ ರಾಶಿ
ವೃಥಾ ಸಂಯಮ ಕಳೆದುಕೊಳ್ಳಬೇಡಿರಿ. ಗುರು-ಹಿರಿಯರು ತೋರಿದ ಮಾರ್ಗದಲ್ಲಿ ನಡೆಯಿರಿ. ನಿಮ್ಮ ಬಾಲ್ಯ ಸ್ನೇಹಿತರ ಭೇಟಿ ಸಂಭವ. ಹಣಕಾಸಿನ ವಿಷಯದಲ್ಲಿ ಜಾಗ್ರತೆ. ಅನಗತ್ಯ ಖರ್ಚುಗಳಿಗೆ ಕಡಿವಾಣ ಹಾಕಿರಿ.

ಮೀನ ರಾಶಿ
ನಿಮ್ಮ ಸನಿಹದ ಜನರಿಂದ ಪ್ರಶಂಸೆಗೆ ದಾರಿ ಇರುವುದು. ನಿಮ್ಮ ಸೌಮ್ಯ ಸ್ವಭಾವದಿಂದಾಗಿ ನೀವು ಎಲ್ಲರ ಗಮನ ಸೆಳೆಯುವಿರಿ. ನಿಮ್ಮಲ್ಲಿ ಮಾಡಿದ ಹೊಸ ವಿಚಾರವನ್ನು ಗೆಳೆಯರ ಮುಂದೆ ಪ್ರಕಟಗೊಳಿಸುವಿರಿ.

SHARE