ಸುದೀಪ್ ಕೊಟ್ಟ ಹಣದಲ್ಲಿ ಭರ್ಜರಿ ಕಾರು ಖರೀದಿಸಿದ ಸೆಲೆಬ್ರೆಟಿ ದಿವಾಕರ್ !! ವಿಡಿಯೋ ನೋಡಿ

ಬಿಗ್ ಬಾಸ್ ಕನ್ನಡ 5 ರಲ್ಲಿ ದಿವಾಕರ್ ಕಾಮನ್ ಮ್ಯಾನ್ ಆಗಿ ಎಂಟ್ರಿ ಕೊಟ್ಟ ದಿವಾಕರ್ ಬಿಗ್ ಬಾಸ್ ರನ್ನರ್ ಅಪ್ ಆಗಿದ್ದು ಈಗ ಇತಿಹಾಸ. ಈಗ ದಿವಾಕರನ ಜೀವನ ಈಗ ಸಂಪೂರ್ಣ ಬದಲಾಗಿದೆ. ಹೌದು, ಸಾಕಷ್ಟು ಕಷ್ಟ ಪಟ್ಟು ಮೇಲೆ ಬಂದಿರುವ ದಿವಾಕರ್ ಜೀವನ ನೆಡೆಸುವುದಕ್ಕೆ ಹಿಂದೆ ಮುಂದೆ ನೋಡಿದ ದಿನ ಈಗ ಕಳೆದು ಹೋಗಿದೆ. ಸದ್ಯ ಖುಷಿ ಪಡುವ ಕಾಲ ಸನ್ನಿಹಿತವಾಗಿದೆ.

ಹೌದು, ಬಿಗ್ ಬಾಸ್ ದಿವಾಕರ್ ಹೊಸ ಕಾರ್ ಖರೀದಿ ಮಾಡಿದ್ದಾರೆ. ಬೈಕ್ ಇಎಂಐ ಕಟ್ಟಲು ಸಾಧ್ಯವಾಗುತ್ತಿಲ್ಲ ಎನ್ನುತ್ತಿದ್ದ ದಿವಾಕರ್ ಮನೆಗೆ ಹೊಸ ಸ್ವಿಫ್ಟ್ ಕಾರಿನ ಆಗಮನವಾಗಿದೆ. ಆದರೆ, ಇದೇ ಸಮಯದಲ್ಲಿ ತಮಗೆ ಬಿಗ್ ಬಾಸ್ ದಿನಗಳಲ್ಲಿ ಅಣ್ಣನ ಸ್ಥಾನದಲ್ಲಿ ನಿಂತು ಸಲಹೆ ನೀಡಿದ ಸುದೀಪ್ ಅವರನ್ನು ಮರೆತಿಲ್ಲ ಎನ್ನುವುದು ಮೆಚ್ಚುವ ಸಂಗತಿ.

ಕೆಂಪು ಬಣ್ಣದ ಸ್ವಿಫ್ಟ್ ಕಾರನ್ನು ಕೊಂಡುಕೊಂಡಿರುವ ದಿವಾಕರ್ ಶೋ ರೋಮ್ ನಿಂದ ನೇರವಾಗಿ ಕಾರನ್ನ ಮನೆಗೂ ತೆಗೆದುಕೊಂಡು ಹೋಗದೆ ಜೆಪಿ ನಗರಕ್ಕೆ ತೆಗೆದುಕೊಂಡು ಹೋಗಿದ್ದಾರೆ. ಜೆಪಿ ನಗರದಲ್ಲಿರುವ ಕಿಚ್ಚ ಸುದೀಪ್ ಅವರ ಮನೆ ಅಂಗಳಕ್ಕೆ ದಿವಾಕರ್ ತಮ್ಮ ಹೊಸ ಕಾರ್ ಅನ್ನು ತೆಗೆದುಕೊಂಡು ಹೋಗಿದ್ದರು. ಸಿಹಿ ತಿಂದು ಸುದೀಪ್ ಕಾರನ್ನ ಒಂದು ರೌಂಡ್ ಓಡಿಸಿದ್ದಾರೆ.

ನಾನು ಹೊಸ ಕಾರನ್ನು ಖರೀದಿಸಿದಾಗ ಅದನ್ನು ಮೊದಲು ಸುದೀಪ್ ಅವರಿಂದ ಡ್ರೈವ್ ಮಾಡಿಸಬೇಕು ಎಂಬ ಆಸೆಯಿತ್ತು. ಆದರೆ ಈಗ ಆ ಆಸೆ ನೇರವೇರಿತು ಎಂದು ದಿವಾಕರ್ ತಿಳಿಸಿದ್ದಾರೆ. ದಿವಾಕರ್ ಬಿಗ್ ಬಾಸ್ ಮನೆಯಿಂದ ಹೊರ ಬಂದ ನಂತರದ ಜೀವನ ತುಂಬಾ ಚೆನ್ನಾಗಿದೆ. ಸಿನಿಮಾಗಳ ಅವಕಾಶ ಹಾಗೂ ಸಮಾಜದಲ್ಲಿ ಒಳ್ಳೆಯ ಸ್ಥಾನಮಾನವೂ ಸಿಕ್ಕಿದೆ.

ದಿವಾಕರ್ ಕನ್ನಡದ ಹೊಸ ಚಿತ್ರವೊಂದರಲ್ಲಿ ಅಭಿನಯಿಸುತ್ತಿದ್ದಾರೆ. ವಿಶೇಷ ಅಂದರೆ ಚಿತ್ರದಲ್ಲಿ ಜಯ ಶ್ರೀನಿವಾಸನ್ ಕೂಡ ಕಾಣಿಸಿಕೊಳ್ಳಲಿದ್ದಾರೆ. ಧಾರಾವಾಹಿಗಳಲ್ಲಿ ಅಭಿನಯಿಸಲು ಅವಕಾಶ ಹುಡುಕಿಕೊಂಡು ಬರುತ್ತಿದ್ದು ಒಳ್ಳೆ ಪಾತ್ರಕ್ಕಾಗಿ ಕಾಯುತ್ತಿದ್ದಾರಂತೆ.

SHARE